ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ:  ಸದಸ್ಯರ ಆಯ್ಕೆ ಕೆ.ಎಸ್.ಸಿದ್ಧಲಿಂಗಪ್ಪ 

Tumkur Kannada sahitya parishat ks siddalingappa

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ:  ಸದಸ್ಯರ ಆಯ್ಕೆ ಕೆ.ಎಸ್.ಸಿದ್ಧಲಿಂಗಪ್ಪ 


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ: 
ಸದಸ್ಯರ ಆಯ್ಕೆ ಕೆ.ಎಸ್.ಸಿದ್ಧಲಿಂಗಪ್ಪ 


ತುಮಕೂರು: ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಕೆ.ಎಸ್.ಸಿದ್ಧಲಿಂಗಪ್ಪ ಅವರ ಸಮೀಪ ಪ್ರತಿಸ್ಪರ್ಧಿ ಡಾ. ಬಿ.ಸಿ.ಶೈಲಾ ನಾಗರಾಜ್ ಅವರಿಗಿಂತ 713 ಓಟುಗಳ ಭಾರೀ ಅಂತರದಿಂದ ಜಯ ಗಳಿಸಿದರು.


ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪದವಿ ಪೂರ್ವ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ, ಪ್ರಾಚಾರ್ಯ ಹಾಗೂ ಕನ್ನಡ ಉಪನ್ಯಾಸಕ ಕೆ.ಎಸ್.ಸಿದ್ಧಲಿಂಗಪ್ಪ 2520 ಓಟುಗಳನ್ನು ಗಳಿಸಿದ್ದಾರೆ. ಉಳಿದ ಅಭ್ಯರ್ಥಿಗಳು ಪಡೆದ ಓಟುಗಳ ಸಂಖ್ಯೆ ಹೀಗಿದೆ:  (ಡಾ.) ಬಿ.ಸಿ.ಶೈಲಾ ನಾಗರಾಜ್ -1823 , ಮೇಜರ್ ಡಿ.ಚಂದ್ರಪ್ಪ - 961, ಎಸ್.(ಸಾ.ಶಿ.)ದೇವರಾಜ್ - 899, ಆರ್.ವಿ.ಪುಟ್ಟಕಾಮಣ್ಣ  -206 ಹಾಗೂ ಎ.ಸಿ.ಮಹದೇವಪ್ಪ -66


ನ.21ರ ಭಾನುವಾರ ನಗರದ ಎಂಪ್ರೆಸ್ ಪದವಿಪೂರ್ವ ಕಾಲೇಜು  ಕಟ್ಟಡ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಕೆಲವು ಹೋಬಳಿ ಕೇಂದ್ರಗಳಲ್ಲಿ ಬೆಳಗಿನ ಎಂಟರಿAದ ಸಂಜೆ ನಾಲ್ಕು ಗಂಟೆವರೆಗೆ ನಡೆದ ಮತದಾನದಲ್ಲಿ 6513 ಆಜೀವ ಸದಸ್ಯರು ಓಟು ಮಾಡಿದರು. ನಂತರ ಆಯಾ ಮತದಾನ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಿತು.


ತುಮಕೂರು ತಹಸೀಲ್ದಾರ್ ಜಿ.ವಿ.ಮೋಹನ್‌ಕುಮಾರ್ ಹಾಗೂ ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾ ಕೇಂದ್ರದಲ್ಲಿ ಚುನಾವಣೆ ನಡೆಸಿದರು. ಮತದಾನ ಶಾಂತಿಯುತವಾಗಿ ಯಾವುದೇ ಗೊಂದಲಗಳಿಲ್ಲದೇ ನಡೆಯಿತು. ಆಯಾ ತಾಲೂಕು ಕೇಂದ್ರಗಳಲ್ಲಿ ಆಯಾ ತಹಸೀಲ್ದಾರ್ ಹಾಗೂ ಸಿಬ್ಬಂದಿ ಚುನಾವಣಾ ಕರ್ತವ್ಯ ನಡೆಸಿದರು.


ಶತಾಯುಷಿ ಚನ್ನಬಸವಯ್ಯಗುಬ್ಬಿ, ಹಿರಿಯರಾದ ಡಾ.ಕವಿತಾಕೃಷ್ಣ, ಪ್ರೊ. ಜಿ.ಎಂ.ಶ್ರೀನಿವಾಸಯ್ಯ, ಎನ್.ಆರ್.ಜಗದೀಶ್, ಡಾ. ಚನ್ನಬಸಪ್ಪ, ಸಿದ್ಧಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗಸ್ವಾಮಿಯವರು, ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಯವರು ಮತ ಚಲಾಯಿಸಿದ್ದು ವಿಶೇಷವಾಗಿತ್ತು.