ಹಗಲಲ್ಲೇ ಬಂಡೆ ಬ್ಲಾಸ್ಟ್: ದಿಕ್ಕಾಪಾಲಾಗಿ ಓಡಿದ ಜನರು!

ಹಗಲಲ್ಲೇ ಬಂಡೆ ಬ್ಲಾಸ್ಟ್: ದಿಕ್ಕಾಪಾಲಾಗಿ ಓಡಿದ ಜನರು!
ಮಧುಗಿರಿ: ಎತ್ತಿನಹೊಳೆ ಕಾಮಗಾರಿ ಸಂಬAಧ ಬಂಡೆಯನ್ನು ಹಾಡುಹಗಲೇ ಬ್ಲಾಸ್ಟ್ ಮಾಡಿದ ಕಾರಣ ದಾರಿಹೋಕರು ಮತ್ತು ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಕಲ್ಲಿನ ಚೂರುಗಳು ಸಿಡಿದು ರೈತರ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
ತಾಲ್ಲೂಕಿನ ಬಸವನಹಳ್ಳಿ ಸಮೀಪ ಕೆಎಸ್ಸಾರ್ಟಿಸಿ ಡಿಪೋ ಮುಂಭಾಗದ ಬ್ಯೆಪಾಸ್ ರಸ್ತೆ ಬದಿ ಈ ಘಟನೆ ನಡೆದಿದ್ದು, ಈ ಬ್ಲಾಸ್ಟ್ ನಿಂದಾಗಿ ಕಳೆದ ಮೂರು ದಿನಗಳಿಂದ ಭೂಮಿ ನಡುಗಿದ ಜತೆಗೆ ಹಾಡುಹಗಲೇ ಬುಧವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಬಂಡೆಯನ್ನು ಬ್ಲಾಸ್ಟ್ ಮಾಡಲು ಉಪಯೋಗಿಸಿದ ರಾಸಾಯನಿಕ ವಸ್ತುವಿನ ತೀವ್ರತೆ ಹೆಚ್ಚಾಗಿದ್ದ ಕಾರಣ ಸುಮಾರು ಐದರಿಂದ ಹತ್ತು ಕೆಜಿ ತೂಕದ ಕಲ್ಲುಗಳು ಬೈಪಾಸ್ ರಸ್ತೆಗೆ ಸಿಡಿದಿವೆ.
ಬೈಪಾಸ್ ರಸ್ತೆಯಲ್ಲಿ ಸೀಬೆ ಕಾಯಿ ವ್ಯಾಪಾರ ಮಾಡುತ್ತಿದ್ದ ಬೈರಪ್ಪ ಎಂಬವರ ವಾಹನಕ್ಕೂ ಮತ್ತು ಅವರಿಗೂ ಹಾನಿಯಾಗಿದ್ದು. ಈ ಕಲ್ಲಿನ ಚೂರುಗಳು ಸುತ್ತಮುತ್ತಲ ಪ್ರದೇಶದಲ್ಲಿ ಹರಡಿಕೊಂಡಿದೆ.
ಆರ್.ಟಿ.ಓ. ಇಲಾಖೆಯ ನಿವೃತ್ತ ನೌಕರ ಪ್ರತ್ಯಕ್ಷದರ್ಶಿಗಳಾಗಿದ್ದು ಬಂಡೆಯ ಸಿಡಿತಕ್ಕೆ ಹೆದರಿದ್ದಾರೆ. ಅವರು ಈ ಬಗ್ಗೆ ಪೊಲೀಸರು ಸಂಬAಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮಧುಗಿರಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.