ಜಿಲ್ಲಾ ನೌಕರರ ಸಂಘಕ್ಕೆ ಶೀಘ್ರ 5 ಎಕರೆ ಜಮೀನು ಮಂಜೂರುʼ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸೂಚನೆ
ಜಿಲ್ಲಾ ನೌಕರರ ಸಂಘಕ್ಕೆ ಶೀಘ್ರ ೫ ಎಕರೆ ಜಮೀನು ಮಂಜೂರು
ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸೂಚನೆ
ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಚಟುವಟಿಕೆಗಳಿಗೆ ಅಗತ್ಯವಾದ 5 ಎಕರೆ ಜಮೀನು ಶೀಘ್ರ ಮಂಜೂರು ಮಾಡಿಕೊಡಲು ಕ್ರಮವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಉಸ್ತುವಾರಿ ಸಚಿವರನ್ನು ಸನ್ಮಾನಿಸಿ, ಮನವಿ ಮಾಡಿದ ಸಂದರ್ಭದಲ್ಲಿ ಸಚಿವರು ಈ ಸೂಚನೆ ನೀಡಿದರು.
ಈಗಾಗಲೇ ನೌಕರರ ಸಂಘದ ನೂತನ ಭವನ ಸೇರಿದಂತೆ ನೌಕರರ ಕಲ್ಯಾಣ ಚಟುವಟಿಕೆಗಳಿಗೆ ಅಗತ್ಯವಾದ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರಿಗೆ ಸುರೇಶ್‌ಬಾಬು ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯಲ್ಲಿ ೧೮ ಸಾವಿರ ಸರ್ಕಾರಿ ನೌಕರರಿದ್ದಾರೆ, ನೌಕರರಿಗೆ ಅಗತ್ಯವಾದ ಸಮುದಾಯ ಭವನ, ಕ್ರೀಡಾ ಸಮುಚ್ಚಯ, ಸಭಾಭವನ ಸೇರಿದಂತೆ ಸುಂದರ ಕಟ್ಟಡ ನಿರ್ಮಿಸಲು ರಾಜ್ಯ ನೌಕರರ ಸಂಘ ಈಗಾಗಲೇ ನೆರವಾಗಲು ಒಪ್ಪಿದೆ ಎಂದರು.
ಕೂಡಲೇ ಜಿಲ್ಲಾಧಿಕಾರಿಗಳನ್ನು ಕರೆದ ಸಚಿವರು, ನೌಕರರ ಸಂಘದ ಬೇಡಿಕೆಯನ್ನು ಶೀಘ್ರ ಈಡೇರಿಸಲು ಕ್ರಮವಹಿಸಿ ಎಂದು ಸೂಚಿಸಿದರಲ್ಲದೇ ಮಂಜೂರಾತಿ ಸಂಬAಧ ತಮ್ಮ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ನೌಕರರ ಸಂಘಕ್ಕೆ ಜಮೀನು ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬAಧ ಅಗತ್ಯ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಡಿಸಿಯವರು ತಿಳಿಸಿದ್ದು, ಶೀಘ್ರ ಮಂಜೂರಾತಿಗೆ ಜತೆಯಲ್ಲೇ ಇದ್ದ ಸಂಸದ ಮುನಿಸ್ವಾಮಿ ಧ್ವನಿಗೂಡಿಸಿದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್,ನೌಕರರ ಸಂಘದ ಕ್ರೀಡಾ,ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ನಾಗರಾಜ್, ನೌಕರರ ಸಂಘದ ಜಂಟಿ ಕಾರ್ಯದರ್ಶಿ ಮಂಜುನಾಥ್,ವಿಜಯಮ್ಮ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕೋರಗಂಡಹಳ್ಳಿ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಚಂದ್ರಪ್ಪ, ಸೋಮಶೇಖರ್, ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ ಇದ್ದರು.
ವ ಮುನಿರತ್ನ ಸೂಚನೆ