ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಯವರಿಂದ ಹಲವು ಯೋಜನೆಗಳಿಗೆ ಚಾಲನೆ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಯವರಿಂದ ಹಲವು ಯೋಜನೆಗಳಿಗೆ ಚಾಲನೆ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಯವರಿಂದ ಹಲವು ಯೋಜನೆಗಳಿಗೆ ಚಾಲನೆ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಯವರಿಂದ ಹಲವು ಯೋಜನೆಗಳಿಗೆ ಚಾಲನೆ

ಚಿಕ್ಕನಾಯಕನಹಳ್ಳಿ : ಡಿಂಕನಹಳ್ಳಿಯಲ್ಲಿ ಆರಂಭಿಸಲು ಉದ್ದೇಶಿಸಿರುವ  400 ಕಿ.ವ್ಯಾ. ಸಾಮರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರದ ಕಾಮಾಗಾರಿಯನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.


ಬೆಳಗುಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಸಮೀಪ 110/11 ಕೆ.ವಿ. ವಿದ್ಯುತ್ ಉಪ ಕೇಂದ್ರದ ಕಾಮಾಗಾರಿ, ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಬುಳ್ಳಯ್ಯನಹಟ್ಟಿ, ಯಳೇಗೊಲ್ಲರಹಟ್ಟಿ, ಕರೇಬಲ್ಲಪ್ಪನಹಟ್ಟಿ ಬೆಳ್ಳಾರ ಗೊಲ್ಲರಹಟ್ಟಿ, ಎಮ್ಮಿಕರ್ಕಿಹಟ್ಟಿಯಲ್ಲಿ ಸಿಸಿ ರಸ್ತೆ ಕಾಮಾಗಾರಿ ಕಾರ್ಯರಂಭಕ್ಕೆ ಪೂಜೆ ಸಲ್ಲಿಸಿದರು.


ಈ ಯೋಜನೆ 2013 ರಲ್ಲೇ ಮಂಜೂರಾತಿ ಆಗಿದ್ದು ಯೋಜನೆಗೆ ಅವಶ್ಯವಿರುವ 45 ಎಕರೆ ಭೂಮಿಯನ್ನು  ಪಡಿಸಿಕೊಳ್ಳಲು 9 ಕೋಟಿ ಹಣ ಬಿಡುಗಡೆಯಾಗಿದೆ. ರೈತರ ಜಮೀನುಗಳಿಗೆ ಈಗಾಗಲೇ ಅವಾರ್ಡ್ ಆಗಿದ್ದು ಐದು ಜಿಲ್ಲೆಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಯಾವುದೇ ರಾಜಕೀಯ ವಿರೋಧಕ್ಕೆ ಮಣಿಯದೆ ಈ ಯೋಜನೆ ಆರಂಭಿಸುತ್ತೇನೆ ಎಂದು ವಿರೋಧಿಗಳಿಗೆ ಎಚ್ಚರಿಸಿದರು. 


ಸ್ಥಳೀಯರಿಂದ ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ ವಿರೋಧ


ಈ ಯೋಜನೆಯನ್ನು ಪ್ರಾರಂಭಿಸಲು ಉದ್ದೇಶಿಸಿರುವ ಜಾಗವು ಫಲವತ್ತಾದ ಭೂಮಿಯನ್ನು ಹೊಂದಿದ್ದು ತೆಂಗು, ಅಡಿಕೆ ಬೆಳೆಗಳು ಹೆಚ್ಚಾಗಿವೆ. ಘಟಕದ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು  ವಿವಿಧ ಸಂಘಟನೆಗಳ ಮುಖಂಡರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೆರವು ಪಡೆದು ಘಟಕ ಸ್ಥಾಪನೆ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಬಂಜರು ಭೂಮಿಯನ್ನು ಗುರುತಿಸಿ ಆ ಸ್ಥಳದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದ್ದರು.


ತಾಲ್ಲೂಕಿನಲ್ಲಿ ಮತಿಘಟ್ಟ, ದೊಡ್ಡ ಎಣ್ಣೇಗೆರೆ, ಜೆ.ಸಿ.ಪುರ ಸೇರಿದಂತೆ 110 ಕೆ.ವಿ.ಯ ಐದು ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಇಂಧನ ಇಲಾಖೆ ಅನುಮೋದನೆ ನೀಡಿದೆ. ಹೇಮಾವತಿ ನೀರಿನಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು ರೈತರಿಗೆ ನೀರು ಹರಿಸಿಕೊಳ್ಳಲು ವಿದ್ಯುತ್ ಅವಶ್ಯಕತೆ ಹೆಚ್ಚಾಗಿದೆ. ಇದಕ್ಕಾಗಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು ಮುಂದಿನ ಒಂದು ವರ್ಷದೊಳಗೆ ಐದು ಕೇಂದ್ರಗಳ ಕಾಮಾಗಾರಿ ಮುಗಿದು ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.



ಚಿಕ್ಕನಾಯಕನಹಳ್ಳಿ ಕೆರೆಗೆ ನೀರು ಹರಿಸುವ ಕಾಮಾಗಾರಿಗೆ ಟೆಂಡರ್ ಅನುಮೊದನೆಗೊಂಡಿದ್ದು ಯುಗಾದಿ ಹಬ್ಬದ ಒಳಗೆ ಕಾಮಾಗಾರಿಗೆ ಚಾಲನೆ ನೀಡಲಾಗುವುದು. ನಂತರ ಗೋಪಾಲನಹಳ್ಳಿ ಹಾಲ್ಕುರಿಕೆ ಕೆರೆಗಳ ಕೆಲಸ ಆರಂಭಿಸಲಾಗುವುದು ಜಾತಿ, ಧರ್ಮ, ಮತ, ಪಕ್ಷಭೇಧ ಮರೆತು ಕ್ಷೇತ್ರದ ಅಭಿವೃದ್ದಿಗೆ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಸಚಿವರು ಹೇಳಿದರು.


ಬೆಸ್ಕಾಂ ಚೀಫ್ ಇಂಜಿನಿಯರ್ ಗೋವಿಂದಪ್ಪ ಮಾತನಾಡಿ ವಿದ್ಯುತ್ ವಿತರಣಾ ಕೇಂದ್ರಕ್ಕೆ 8.85 ಕೋಟಿ ವೆಚ್ಚ ಆಗಲಿದ್ದು 8 ತಿಂಗಳಲ್ಲಿ ಕಾಮಾಗಾರಿ ಮುಗಿಯಲಿದೆ. 7ರಿಂದ 8 ಹಳ್ಳಿಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಸಹಕಾರಿಯಾಗಲಿದೆ. ರೈತರಿಗೆ ನಿತ್ಯ 7 ಗಂಟೆ ವಿದ್ಯುತ್ ನೀಡಲು ಇಲಾಖೆ ಪ್ರಯತ್ನಿಸುತ್ತಿದೆ ಎಂದರು. 


ಸಮಾರಂಭದಲ್ಲಿ ಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ಆದಿ ನಾರಾಯಣ್, ಇಲಾಖೆಯ ಲತಾ, ಅಲ್ಲಾ ಭಕ್ಷ್, ಸೋಮಶೇಖರ್ ಗೌಡ, ಎಇಇ ರಾಜಶೇಖರ್, ಮಾಜಿ ತಾ.ಪಂ ಉಪಾಧ್ಯಕ್ಷ ನಿರಂಜನ್, ಮುಖಂಡರು ಕೇಶವಮೂರ್ತಿ, ಉಮೇಶ್ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು ಹಾಗು ಸದಸ್ಯರಿದ್ದರು.