ಜನತೆಯ ವಿರುದ್ಧವೇ ಸೇನೆ ಬಳಕೆ  ವ್ಯವಸ್ಥೆಯ ದೌರ‍್ಬಲ್ಯದ ಲಕ್ಷಣ ಕ್ರಿಯೆ-ಪ್ರತಿಕ್ರಿಯೆ  ನಾ. ದಿವಾಕರ

ಜನತೆಯ ವಿರುದ್ಧವೇ ಸೇನೆ ಬಳಕೆ ವ್ಯವಸ್ಥೆಯ ದೌರ‍್ಬಲ್ಯದ ಲಕ್ಷಣ ಕ್ರಿಯೆ-ಪ್ರತಿಕ್ರಿಯೆ ನಾ. ದಿವಾಕರ

ಜನತೆಯ ವಿರುದ್ಧವೇ ಸೇನೆ ಬಳಕೆ    ವ್ಯವಸ್ಥೆಯ ದೌರ‍್ಬಲ್ಯದ ಲಕ್ಷಣ     ಕ್ರಿಯೆ-ಪ್ರತಿಕ್ರಿಯೆ   ನಾ. ದಿವಾಕರ


ಜನತೆಯ ವಿರುದ್ಧವೇ ಸೇನೆ ಬಳಕೆ 


ವ್ಯವಸ್ಥೆಯ ದೌರ‍್ಬಲ್ಯದ ಲಕ್ಷಣ

ಕ್ರಿಯೆ-ಪ್ರತಿಕ್ರಿಯೆ 

ನಾ. ದಿವಾಕರ

ನಾಗಾಲ್ಯಾಂಡ್ ರಾಜ್ಯದ ಮಾನ್ ಜಿಲ್ಲೆಯ ಟಿರು ಪ್ರದೇಶದಲ್ಲಿ ಡಿಸೆಂಬರ್ ಆರರಂದು  ಸಶಸ್ತ್ರ ಸೇನಾ ಪಡೆಗಳು 14 ಮಂದಿ ಅಮಾಯಕ ನಾಗರಿಕರನ್ನು ಸುಟ್ಟುಹಾಕಿವೆ. ಸೇನಾಪಡೆಯ ಮೂಲಕ ನಡೆದಿರುವ ಈ ಹತ್ಯಾಕಾಂಡಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವುದೇ ಅಲ್ಲದೆ, ಸೇನೆಗೆ ನಾಗರಿಕರ ಮೇಲೆ ದಾಳಿ ನಡೆಸಲು ಅಧಿಕಾರ ನೀಡಿರುವ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ 1958ನ್ನೇ ರದ್ದುಪಡಿಸುವ ಆಗ್ರಹವೂ ಕೇಳಿಬರುತ್ತಿದೆ. ಸೇನಾಪಡೆಗಳಿಂದ ನಡೆದಿರುವ ಈ ಹತ್ಯಾಕಾಂಡ ಒಂದೆಡೆ ಸೇನೆಯ ಅತಿಕ್ರಮಣವನ್ನು ಬಿಂಬಿಸಿದರೆ ಮತ್ತೊಂದೆಡೆ ಅಮಾಯಕ ಪ್ರಜೆಗಳ ಆತಂಕವನ್ನೂ ಬಿಂಬಿಸಿದೆ. ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಸೇನೆಯಿಂದ ಅಮಾಯಕ ಜನತೆಯ ಮೇಲೆ ಈ ರೀತಿಯ ಆಕ್ರಮಣ ನಡೆದಿರುವುದು ಇದೇ ಮೊದಲ ಸಲವೇನಲ್ಲ.

ಕಾಶ್ಮೀರವನ್ನೂ ಸೇರಿದಂತೆ ಈ ರಾಜ್ಯಗಳಲ್ಲಿ ಅನೇಕ ಸಂರ‍್ಭಗಳಲ್ಲಿ ನೂರಾರು “ ಶಂಕಿತರು ” ಇಂತಹ ದಾಳಿಗಳಿಗೆ ತುತ್ತಾಗಿದ್ದಾರೆ. ದಾಳಿಗೊಳಗಾದ ಅಮಾಯಕ ಜನತೆ, ಬದುಕುಳಿದರೆ, ತಮ್ಮ ದೇಶನಿಷ್ಠೆಯನ್ನೋ ಅಥವಾ ಅಸ್ತಿತ್ವವನ್ನೋ ತಾವೇ ನಿರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಇದೆ. ಗುಂಡೇಟಿಗೆ ಬಲಿಯಾದ ವ್ಯಕ್ತಿ ಸಹಜವಾಗಿ ಸಾವಿಗೆ ರ‍್ಹ ವ್ಯಕ್ತಿಯಾಗಿ ಕಾಣುವಂತಹ ಒಂದು ಕ್ರೂರ ವ್ಯವಸ್ಥೆಯನ್ನು ಸ್ವತಂತ್ರ ಭಾರತ ಪೋಷಿಸಿಕೊಂಡು ಬಂದಿದೆ. ಭೌಗೋಳಿಕ ದೇಶಾಭಿಮಾನದ ಉನ್ಮಾದದ ಪರಿಣಾಮ ಸರ‍್ವಜನಿಕ ಅಭಿಪ್ರಾಯವೂ ಸಹ ಈ “ರ‍್ಹತೆಯ ಪ್ರಮಾಣಪತ್ರ” ಕ್ಕೆ ಸಾಕ್ಷಿಯಾಗಿಬಿಡುತ್ತದೆ. ಸತ್ತ ವ್ಯಕ್ತಿಯ ಅಸ್ಮಿತೆ ದಾಳಿ ಮಾಡಿದವರಿಂದಲೇ ನರ‍್ಧಾರವಾಗುತ್ತದೆ, ಬದುಕುಳಿದವರು ತಮ್ಮ ಅಸ್ಮಿತೆಯನ್ನು ನಿರೂಪಿಸಲು ಬಹುದೂರ ಕ್ರಮಿಸಬೇಕಾಗುತ್ತದೆ. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ 1958, ಇಂತಹ ಸನ್ನಿವೇಶಗಳಿಗೆ ಪದೇ ಪದೇ ಕಾರಣವಾಗುತ್ತಿರುವ ಮತ್ತೊಂದು ಕರಾಳಶಾಸನ ಎಂದರೆ ತಪ್ಪಾಗಲಾರದು.
 
ಪ್ರಜಾತಂತ್ರ ಮತ್ತು ಪ್ರಜಾದನಿ
ತನ್ನ ಪ್ರಜೆಗಳನ್ನು ದಮನಿಸಲು, ತನ್ನದೇ ಪ್ರಜೆಗಳ ಹಕ್ಕೊತ್ತಾಯದ ದನಿಗಳನ್ನು ಹತ್ತಿಕ್ಕಲು ಮತ್ತು ಸಾಮಾಜಿಕರ‍್ಥಿಕ ನ್ಯಾಯಕ್ಕಾಗಿ ಆಗ್ರಹಿಸುವ ಜನಸಾಮಾನ್ಯರ ದನಿಗಳನ್ನು ಅಡಗಿಸಲು ಸೇನೆಯನ್ನು ಬಳಸುವುದೆಂದರೆ ಪ್ರಜಾತಂತ್ರ ಮೌಲ್ಯಗಳನ್ನು ಸಮಾಧಿ ಮಾಡಿದಂತೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಒಂದು ಪೊಲೀಸ್ ವ್ಯವಸ್ಥೆ ಇದೆ. ಈ ಪೊಲೀಸ್ ವ್ಯವಸ್ಥೆಯ ಕರ‍್ಯಾಚರಣೆಯನ್ನು ಗಮನಿಸಲು ನ್ಯಾಯಾಂಗವೂ ಇದೆ. ದೇಶದ ಅಖಂಡತೆಗೆ, ಭದ್ರತೆಗೆ ಅಪಾಯ ಎದುರಾದ ಸಂರ‍್ಭಗಳಲ್ಲಿ ಕೆಲವೊಮ್ಮೆ ಸೇನೆಯನ್ನು ನಿಯೋಜಿಸುವುದು ಎಲ್ಲ ದೇಶಗಳಲ್ಲೂ ಕಂಡುಬರುವ ವಿದ್ಯಮಾನ. ಆದರೆ ಸೇನಾಪಡೆಗಳಿಗೆ ಸ್ವತಂತ್ರ ರಾಷ್ಟ್ರದ ಜನಸಾಮಾನ್ಯರ ಮೇಲೆ ಯಾವುದೇ ಸಂರ‍್ಭದಲ್ಲಾದರೂ ದಾಳಿ ನಡೆಸಲು ಮುಕ್ತ ಅವಕಾಶ ಹೊಂದಿರುವ ಒಂದು ಸೇನೆಯನ್ನು ರಚಿಸುವುದು ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿದಂತೆ.ಕಾನೂನು ಭಂಜಕ ಗುಂಪುಗಳು, ವಿಧ್ವಂಸಕ ಗುಂಪುಗಳು ಸಾಮಾಜಿಕ ಪರಿಸರವನ್ನು ಪ್ರಕ್ಷುಬ್ಧಗೊಳಿಸುವ ಸಂರ‍್ಭಗಳನ್ನು ಹೊರತುಪಡಿಸಿದರೆ, ಉಳಿದಂತೆ ಪೊಲೀಸ್ ವ್ಯವಸ್ಥೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಸಜ್ಜಾಗಿರಬೇಕು. 

ಶತ್ರು ರಾಷ್ಟ್ರಗಳನ್ನು ಎದುರಿಸಲು ಒಂದು ಪ್ರಜಾಪ್ರಭುತ್ವ ರಾಷ್ಟ್ರ ರೂಪಿಸುವ ಸೇನೆ ಮೂಲತಃ ಆಂತರಿಕವಾಗಿ ದೇಶದ ಪ್ರಜೆಗಳನ್ನು ಬಾಹ್ಯ ಶಕ್ತಿಗಳ ಆಕ್ರಮಣದಿಂದ ಕಾಪಾಡಬೇಕಾದ ನೈತಿಕ ಹೊಣೆ ಹೊತ್ತಿರುತ್ತದೆ.  ದೇಶದ ಅಖಂಡತೆಗೆ ಭಂಗ ಉಂಟುಮಾಡುವ ಸಂಭವ ಇದ್ದಾಗ ಮಾತ್ರವೇ ಅಂತಹ ವಿಭಜಕ ಶಕ್ತಿಗಳ ವಿರುದ್ಧ ಸೇನೆಯನ್ನು ಬಳಸುವುದು ವಾಡಿಕೆಯಾಗಿದೆ. ಆದರೆ ಆಂತರಿಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಸೇನೆಯನ್ನು ಬಳಸುವ ಪ್ರಮೇಯ ಎದುರಾಗುತ್ತಿದೆ ಎಂದರೆ ಅಲ್ಲಿ ಆಡಳಿತ ವ್ಯವಸ್ಥೆ ತನ್ನ ಪ್ರಜಾಸತ್ತಾತ್ಮಕ ರ‍್ತವ್ಯಗಳನ್ನು ಸರ‍್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ಸಮಾಜದ ಅಥವಾ ಸಮುದಾಯದ ಹಕ್ಕೊತ್ತಾಯಗಳು ಸಂವಿಧಾನಬದ್ಧವಾಗಿದಲ್ಲಿ ಅಥವಾ ಕೆಲವು ಸಂರ‍್ಭಗಳಲ್ಲಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವಂತಿದ್ದರೂ, ಈ ಸಮಸ್ಯೆಗಳನ್ನು ನಿವಾರಿಸಲು ಪ್ರಜಾಸತ್ತಾತ್ಮಕ ಮರ‍್ಗಗಳಿಗೇ ಆದ್ಯತೆ ನೀಡುವುದು ಪ್ರಜಾತಂತ್ರದ ಲಕ್ಷಣ.

ಸ್ವತಂತ್ರ ಭಾರತ ಈ ನಿಟ್ಟಿನಲ್ಲಿ ವಿಭಿನ್ನ ಮರ‍್ಗವನ್ನೇ ಅನುಸರಿಸುತ್ತಾ ಬಂದಿರುವುದನ್ನು 1950ರ ದಶಕದಿಂದಲೂ ಗಮನಿಸಬಹುದು. ಸ್ವಾತಂತ್ರ‍್ಯಾನಂತರದಲ್ಲಿ ಭಾರತದ ಹಲವು ಭೌಗೋಳಿಕ ಪ್ರದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದುದು ವಾಸ್ತವ. ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತೆಯ ಆಗ್ರಹವೂ ದಟ್ಟವಾಗಿದ್ದುದೂ ಹೌದು. ಅಖಂಡ ಭಾರತದ ಪರಿಕಲ್ಪನೆಯಲ್ಲಿ ಈ ಬೇಡಿಕೆಗಳನ್ನು ತಿರಸ್ಕರಿಸುವುದು ಆಡಳಿತವ್ಯವಸ್ಥೆಯ ಅನಿವರ‍್ಯತೆಯಾಗಿದ್ದ ಕಾರಣ, ಈ ಜನಾಂದೋಲನಗಳನ್ನು ಹತ್ತಿಕ್ಕುವ ನಿಟ್ಟಿನಲ್ಲೇ ರ‍್ಕಾರಗಳು ಯೋಚಿಸತೊಡಗಿದ್ದವು. ಈಶಾನ್ಯ ರಾಜ್ಯಗಳಲ್ಲಿ ಉಲ್ಬಣಿಸಿದ ಸಶಸ್ತ್ರ ಹೋರಾಟಗಳು ಮತ್ತು ನೆರೆ ರಾಷ್ಟ್ರಗಳ ಬೆಂಬಲದೊಂದಿಗೆ ಕೆಲವು ಗುಂಪುಗಳು ಪ್ರಭುತ್ವದ ವಿರುದ್ಧ ಸಮರ ಸಾರಿದ್ದ ಪರಿಣಾಮ ಈ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ 1958. 

ಕರಾಳ ಕಾಯ್ದೆಯ ಉಗಮ

1942ರ ಭಾರತ ಬಿಟ್ಟು ತೊಲಗಿ ಅಂದೋಲನದ ಸಂರ‍್ಭದಲ್ಲಿ ಬ್ರಿಟೀಷ್ ವಸಾಹತು ರ‍್ಕಾರ ಜಾರಿಗೊಳಿಸಿದ್ದ ಒಂದು ಕರಾಳ ಶಾಸನವನ್ನೇ ಆಧರಿಸಿ ಭಾರತ ರ‍್ಕಾರ 1958ರಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಿತ್ತು. ನಾಗಾಲ್ಯಾಂಡ್ನಲ್ಲಿ ಉಲ್ಬಣಿಸುತ್ತಿದ್ದ ಸಶಸ್ತ್ರ ಬಂಡಾಯವನ್ನು ಮಣಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶವೂ ಆಗಿತ್ತು. ತ್ರಿಪುರಾದಲ್ಲಿ ಪ್ರತ್ಯೇಕತಾವಾದಿಗಳ ಸಶಸ್ತ್ರ ಬಂಡಾಯ ಉಲ್ಬಣಿಸಿದ್ದರಿಂದ 1997ರಲ್ಲೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. 2015ರಲ್ಲಿ ಒಕ್ಕೂಟ ರ‍್ಕಾರ ಅರುಣಾಚಲ ಪ್ರದೇಶದ, ಅಸ್ಸಾಂ ಗಡಿಗೆ ಹೊಂದಿಕೊಂಡಂತಿರುವ 12 ಜಿಲ್ಲೆಗಳನ್ನು ಪ್ರಕ್ಷುಬ್ಧ ಎಂದು ಘೋಷಿಸಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ರಾಜ್ಯ ರ‍್ಕಾರದ ವಿರೋಧಕ್ಕೆ ಮಣಿದು ಹಿಂಪಡೆಯಬೇಕಾಯಿತು. ಇದರೊಂದಿಗೇ ತ್ರಿಪುರಾದಲ್ಲೂ ಸಹ ಈ ಕಾಯ್ದೆಯನ್ನು ಹಿಂಪಡೆಯಲಾಗಿತ್ತು. ಆದರೆ ಜೂನ್ 4ರಂದು ಮಣಿಪುರದಲ್ಲಿ ಉಗ್ರವಾದಿಗಳು ಹೊಂಚುದಾಳಿಯ ಮೂಲಕ 18 ಸೈನಿಕರ ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಮತೊಮ್ಮೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. 

ಈ ಕಾಯ್ದೆಯನ್ನು ಜಾರಿಗೊಳಿಸಿದ ಉದ್ದೇಶ ಸಫಲವಾಗಿದೆಯೇ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರಿಸಲಾಗುವುದಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಇಂದಿಗೂ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದೆ. ಈ ನಡುವೆಯೇ ಈ ಕಾಯ್ದೆಯಲ್ಲಿರುವ ಕೆಲವು ಜನವಿರೋಧಿ ನಿಯಮಗಳ ಬಗ್ಗೆಯೂ ಆಕ್ಷೇಪ ಕೇಳಿಬರುತ್ತಿದೆ. ಈ ಕಾಯ್ದೆಯು “ ಪ್ರಕ್ಷುಬ್ಧ ಪ್ರದೇಶಗಳ ” ಕೇಂದ್ರ ಪೊಲೀಸ್ ಪಡೆಗಳು , ರಾಜ್ಯ ಪೊಲೀಸರು ಮತ್ತು ಸೇನಾಪಡೆಗಳಿಗೆ ಕೆಲವು ವಿಶೇಷ ಅಧಿಕಾರ ನೀಡುವುದಷ್ಟೇ ಅಲ್ಲದೆ ಹಲವು ವಿನಾಯಿತಿಗಳನ್ನೂ ನೀಡುತ್ತದೆ. ಶಂಕಿತರನ್ನು ಗುಂಡಿಟ್ಟು ಕೊಲ್ಲುವ, ಶಂಕಿತ ಉಗ್ರರು ವಾಸಿಸುವ ಮನೆಗಳ ಮೇಲೆ ಆಕ್ರಮಣ ನಡೆಸುವ, ಸಂದೇಹಾಸ್ಪದ ವ್ಯಕ್ತಿಗಳನ್ನು ವಾರಂಟ್ ಇಲ್ಲದೆಯೇ ಬಂಧಿಸುವ ಅಧಿಕಾರವನ್ನೂ ಈ ಕಾಯ್ದೆ ನೀಡುತ್ತದೆ. ಇಷ್ಟೆಲ್ಲಾ ವಿಶೇಷ ಅಧಿಕಾರವನ್ನು ಸೇನಾ ಪಡೆಗೆ ನೀಡುವುದೇ ಅಲ್ಲದೆ ಕಾನೂನು ಕ್ರಮದಿಂದ ವಿನಾಯಿತಿಯನ್ನೂ ನೀಡುತ್ತದೆ. “ ಕೇಂದ್ರ ರ‍್ಕಾರದ ಪರ‍್ವಾನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ವಿರುದ್ಧ (ಸೇನಾ ಸಿಬ್ಬಂದಿ) ಕಾನೂನು ಕ್ರಮ ಕೈಗೊಳ್ಳುವುದಾಗಲೀ, ದಾವೆ ಹೂಡುವುದಾಗಲೀ ಅಥವಾ ಮೊಕದ್ದಮೆ ದಾಖಲಿಸುವುದಾಗಲೀ ಸಾಧ್ಯವಾಗುವುದಿಲ್ಲ ” ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ 1991ರಿಂದ 2015ರವರೆಗೆ ಕೇಂದ್ರ ರ‍್ಕಾರದ ಅನುಮತಿ ಕೋರಿ ಸಲ್ಲಿಸಲಾಗಿರುವ 38 ಕೋರಿಕೆಗಳ ಪೈಕಿ 30 ಪ್ರಕರಣಗಳಲ್ಲಿ ಅನುಮತಿ ನಿರಾಕರಿಸಲಾಗಿದೆ. 

ಈ ನರ‍್ದಿಷ್ಟ ನಿಯಮವೇ ಅನೇಕ ಅವಘಡಗಳಿಗೂ ಕಾರಣವಾಗಿದೆ.  ಸಶಸ್ತ್ರ ಸೇನಾಪಡೆಗಳಿಂದ ನ್ಯಾಯಾಲಯಾತಿರಿಕ್ತ ಹತ್ಯೆಗಳು, ಅತ್ಯಾಚಾರಗಳು ನಡೆದಿರುವುದು ವರದಿಯಾಗಿದೆ. 2004ರಲ್ಲಿ ಅಸ್ಸಾಂ ರೈಫಲ್ಸ್ ಪಡೆಯ ಸೈನಿಕರು 34 ರ‍್ಷದ ತಂಗ್ಜಮ್ ಮನೋರಮಾ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದದವು. 2004ರ ಜುಲೈ 14ರಂದು ಹನ್ನೆರಡು ಮಹಿಳೆಯರು ಇಂಫಾಲದ ಕಾಂಗ್ಲಾ ಫರ‍್ಟ್ನಲ್ಲಿರುವ ಅಸ್ಸಾಂ ರೈಫಲ್ಸ್ ಕಚೇರಿಯ ಎದುರು ನಗ್ನರಾಗಿ , ಬನ್ನಿ ನಮ್ಮನ್ನು ರೇಪ್ ಮಾಡಿ ಎಂಬ ಬ್ಯಾನರ್ ಹಿಡಿದು, ಪ್ರತಿಭಟನೆ ನಡೆಸಿದ್ದು ಈಗ ಇತಿಹಾಸ. ಇರೋಂ ರ‍್ಮಿಳಾ 2000ದಿಂದಲೇ ಈ ಕಾಯ್ದೆಯನ್ನು ರದ್ದುಪಡಿಸಲು ಆಗ್ರಹಿಸಿ 15 ರ‍್ಷಗಳ ಉಪವಾಸ ಸತ್ಯಾಗ್ರಹ ಮಾಡಿರುವುದೂ ಈ ಕರಾಳ ಚರಿತ್ರೆಯ ಒಂದು ಭಾಗ. ಈ ಪ್ರತಿಭಟನೆಗಳ ಹಿನ್ನೆಲೆಯಲ್ಲೇ ಯುಪಿಎ ರ‍್ಕಾರ ನ್ಯಾಯಮರ‍್ತಿ ಜೀವನ್ ರೆಡ್ಡಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿ, ಈ ಕಾಯ್ದೆಯನ್ನು ಪರಿಶೀಲಿಸಿ ಶಿಫಾರಸುಗಳನ್ನು ಸಲ್ಲಿಸಲು ಕೋರಿತ್ತು.

ತಮ್ಮ ಅಂತಿಮ ವರದಿಯಲ್ಲಿ ನ್ಯಾ ಜೀವನ್ ರೆಡ್ಡಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯನ್ನು “ ದಬ್ಬಾಳಿಕೆಯ ಸಂಕೇತ, ದ್ವೇಷದ ವಸ್ತು ಮತ್ತು ತಾರತಮ್ಯ ಹಾಗೂ ಸ್ವೇಚ್ಚಾ ಪ್ರವೃತ್ತಿಯ ಸಾಧನ ” ಎಂದು ಬಣ್ಣಿಸಿದ್ದೇ ಅಲ್ಲದೆ ಕಾಯ್ದೆಯನ್ನು ಹಿಂಪಡೆಯುವಂತೆಯೂ ಶಿಫಾರಸು ಮಾಡಿತ್ತು. ಆದರೆ ಈ ನಿಟ್ಟಿನಲ್ಲಿ ರ‍್ಕಾರಗಳು ಈವರೆಗೂ ಆಲೋಚನೆ ಮಾಡಿಲ್ಲ. ಈ ಸಮಿತಿಯ ಸದಸ್ಯರಲ್ಲೊಬ್ಬರಾಗಿದ್ದ ಸಂಜೋಯ್ ಹಜಾರಿಕಾ “ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ ಹೋಗುವ ಮುನ್ನ ಇನ್ನೆಷ್ಟು ಸಾವುಗಳು ಸಂಭವಿಸಬೇಕು, ಇನ್ನೆಷ್ಟು ನಗ್ನ ಪ್ರತಿಭಟನೆಗಳು ನಡೆಯಬೇಕು, ಇನ್ನೆಷ್ಟು ಉಪವಾಸ ಸತ್ಯಾಗ್ರಹಗಳು ಬೇಕು, ಇನ್ನೆಷ್ಟು ಸಮಿತಿಗಳು ರಚನೆಯಾಗಬೇಕು, ಇನ್ನೆಷ್ಟು ಸಂಪಾದಕೀಯಗಳು, ಲೇಖನಗಳು, ಪ್ರಸಾರಗಳು ನಡೆಯಬೇಕು ” ಕೇಳುತ್ತಾರೆ. 

ಕಾಯ್ದೆಯ ಕರಾಳ ಮುಖ

ಟಿರು ಮತ್ತು ಒಟಿಂಗ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಯಿಂದ ಮನೆಗೆ ಹಿಂದಿರುಗುತ್ತಿದ್ದ ಕರ‍್ಮಿಕರ ವಾಹನದ ಮೇಲೆ, ತಪಾಸಣೆಯನ್ನೂ ನಡೆಸದೆ, ವಾಹನದಲ್ಲಿರುವವರ ಗುರುತನ್ನು ಖಚಿತಪಡಿಸಿಕೊಳ್ಳದೆ, ಅಸ್ಸಾಂ ರೈಫಲ್ಸ್ನ ಪಡೆ ಕೇವಲ ಅನುಮಾನದ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಏಳು ಜನರ ಹತ್ಯೆ ನಡೆಸಿದೆ. ಈ ಗುಂಡಿನ ದಾಳಿಯ ಸದ್ದು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸುವ ವೇಳೆಗೆ ಅಮಾಯಕರ ಶವಗಳನ್ನು ಸೇನಾ ಶಿಬಿರಕ್ಕೆ ತೆಗೆದುಕೊಂಡು ಹೋಗುವ ಸಲುವಾಗಿ ಟರ‍್ಪಲ್ನಲ್ಲಿ ಸುತ್ತಿ ಮತ್ತೊಂದು ವಾಹನಕ್ಕೆ ತುಂಬಿಸುತ್ತಿರುವುದನ್ನು ನೋಡಿ ಕೆರಳಿದ್ದಾರೆ. ಈ ಸಂರ‍್ಭದಲ್ಲಿ ಸೇನಾ ವಾಹನಗಳ ಮೇಲೆ ಗ್ರಾಮಸ್ಥರು ನಡೆಸಿದ ದಾಳಿಯ ಸಂರ‍್ಭದಲ್ಲಿ ಏಳು ಜನ ನಾಗರಿಕರು ಗುಂಡೇಟಿಗೆ ಬಲಿಯಾಗಿದ್ದಾರೆ. 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೈನಿಕರು ಕೂಡಲೇ ಪರಾರಿಯಾಗಿದ್ದು, ಈ ದಾಳಿಯ ಸಂರ‍್ಭದಲ್ಲಿ ಗಣಿ ಕರ‍್ಮಿಕರ ಗುಡಿಸಲುಗಳ ಮೇಲೆಯೂ ಗುಂಡಿನ ದಾಳಿ ನಡೆದಿರುವುದು ವರದಿಯಾಗಿದೆ. ಈ ಘಟನೆಯ ಸತ್ಯಾಸತ್ಯತೆಗಳು ಸೂಕ್ತ ತನಿಖೆಯ ನಂತರವಷ್ಟೇ ಹೊರಬರಬೇಕಿದೆ. 

ಈ ಸಂರ‍್ಭದಲ್ಲೇ ಕಳೆದ ತಿಂಗಳಿನಲ್ಲಿ ಮಣಿಪುರದ ಚುರಾಚಂದ್ಪುರ ಜಿಲ್ಲೆಯಲ್ಲಿ ಸೇನಾ ಪಡೆಗಳ ಮೇಲೆ ಉಗ್ರವಾದಿಗಳು ನಡೆಸಿದ ಮಾರಣಾಂತಿಕ ದಾಳಿಯನ್ನೂ ಸಹ ಗಂಭೀರವಾಗಿ ಪರಿಗಣಿಸಬೇಕಿದೆ. ಪೀಪಲ್ಸ್ ಲಿಬರೇಷನ್ ರ‍್ಮಿ ಮತ್ತು ಮಣಿಪುರ ನಾಗಾ ಪೀಪಲ್ಸ್ ಫ್ರಂಟ್ ಸಂಘಟನೆಗೆ ಸೇರಿದ ಉಗ್ರರು ಹಠಾತ್ ಹೊಂಚು ದಾಳಿಯ ಮೂಲಕ ಅಸ್ಸಾಂ ರೈಫಲ್ಸ್ಗೆ ಸೇರಿದ ಏಳು ಸೈನಿಕರ ಹತ್ಯೆಗೈದಿರುವುದು ಇಡೀ ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿದೆ. ಕೇಂದ್ರ ರ‍್ಕಾರದ ಶಾಂತಿ ಮಾತುಕತೆಗಳ ನಡುವೆಯೇ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಯೋಚನೆಗೀಡುಮಾಡುವ ವಿಚಾರ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳು ಈಶಾನ್ಯ ರಾಜ್ಯಗಳಲ್ಲಿ ಯಾವುದೇ ರೀತಿಯ ಹೊಂದಾಣಿಕೆ ರಾಜಕಾರಣದ ಮೂಲಕ ಅಧಿಕಾರದಲ್ಲಿದ್ದರೂ, ಅಲ್ಲಿನ ಜನರ ಪ್ರಾದೇಶಿಕ ಭಾವನೆಗಳು ಮತ್ತು ಭೌಗೋಳಿಕ ಹಕ್ಕೊತ್ತಾಯಗಳನ್ನು ನರ‍್ಲಕ್ಷಿಸಲಾಗುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಜಟಿಲ ಸಮಸ್ಯೆಯನ್ನು ಬಗೆಹರಿಸಲು ಪ್ರಜಾಸತ್ತಾತ್ಮಕ ಮರ‍್ಗವೊಂದೇ ಸೂಕ್ತ ಎನ್ನುವುದನ್ನು ರ‍್ಕಾರಗಳು ರ‍್ಥಮಾಡಿಕೊಳ್ಳಬೇಕಿದೆ. 2016-18ರ ಅವಧಿಯಲ್ಲೇ ಈ ಭಾಗದಲ್ಲಿ ಉಗ್ರವಾದಿ ಸಂಘಟನೆಗಳ ದಾಳಿಗೆ 334 ಸೈನಿಕರು ಮೃತಪಟ್ಟಿದ್ದಾರೆ. ಇದೇ ವೇಳೆ ಸೇನಾ ಕರ‍್ಯಾಚರಣೆಯಿಂದ ಮೃತಪಟ್ಟ ಅಥವಾ ಹಾನಿಗೊಳಗಾದ ನಾಗರಿಕರ ಸಂಖ್ಯೆಯನ್ನು ರ‍್ಕಾರ ಈವರೆಗೂ ಪ್ರಕಟಿಸಿಯೇ ಇಲ್ಲ. 

ನ್ಯಾ ಜೀವನ್ರೆಡ್ಡಿ ಸಮಿತಿಯ ಶಿಫಾರಸುಗಳನ್ನು ಈಗಲಾದರೂ ಪರಿಶೀಲಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ರ‍್ಕಾರದ ಆದ್ಯತೆಯಾಗಬೇಕಿದೆ. ಈ ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಕೋನ್ಯಾಕ್ ಬುಡಕಟ್ಟಿಗೆ ಸೇರಿದವರಾಗಿದ್ದು, ಈ ಬುಡಕಟ್ಟಿನ ಸಂಘಟನೆಗಳು ಬಂದ್ ಅಚರಿಸುವುದೇ ಅಲ್ಲದೆ, ಅಸ್ಸಾಂ ರೈಫಲ್ಸ್ ಪಡೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿವೆ.  ನಾಗಾಲ್ಯಾಂಡ್ ಮುಖ್ಯಮಂತ್ರಿಯೂ ಸಹ ಕಾಯ್ದೆಯ ರದ್ದತಿಗೆ ಆಗ್ರಹಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕ ಹಕ್ಕುಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದು ಒಂದು ಚುನಾಯಿತ ರ‍್ಕಾರದ ಆದ್ಯತೆಯಾಗಬೇಕು. ಯಾವುದೇ ಕಾರಣಗಳಿಂದ ನಾಗರಿಕರಲ್ಲಿ ಉದ್ಭವಿಸುವ ಆಕ್ರೋಶ, ಹತಾಶೆ ಮತ್ತು ವಿರೋಧಗಳನ್ನು ಪ್ರಜಾಸತ್ತಾತ್ಮಕ ಮರ‍್ಗಗಳ ಮೂಲಕವೇ ಆಲಿಸಿ, ಪರಿಹರಿಸುವ ವ್ಯವಧಾನವೂ ಆಡಳಿತಾರೂಢ ರ‍್ಕಾರಗಳಲ್ಲಿ ಇರಬೇಕಾಗುತ್ತದೆ. ಬಂದೂಕಿನ ನಳಿಕೆಯಲ್ಲಿ ನ್ಯಾಯ ದೊರಕಿಸಲಾಗುವುದಿಲ್ಲ ಅಥವಾ ಸೇನೆ ಮತ್ತು ಪೊಲೀಸ್ ಕರ‍್ಯಾಚರಣೆಯ ಮೂಲಕವೇ ಜನರ ಸಮಸ್ಯೆಗೆ ಮುಖಾಮುಖಿಯಾಗುವುದು ಸರ‍್ಥನೀಯವಾಗಲಾರದು. ಯುಎಪಿಎ, ರಾಜದ್ರೋಹ ಕಾಯ್ದೆ ಮತ್ತು ಈ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯಂತಹ ಕರಾಳ ಶಾಸನಗಳಿಂದ ಮುಕ್ತವಾದ ಒಂದು ನೈಜ ಪ್ರಜಾಸತ್ತೆಗಾಗಿ ಇಂದು ಹೋರಾಡಬೇಕಿದೆ. 
-0-0-0-


-