ಮಹಿಳಾ ದೌರ್ಜನ್ಯ ಅವನು ಮತ್ತು ಅರಿವು.

ಮಹಿಳಾ ದೌರ್ಜನ್ಯ ಅವನು ಮತ್ತು ಅರಿವು.

ಮಹಿಳಾ ದೌರ್ಜನ್ಯ ಅವನು ಮತ್ತು ಅರಿವು.

ವರ್ತಮಾನ

ಡಾ.ಆಶಾರಾಣಿ.ಕೆ.ಬಗ್ಗನಡು
        

 ಮಹಿಳಾ ದೌರ್ಜನ್ಯ ಅವನು ಮತ್ತು ಅರಿವು.


ಜಗತ್ತಿನಾದ್ಯಂತ ಮಹಿಳೆಯರ ಸಂಕಟದ ಅರಿವನ್ನು ಬಿತ್ತುವ ಗುರಿಯೊಂದಿಗೆ ನವೆಂಬರ್ 25 ನ್ನು  ಅಂತರಾಷ್ಟಿçÃಯ ಮಹಿಳಾ ದೌರ್ಜನ್ಯ ನಿರ್ಮೂಲನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯೊಟ್ಟಿಗೆ ನಡೆಯುವ ಲಿಂಗಾಧಾರಿತ ಹಿಂಸಾಚಾರದÀ ವಿರುದ್ದ 16 ದಿನಗಳ ಕ್ರಿಯಾಶೀಲತೆಯ ಅಂತರರಾಷ್ಟಿçÃಯ ಅಭಿಯಾನವೊಂದು ನÀವೆಂಬರ್ 25 ರಂದು ಪ್ರಾರಂಭವಾಗಿ ಡಿಸೆಂಬರ್ 10 (ಮಾನವ ಹಕ್ಕುಗಳ ದಿನದ) ವರೆಗೆ ನಡೆಯುತ್ತದೆ. ಆರೆಂಜ್ ದಿ ವರ್ಲ್ಡ್ “ಈಗಲೇ ಮಹಿಳೆಯ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಿ” ಎಂಬುದು ಈ ವರ್ಷದ ಮಹಿಳಾ ದೌರ್ಜನ್ಯ ವಿರೋಧಿ ದಿನದ ವಿಷಯವಾಗಿದ್ದು. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ದದ ಕ್ರಮಗಳನ್ನು ಮುಂದುವರಿಸುವ ಅಗತ್ಯದ ಬಗೆಗೆ ಗಮನ ಸೆಳೆಯಲು ವಿಶ್ವದಾದ್ಯಂತ ಹಲವಾರು ಕರ‍್ಯಕ್ರಮಗಳನ್ನು ಈ ಅಭಿಯಾನದಡಿ ಆಯೋಜಿಸಲಾಗುತ್ತದೆ. 


 ಜಗತ್ತಿನಾದ್ಯಂತ ಪ್ರತಿವರ್ಷ ಮಹಿಳಾ ದೌರ್ಜನ್ಯ ನಿರ್ಮೂಲನೆಗಾಗಿ ಸರ್ಕಾರಗಳು ಸಂಘ ಸಂಸ್ಥೆಗಳು ಇಂತಹ ನೂರಾರು ಅಭಿಯಾನಗಳನ್ನು ಕರ‍್ಯಕ್ರಮಗಳನ್ನು, ಹತ್ತಾರು ಮಹಿಳಾ ಪರ ಕಾನೂನುಗಳು, ಯೋಜನೆಗಳನ್ನು ರೂಪಿಸುತ್ತಿವೆ. ಸಮರ್ಪಕ ಅನುಷ್ಟಾನದ ಕೊರತೆಯ ಕಾರಣ ಹಲವು ಯೋಜನೆಗಳು, ಕಾನೂನುಗಳು ಹಳ್ಳ ಹಿಡಿಯುತ್ತಿದ್ದರೆ,(ಕರ್ನಾಟಕದಲ್ಲಿ ದೌರ್ಜನ್ಯ ಪೀಡಿತ ಮಹಿಳೆಯರ ಪಾಲಿನ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳು ಮುಚ್ಚಿವೆ)  ಮಹಿಳಾ ದೌರ್ಜನ್ಯಕ್ಕೆ ಸಾಂಸ್ಕçತಿಕ ಅನುಮೋದನೆ ಇರುವ ಕಾರಣ ನೂರಾರು ಮಹಿಳಾ ದೌರ್ಜನ್ಯ ವಿರೋಧಿ ಅರಿವಿನ ಕರ‍್ಯಕ್ರಮಗಳು ವಿಫಲವಾಗುತ್ತಿವೆ. 


ಬದಲಾವಣೆಯ ಪ್ರಯತ್ನಗಳು ಮತ್ತು ವಾಸ್ತವ ಇವೆರಡೂ ತದ್ವಿರುದ್ದದ ದಿಕ್ಕುಗಳಲ್ಲಿ ಚಲಿಸುತ್ತಿರುವುದೇ ಮಹಿಳಾ ದೌರ್ಜನ್ಯಗಳು ಕೊನೆಗೊಳ್ಳದಿರಲು ಕಾರಣವಾಗಿದ್ದು.  ಮಹಿಳಾ ದೌರ್ಜನ್ಯಕ್ಕಿರುವ ಸಾಂಸ್ಕçತಿಕ ಅನುಮೋದನೆ ಕೊನೆಗೊಳ್ಳುವವರೆಗೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಕೊನೆಗೊಳ್ಳಲಾರವು. ಕಾನೂನು ಅಪರಾಧಿಗಳನ್ನು ಶಿಕ್ಷಿಸಬಹುದು ತಪ್ಪುಗಳು ಮತ್ತೆ, ಮತ್ತೆ ಜರುಗದಂತೆ ಮಾಡುವುದು ಕಾನೂನಿನ ಹೊರತಾದ ಸಾಮಾಜಿಕ ಪ್ರಕ್ರಿಯೆ. ಆ ನಿಟ್ಟಿನ ಪ್ರಯತ್ನಗಳು ಮಾತ್ರ  ಕ್ರಮೇಣವಾಗಿ ಮಹಿಳಾ ದೌರ್ಜನ್ಯಗಳನ್ನು ಕೊನೆಗಾಣಿಸಲು ಸಾಧ್ಯ. ಇಲ್ಲವಾದಲ್ಲಿ ನ್ಯಾಯಸ್ಥಾನಗಳನ್ನು,ಕಾನೂನು, ಶಿಕ್ಷೆಗಳನ್ನು,  ಮೀರಿ ದೌರ್ಜನ್ಯಗಳು ನಿರಂತರವಾಗಿ ಹೆಚ್ಚುತ್ತಲೇ ಇರುತ್ತವೆ. 


ರಾಷ್ಟಿçÃಯ ಅಪರಾಧ ದಾಖಲೆ ಬ್ಯೂರೋ ಪ್ರಕಟಿಸಿರುವ ‘ಭಾರತದಲ್ಲಿ ಅಪರಾಧ 2020’ ದೇಶದುದ್ದಗಲಕ್ಕೂ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಗಳ ಅಂಕಿ ಅಂಶಗಳನ್ನು ತೆರೆದಿಟ್ಟಿದೆ.  ಮಹಿಳೆಯರ ವಿರುದ್ದದ ಅಪರಾಧಗಳು ಗಂಡ ಆತನ ಸಂಬAಧಿಕರ ಕ್ರೌರ್ಯದ ಅಡಿಯಲ್ಲಿ ಶೇ (30%), 7,045ಬಲಿಪಶುಗಳೊಂದಿಗೆ 6,966ವರದಕ್ಷಿಣೆ ಸಾವುಗಳು ಸಂಭವಿಸಿದ್ದು. ಮಹಿಳೆಯರ ಅಪಹರಣ(16.5)ಮತ್ತು ಅತ್ಯಾಚಾರ(7.5) ದಾಖಲಾಗಿವೆ ಎನ್ನುತ್ತದೆ. ಕೋವಿಡ್ 19 ಲಾಕ್ಡೌನ್ ಪರಿಣಾಮ  ಮಹಿಳೆಯರು ಮತ್ತು ಹುಡುಗಿಯರ ಮೇಲಿನ ಕೌಟುಂಬಿಕ ಹಿಂಸಾಚಾರವು ತೀವ್ರಗೊಂಡಿವೆ ಎಂಬುದನ್ನು ಈ ಅಪರಾಧ ವರದಿ ಬಹಿರಂಗಪಡಿಸಿದೆ. ಮನೆಯನ್ನು ತುಂಬಾ ಸುರಕ್ಷಿತವೆಂದು ಭಾವಿಸುವ ಸಂದರ್ಭದಲ್ಲಿ ಮನೆಯು ಮಹಿಳೆಯರು ಮತ್ತು ಹುಡುಗಿಯರಿಗೆ ಅಪಾಯಕಾರಿ ತಾಣವಾಗುತ್ತಿರುವ ಈ ದುರಿತ ಕಾಲದಲ್ಲಿ ಸಾಮಾಜಿಕ ಚಿಂತನಾ ಕ್ರಮವನ್ನು ಮಹಿಳಾ ಪರವಾಗಿ ರೂಪಿಸುವ ಮೂಲಕ ಮನೆಯ ಒಳಗು, ಹೊರಗನ್ನು ಮಹಿಳೆಯರಿಗೆ ಸಹ್ಯವಾಗಿಸಬೇಕಿದೆ.


ಮಹಿಳಾ ದೌರ್ಜನ್ಯಗಳು ಘಟಿಸುವ ಸಂದರ್ಭ ಸಂತ್ರಸ್ತೆಯನ್ನೇ ಆರೋಪಿಗಳನ್ನಾಗಿಸುವ ಮನಸ್ಸುಗಳು ಅವಳನ್ನೇ ಪ್ರಶ್ನಿಸಿ, ನಿಯಂತ್ರಿಸುವ, ಮೂಲಕ ಅವಳಿಗೆ ತಾಳ್ಮೆ ಸಹನೆಯ ಪಾಠ ಹೇಳುತ್ತಾ ಶೋಷಣೆಯನ್ನು ನುಂಗಿ ಬದುಕುವುದನ್ನೇ ಕಲಿಸುತ್ತವೆಯೇ ಹೊರತು (ಪರಿಣಾಮ ಅದೆಷ್ಟೋ ಹೆಣ್ಣು ಮಕ್ಕಳಿಗೆ ತಮ್ಮ ಮೇಲಿನ ಕರ‍್ಯಗಳ ಅರಿವೇ ಇರುವುದಿಲ್ಲ) ಪ್ರಶ್ನಿಸುವ ಪರಿಹಾರ ಹುಡುಕಿಕ್ಕೊಳ್ಳುವ ನಿಟ್ಟಿನಲ್ಲಿ ಅವಳನ್ನು ತಯಾರಿಸುವುದಿಲ್ಲ. ಮಾರೆಲ್ ಪೋಲೀಸಿಂಗ್‌ಎನ್ನುವುದು ಯಾವಾಗಲೂ ಹೆಣ್ಣನ್ನೇ ಕೇಂದ್ರವಾಗಿಸಿಕೊAಡು. ಪರಿಹಾರ ಹುಡುಕಲು ಪ್ರಯತ್ನಿಸುತ್ತದೆಯೇ ಹೊರತು ತಪ್ಪಿಯೂ ಅವನೆಡೆ ಸುಳಿಯುವುದಿಲ್ಲ. ಎಷ್ಟೋ ಬಾರಿ ನ್ಯಾಯಸ್ಥಾನಗಳು ಕೂಡ ಅತ್ಯಾಚಾರಿಯನ್ನು ವಿವಾಹವಾಗುವಂತೆ. ಕೌಟುಂಬಿಕ ದೌರ್ಜನ್ಯಗಳ ಸಂದರ್ಭ ಹೊಂದಿಕೊAಡು ಹೋಗುವಂತೆ ಹೆಣ್ಣು ಮಕ್ಕಳಿಗೆ ಸೂಚಿಸುತ್ತವೆ. ಮೈಸೂರಿನಲ್ಲಿ ನೆಡೆದ ಸಾಮೂಹಿಕ ಅತ್ಯಾಚಾರ ಸಂದರ್ಭ ಕೂಡ ಘನವೆತ್ತ ಗೃಹ ಮಂತ್ರಿಗಳಿAದ ಹಿಡಿದು ಪ್ರತಿಷ್ಠಿತ ವಿಶ್ವವಿದ್ಯಾಲಯದವರೆಗೆ ಪ್ರಶ್ನಿಸಿದ್ದು, ನಿಯಂತ್ರಿಸಲು  ಪ್ರಯತ್ನಿಸಿದ್ದು ಮತ್ತದೇ ಅವಳನ್ನೆ. ಅಷ್ಟು ಹೊತ್ತಲ್ಲಿ ಆ ಹುಡುಗರ ಗುಂಪೊAದು ನಿರ್ಜನ ಪ್ರದೇಶದಲ್ಲಿ ಯಾಕಾಗಿ ಸೇರಿತ್ತು ಎಂದು ಯಾರೂ ಪ್ರಶ್ನಿಸಲ್ಲಿಲ್ಲ. ಆ ಸಮಯದಲ್ಲಿ ಅಂತಹ ನಿರ್ಜನ ಪ್ರದೇಶದಲ್ಲಿ ಅವರ ಓಡಾಟ ಯಾರಿಗೂ ತಪ್ಪಾಗಿಯೂ ಕಾಣಲಿಲ್ಲ. ಒಂದು ಕಡೆ ಸ್ವೇಚ್ಚೆ ಮತ್ತೊಂದು ಕಡೆ ಶಿಕ್ಷೆ, ಇದೆರಡರ ನಡುವೆ ನೈತಿಕ ಪಾಠಗಳಿಲ್ಲದೆ ದುಷ್ಚಟಗಳ ದಾಸನಾಗಿ, ಅಪರಾಧಿಯಾಗುತ್ತಿರುವ ಗಂಡು ಕೂಡ ಸಂತ್ರಸ್ತನೇ ಹೌದು. ಹೆಣ್ಣನ್ನು ರೂಪಿಸಿ, ನಿಯಂತ್ರಿಸುವ ಗಂಡನ್ನು ಶಿಕ್ಷಿಸುವುದರ  ಮೂಲಕ ಮಹಿಳಾ ದೌರ್ಜನ್ಯಗಳು ಕೊನೆಗೊಳ್ಳಲಾರವು. ಮಹಿಳಾ ದೌರ್ಜನ್ಯವೆಂಬ ಕರ‍್ಯದಡಿ ಸಂತ್ರಸ್ತರಾಗುತ್ತಿರುವ ಹೆಣ್ಣು ಗಂಡು ಇಬ್ಬರನ್ನು ಪಾರು ಮಾಡಬೇಕಾದ ತುರ್ತು ಈ ಹೊತ್ತಿನದು.


ಭಾರತದಲ್ಲಿ ಅತ್ಯಾಚಾರ ಮಾಡಿ ಶಿಕ್ಷೆಗೊಳಗಾದ 100 ಜನ ಅತ್ಯಾಚಾರಿಗಳನ್ನು 2013 ರಲ್ಲಿ ಸಂದರ್ಶನ ಮಾಡಿರುವ ಮಧುಮಿತರವರು ಹೇಳುವ ಹಾಗೆ ಅತ್ಯಾಚಾರಿಗಳು ಜನಿಸುವುದಿಲ್ಲ. ಆದರೆ ಅವರನ್ನು ತಯಾರಿಸಲಾಗುತ್ತದೆ. ಮಧುಮಿತರವರ ಅನುಭವದಲ್ಲಿ ಬಹಳಷ್ಟು ಜನರು ಅತ್ಯಾಚಾರ ಮಾಡಿದ್ದೇವೆ ಎಂಬುದನ್ನು ತಿಳಿದಿರುವುದಿಲ್ಲ. ಅವರು ಏಕೆ ಸಮ್ಮತಿಯನ್ನು ಪಡೆದುಕ್ಕೊಳ್ಳಬೇಕು ಎಂಬುದನ್ನು  ಅರ್ಥಮಾಡಿಕೊಂಡಿರುವುದಿಲ್ಲ. ಕೆಲವರಿಗೆ ತಾವೇನು ತಪ್ಪು ಮಾಡಿದ್ದೇವೆ ಎಂಬ ಅರಿವೇ ಇಲ್ಲದವರಾಗಿದ್ದು ಅವರ  ಬೆಳವಣಿಗೆ ಚಿಂತನಾ ಪ್ರಕ್ರಿಯೆಯ ದೋಷದಿಂದಲೇ ಅವರು ಅತ್ಯಾಚಾರಿಗಳಾಗಿದ್ದಾರೆ ಎನ್ನುತ್ತಾರೆ. ಹಾಗಾಗಿ ಮಹಿಳಾ ದೌರ್ಜನ್ಯವೆಂಬುದು ಕ್ಷಣಿಕವಾಗಿ ನೆಡೆದು ಬಿಡುವ ಅಚಾತುರ್ಯವಲ್ಲ ಅದು ಹಂತ ಹಂತವಾಗಿ ರೂಪಿಸಲ್ಪಡುವ ಮನಸ್ಥಿತಿಯಾಗಿದ್ದು, ಇಂತಹ ಮನಸುಗಳನ್ನು ತಯಾರು ಮಾಡುವಲ್ಲಿ ಇಡೀ ಸಮಾಜದ ಪಾಲು ಇದ್ದು. ಆ ತಪ್ಪಿನ ಕಾರಣವನ್ನು ಹುಡುಕಿಕ್ಕೊಳ್ಳಬೇಕಾದ ತುರ್ತಿನ ಕಾಲವಿದು. 


ಗಂಡಸಿನ ನೀತಿ ಆರಡಿಯ ರೀತಿ ಅವಗಿಲ್ಲ ನೀತಿ ನಿಯಮ. ಕೆ ಮರುಳ ಸಿದ್ದಪ್ಪನವರ ಕವಿತೆಯ ಸಾಲುಗಳು, ಜಗತ್ತಿನ ನೀತಿ ನಿಯಮಗಳನೆಲ್ಲಾ ಹೆಣ್ಣೊಡಲೊಳಗಿಟ್ಟು. ಗಂಡನ್ನು ಬಿಡು ಬೀಸಾಗಿ ಬಿಟ್ಟು ಬಿಡುವ ,ಪ್ರಸ್ತುತ ಸಮಾಜದ ವಾಸ್ತವತೆಗೆ ಕನ್ನಡಿ ಹಿಡಿಯುವಂತಿದೆ. ಸಮಾಜವು ತಾನೇ ಕಟ್ಟಿಕೊಂಡ ಸಂಸ್ಥೆಗಳ ಮೂಲಕ ವ್ಯವಸ್ಥೆಯಲ್ಲಿ ಹೇಗೆ ಮೇಲು, ಕೀಳು, ಶ್ರೇಷ್ಠ, ಕನಿಷ್ಟ ಎಂಬ ಭೇದಬಾವವನ್ನು ಹುಟ್ಟು ಹಾಕಿದೆಯೋ ಹಾಗೆ ಅವೇ ಸಂಸ್ಥೆಗಳ ಮೂಲಕ ಒಂದೇ ರೀತಿಯಲ್ಲಿ ಒಂದೇ ಸಮನಾಗಿ ಹುಟ್ಟಿಬರುವ ಹೆಣ್ಣು ಗಂಡುಗಳಲ್ಲಿ ಲಿಂಗ ತಾರತಮ್ಯದ ಬೀಜವನ್ನು ಹುಟ್ಟು ಹಾಕಿ, ಗಂಡಿಗೆ ದಬ್ಬಾಳಿಕೆಯ ಗುಣವನ್ನು ಹೆಣ್ಣಿಗೆ ಅನುಯಾಯಿತ್ವದ ಗುಣವನ್ನು ಉದ್ದೀಪಿಸುತ್ತಾ, ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ ತಂದಿರಿಸಿದೆ. ಹೀಗೆ ಹೆಣ್ಣನ್ನು ಎರಡನೆ ದರ್ಜೆಯ ಪ್ರಜೆಯಾಗಿ, ತನ್ನ ಅಧೀನಲಿಂಗಿಯಾಗಿ,ಮನೆಯೊಳಗಿನ ನೋಟದಿಂದ ಶಾಲೆಯೊಳಗಿನ ಪಾಠದವರೆಗೆ ಕಲಿಯುತ್ತಾ ಹೋಗುವ ಗಂಡು ತಾನು ಶ್ರೇಷ್ಠನೆಂಬ ಅಹಂಕಾರದೊಳಗೆ ನೈತಿಕ ಕಟ್ಟು ಕಟ್ಟಳೆಗೆ ಒಳಗಾಗದೆ ಆಕ್ರಮಣಶೀಲತೆ ಅಹಂಕಾರದ ಮುಖವಾಡ ಧರಿಸಿ ಗಂಡಾಗಿ ಬೆಳೆಯುತ್ತಾ ಹೋಗುತ್ತಾನೆ. ಹೆಣ್ಣು ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಹೆಣ್ಣಾಗಿ ರೂಪುಗ್ಗೊಳ್ಳುವ ಹಾಗೆ ಗಂಡು ಕೂಡ ಸಾಮಾಜೀಕರಣದ ಪ್ರಕ್ರಿಯೆಗೆ ಒಳಗಾಗಿ ಗಂಡಾಗಿ ರೂಪುಗ್ಗೊಳ್ಳುತ್ತಾ ಹೋಗುತ್ತಾನೆ.


ನನ್ನವೇನು ಹಿತ್ತಾಳೆ ಪಾತ್ರೆ ತಿಕ್ಕಿ ಒಳಗಿಟ್ಟುಕ್ಕೊಳ್ಳುತ್ತೇನೆ. ಕಾಲಿಗೆ ಹೊಲಸು ಮೆಟ್ಟಿದ್ದಾರೆ ತೊಳೆದುಕೊಂಡು ಒಳಗೆ ಬರುತ್ತಾರೆ. ಎರಡು ಗಂಡೆತ್ತ ಹೆಮ್ಮೆಯೊಳಗಿನ ಪರಿಚಯಸ್ಥ ತಾಯಿಯ ಈ ಮಾತುಗಳು.ಈ ಸಮಾಜದ ಆಂರ‍್ಯದಲ್ಲಿ ಗಂಡಿಗಿರುವ ಮುಕ್ತತತೆಯ ಕಥೆ ಹೇಳುತ್ತವೆ. ಇಂತಹ ಮಾತುಗಳನ್ನು ಕೇಳಿ ನುಂಗಿ ಬೆಳೆಯುವ ಗಂಡು ಮಕ್ಕಳು ತಮ್ಮೊಳಗನ್ನು ಹೇಗೆ ರೂಪಿಸಿಕೊಳ್ಳಬಹುದು ಯೋಚಿಸುವರಾರು. ಗಂಡು ಮಕ್ಕಳನ್ನು ಹೆರುವುದು ಸಾಮಾಜಿಕವಾಗಿ ಪ್ರತಿಷ್ಠೆಯ ವಿಚಾರವಾಗಿದ್ದು ಗಂಡನ್ನು ಹೆತ್ತರೆ  ಅಲ್ಲಿಗೆ ಮುಗಿಯಿತು.ಅವರು ಹೇಗೆ ಬೆಳೆಯುತ್ತಾರೆ ಯಾರಿಗೆ ಬೇಕು. ಮನೆಯೊಳಗೆ ಹೆಣ್ಣು  ಮಗುವೊಂದು ಪ್ರೌಢವಾಸ್ಥೆಗೆ ಬಂದಾಗ ಅದನ್ನು ಸಂಭ್ರಮಿಸುವ ಮೂಲಕ ದಾಖಲಿಸಲಾಗುತ್ತದೆ,ಅವಳ ಅಜ್ಜಿ,ಅಮ್ಮ,ಚಿಕ್ಕಮ್ಮಾದಿಯಾಗಿ ಅವಳ ನೆಡೆ ನುಡಿ, ಉಡುಗೆ ತೊಡುಗೆಯ,ಶೀಲ,ಪಾವಿತ್ರö್ಯದ ಬಗೆಗೆ ಉದ್ದಕೂ ಉಪದೇಶಿಸುತ್ತಾರೆ, ಅವಳ ಜೈವಿಕ ಬದಲಾವಣೆಯನ್ನು ಅವಳಿಗೆ ವಿವರಿಸುವ  ಮೂಲಕ ಗಂಡು ಮಕ್ಕಳೊಡನೆ ಹೇಗೆ ವರ್ತಿಸಬೇಕೆಂಬುದನ್ನು ಕಲಿಸಲಾಗುತ್ತದೆ. ಆದರೆ ಅದೇ ಮನೆಯೊಳಗಿರುವ ಗಂಡು ಮಗುವೊಬ್ಬ ಸಹಜವಾಗಿ ಬೆಳೆಯುತ್ತಾನೆ. ಅವನ ತಂದೆಯಾದರೂ  ಅವನೊಳಗಿನ ಜೈವಿಕ ಬದಲಾವಣೆಯನ್ನು ಗುರುತಿಸಿ ಅವನೊಳಗನ್ನು ಇಣುಕಲು ಪ್ರಯತ್ನಿಸುವುದಿಲ್ಲ. ಹೆಣ್ಣುಮಕ್ಕಳಿಗೆ ಶೀಲ ಪಾವಿತ್ರö್ಯದ ಪಾಠ ಹೇಳುವ, ಕಟ್ಟು ಕಟ್ಟಳೆಯ ಒಳಗೆ ನಿರ್ಬಂದಿಸುವ ನಾವು ಗಂಡು ಮಕ್ಕಳಿಗೆ ಕಲಿಸುತ್ತಿರುವುದಾದರು ಏನನ್ನು? ಕೌಂಟುಬಿಕ ವ್ಯವಸ್ಥೆಯ ಒಳಗೆ  ಹೆಣ್ಣು ಮಕ್ಕಳಿಗಿರುವ ಆಪ್ತ ಸಮಾಲೋಚನೆಯ ವ್ಯವಸ್ಥೆಯೊಂದು ಗಂಡು ಮಕ್ಕಳಿಗಿಲ್ಲ. ಕಾಡಿನಲ್ಲಿರುವ ಪ್ರಾಣಿಗಳ ರೀತಿಯಲ್ಲಿ ಬೆಳೆಯುತ್ತಿರುವ ಗಂಡು ಮಕ್ಕಳಿಗೆ ನೈತಿಕತೆಯ ಮೌಲ್ಯಗಳನ್ನು ತುಂಬುವ ಮೂಲಕ ಹೆಣ್ಣಿನಂತೆ ತನಗೂ ಶೀಲವಿದೆ ಎಂಬುದನ್ನು ಕಲಿಸಿಕೊಡಬೇಕು. ಹೆಣ್ಣನ್ನು ಸಹಜೀವಿಯಾಗಿ ನೋಡುವ ಕಣ್ಣೋಟ ರೂಪಿಸಿ,ಅವಳನ್ನು ವ್ಯಕ್ತಿಯಾಗಿ ಗೌರವಿಸುವುದನ್ನು ಕಲಿಸಬೇಕಿದೆ. ಅವನೊಳಗೆ ಲಿಂಗಸೂಕ್ಷತೆಯ ಅರಿವು ಮೂಡಿಸುವ ಮೂಲಕ ಹೆಣ್ಣು ಮಕ್ಕಳ ಮೇಲೆ ನೆಡೆಯುತ್ತಿರುವ ದೌರ್ಜನ್ಯವನ್ನು ಕೊನೆಗೊಳಿಸಬೇಕಿದೆ.


ಸದ್ಯ ನೋಡಿದ ವಕೀಲ್ ಸಾಬ್ ಎಂಬ ತೆಲಗು ಚಿತ್ರ ಅತ್ಯಾಚಾರಗಳು ಮತ್ತು ಹೆಣ್ಣಿನ ಲೈಂಗಿಕ ಸ್ವಾಂತತ್ರö್ಯವನ್ನ್ಯು ಕೇಂದ್ರಿಕರಿಸಿದAತೆ ರೂಪುಗೊಂಡಿದ್ದು. ಹೆಣ್ಣೊಬ್ಬಳು ಇಲ್ಲ ಎಂದರೆ ಅದರರ್ಥ ಇಲ್ಲ ಎಂದಷ್ಟೆ ಅದು ಪರಿಚಯಸ್ಥೆಯಾಗಿರಲಿ,  ಸ್ನೇಹಿತೆಯಾಗಿರಲಿ, ಒಬ್ಬ ಸೆಕ್ಸ್ವರ್ಕರ್, ಕೊನೆಗೆ ಹೆಂಡತಿಯೇ ಆಗಿರಲಿ. ಹೆಣ್ಣು ಮಗಳೊಬ್ಬಳು ಲೈಂಗಿಕತೆಯನ್ನು ನಿರಾಕರಿಸಿದರೆ ಅದಕ್ಕೆ ಮಾನ್ಯತೆಯನ್ನು ನೀಡಬೇಕೆನ್ನುವ ನಿಟ್ಟಿನಲ್ಲಿ ಗಮನ ಸೆಳೆಯುತ್ತದೆ. ಆದರೆ ಹೆಣ್ಣಿನ ಲೈಂಗಿಕ ನಿರಾಕರಣೆಯನ್ನು ಒಪ್ಪದಿರುವುದು ಪೌರುಷದ ಪರಿಕಲ್ಪನೆಯೊಳಗೆ ಒಂದು ಬಹು ಮುಖ್ಯ ಮಾನದಂಡವಾಗಿದ್ದು.  ನಮ್ಮ ಸಮಾಜ ಹುಟ್ಟಿನಿಂದ ಕಟ್ಟಿಕೊಡುವ ಪೊಳ್ಳು ಪೌರುಷದ ಪರಿಕಲ್ಪನೆಯಾಗಿದ್ದು. ಅದು ಬಲವಂತದಿAದ ಹೆಣ್ಣನ್ನು ನಿಯಂತ್ರಣದಲ್ಲಿಡಬಲ್ಲ ಮತ್ತು ಲೈಂಗಿಕತೆಯ ಪ್ರದರ್ಶನ ಮಾಡಬಲ್ಲ ಗಂಡಿನ ಸಾಮರ್ಥ್ಯವೆಂದು ನೇರವಾಗಿ ವಿವರಿಸಲ್ಪಡುವುದರಿಂದ ಇಂತಹ ಪೊಳ್ಳು ಪೌರುಷತ್ವದ ಪರಿಕಲ್ಪನೆಯಿಂದ ಗಂಡು ಮಕ್ಕಳನ್ನು ಪಾರು ಮಾಡಿ ಅವರಿಗೆ ಒಪ್ಪಿಗೆಯ ಅರ್ಥ ಕಲಿಸಬೇಕು. ಇಲ್ಲವಾದರೆ ಮನೆ ಹೊರಗಿನ ಕರ‍್ಯಗಳಂತೆ, ಒಳಗಿನ ಕರ‍್ಯಗಳು ಹೆಚ್ಚುತ್ತವೆ. ಜಗತ್ ಪ್ರಸಿದ್ದ ಲೇಖಕ ಟಾಲ್ ಸ್ಟಾಯ್‌ನ ಪತ್ನಿ ತನ್ನ ಆತ್ಮ ಚರಿತ್ರೆಯಲ್ಲಿ, ಬದುಕಿಡೀ ತಾನು ತನ್ನ ಗಂಡನಿAದಲೇ ಲೈಂಗಿಕ ದುರಾಕ್ರಮಣಕ್ಕಿಡಾದುದರ ಕುರಿತು ಹೇಳಿಕೊಂಡು ಹಲುಬುತ್ತಾಳೆ. ಹೆಣ್ಣೆಂದರೆ ಭೋಗದ ವಸ್ತುವೆಂಬ ಸನಾತನವಾದ ಸಿದ್ದ ಆಲೋಚನೆಗಳೇ ಹೆಣ್ಣಿನ ಮೇಲಿನ ದುರಾಕ್ರಮಣಗಳಿಗೆ ಮೂಲ ಕಾರಣವಾಗಿದ್ದು ಗಂಡು ತನಗೆ ಬೇಕಾದ ವಸ್ತುಗಳನ್ನು ಸೆಳೆದುಕೊಳ್ಳುವಂತೆ ಹೆಣ್ಣಿನ ಸಂದರ್ಭದಲ್ಲಿ ತೋರುವ ನಿಲುವುಗಳೇ ದೌರ್ಜನ್ಯದ ಮೂಲವಾಗಿದೆ. ವಿಭಿನ್ನ ಲಿಂಗದವರ ಲೈಂಗಿಕತೆಗೆ ಮಾನ್ಯತೆಯನ್ನು ನೀಡುವ, ಹೆಣ್ಣನ್ನು ಬೋಗ ವಸ್ತುವಾಗಿ ನಿವಾರಿಸಬೇಕಾದ ನಿಟ್ಟಿನಲ್ಲಿ, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಲೈಂಗಿಕ ಶಿಕ್ಷಣದ,ಲಿಂಗ ಸೂಕ್ಷö್ಮ ಶಿಕ್ಷಣದ, ಅವಶ್ಯಕತೆ ಇದೆ.


ಕೌಟುಂಬಿಕ ಕಲಿಕೆಯ ನಂತರ ಅಪ್ಪ ಅಮ್ಮನನ್ನು ನಂಬುತ್ತಿದ್ದ ಮಗು ಶಿಕ್ಷಕರನ್ನು ನಂಬತೊಡಗುತ್ತದೆ. ಪುಸ್ತಕವನ್ನು ಕಡೆಯ ತೀರ್ಮಾನ ಎನ್ನುವಂತೆ ಭಾವಿಸುತ್ತದೆ. ಆದರೆ ವಿಶ್ವ ದೃಷ್ಠಿಕೋನ ರೂಪಿಸಲು ಫಲವತ್ತಾದ ಮೈದಾನವಾದ ಶಾಲೆಯಲ್ಲೂ ಇಂದು ರೂಢಿಗತ ಲಿಂಗ ಮಾದರಿಗಳೇ ತುಂಬಿಕೊAಡಿದ್ದು ನಮ್ಮ ಶಿಕ್ಷಣ ವ್ಯವಸ್ಥೆಯು  ನಮ್ಮ ಸಮಾಜದಲ್ಲಿರುವ ಲಿಂಗ ಪಕ್ಷಪಾತ ಮತ್ತು ರೂಢಿಗಳನ್ನು ಆಂತರಿಕಗೊಳಿಸಲು ಪ್ರಮುಖ ಕೊಡುಗೆ ನೀಡುತ್ತಿದೆ. ಹೆಣ್ಣು ಮತ್ತು ಗಂಡು ಮಕ್ಕಳ ಸಮಾನ ಶಿಕ್ಷಣಕ್ಕಾಗಿ ಭಾರತದಲ್ಲಿ ಅತ್ಯಂತ ಮಹತ್ವದ ಅಡೆ ತಡೆಗಳೆಂದರೆ ಪಠ್ಯಕ್ರಮದಲ್ಲಿನ  ಲಿಂಗ ಪಕ್ಷಪಾತ ಮತ್ತು ತರಗತಿಗಳಲ್ಲಿನ ರೂಢಿಗತ ಲಿಂಗ ಪಕ್ಷಪಾತ, ಲಿಂಗ ಪಾತ್ರದ ರೂಢಿಗತ ಮಾದರಿಗಳು ಮತ್ತು ಹಿಂಸೆಯನ್ನು ಶಾಶ್ವತಗೊಳಿಸುವಲ್ಲಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಪುರುಷತ್ವದ ಪಿತೃಪ್ರದಾನ ಪರಿಕಲ್ಪನೆಗಳನ್ನು ಪುನರ್ ರೂಪಿಸುವಲ್ಲಿ ಶಿಕ್ಷಣವು ಶಕ್ತಿಯುತ ಪರಿವರ್ತಕ ಶಕ್ತಿಯಾಗಿದ್ದು ಇನ್ನಾದರೂ ಹೆಣ್ಣನ್ನು ಸಹಜೀವಿಯಾಗಿ ನೋಡುವ ಮನಸ್ಥಿತಿ ರೂಪಿಸುವ ಪಠ್ಯಗಳನ್ನು ರೂಪಿಸಿ, ಆ ನಿಟ್ಟಿನಲ್ಲಿ ಶಿಕ್ಷಕರನ್ನು ತರಬೇತಿಗೊಳಿಸಬೇಕಿದೆ. ಶಾಲಾ ಹಂತದಲ್ಲೆ ಲೈಂಗಿಕ ಶಿಕ್ಷಣಕ್ಕೆ ಹಲವಾರು ಅಪಸ್ವರಗಳಿವೆ, ಆದರೆ ಬಂಡವಾಳಶಾಹಿಯ ಕರ‍್ಯ ಎಳೆಯ ಮನಸುಗಳ ಮುಂದೆ ರಾಶಿ ರಾಶಿ ಲೈಂಗಿಕ ಸರಕನ್ನು ತಂದು ಹೊಟ್ಟಿರುವಾಗ, ಅವರಿಗೆ ಆರೋಗ್ಯಕರ ಲೈಂಗಿಕ ಶಿಕ್ಷಣದ ಅರಿವಿನ ಅವಶ್ಯಕತೆಯಿದೆ. ತಕ್ಕ ಸಮಯಕ್ಕೆ ಸೂಕ್ತ ಲೈಂಗಿಕ ಶಿಕ್ಷಣ, ಲಿಂಗಸೂಕ್ಷತೆ ಇಲ್ಲದೆ ಅತ್ಯಾಚಾರದಂತಹ ಕರ‍್ಯಗಳಿಗೆ ಇಳಿಯುವ ಮನಸ್ಸುಗಳಲ್ಲಿ ಆರೋಗ್ಯಕರ ಲೈಂಗಿಕತೆಯನ್ನು ಮಾನವೀಯತೆಯನ್ನು ಬೆಳೆಸುವ ಮೂಲಕ ಹೆಣ್ಣಿನ ಮೇಲಿನ ಲೈಂಗಿಕ ಹಲ್ಲೆಗಳನ್ನು ಕೊನೆಗೊಳಿಸಬೇಕಿದೆ.


ಪುರುಷರೆಲ್ಲಾ  ಹೆಣ್ಣಿನ ವಿರೋಧಿಗಳು ಅಲ್ಲ ಪುರುಷ ಪ್ರಧಾನ ವ್ಯವಸ್ಥೆಯನ್ನು, ಬಂಡವಾಳ ಶಾಹಿ ಕರ‍್ಯವನ್ನು ಬಿಟ್ಟು ಮಹಿಳಾ ದೌರ್ಜನ್ಯಗಳನ್ನು ಸರಿಯಾಗಿ ಅರ್ಥೈಸಿಕ್ಕೊಳ್ಳಲು ಸಾಧ್ಯವಿಲ್ಲ. ಬೋವಾಳ ಮಾತಿನಂತೆ ಮಹಿಳೆಯ ಬಿಡುಗಡೆಯಲ್ಲಿ ಪುರುಷನ ಬಿಡುಗಡೆಯಿದೆ. ಪಿತೃ ಪ್ರಧಾನ ವ್ಯವಸ್ಥೆಯೊಳಗೆ ಮಹಿಳೆಯಂತೆ ಪುರುಷನೂ ಶೋಷಿತನೆ ಹೌದು. ಹೆಣ್ಣು ಗಂಡುಗಳಿಬ್ಬರೂ ಸಾಮಾಜಿಕರಣದ ಬಲಿಪಶುಗಳಾಗಿದ್ದು, ಇಬ್ಬರಲ್ಲೂ ಲಿಂಗ ಸೂಕ್ಷತೆಯ ಅರಿವು, ಆರೋಗ್ಯಕರ ಲೈಂಗಿಕತೆಯ ಅರಿವು ಮೂಡಿಸುವ ಮೂಲಕ ಕ್ರಮೇಣವಾಗಿಯಾದರೂ ಮಹಿಳಾ ದೌರ್ಜನ್ಯಗಳನ್ನು ಕೊನೆಗಾಣಿಸಬಹುದೇ ಹೊರತು. ಕ್ಯಾಂಡಲ್ ಸುಡುವುದು ಅಪರಾಧಿಗಳನ್ನು ಸುಡುವುದರಿಂದ, ನೇಣಿಗೇರಿಸುವುದರಿಂದ ಮಹಿಳಾ ದೌರ್ಜನ್ಯಗಳು ಕೊನೆಗೊಳ್ಳಲಾರವು.