ಎದೆಗೆ ಅಕ್ಷರ ಬಿತ್ತಿದ ಅಕ್ಷರದವ್ವನ ನೆನೆಕೆ ಡಾ.ಆಶಾರಾಣಿ.ಕೆ.ಬಗ್ಗನಡು

savithri-bai-phule-dr-asharani-bagganadu

ಎದೆಗೆ ಅಕ್ಷರ ಬಿತ್ತಿದ ಅಕ್ಷರದವ್ವನ ನೆನೆಕೆ ಡಾ.ಆಶಾರಾಣಿ.ಕೆ.ಬಗ್ಗನಡು

ಎದೆಗೆ ಅಕ್ಷರ ಬಿತ್ತಿದ ಅಕ್ಷರದವ್ವನ ನೆನೆಕೆ
ಡಾ.ಆಶಾರಾಣಿ.ಕೆ.ಬಗ್ಗನಡು

ಜನವರಿ 3,  ಸಾವಿತ್ರಿಬಾಯಿ ಫುಲೆಯೆಂಬ ಅಕ್ಷರ ಸಂತಳ ಜನ್ಮದಿನ. ದೇಶದ ಮೊದಲ ಶಿಕ್ಷಕಿ ಎನ್ನುವ ಹೆಮ್ಮೆಯ ಹಾಗೂ ಮಹಿಳಾ ಬದುಕಿನ, ಶಿಕ್ಷಕರ ಬದುಕಿನ ಘನತೆಯನ್ನು ಎತ್ತರಿಸಿದ ಮಹಾತಾಯಿಯ ಜನ್ಮದಿನವನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ತಳೆದಿದ್ದು, ತಡವಾಗಿಯಾದರೂ ಸಾವಿತ್ರಿಬಾಯಿ ಪುಲೆ ಎಂಬ ಹೋರಾಟಗಾರ್ತಿಯನ್ನು ಸರ್ಕಾರ ಗುರುತಿಸುವ ಮೂಲಕ  ಜನವರಿ 3À ಸಾವಿತ್ರಿಬಾಯಿಯ ಜನ್ಮಜಯಂತಿಯಾಗಿ ಆಚರಣೆಗೊಳ್ಳುತ್ತಿದೆ. 


ಭಾರತ ಸಂವಿಧಾನ ಎಲ್ಲಾ ತಾರತಮ್ಯಗಳನ್ನು ನಿವಾರಿಸುವ ವಿದಿ üಹೊತ್ತು ನಿಂತು ಇಂದಿಗೆ 74 ವರ್ಷಗಳಾದರೂ ಸಂಪೂರ್ಣ, ಸ್ತಿçà ಸಾಕ್ಷರತೆಯೆಂಬುದು ಇಂದಿಗೂ ಸಾಧ್ಯವಾಗದೇ ದೇಶದ 30% (ನ್ಯಾಷನಲ್ ಸ್ಟಾö್ಯಟಿಸ್ಟಿಕಲ್ ಆಫೀಸ್ ಎನ್.ಎಸ್.ಓ 2020 ವರದಿ ಪ್ರಕಾರ) ಭಾಗ ಹೆಣ್ಣು ಮಕ್ಕಳು ಅಶಿಕ್ಷಿತರಾಗಿಯೇ ಉಳಿದಿದ್ದಾರೆ. ಹೆಣ್ಣನ್ನು ತನ್ನ ಊಳಿಗದವಳಾಗಿಸಿಕೊಳ್ಳುವ ನಿಟ್ಟಿನಲ್ಲಿ ಅವಳಿಂದ ಅಕ್ಷರದ ಹಕ್ಕನ್ನು ಕಸಿದ ಭಾರತೀಯ ಪಿತೃವ್ಯವಸ್ಥೆ ಅವಳ ಅಜ್ಞಾನವನ್ನು ಆಳುವ ಸಾಧನವನ್ನಾಗಿಸಿಕೊಂಡಿತ್ತು. ಪುರುಷ ಊಳಿಗದಡಿ ಸಂಪ್ರದಾಯ, ಮೌಢ್ಯಗಳೆಂಬ ಸಂಕೋಲೆಗಳಲ್ಲಿ ಬಂಧಿತಳಾಗಿ ಅಜ್ಞಾನದ ಕಗ್ಗತ್ತಲೆಯಲ್ಲಿ ನರಳುತ್ತಿದ್ದ ಮಹಿಳೆಯರನ್ನು ವಿಚಾರದ ಬೆಳಕಿನೆಡೆಗೆ ಕೈ ಹಿಡಿದು ನಡೆಯಿಸಿದ ಮೊದಲಗಿತ್ತಿ ಸಾವಿತ್ರಮ್ಮ. ಹೆಣ್ಣು ಕಲಿತರೆ ಕೇಡು ಎಂಬ ಮನಸ್ಥಿತಿಯ ಪಿತೃ ವ್ಯವಸ್ಥೆಯನ್ನು ದಿಟ್ಟವಾಗಿ ಎದುರಿಸಿ ನಿಂತ ಸಾವಿತ್ರಮ್ಮ ಕಲ್ಲಿನಿಂದ ಸಗಣಿಯಿಂದ ಏಟು ತಿಂದರೂ ಜಗ್ಗದೆ ಭಾರತೀಯ ಹೆಣ್ಣುಮಕ್ಕಳನ್ನು ಅಕ್ಷರದ ಹಾದಿಯಲ್ಲಿ ಮುನ್ನಡೆಸಿದರು. ಇಂತಹ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯವರ ಜನ್ಮದಿನವನ್ನು ಹೆಣ್ಣುಮಕ್ಕಳ ಶಿಕ್ಷಣ ದಿನವನ್ನಾಗಿ ಸರ್ಕಾರ ಘೋಷಿಸುವುದರ ಮೂಲಕ ಸಾವಿತ್ರಬಾಯಿ ಪುಲೆಯವರ ಆಶಯವನ್ನು ಅರ್ಥಪೂರ್ಣಗೊಳಿಸಬೇಕಿದೆ.


  ಮಹಾರಾಷ್ಟçದ ಸತಾರ ಜಿಲ್ಲೆಯ ನಾಯ್‌ಗಾಂವ್ ಎಂಬ ತಳಸಮುದಾಯವೊಂದರ ಕುಟುಂಬದಲ್ಲಿ 1831 ಜನವರಿ 3ರಂದು  ಸಾವಿತ್ರಬಾಯಿಯವರು ಜನಿಸಿದರು. ಬಾಲ್ಯವಿವಾಹ ರೂಢಿಯಲ್ಲಿದ್ದ ಅಂದಿನ ಕಾಲಘಟ್ಟದಲ್ಲಿ 9ನೇ ವಯಸ್ಸಿಗೆ ಜ್ಯೋತಿ ಬಾ ಪುಲೆಯವರನ್ನು ವಿವಾಹವಾದರು. ಎಲ್ಲರನ್ನೂ ಸಮಾನವಾಗಿ ಒಳಗೊಳ್ಳುವಿಕೆಯ ಜಗತ್ತೊಂದನ್ನು ಕಟ್ಟಿಲಿಕ್ಕೇನೋ ಎಂಬAತೆ ಬಂದಾದ ಈ ಜೋಡಿಗಳು ವಿಧಿ ಕರೆದೊಯ್ಯುವ ಕ್ಷಣದವರೆಗೂ ತಮ್ಮೆಲ್ಲಾ ವೈಯಕ್ತಿಕ ಖುಷಿ-ಸಂತೋಷಗಳನ್ನು ಬದಿಗೊತ್ತಿ ಸಮ ಸಮಾಜಕ್ಕಾಗಿ ಶ್ರಮಿಸಿದರು. ಕಡಿದಾದ ಈ ಹಾದಿಯಲ್ಲಿ ಅವರು ಎದುರಿಸಿದ ಅಪಮಾನ ಅವಮಾನಗಳು ಅಗಣಿತವಾದರೂ ಎಂದೂ ಇಟ್ಟ ಹೆಜ್ಜೆಯನ್ನು ಹಿಂತೆಗೆಯದೆ ದೃಢಸಂಕಲ್ಪದಿAದ ತಮ್ಮ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಒಂದಾಗಿ ದುಡಿದರು. ಗಂಡಿನ ಗಂಡನ ಅಹಂ ಇಲ್ಲದ ಜ್ಯೋತಿ ಬಾ ಪುಲೆ ಮನೆಯ ಹೊರೆ-ಹೊರೆ ಕೆಲಸಗಳಲ್ಲಿ ಹೆಂಡತಿಯ ಜೊತೆಯಾಗಿ, ಸಾವಿತ್ರಿ ಬಾಯಿ ಪುಲೆಯವರೊಳಗಿನ ಅಕ್ಷರದ ಹಂಬಲಕ್ಕೆ ಬೆಂಬಲವಾಗಿ ನಿಂತರು. ಸಾವಿತ್ರಿ ಬಾಯಿಯವರಿಗೆ ಅಕ್ಷರ ತಿದ್ದಿಸಿ, ಶಿಕ್ಷಕಿಯಾಗಲು ಪ್ರೊತ್ಸಾಹಿಸಿದರು. ಜ್ಯೋತಿ ಬಾ ರವರ ಪ್ರೀತಿ ಪ್ರೊತ್ಸಾಹಗಳೊಳಗೆ ಹೊತ್ತಿಕೊಂಡ ಸಾವಿತ್ರಿಬಾ ಪುಲೆಯೆಂಬ ಅಕ್ಷರದ ದೀಪ ಭಾರತದ ಮೊದಲ ಶಿಕ್ಷಕಿಯಾಗಿ ಬೆಳಗಿ, ಅದೆಷ್ಟೋ ಹೆಣ್ಣುಮಕ್ಕಳ ಬದುಕನ್ನು ಬೆಳಕಾಗಿಸಿ ಇಂದಿಗೂ ಭಾರತದ ಹೆಣ್ಣುಮಕ್ಕಳ  ಎದೆಯೊಳಗನ್ನು ಬೆಳಗುತ್ತಲೇ ಇದೆ. ಜ್ಯೋತಿ ಬಾ ಪುಲೆ, ಮತ್ತು ಸಾವಿತ್ರಿ ಬಾ ಪುಲೆ ಜಾತಿ ಮತ್ತು ಲಿಂಗ ತಾರತಮ್ಯತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಪ್ರಮುಖ ಸಾಧನವನ್ನಾಗಿ ಸ್ವೀಕರಿಸಿ, ಹತ್ತಾರು ಶಾಲೆಗಳನ್ನು ಆರಂಭಿಸಿ ಸಾವಿರಾರು ಮಕ್ಕಳಿಗೆ ಅಕ್ಷರದ ದಾಸೋಹಿಗಳಾದರು. ಈ ಮಧ್ಯೆ ಅಜ್ಞಾನ ಬಹಿಷ್ಕಾರದ ಕಾರಣ ಶಾಲೆ ತೊರೆಯುವ ಮಕ್ಕಳಿಗೆ ಮನವೊಲಿಸಿ ಶಾಲೆಗಳಿಗೆ ಕರೆತಂದು ಸ್ಟೆಫಂಡ್ ಕೊಡುವ ಮೂಲಕ ಅವರ ಶಿಕ್ಷಣವನ್ನು ಉತ್ತೇಜಿಸಿದರು. ಸತ್ಯಶೋಧಕ ಸಮಿತಿಯನ್ನು ಸ್ಥಾಪಿಸುವ ಮೂಲಕ 1876-77ರವರೆಗೂ 52ಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ತೆರೆದರು. ಶತ-ಶತಮಾನಗಳಿಂದ ಅಕ್ಷರ ವಂಚಿತರಾಗಿ ತುಳಿತಕ್ಕೊಳಗಾದ ಶೋಷಿತರ ಬದುಕನ್ನು ಬೆಳಕಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು.  


 ಸಾಮಾಜಿಕ ಸುಧಾರಣೆಗಳನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆದ್ಯತೆಯ ಮೇರೆಗೆ ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸುವ, ಮಕ್ಕಳ ಸುರಕ್ಷತೆಯನ್ನಾಧರಿಸಿ ಬೋಧನೆಯ ಕ್ರಮವನ್ನು ರೂಪಿಸುವ, ಬೌದ್ಧಿಕವಾಗಿ ವಿಮರ್ಶಾತ್ಮಕವಾದ ವಸ್ತುವಿಷ್ಠವಾದ ಕಲಿಕೆಯನ್ನು ಬೆಂಬಲಿಸುವ, ಜಾಗತಿಕವಾಗಿ ಲಭ್ಯವಿರುವ ಆಧುನಿಕ ಶಿಕ್ಷಣವನ್ನು ಪಠ್ಯಕ್ರಮಗಳಲ್ಲಿ ಅಳವಡಿಸುವಂತಹ ಪ್ರಮುಖ ಶಿಕ್ಷಣ ನೀತಿಗಳನ್ನು  ಜಾರಿಗೆ ತರುವ ಮೂಲಕ 19ನೇ ಶತಮಾನದ ಮೊದಲ ಹಾಗೂ ಮಧ್ಯಭಾಗದಲ್ಲಿ ಅಂದಿನ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಬಯಸಿದ್ದ ಸಾವಿತ್ರಬಾಯಿ ಪುಲೆ ಆಗಿನ ಶಿಕ್ಷಣ ವ್ಯವಸ್ಥೆಯ ದೃಷ್ಠಿಕೋನವನ್ನು ಪಲ್ಲಟಗೊಳಿಸಿದ್ದರು ಎನ್ನುತ್ತಾರೆ. ಥಾಮ್‌ವುಲ್ಫ್ ಮತ್ತು ಸುಜನ ಆಂಡ್ರಡೆ ಎಂಬ ಲೇಖಕರು.   


      ಪತ್ನಿಗೆ ಸಾತಂತ್ರö್ಯ ನೀಡಿದ್ದರಿಂದಾಗಿ ಮಕ್ಕಳ ಮೇಲೆ ಪಾಲಕರಿಗೆ ನಿಯಂತ್ರಣ ತಪ್ಪಿಹೋಯಿತು. ಹಲವು ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಮಹಿಳೆಯರು ಸ್ವಾತಂತ್ರ ಪಡೆಯುತ್ತಿರುವುದೇ ಮುಖ್ಯ ಕಾರಣ. ಪತ್ನಿಯು ಪತಿಯ ಮಾತು ಕೇಳುವುದನ್ನು ನಿಲ್ಲಿಸಿದ್ದು ಮಕ್ಕಳು ಹಾಗೂ ಕೆಲಸದವರಲ್ಲಿನ ಅಶಿಸ್ತಿಗೆ ಮುಖ್ಯ ಕಾರಣ. ಪತಿಯ ಹಾದಿಯನ್ನು ಒಪ್ಪಿಕೊಳ್ಳುವ ಮೂಲಕ ಮಾತ್ರವೇ ತಾಯಿಯು ಚಿಕ್ಕವರ ವಿಧೇಯತೆಗೆ ಪಾತ್ರಳಾಗಬಹುದು. ಪ್ರಸ್ತುತ ಸಾಲುಗಳು ಮನುಧರ್ಮ ಕಾಲದ್ದು ಅಲ್ಲ. ಮನುಧರ್ಮ ಶಾಸ್ತçದೊಳಗಿನವು ಅಲ್ಲ. ಇತ್ತೀಚೆಗೆ ನಡೆದ ಸಿ,ಬಿ.ಎಸ್.ಸಿ 10ನೇ ತರಗತಿಯ ಇಂಗ್ಲೀಷ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನವು. ನಮ್ಮ ಸಮಾಜದ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿರುವ ಲಿಂಗಪೂರ್ವಗ್ರಹಗಳು ಈ ಹೊತ್ತಿಗೂ ಬದಲಾಗದೇ ಉಳಿದಿರುವ ಸತ್ಯವನ್ನು ಸಾರುವಂತಿರುವ ಈ ಸಾಲುಗಳು ಸಾಮಾಜಿಕ ತಾರತಮ್ಯವನ್ನು ನಿವಾರಿಸುವ ನಿಟ್ಟಿನ ಸಾಧನವಾದ ಶಿಕ್ಷಣವು ಹೇಗೆ ಲಿಂಗಪೂರ್ವಗ್ರಹಗಳಿಗೆ ಒಳಗಾಗುತ್ತಿದೆ ಎಂಬುದನ್ನು ತೆರೆದು ತೋರುತ್ತಿವೆ. ಅಸಮಾನತೆಯನ್ನು ಪೊರೆಯುತ್ತಿರುವ, ಪಿತೃಸಾಮ್ಯತೆ ಮತ್ತು ಬಂಡವಾಳವಾದಿ ಮೌಲ್ಯಗಳೆದುರು ಶಿಕ್ಷಣದ ಮೌಲ್ಯಗಳು ನಿತ್ರಾಣಗೊಳ್ಳುತ್ತಿರುವ ದುರಿತ ಕಾಲದಲ್ಲಿ ಸಾವಿತ್ರಬಾಯಿಯವರ ಶಿಕ್ಷಣ ನೀತಿಗಳು ಮುಖ್ಯವಾಗಬೇಕಿವೆ. 


  ಆಧುನಿಕ ಶಿಕ್ಷಣ ಖಾಸಗೀಕರಣಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನಬದ್ಧ ಮೂಲಭೂತ ಹಕ್ಕು ಮಾರಾಟದ ಸರಕಾಗಿ ಶಿಕ್ಷಣ ಉದ್ಯಮವಾಗುತ್ತಿದೆ. ಸಮಾನ ಶಿಕ್ಷಣ, ಕಡ್ಡಾಯ ಶಿಕ್ಷಣ ನೀತಿ ಬಂಡವಾಳಶಾಹಿ ಪರವಾದ ಸರ್ಕಾರದ ಧೋರಣೆ ಸರ್ಕಾರಿ ಶಾಲೆಗಳ ಗುಣಮಟ್ಟದ ಕೊರತೆಯ ಪರಿಣಾಮ ವಿಫಲವಾಗುತ್ತಿದೆ. ಒಂದು ಕಡೆ ಬಂಡವಾಳಶಾಹಿಯನ್ನು ಪೊರೆಯುತ್ತಿರುವ ಸರ್ಕಾರ ಮತ್ತೊಂದು ಕಡೆ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ಅನ್ನು ತಡೆಯುವ ಪ್ರತಿಗಾಮಿ ಧೋರಣೆಯ ಮೂಲಕ ಬಹುತೇಕ ಕೆಳ-ತಳ ಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ದೂರಾಗಿಸುವ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಆಧುನಿಕ ಶಿಕ್ಷಣ ಖಾಸಗೀಕರಣಗೊಂಡು ಸಂವಿಧಾನಬದ್ಧವಾದ ಮೂಲಭೂತಹಕ್ಕು ಮಾರಾಟದ ಸರಕಾಗಿ ಶಿಕ್ಷಣ ಉದ್ಯಮವಾಗುತ್ತಿರುವ ಈ ಹೊತ್ತಿನಲ್ಲಿ ಶಿಕ್ಷಣಕ್ಕೆ ತಾಯ್ತನದ ತುಡಿತ ತುಂಬಿದ ಅಕ್ಷರದವ್ವ ಸಾವಿತ್ರಬಾಯಿ ಪುಲೆ ಮುಖ್ಯರಾಗುತ್ತಾರೆ.


  ಇತ್ತೀಚೆಗಷ್ಟೇ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರು ಕರ್ನಾಟಕದಲ್ಲಿ 2018-21ರವರೆಗೆ ಏರುಗತಿಯಲ್ಲೆ ಸಾಗಿರುವ ಮಕ್ಕಳ ಮಹಿಳೆಯರ ದೌರ್ಜನ್ಯದ ಅಂಕಿ-ಅAಶಗಳನ್ನು ತೆರೆದಿಟಿದ್ದಾರೆ. ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇದ್ದು ಇದನ್ನು ತಡೆಯವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ. ಮತ್ತೊಂದು ಕಡೆ ಮಹಿಳಾ ಪರ ಯೋಜನೆ ಕಾರ್ಯಕ್ರಮಗಳು ಇಚ್ಚಾಶಕ್ತಿಯ ಕೊರತೆಯ ಕಾರಣ ಹಳ್ಳ ಹಿಡಿಯುತ್ತಿವೆ. ಮಹಿಳೆಯರ ಸುರಕ್ಷತೆಗಾಗಿ ಸ್ಥಾಪನೆಯಾಗಿದ್ದ ನಿರ್ಭಯಾ ನಿಧಿ ಬಳಕೆಗೊಳ್ಳದೆ ಭ್ರಷ್ಟಾಚಾರದ ಕಮಟು ವಾಸನೆಯೊಡೆಯುತ್ತಿದ್ದರೆ, ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವಾನ ಕೇಂದ್ರಗಳು ಮುಚ್ಚಿಹೋಗಿವೆ. ಇಂತಹ ಹಲವಾರು ಮಹಿಳಾ ಪರ ಯೋಜನೆ ಕಾರ್ಯಕ್ರಮಗಳು ಇಚ್ಚಾಶಕ್ತಿಯ ಕೊರತೆಯ ಕಾರಣ ಹಳ್ಳ ಹಿಡಿಯುತ್ತಿವೆ. ಮಹಿಳಾ ಸಮಾನತೆಯ ಬಗೆಗೆ ತೋರಿಕೆಯ ಕಾಳಜಿಯನ್ನು ಪ್ರಕಟಿಸುತ್ತಿರುವ ವ್ಯವಸ್ಥೆ, ಮತ್ತೊಂದೆಡೆ ಲಿಂಗ ಪೂರ್ವಗ್ರಹಗಳನ್ನು ಆಚರಣೆಗಳನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪೊರೆಯುತ್ತಿರುವುದೇ ಮಹಿಳಾ ವಿಮೋಚನೆಗೆ, ಸಮಾನತೆಗೆ ಹಿನ್ನೆಡೆಯುಂಟಾಗಲು ಕಾರಣವಾಗುತ್ತಿದೆ.  


  ಮಹಿಳೆಯರ ಮೇಲಿನ ದೈಹಿಕ ದೌರ್ಜನ್ಯಗಳು, ಆಕ್ರಮಣಗಳು ಹೆಚ್ಚುತ್ತಿರುವ ದಿನಮಾನಗಳಲ್ಲಿ ಲೈಂಗಿಕ ಭಯೋತ್ಪಾದನೆಯೊಂದು ಏಕಕಾಲಕ್ಕೆ ಅವಳ ದೇಹ ಮತ್ತು ಮನಸ್ಸಿನ ಮೇಲೆ ದಾಳಿ ಮಾಡುತ್ತಿದೆ. ಶಾಸಕ ಕೆ.ಆರ್. ರಮೇಶ್‌ಕುಮಾರ್ ಅವರು ಅತ್ಯಾಚಾರದ ಕುರಿತು ವಿಧಾನಸಭೆಯಲ್ಲಿ ಆಡಿರುವ ಮಾತುಗಳು ‘ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೇ ಅದನ್ನು ಆನಂದಿಸಿ’ ಎಂಬ ಮಾತಿದೆ. ಹೀಗೆ ಆಡಿರುವ  ಮಾತುಗಳಿಗೆ ಅವರು ಕ್ಷಮೆ ಕೋರಿದ್ದಾರೆ. ಹೀಗೆ ಕ್ಷಮೆ ಕೋರಿರುವುದು ಅವರ ಸೌಜನ್ಯವೆಂದು ಒಪ್ಪಿಕೊಂಡರೂ ಅವರ ಆಡಿದ ಲಿಂಗ ಅಸೂಕ್ಷö್ಮತೆಯ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಹೆಣ್ಣಿನ ಬಗೆಗಿನ ಪೂರ್ವಗ್ರಹದ ಪುರುಷ ಮನಸ್ಥಿತಿಯಿಂದ ಕೂಡಿದ ಇಂತಹ ಮಾತುಗಳು ಪುರುಷ ಪ್ರಾಬಲ್ಯದ ಹೀನ ಸುಳಿಗಳು. ಅತ್ಯಾಚಾರದಂತಹ ಘೋರಪಾತಾಕವು ಹೆಣ್ಣನ್ನು ಜೀವನದುದ್ದಕ್ಕೂ ದುಸ್ವಪ್ನವಾಗಿಯೇ ಕಾಡುವಂತದ್ದು ಅಂತಹ ಪಾತಕವನ್ನು ಆನಂದವಾಗಿಸಿಕೊಳ್ಳಿ ಎಂಬ ಮಾತನ್ನು ಹಾಸ್ಯದ ರೂಪದಲ್ಲೂ ಒಪ್ಪಲು ಸಾಧ್ಯವಿಲ್ಲ. ಹೆಣ್ಣುಮಕ್ಕಳ ದೇಹ, ಚಾರಿತ್ರö್ಯದ ಬಗೆಗೆ ಲಘುವಾಗಿ ಮಾತನಾಡುವುದೂ ಸಹ ಒಂದು ಟ್ರೆಂಡ್ ಆಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದಿನ ಬೆಳಿಗ್ಗೆಯಾದರೆ ಇಂತಹ ಉವಾಚಗಳು ಹೊರಬೀಳುತ್ತಿರುತ್ತವೆ. ನಮ್ಮ ಕಾಲದ ರಂಗ ಸಜ್ಜಿಕೆಯಲ್ಲಿ ಸಾವಿತ್ರಿಬಾಯಿಯವರ ಬದುಕನ್ನು ಇಟ್ಟರೆ ಆ ವಿನ್ಯಾಸ ಬೇರೆಯಾಗಿ ತೋರುತ್ತದೆ. ಹೆಣ್ಣು ಮಕ್ಕಳ ಶಿಕ್ಷಣದ ಜೊತೆ ಜೊತೆ ಯಲ್ಲಿ ಮಹಿಳಾ ಬದುಕಿನ ವಿಮೋಚನೆಗಾಗಿ, ಮಹಿಳಾ ಸಬಲೀಕರಣಕ್ಕಾಗಿ ಅವರ ಘನತೆಯ ಬದುಕಿಗಾಗಿ, ಬದುಕಿಡೀ ಹೋರಾಡಿದ ಸಾವಿತ್ರಿಬಾಯಿಪುಲೆ, ಶೋಷಿತ ಮಹಿಳೆಯರ ಪಾಲಿನ ಆಸರೆಯಾದವÀರು. ಮೇಲ್ಜಾತಿ ವಿಧವೆಯರಿಗೆ ಆಶ್ರಯ ಸದನ ಆರಂಭಿಸಿದರು. ಅನಾಥ ವಿಧವೆಯರಿಗೆ ಆಶ್ರಯ ನೀಡಿದ್ದಲ್ಲದೆ ಕಾನೂನು ಬಾಹಿರವಾಗಿ ಗರ್ಭಿಣಿಯಾದವರ ಪುನರ್ವಸತಿ, ಶಿಶುಪಾಲನಾ ಗೃಹಗಳು, ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಹುಟ್ಟುವ ಮಕ್ಕಳಿಗಾಗಿ ಬಾಲಹತ್ಯಾ ಪ್ರತಿಬಂಧಕ ಗೃಹಗಳನ್ನು ತೆರೆದರು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಹಿಳೆಯರನ್ನು ಜಾಗೃತಿಗೊಳಿಸುವುದಕ್ಕೆ 1852ರಲ್ಲಿ ಮಹಿಳಾ ಸೇವಾ ಮಂಡಳಿ ಎಂಬ ಮಹಿಳಾ ಸಂಘವನ್ನು ಸ್ಥಾಪಿಸುವ ಮೂಲಕ ಮಹಿಳೆಯರನ್ನು ಎಚ್ಚರಿಸುವ ಪ್ರಯತ್ನ ಮಾಡಿದರು. ಆ ಕಾಲಕ್ಕಾಗಲೇ ಎಲ್ಲಾ ಜಾತಿಯ ಮಹಿಳೆಯರು ಇಲ್ಲಿ ಸೇರಿ ಸನಾತವಾದ ಫ್ಯೂಡಲ್ ಯಾಜಮಾನ್ಯದ ವಿರುದ್ಧ ಚರ್ಚಿಸುತ್ತಿದ್ದರೆಂಬುವುದು ಬಹಳ ವಿಶೇಷ. ಮಹಿಳೆಯರ ಅಸ್ಥಿತ್ವ ಅಪಾಯದ ಅಂಚನ್ನು ತಲುಪಿರುವ ಮಹಿಳಾ ಘನತೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಅವರ ಧ್ವನಿ ಮುನ್ನೆಲೆಗೆ ಬರಬೇಕಾದ ಅವಶ್ಯಕತೆಯಿದೆ. 


ಭಾರತದ ಪ್ರತಿಯೊಬ್ಬ ಶಿಕ್ಷಿತ ಹೆಣ್ಣುಮಗಳ ಎದೆಯೊಳಗೂ ಸಾವಿತ್ರಿ ಬಾಯಿ ಪುಲೆ ಸದಾ ಜೀವಂತ ಹೌದಾದರೂ,  ಕ್ರಾಂತಿಕಾರಿ, ಬಂಡಾಯದ ಅಸಾಮಾನ್ಯ ಬದುಕಿನ ಕಾರಣಕ್ಕಾಗಿಯೇ ಸಾವಿತ್ರಿಬಾಯಿ ಪುಲೆಯವರ ಹೆಸರು ಚರಿತ್ರೆಯೊಳಗೆ ದಾಖಲಾಗಲೇ ಇಲ್ಲ. ಚರಿತ್ರೆ ಅಳಿಸಿ ಹಾಕಿದ್ದ ಸಾವಿತ್ರಿ ಬಾ ಹೆಸರು ಮತ್ತೀಗ ಮುಂಚೂಣಿಯಲ್ಲಿದೆ. ಸಾಮಾಜಿಕ ಅಸಮಾನತೆಗಳು ತಾಂಡವವಾಡುತ್ತಿರುವ ಇಂತಹ ದುರಿತ ಕಾಲದಲ್ಲಿ 19 ನೇ ಶತಮಾನದ ಶೋಷಿತ ಪರವಾದ ದನಿಯನ್ನು ನಮ್ಮದಾಗಿಸಿಕ್ಕೊಂಡು ಆಕೆಯ ಉತ್ತರದಾಯಿತ್ವವನ್ನು ಹೊರುವ ಮೂಲಕ ಆ ಚೇತನವನ್ನು ಶಾಶ್ವತಗೊಳಿಸಬೇಕಿದೆ.