ಏಕಶಿಲಾ ಬೆಟ್ಟಕ್ಕೆ  ರೋಪ್‌ವೇ: ಅನುದಾನ ಬಿಡುಗಡೆ ಮಾಡಿ ಬಜೆಟ್ ಚರ್ಚೆಯಲ್ಲಿ ಪರಿಷತ್ ಸದಸ್ಯ ರಾಜೇಂದ್ರ ಆಗ್ರಹ

ಏಕಶಿಲಾ ಬೆಟ್ಟಕ್ಕೆ  ರೋಪ್‌ವೇ: ಅನುದಾನ ಬಿಡುಗಡೆ ಮಾಡಿ ಬಜೆಟ್ ಚರ್ಚೆಯಲ್ಲಿ ಪರಿಷತ್ ಸದಸ್ಯ ರಾಜೇಂದ್ರ ಆಗ್ರಹ

ಏಕಶಿಲಾ ಬೆಟ್ಟಕ್ಕೆ  ರೋಪ್‌ವೇ: ಅನುದಾನ ಬಿಡುಗಡೆ ಮಾಡಿ ಬಜೆಟ್ ಚರ್ಚೆಯಲ್ಲಿ ಪರಿಷತ್ ಸದಸ್ಯ ರಾಜೇಂದ್ರ ಆಗ್ರಹ


ಏಕಶಿಲಾ ಬೆಟ್ಟಕ್ಕೆ  ರೋಪ್‌ವೇ: ಅನುದಾನ ಬಿಡುಗಡೆ ಮಾಡಿ
ಬಜೆಟ್ ಚರ್ಚೆಯಲ್ಲಿ ಪರಿಷತ್ ಸದಸ್ಯ ರಾಜೇಂದ್ರ ಆಗ್ರಹ


ಬೆಂಗಳೂರು: ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಲು ಅನುದಾನ ಬಿಡುಗಡೆಗೊಳಿಸುವಂತೆ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಬಜೆಟ್ ಅಧಿವೇಶನದಲ್ಲಿ.ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸೋಮವಾರ ನಡೆದ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಶ್ನೆ ಸಂಖ್ಯೆ ಚುಕ್ಕಿ 1159 ರ ಪ್ರವಾಸೋದ್ಯಮ ಬಗ್ಗೆ ಗಮನ ಸೆಳೆದ ಅವರು 2016 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಅಂದಿನ ಶಾಸಕರಾದ ಕೆ.ಎನ್. ರಾಜಣ್ಣನವರು ಸಲ್ಲಿಸಿದ್ದ ಮನವಿಯ ಮೇರೆಗೆ  ಬಜೆಟ್‌ನಲ್ಲಿ ಮಧುಗಿರಿ ಬೆಟ್ಟಕ್ಕೆ ರೋಪ್‌ವೇ ಅಳವಡಿಸಲು ಬಜೆಟ್ಟಿನಲ್ಲಿ ಘೋಷಿಸಿದ್ದರು. ಆದರೆ ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಮಧುಗಿರಿ ಬೆಟ್ಟ ಏಷ್ಯಾದಲ್ಲಿ ಎರಡನೇ ಏಕಶಿಲಾ ಬೆಟ್ಟವಾಗಿದೆ.  1192 ಅಡಿ ವಿಸ್ತೀರ್ಣ ಹೊಂದಿದ ಈ ಬೆಟ್ಟಕ್ಕೆ ಪರಿಹಾರ ಕಸಬಾ ವ್ಯಾಪ್ತಿಯ ಹರಿಹರರೊಪ್ಪದ ಬಳಿ 9.20 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ದಾಷಾರ ಕಂಪನಿ ಸರ್ವೆ ಕಾರ್ಯವನ್ನು ಮಾಡಿದ್ದು ಬಿಟ್ಟರೆ, ನಂತರದಲ್ಲಿ ಯಾವುದೇ ಬೆಳವಣಿಗೆಗಳು ಆಗಿಲ್ಲ. ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲಾ ಕೇಂದ್ರವಾಗುವ ಪ್ರಸ್ತಾಪವಿದ್ದು, ಮಧುಗಿರಿ ಬೆಟ್ಟಕ್ಕೆ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿರುವುದರಿಂದ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಅನುದಾನ ನಿಗದಿಪಡಿಸಿ ಆದಷ್ಟು ಬೇಗ ಕೆಲಸವನ್ನು ಪ್ರಾರಂಭಿಸಬೇಕು ಎಂದು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ನಂತರ ಎತ್ತಿನ ಹೊಳೆ ಕಾಮಗಾರಿಯ ಬಗ್ಗೆ ಪ್ರಸ್ತಾಪಿಸಿದ ರಾಜೇಂದ್ರರವರು ಎತ್ತಿನಹೊಳೆ ಯೋಜನೆ ಕಾಮಗಾರಿಗೆ 2012 ರಲ್ಲಿ 8323 ಕೋಟಿ ಮೀಸಲಿಡಲಾಗಿತ್ತು. ನಂತರ  2013-14 ನೇ ಸಾಲಿನಲ್ಲಿ 12912 ಕೋಟಿ ಹಣ ಮೀಸಲಿಟ್ಟಿದ್ದು, ಈ ಎತ್ತಿನಹೊಳೆ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕೊರಟಗೆರೆ ತಾಲೂಕಿನ ಬೈಲಹೊಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಲಾಶಯ ನಿರ್ಮಾಣಕ್ಕಾಗಿ ಸ್ಥಳ ನಿಗದಿಪಡಿಸಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ಹೋಲಿಸಿದರೆ ಕೊರಟಗೆರೆ ತಾಲೂಕಿನ ರೈತರಿಗೆ ನಿಗದಿಪಡಿಸಿರುವ ಹಣ ಕಡಿಮೆಯಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಕಳೆದ 9 ತಿಂಗಳಿನಿAದ ಕಾಮಗಾರಿ ಸ್ಥಗಿತಗೊಂಡಿದೆ. ಎತ್ತಿನಹೊಳೆ 7 ಜಿಲ್ಲೆಗೆ ಒಳಪಡುವ ನೀರಾವರಿ ಯೋಜನೆಯಾಗಿದ್ದು, ತುಮಕೂರು ಜಿಲ್ಲೆಯ ಬಹುತೇಕ ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು, 1400 ಅಡಿ ಕೊರೆದರೂ ಬೋರ್‌ವೆಲ್‌ನಲ್ಲಿ ನೀರು ಸಿಗುವುದಿಲ್ಲ. ಜಮೀನಿಗಳಲ್ಲಿ ನೀರು ಸಿಗದೇ ಕೆಲಸ ಅರಸಿ ರೈತರ ಮಕ್ಕಳು ಬೆಂಗಳೂರಿಗೆ ಬಂದು ಕೆಲಸ ನಿರ್ವಹಿಸುತ್ತಿರುವ ಚಿತ್ರಣ ಕಣ್ಣ ಮುಂದಿದ್ದು, 3600 ಕೋಟಿ ಬಿಲ್ ಬಾಕಿ, ಒತ್ತುವರಿ ಮಾಡಿಕೊಂಡ ರೈತರ ಜಮೀನುಗಳಿಗೆ ನಿಗದಿಯಾದ ಬೆಲೆ ನೀಡದಿರುವುದೂ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಕುಂಠಿತಗೊAಡಿದ್ದು, ಮಧುಗಿರಿ ತಾಲೂಕಿನಲ್ಲಿ ರೈತರಿಗೆ ನಿಗದಿಯಾದ ಹಣ ಬಿಡುಗಡೆ ವಿಳಂಬದಿAದಾಗಿ ರಸ್ತೆಗೆ ಮಣ್ಣು ಸುರಿದು ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಿ ಎಂದು ಗಮನ ಸೆಳೆದರು.


ಜನತೆಯ ಮೆಚ್ಚುಗೆ: ರಾಜೇಂದ್ರ ರಾಜಣ್ಣನವರು ಅಧಿವೇಶನದಲ್ಲಿ ಮಧುಗಿರಿ ಬೆಟ್ಟಕ್ಕೆ ರೋಪ್‌ವೇ ಅಳವಡಿಕೆ ಮತ್ತು ಎತ್ತಿನ ಹೊಳೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಧ್ವನಿ ಎತ್ತಿರುವ ಬಗ್ಗೆ ಜನತೆ ಸಂತಸ ವ್ಯಕ್ತಪಡಿಸಿದ್ದು, ತಾಲೂಕು ಮತ್ತು ಜಿಲ್ಲೆಯ ಬಗ್ಗೆ ರಾಜೇಂದ್ರರವರಿಗಿರುವ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.