ಶ್ರೀಹರಿ, ಚಿಕ್ಕತಿಮ್ಮ, ರವಿ, ಕೆ.ಎಸ್.ಸಿದ್ದಲಿಂಗಪ್ಪರಿಗೆ  ಮುಂಜಾನೆ ಗೆಳೆಯರ ಬಳಗದಿಂದ ಸನ್ಮಾನ

geleyara balaga kuchangi prasanna srihari chikkatimmaiah ks siddalingappa

ಶ್ರೀಹರಿ, ಚಿಕ್ಕತಿಮ್ಮ, ರವಿ, ಕೆ.ಎಸ್.ಸಿದ್ದಲಿಂಗಪ್ಪರಿಗೆ  ಮುಂಜಾನೆ ಗೆಳೆಯರ ಬಳಗದಿಂದ ಸನ್ಮಾನ

ಶ್ರೀಹರಿ, ಚಿಕ್ಕತಿಮ್ಮ, ರವಿ, ಕೆ.ಎಸ್.ಸಿದ್ದಲಿಂಗಪ್ಪರಿಗೆ 
ಮುಂಜಾನೆ ಗೆಳೆಯರ ಬಳಗದಿಂದ ಸನ್ಮಾನ


ತುಮಕೂರು: ರಾಷ್ಟ್ರೀಯ ಅಂಗಸೌಷ್ಟವ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ನಗರದ ಶ್ರೀಹರಿ, ಹಿರಿಯ ರಾಷ್ಟ್ರೀಯ ಜಾವೆಲಿನ್ ಎಸೆತ, ಗುಂಡು ಎಸೆತ, ಡಿಸ್ಕಸ್ ಎಸೆತದಲ್ಲಿ ಪದಕ ಗಳಿಸಿದ ತುಂಬಾಡಿಯ ಚಿಕ್ಕತಿಮ್ಮ, ಇತ್ತೀಚೆಗೆ ಸಿದ್ಧಗಂಗಾ ಆಸ್ಪತ್ರೆ ಏರ್ಪಡಿಸಿದ್ದ ಮ್ಯಾರಥಾನ್ ಓಟದಲ್ಲಿ ಮೊದಲು ಬಂದ ರವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅತಿ ಹೆಚ್ಚು ಓಟು ಗಳಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಚುನಾಯಿತರಾದ ಕೆ.ಎಸ್.ಸಿದ್ಧಲಿಂಗಪ್ಪ ಅವರನ್ನು ಮುಂಜಾನೆ ಗೆಳೆಯರ ಪರವಾಗಿ ಅಭಿನಂದಿಸಿ, ಗೌರವಿಸಲಾಯಿತು.


ಶನಿವಾರ ಮುಂಜಾನೆ ನಡಿಗೆ ಸಮಯದಲ್ಲಿ ತುಮಕೂರು ವಿಶ್ವವಿದ್ಯಾಲಯ ಮೈದಾನದಲ್ಲಿ ಮುಂಜಾನೆ ಗೆಳೆಯರ ಬಳಗ ಹಾಗೂ ಅಂತಾರಾಷ್ಟಿçÃಯ ಕ್ರೀಡಾಪಟು ಟಿ.ಕೆ.ಆನಂದ್ ಅಭಿಮಾನಿ ಬಳಕ ಏರ್ಪಡಿಸಿದ್ದ ಅನೌಪಚಾರಿಕ ಸಮಾರಂಭದಲ್ಲಿ ಕನ್ನಡ ಪರ ಹೋರಾಟಗಾರ ಧನಿಯಾ ಕುಮಾರ್, ಬಿಜೆಪಿ ಉಪಾಧ್ಯಕ್ಷ ಚಂದ್ರಶೇಖರ್, ‘ಬೆವರ ಹನಿ’ ದಿನಪತ್ರಿಕೆ ಸಂಪಾದಕ ಕುಚ್ಚಂಗಿ ಪ್ರಸನ್ನ, ವಿಶ್ರಾಂತ ಪ್ರಾಚಾರ್ಯ ವೆಂಕಟೇಶ್. ಮಹೇಶ್(ಮರ್ಫಿ), ಮಹೇಶ್, ಶ್ರೀಹರಿ ತಂದೆ ಬಾಲರಾಜ್, ರಂಗೇಗೌಡ, ಎನ್.ಎಸ್.ರಮೇಶ್, ಪದ್ಮನಾಭ, ಸ್ವಾಮಿ, ಉಮಾದೇವ್, ಗೋವಿಂದ ಗಿರಿ, ಉದಯ್, ಹೊಸಳಯ್ಯ, ಮಂಜುನಾಥ್, ಮಂಜುನಾಥ್, ಚಂದ್ರು ಹಾಗೂ ನಟರಾಜ್ ಇದ್ದರು,