‘ಸೋಲೋಗಮಿ’ಯ ಆಕರ್ಷಣೆಯ ಸುಳಿಯಲ್ಲಿ ಯುವಜನತೆ ವರ‍್ತಮಾನ ಡಾ. ಪ್ರಿಯಾಂಕ ಎಂ.ಜಿ
‘ಸೋಲೋಗಮಿ’ಯ ಆಕರ್ಷಣೆಯ ಸುಳಿಯಲ್ಲಿ ಯುವಜನತೆ ವರ‍್ತಮಾನ ಡಾ. ಪ್ರಿಯಾಂಕ ಎಂ.ಜಿ
ಪ್ರೌಢಾವಸ್ಥೆಗೆ ಬಂದ ತರುಣ-ತರುಣಿಯರಲ್ಲಿ ಅನೇಕ ರೀತಿಯ ಭಾವೋತ್ಪತ್ತಿಗಳು ಉತ್ಪತ್ತಿಯಾಗುವುದು, ಅದರಲ್ಲೂ ಹೆಣ್ಣು ಗಂಡುಗಳ ನಡುವಿನ ಆಕರ್ಷಣೆಗಳು, ಕಾಮಾಸಕ್ತಿಗಳು ಪ್ರಕೃತಿ ಸಹಜ ಪ್ರಕ್ರಿಯೆ. ವೈಜ್ಞಾನಿಕವಾಗಿ ಹೇಳುವುದಾದರೆ ಡೋಪಮೈನ್ ಹಾರ್ಮೋನ್ ಮನುಷ್ಯನ ಭಾವನೆಗಳನ್ನು ಕೆರಳಿಸುವ, ಕಾಮ ಭಾವನೆಗಳನ್ನು ಉದ್ರೇಕಿಸುವ ಅಂಶವನ್ನು ಹೊಂಡಿರುತ್ತದೆ. ಸ್ತಿçà ಮತ್ತು ಪುರುಷರ ಮಿಲನವಾದಾಗ ಡೋಪಮೈನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನನ್ನ ಜೊತೆ ನಾನೆ ಹನಿಮೂನ್ ಮಾಡಿಕೊಳ್ಳುವೆ ಎಂದರೆ ಅದಕ್ಕೆ ಏನಾದರು ಅರ್ಥವಿದೆಯಾ?
‘ಸೋಲೋಗಮಿ’ಯ ಆಕರ್ಷಣೆಯ ಸುಳಿಯಲ್ಲಿ ಯುವಜನತೆ
ವರ‍್ತಮಾನ
ಡಾ. ಪ್ರಿಯಾಂಕ ಎಂ.ಜಿ
ಮನುಷ್ಯ ಜೀವನದ ಮುಖ್ಯ ಪುರುಷಾರ್ಥಗಳಾಗಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಧರ್ಮವೆಂಬ ಚೌಕಟ್ಟಿನಲ್ಲಿ ಅರ್ಥವೆಂಬ ವ್ಯವಸ್ಥೆಯನ್ನಿಟ್ಟು ಕಾಮ ಎಂಬ ಪುರುಷಾರ್ಥವನ್ನು ನಾಶಗೊಳಿಸಿ ನಿಧಾನವಾಗಿ ಮೋಕ್ಷವೆಂಬ ಪುರುಷಾರ್ಥದ ಕಡೆಗೆ ಹೋಗಲು ವಿವಾಹವೆಂಬ ಸಂಸ್ಕಾರ ಜಾರಿಯಲ್ಲಿದೆ.
ಆದರೆ ಇಂದು ಪಾಶ್ಚಾತ್ಯದ ಸಂಸ್ಕೃತಿಯಾದ ‘ಸೋಲೋಗಮಿ’ (ಸ್ವಯಂ ವಿವಾಹ) ಎಂಬ ಮದುವೆಗಳು ನಮ್ಮ ಭವ್ಯ ಭಾರತದ ಕದ ತಟ್ಟಿ ಆಯ್ತು. ಸಾರ್ವಜನಿಕವಾಗಿ ತನ್ನನ್ನು ತಾನೆ ಮದುವೆಯಾಗುವುದಕ್ಕೆ ಸ್ವಯಂ ಮದುವೆ ಅಥವಾ ಸೋಲೋಗಮಿ ಮದುವೆ ಎಂದು ಹೇಳಲಾಗುತ್ತದೆ. ಇಂದು ನಮ್ಮ ತರುಣ ತರುಣಿಯರು ಬಹಳ ಪ್ರೀತಿಯಿಂದ ಇಂತಹ ಅನಿಷ್ಟ ಪದ್ಧತಿಗಳನ್ನು ಮಾನಸಿಕ ಅಸ್ವಸ್ಥರಂತೆ ಆಲಿಂಗಿಸುತ್ತಿದ್ದಾರೆ. ನಮ್ಮ ಸನಾತನ ಧರ್ಮ ಮತ್ತು ಪರಂಪರೆಯನ್ನು ವಿದೇಶಿಯರು ಅಪ್ಪಿಕೊಂಡರೆ, ನಾವು ಭಾರತೀಯರು ಸೋಲೋಗಮಿಯಂತಹ ವಿವೇಚನಾಹೀನ ಪೊಳ್ಳು ಸಂಸ್ಕೃತಿಗಳನ್ನು ಸ್ವಾಗತಿಸುತ್ತಿದ್ದೇವೆ. ಉದಾ: ಇತ್ತೀಚೆಗೆ ಗುಜರಾತಿನ 24 ವರ್ಷದ ಕ್ಷಮ ಬಿಂದುವಿನ ಮದುವೆ ಇಡೀ ದೇಶವನ್ನೇ ಕಲುಕಿದೆ. ಇದನ್ನು ಮೊಟ್ಟ ಮೊದಲನೆಯ ಬಾರಿಗೆ 1993ರಲ್ಲಿ ಅಮೇರಿಕಾದ ದಂತ ಶುಚಿತ್ವ ತಜ್ಞೆ ಲಿಂಡಾ ಬೇಕರ್ ಎಂಬುವರು ಸ್ವಯಂ ವಿವಾಹವಾಗಿದ್ದರು. ಆಗ ಇದು ಜಗತ್ತಿನ ಮೊದಲ ಸೋಲೋಗಮಿ ವಿವಾಹವೆಂದು ಹೇಳಲಾಗುತ್ತಿತ್ತು. ಇದೇ ತರಹ ಬ್ರೆಜಿಲ್‌ನ ಮಾಡೆಲ್ ಕ್ರಿಸ್ ಗೆಲಾರಾ ಎಂಬಾಕೆ ಇಂತಹ ಮದುವೆಯಾಗಿದ್ದರು ಆದರೆ ದುರಾದೃಷ್ಟವಷಾತ್ ಈ ವಿವಾಹ 90 ದಿನಗಳು ಮಾತ್ರ ಊರ್ಜಿತವಾಗಿ ಡಿವೋರ್ಸ್ ಕೊಟ್ಟುಕೊಂಡಿದ್ದರು ಏಕೆಂದರೆ ಈಕೆಗೆ ಒಬ್ಬ ಪ್ರಿಯತಮ ಸಿಕ್ಕಿದ್ದನಂತೆ.
ಇಂತಹ ಕೃತ್ಯಗಳನ್ನು ಗಮನಿಸಿದರೆ ನಮ್ಮ ಶಿಕ್ಷಣ ಪದ್ಧತಿಯ ಟೊಳ್ಳುತನ ಮುಂದೆಲೆಗೆ ಬರುತ್ತದೆ. ವಿದೇಶದ ಅನೇಕ ಶಾಲೆಗಳಲ್ಲಿ ನಮ್ಮ ವೇದ ವೇದಾಂತಗಳು ಆ ಮಕ್ಕಳ ಬಾಯಿಯಲ್ಲಿ ಸುಲಲಿತವಾಗಿ ಮಂತ್ರೋಚ್ಛಾರಗಳು ಮೇಳೈಸುತ್ತಿವೆ. ಇಂದು ನಾವು ನಮ್ಮ ಮಕ್ಕಳಿಗೆ ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್‌ನಂಹ ಅದೇ ಹಳೆಯ ಬ್ರಿಟೀಷ್ ಶಿಕ್ಷಣ ಪದ್ಧತಿಯನ್ನೇ ಅಳವಡಿಕೊಂಡಿದ್ದೇವೆ. ನಾವು ನಿಂತ ನೀರಾದರೆ ಅವರು ಹರಿಯುವ ನೀರಾಗಿದ್ದಾರೆ. ಇದು ಹೇಗೆಂದರೆ ನಮಗೆ ಹಿತ್ತಲ ಮದ್ದು ಮದ್ದಲ್ಲ, ಇಂಗ್ಲಿಷ್ ಮೆಡಿಸಿನ್ ಮಾತ್ರವೇ ನಮಗೆ ಮದ್ದು ಎನ್ನುವ ಹಾಗೆ.
ನಮಗೆ ನಮ್ಮ ಧರ್ಮದ ವೈಶಿಷ್ಟö್ಯತೆಗಳ ಬಗೆಗಿನ ಅರಿವಿದ್ದಿದ್ದರೆ ನಾವು ಇಂತಹ ದೂರ್ತ ಆಚರಣೆಗಳನ್ನು ನಮ್ಮ ಮಕ್ಕಳ ಮೂಲಕ ಸ್ವಾಗತಿಸುತ್ತಿರಲಿಲ್ಲ. ಭಾರತ ನಮ್ಮ ಹೆಣ್ಣುಮಕ್ಕಳಿಗೆ ಅತ್ಯಂತ ಗೌರವ ಮತ್ತು ಎತ್ತರದ ಸ್ಥಾನವನ್ನು ನೀಡಿದೆ. ಇಂದು ಜಗತ್ತು ಮಹಿಳಾ ಸಬಲೀಕರಣ, ಸ್ತ್ರೀ ಮತ್ತು ಪುರುಷರು ಸರಿಸಮಾನರು ಎಂದು ಘೋಷಣೆಗಳನ್ನು ಕೂಗುತ್ತಿದೆ. ಆದರೆ ನಮ್ಮ ದೇಶ ‘ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಃ’ ಎಲ್ಲಿ ಸ್ತ್ರೀಯರನ್ನುನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ ಹಾಗೆ ‘ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ’ ಅಂದರೆ ಸ್ತ್ರೀಯರನ್ನು ದೂಷಣೆ ಮಾಡಿದ್ದಲ್ಲಿ ಸಮಾಜದ ನಾಶವಾಗುತ್ತದೆ ಎಂದು ನಮ್ಮ ಹಿರಿಯರು ಎಚ್ಚರಿಸಿದ್ದಾರೆ. ಇಡೀ ರಾಮಾಯಣ ಮತ್ತು ಮಹಾಭಾರತದ ಯುದ್ಧ ನಡೆದದ್ದೇ ಸ್ರಿö್ತÃಯನ್ನು ಅವಮಾನಿಸಿದ್ದಕ್ಕೆ. ಇಡೀ ರಾಮಾಯಣ ನಡೆದಿದ್ದೇ ಸೀತಾಪರಣದಿಂದಾಗಿಯೇ. ಅದೇ ರೀತಿ ಮಹಾಭಾರತದ ಕುರುಕ್ಷೇತ್ರ ನಡೆದಿದ್ದೇ ದ್ರೌಪದಿಯ ವಸ್ರಾö್ತಭರಣದ ಸೇಡನ್ನು ತೀರಿಸಿಕೊಳ್ಳಲು ಎಂಬ ಕಥೆಗಳು ಭಾರತೀಯರಾದ ನಮಗೇನು ಹೊಸತೇನಲ್ಲ. ಇಂತಹ ಅಳಿಯದ ಪರಂಪರೆಯ ಶಕ್ತಿಯಾದಂತಹ ಸ್ರಿö್ತÃ ಈ ದೇಶದ ಬೆನ್ನೆಲುಬು. ಈ ಸಂಸ್ಕೃತಿಯಲ್ಲಿ ಹುಟ್ಟಿ ಈ ನೆಲದ ಭಾಗವಾದಂತಹ ನಾವು ಸೋಲೋಗಮಿಯಂತಹ ಅರ್ಥಹೀನ ಸಂಸ್ಕೃತಿಯನ್ನು ಪ್ರಜ್ಞೆಯುಳ್ಳವರು ಹೇಗೆ ತಾನೆ ಒಪ್ಪಿಕೊಳ್ಳಲು ಸಾಧ್ಯ. ಮದುವೆಯೆಂದರೆ ಅರ್ಧಾಂಗ ಮತ್ತು ಅರ್ಧಾಂಗಿ ಸೇರಿ ಸಮತೋಲನದ ಪೂರ್ಣತೆಯ ಕುಟುಂಬ.
ಪ್ರೌಢಾವಸ್ಥೆಗೆ ಬಂದ ತರುಣ-ತರುಣಿಯರಲ್ಲಿ ಅನೇಕ ರೀತಿಯ ಭಾವೋತ್ಪತ್ತಿಗಳು ಉತ್ಪತ್ತಿಯಾಗುವುದು, ಅದರಲ್ಲೂ ಹೆಣ್ಣು ಗಂಡುಗಳ ನಡುವಿನ ಆಕರ್ಷಣೆಗಳು, ಕಾಮಾಸಕ್ತಿಗಳು ಪ್ರಕೃತಿ ಸಹಜ ಪ್ರಕ್ರಿಯೆ. ವೈಜ್ಞಾನಿಕವಾಗಿ ಹೇಳುವುದಾದರೆ ಡೋಪಮೈನ್ ಹಾರ್ಮೋನ್ ಮನುಷ್ಯನ ಭಾವನೆಗಳನ್ನು ಕೆರಳಿಸುವ, ಕಾಮ ಭಾವನೆಗಳನ್ನು ಉದ್ರೇಕಿಸುವ ಅಂಶವನ್ನು ಹೊಂಡಿರುತ್ತದೆ. ಸ್ತಿçà ಮತ್ತು ಪುರುಷರ ಮಿಲನವಾದಾಗ ಡೋಪಮೈನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನನ್ನ ಜೊತೆ ನಾನೆ ಹನಿಮೂನ್ ಮಾಡಿಕೊಳ್ಳುವೆ ಎಂದರೆ ಅದಕ್ಕೆ ಏನಾದರು ಅರ್ಥವಿದೆಯಾ? ದುರಂತವೆAದರೆ ಇಂತಹ ಮದುವೆಯನ್ನು ಒಂದಷ್ಟು ವರ್ಗದ ಜನ ಸ್ವಾಗತಿಸುತ್ತಿರುವುದು ಸೋಜಿಗದ ವಿಷಯ. ಅಥವಾ ಇಂತಹ ಹೇಳಿಕೆಗಳನ್ನು ಕೊಟ್ಟು ದೇಶದಲ್ಲಿ ಸುದ್ದಿಯಾಗುವ ಬಯಕೆಯಿಂದಾಗಿ ಮಾಡುತ್ತಾರೋ ಗೊತ್ತಿಲ್ಲ. ಇಂತಹ ಕೃತ್ಯಗಳು ಸಮಾಜದಲ್ಲಿ ಹೆಚ್ಚಾದರೆ ಅದರ ಸಮತೋಲನ ನಾಶವಾಗುತ್ತದೆ. ಒಮ್ಮೆ ಧರ್ಮದ ನಾಶವಾದರೆ ನಮ್ಮ ಮುಂದಿನ ಪೀಳಿಗೆಗೆ ಎಲ್ಲಿದೆ ಒಂದೊಳ್ಳೆ ಗಟ್ಟಿಯಾದ ಅಸ್ತಿತ್ವ? ಅಸ್ತಿತ್ವವಿಲ್ಲದಿದ್ದರೆ ವಿಲಕ್ಷಣ ಜೀವಗಳಾಗಿ ಬದುಕುತ್ತಾರೆ ಅಷ್ಟೇ.
ಹಾಗಾಗಿ ನಾವು ನಮ್ಮ ಮಕ್ಕಳಿಗೆ ಇಂತಹ ವಿಲಕ್ಷಣ ಮನಸ್ಥಿಯ ಬಗ್ಗೆ ಅರಿವು ಕೊಡುವುದರೊಂದಿಗೆ, ಪ್ರತಿ ಮನೆಗಳಲ್ಲೂ ಮತ್ತು ಶಾಲೆಗಳಲ್ಲೂ ಶಿಕ್ಷಣದ ಜೊತೆ ಜೊತೆಯಲ್ಲಿ ಸರಿ ತಪ್ಪುಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಇಲ್ಲದಿದ್ದÀಲ್ಲಿ ನಮ್ಮ ಮಕ್ಕಳ ಭವಿಷ್ಯ ಖಂಡಿತ ನಾಶವಾಗುತ್ತದೆ. ಅದರಲ್ಲೂ ವಿದ್ಯಾವಂತರು ಇಂತಹ ಪದ್ಧತಿಗಳಿಗೆ ಆಕರ್ಷಿತರಾಗುತ್ತಿರುವುದು ಕಳವಳವನ್ನು ಮೂಡಿಸುತ್ತಿದೆ.