ವಿ.ಸೋಮಣ್ಣ ಎಂಬ ಅಂತಃಕರಣ-ಭವಿ-ಅನುಭಾವಿ ಚಿನ್ನಸ್ವಾಮಿ ವಡ್ಡಗೆರೆ

ವಿ.ಸೋಮಣ್ಣ ಎಂಬ ಅಂತಃಕರಣ-ಭವಿ-ಅನುಭಾವಿ ಚಿನ್ನಸ್ವಾಮಿ ವಡ್ಡಗೆರೆ

ವಿ.ಸೋಮಣ್ಣ ಎಂಬ ಅಂತಃಕರಣ-ಭವಿ-ಅನುಭಾವಿ  ಚಿನ್ನಸ್ವಾಮಿ ವಡ್ಡಗೆರೆ

ಭವಿ-ಅನುಭಾವಿ

ಚಿನ್ನಸ್ವಾಮಿ ವಡ್ಡಗೆರೆ


ದೇವರಾಜ ಅರಸು ಮುಖ್ಯಮಂತ್ರಿ ಯಾಗಿದ್ದಾಗ ಸಿಗರೇಟ್ ಪ್ಯಾಕ್ ಮೇಲೆ ಯಾರಿಗೊ ಸರ್ಕಾರಿ ನೌಕರಿ ಕೊಡುವಂತೆ ಶಿಫಾರಸ್ಸು ಪತ್ರ ಬರೆದುಕೊಟ್ಟಿದ್ದನ್ನು ಕೇಳಿದ್ದೆ.ಆದರೆ ಸ್ವತಃ ಸಚಿವರೊಬ್ಬರು ತಮ್ಮ ಕಿಸೆಯನ್ನು ತಡಕಾಡಿ ವಿಸಿಟಿಂಗ್ ಕಾರ್ಡ್ ಕೊಟ್ಟದ್ದು ಸೋಮಣ್ಣ ಅವರ ಮಾನವೀಯತೆ ಮತ್ತು ಅಂತಃಕರಣದ ಹೃದಯವಂತಿಕೆಗೆ ಸಾಕ್ಷಿಯಾಗಿತ್ತು.

ವಿ.ಸೋಮಣ್ಣ ಎಂಬ ಅಂತಃಕರಣ


ಮಲೆ ಮಹದೇಶ್ವರ ಬೆಟ್ಟ ಎಂದರೆ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ವಿಶೇಷ ಪ್ರೀತಿ. ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿ ತುಸು ಹೆಚ್ಚು. ಅವರ ಮನೆಯ ದೇವರು ಮಹದೇಶ್ವರ. ಕಷ್ಟದ, ನೋವಿನ ದಿನಗಳಲ್ಲಿ ಸೋಮಣ್ಣ ಮಹದೇಶ್ವರ ಬೆಟ್ಟಕ್ಕೆ ಏಕಾಂಗಿಯಾಗಿ ಬಂದು ಕಳೆದ ದಿನಗಳನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ.


ಇದೇ ನೆನಪಿಗೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವಲ್ಲಿ ವಿ.ಸೋಮಣ್ಣ ಪಾತ್ರ ದೊಡ್ಡದು ಮತ್ತು ಯಾರೂ ಮರೆಯುವಂತಿಲ್ಲ.


ಶಿವರಾತ್ರಿ ಹಬ್ಬದ ದಿನ ರಸ್ತೆ ಸೇರಿದಂತೆ ಬೆಟ್ಟದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲು ಬೆಳಗಿನಿಂದ ಸಂಜೆವರೆಗೂ ದಣಿವರಿಯದೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಸಂಜೆ ಬೆಟ್ಟ ಇಳಿದು ಬರುವಾಗ ತಾಳಬೆಟ್ಟದ ಬುಡದಲ್ಲಿ ಟೀ ಕುಡಿಯುತ್ತಾ ಜನ ಸಮಾನ್ಯರ ಕಷ್ಟ ಸುಖಗಳಿಗೆ ಕಿವಿಯಾದ ಪರಿ ಕಂಡು ನಾವೆಲ್ಲ ಅಚ್ಚರಿ ಪಟ್ಟೆವು.


ರಾಜ್ಯ ಸರ್ಕಾರದ ಕ್ಯಾಬಿನೆಟ್ ಮಂತ್ರಿಯೊಬ್ಬರು ಹಮ್ಮುಬಿಮ್ಮು ಬಿಟ್ಟು ಜನಸಾಮಾನ್ಯರೊಂದಿಗೆ ಒಡನಾಡುವ ವಿ.ಸೋಮಣ್ಣ ಅವರ ನಡೆ ನನಗೆ ಇವತ್ತಿಗೂ ಒಂದು ದೊಡ್ಡ ಸೋಜಿಗವಾಗೆ ಉಳಿದಿದೆ.


ಬೆಳಗ್ಗೆ ಬೆಟ್ಟಕ್ಕೆ ಹೋಗುವಾಗ ತಾಳಬೆಟ್ಟದಲ್ಲಿ ಝೀ ಟಿವಿಯ ಸರಿಗಮಪದಲ್ಲಿ ಹಾಡುವ ಮೂಲಕ ಮನೆಮಾತಾದ ಮಧುಗಿರಿಯ ರತ್ನಮ್ಮ ಮತ್ತು ಮಂಜಮ್ಮ ಅಂಧ ಗಾಯಕಿ ಸಹೋದರಿಯರಲ್ಲಿ ಒಬ್ಬರು ಭಕ್ತಿ ಗೀತೆಗಳನ್ನು ಹೇಳುತ್ತಿರುವುದನ್ನು ನಾವು ಗಮನಿಸಿದ್ದೆವು.ಸ್ವಲ್ಪ ಹೊತ್ತು ನಿಂತು ಸಂಗೀತವನ್ನು ಕೇಳಿಸಿಕೊಂಡು ನಂತರ ನಾವು ಬೆಟ್ಟಕ್ಕೆ ಹೋಗಿದ್ದೆವು.


ಸಚಿವ ವಿ.ಸೋಮಣ್ಣ ಅವರು ಬೆಳಕಿನಿಂದ ಸಂಜೆವರೆಗೆ ಮ್ಯಾರಥಾನ್ ಸಭೆ ನಡೆಸಿ ದಣಿದು ಸುಸ್ತಾಗಿ ಬೆಟ್ಟ ಇಳಿದು ಬರುವಾಗ ತಾಳಬೆಟ್ಟದಲ್ಲಿ ಮತ್ತೆ ಕಾರು ನಿಲ್ಲಿಸಿ ಜನಜಂಗುಳಿಯಲ್ಲಿ ಲೀನವಾದರು.


ಜನರ ಕಷ್ಟ ಸುಖ ಕೇಳಿಸಿಕೊಳ್ಳುತ್ತಾ ಅಲ್ಲಿ ಭಕ್ತರಿಗೆ ಅನುಕೂಲಕ್ಕಾಗಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶ್ನೆ ಕೇಳುತ್ತಾ ತಿರುಗಾಡುತ್ತಿದ್ದರು. ಈಗಿರುವಾಗ ಈ ಮಧುಗಿರಿಯ ಅಂಧ ಗಾಯಕಿ ರತ್ನಮ್ಮ ಸಚಿವರ ಕಣ್ಣಿಗೆ ಬಿದ್ದರು.


ಅಲ್ಲೇ ಸನಿಹದಲ್ಲೇ ಇದ್ದ ಟೀ ಅಂಗಡಿ ಮುಂದೆ ಕುರ್ಚಿ ಹಾಕಿಕೊಂಡು ಕುಳಿತ ಸಚಿವ ಸೋಮಣ್ಣ ಗಾಯಕಿಯಿಂದ ಹಾಡು ಹಾಡಿಸಿ ಕೇಳಿ ಒಂದಷ್ಟು ಆರ್ಥಿಕ ನೆರವು ನೀಡಿದರು. ಇದಕ್ಕಿಂತ ಮುಖ್ಯವಾದ ಸಂಗತಿಯೊAದು ಅಲ್ಲಿ ನಡೆಯಿತು.


ಜೊತೆಯಲ್ಲಿದ್ದ ಆಕೆಯ ಸಹೋದರನನ್ನು ಕರೆದು ತಮ್ಮ ಕಿಸೆಯಲ್ಲಿ ಏನೋ ಹುಡುಕುತ್ತಿದ್ದರು. ಏನಿರಬಹುದು ಅಂತ ನಮಗೆ ಕುತೂಹಲ.


ಅವರು ಹಾಗೆ ಹುಡುಕುತ್ತಿದ್ದದ್ದು ತಮ್ಮದೇ ವಿಸಿಟಿಂಗ್ ಕಾರ್ಡ್ ಅಂತ ನಂತರ ತಿಳಿಯಿತು. ಗಾಯಕಿಯ ಸಹೋದರನಿಗೆ ವಿಸಿಟಿಂಗ್ ಕಾರ್ಡ್ ಕೊಟ್ಟು ಆಫೀಸಿಗೆ ಕರೆದುಕೊಂಡು ಬರುವಂತೆ ಹೇಳಿದರು.


ಕ್ಯಾಬಿನೆಟ್ ಸಚಿವರೊಬ್ಬರು ಬೀದಿಯಲ್ಲಿ ಹಾಡುವ ಅಲೆಮಾರಿ ಗಾಯಕಿಗೆ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟದ್ದನ್ನು ಜೀವಮಾನದಲ್ಲಿ ಮೊದಲ ಬಾರಿಗೆ ಕಂಡ ನಾವು ಮೂಕ ವಿಸ್ಮಿತರಾದೆವು.


ದೇವರಾಜ ಅರಸು ಮುಖ್ಯಮಂತ್ರಿ ಯಾಗಿದ್ದಾಗ ಸಿಗರೇಟ್ ಪ್ಯಾಕ್ ಮೇಲೆ ಯಾರಿಗೊ ಸರ್ಕಾರಿ ನೌಕರಿ ಕೊಡುವಂತೆ ಶಿಫಾರಸ್ಸು ಪತ್ರ ಬರೆದುಕೊಟ್ಟಿದ್ದನ್ನು ಕೇಳಿದ್ದೆ.ಆದರೆ ಸ್ವತಃ ಸಚಿವರೊಬ್ಬರು ತಮ್ಮ ಕಿಸೆಯನ್ನು ತಡಕಾಡಿ ವಿಸಿಟಿಂಗ್ ಕಾರ್ಡ್ ಕೊಟ್ಟದ್ದು ಸೋಮಣ್ಣ ಅವರ ಮಾನವೀಯತೆ ಮತ್ತು ಅಂತಃಕರಣದ ಹೃದಯವಂತಿಕೆಗೆ ಸಾಕ್ಷಿಯಾಗಿತ್ತು.


ದಣಿವಾಗಿದ್ದರೂ ಜನರನ್ನು ಕಂಡರೆ ಎಲ್ಲಾ ಮರೆತು ಅವರ ತೊಂದರೆಗಳನ್ನು ಕೇಳಿಸಿಕೊಳ್ಳುತ್ತಾ ತಮ್ಮ ಕೈಲಾದ ನೆರವು ನೀಡುವ ಸೋಮಣ್ಣ ಅವರ ಈ ಗುಣವೇ ಅವರನ್ನು ರಾಜಕೀಯ ಎನ್ನುವ ರಣರಂಗದಲ್ಲಿ ಕೆಟ್ಟ ಶಕ್ತಿಗಳ ವಿರುದ್ಧ ಸದಾ ಅವರ ಬೆನ್ನಿಗೆ ನಿಂತು ಕಾಯುತ್ತಿದೆ ಎಂದು ಮಾದಪ್ಪನ ಭಕ್ತರು ಮಾತನಾಡಿಕೊಳ್ಳುತ್ತಿದ್ದರು.


ಅಲ್ಲಿಂದ ಹೊರಟು ಎಂದಿನAತೆ ಮಳವಳ್ಳಿಯಿಂದ ಮುಂದೆ ರಸ್ತೆ ಬದಿಯ ಟೀ ಬೋಂಡ ಅಂಗಡಿಯಲ್ಲಿ ನಮ್ಮೊಂದಿಗೆ ಅರ್ಧಗಂಟೆ ಹರಟೆ.


ಬೆಟ್ಟದ ಅಭಿವೃದ್ಧಿ ಬಗ್ಗೆ ಮಾತುಕತೆ." ನಾಳೆ ಬೆಳಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮನೆಗೆ ಹೋಗಿ ಅರ್ಜೆಂಟಾಗಿ ಬೆಟ್ಟದ ರಸ್ತೆ ಅಭಿವೃದ್ಧಿಗೆ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಿಸಬೇಕು. ನಾನು ಹೋಗ್ತೀನ್ರಯ್ಯಾ ,ಈಗಲೆ ರಾತ್ರಿ ಒಂಭತ್ತ್ ಗಂಟೆಯಾಯ್ತು.ಬೆಳಗ್ಗೆ ಬೇಗ ಏಳಬೇಕು. ನಿಮಗೆ ನಾನು ಸುಮ್ಮನೆ ತೊಂದರೆ ಕೊಟ್ಟೆ.ಸಾರಿ ಕಣ್ರಪ್ಪಾ.ಹೋಗಿ.ನೀವು ಹೋಗಿ ಶಿವರಾತ್ರಿ ಮಾಡಿ" ಎನ್ನುತ್ತಾ ಅವರು ಹೊರಟು ನಿಂತರು.


ಬೆಳಗಿನಿAದ ರಾತ್ರಿವರೆಗೂ ನಿರಂತರವಾಗಿ ಸಭೆಗಳನ್ನು ನಡೆಸುತ್ತಾ, ಜನರೊಂದಿಗೆ ಬೆರೆಯುತ್ತಾ ಚಾಮರಾಜನಗರದ ಅಭಿವೃದ್ಧಿಯ ಬಗ್ಗೆ ನೂರಾರು ಕನಸುಗಳನ್ನು ತುಂಬಿಕೊAಡು ದುಡಿಯುವ ಸೋಮಣ್ಣ ಅಪರೂಪದ ಜನನಾಯಕ.


 ಅವರಂತಹ ಕೆಲಸಗಾರ ನಾಯಕನನ್ನು ಚಾಮರಾಜನಗರ ಮೂರು ವರ್ಷ ಮೊದಲೇ ಉಸ್ತುವಾರಿ ಸಚಿವರನ್ಮಾಗಿ ನೇಮಕ ಮಾಡಿದ್ದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣುತ್ತಿತ್ತು ಅಂದುಕೊAಡು ನಾವು ಮಳವಳ್ಳಿ ಯಿಂದ ಮೈಸೂರಿನತ್ತ ಹೊರಟೆವು.