ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್ ಗಾಂಧಿ- ಕ್ಯಾತಸಂದ್ರದಲ್ಲಿ ಕಾಂಗ್ರೆಸ್ ನಾಯಕನಿಗೆ ಸ್ವಾಗತ ಕೋರಲು ಸಿದ್ಧತೆ
ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್ ಗಾಂಧಿ ಕ್ಯಾತಸಂದ್ರದಲ್ಲಿ ಕಾಂಗ್ರೆಸ್ ನಾಯಕನಿಗೆ ಸ್ವಾಗತ ಕೋರಲು ಸಿದ್ಧತೆ
ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್ ಗಾಂಧಿ
ಕ್ಯಾತಸಂದ್ರದಲ್ಲಿ ಕಾಂಗ್ರೆಸ್ ನಾಯಕನಿಗೆ ಸ್ವಾಗತ ಕೋರಲು ಸಿದ್ಧತೆ
ತುಮಕೂರು: ಕಾಂಗ್ರೆಸ್ ರಾಷ್ಟಿçÃಯ ನಾಯಕ ಹಾಗೂ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರು ಗುರುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕರ‍್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ಹಾಗೂ ಎರಡು ದಿನಗಳ ಹಿಂದಷ್ಟೇ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಕಾಂಗ್ರೆಸ್ ಕರ‍್ಯಾಧ್ಯಕ್ಷ ಈಶ್ವರ್ ಖಂಡ್ರೆ ಬುಧವಾರ ಮಧ್ಯಾಹ್ನ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಮಠಾಧೀಶ ಶ್ರೀ ಸಿದ್ಧಲಿಂಗ ಮಹಾಸ್ವಾಮಿಯವರನ್ನು ಭೇಟಿ ಮಾಡಿದರು.
ಮಾಜಿ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರöç ಜೊತೆಯಲ್ಲಿದ್ದರು. ಸ್ವಾಮೀಜಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೆವಾಲ, ರಾಹುಲ್ ಗಾಂಧಿ ಅವರು ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ರಾಜಧಾನಿಯಿಂದ ರಸ್ತೆ ಮುಖಾಂತರ ಆಗಮಿಸಲಿದ್ದು ಜಿಲ್ಲೆಯ ಗಡಿಯಲ್ಲಿ ಅವರಿಗೆ ಸ್ವಾಗತ ಕೋರಲಾಗುವುದು ಎಂದರು.
ರಾಹುಲ್ ಗಾಂಧಿ ಅವರು ಮೊದಲಿಗೆ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸುವರು ,ನಂತರ ಶ್ರೀ ಸಿದ್ಧಲಿಂಗ ಮಹಾಸ್ವಾಮಿಯವರನ್ನು ಭೇಟಿ ಮಾಡುವರು. ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜನ್ಮ ದಿನ ಆಚರಣೆ ಹಾಗೂ ಗುರುವಂದನೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಭೇಟಿಗೆ ಮಹತ್ವ ಬಂದಿದೆ.
ಕ್ಯಾತಸಂದ್ರದಲ್ಲಿ ಸ್ವಾಗತ
ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರಿಗೆ ಕ್ಯಾತಸಂದ್ರ ಸರ್ಕಲ್ ಬಳಿ ಸ್ವಾಗತ ಕೋರಲು ಮಧುಗಿರಿ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ನೇತೃತ್ವದಲ್ಲಿ ಮಧುಗಿರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ‍್ಯಕರ್ತರು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.