ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?

MLC election

ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?

 

ವಿಧಾನ ಪರಿಷತ್: ಬಿಜೆಪಿ-ಜೆಡಿಎಸ್-ಕಾಂಗ್ರೆಸ್
ಯಾವ ಪಕ್ಷದಿಂದ ಯಾರು ಅಭ್ಯರ್ಥಿ?


ತುಮಕೂರು: ರಾಜಕೀಯ ಪಕ್ಷಗಳು ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವ ತರಾತುರಿಯಲ್ಲಿವೆ. ಮತದಾನ ನಿಗದಿಯಾಗಿರುವ ಡಿಸೆಂಬರ್ ಹತ್ತನೇ ದಿನಾಂಕಕ್ಕೆ ಇನ್ನು ಕೇವಲ ಇಪ್ಪತ್ತು ದಿನಗಳು ಬಾಕಿ ಉಳಿದಿವೆ.


ಕಾಂಗ್ರೆಸ್‌ನಿಂದ ಐವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಕಳೆದ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ರಾಜೇಂದ್ರ ನಾಮಪತ್ರವನ್ನೂ ಸಲ್ಲಿಸಿ, ಅವರನ್ನೇ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.


ಈ ಕ್ಷೇತ್ರದಿಂದ ಆರು ವರ್ಷದ ಹಿಂದೆ ಜೆಡಿಎಸ್‌ನಿಂದ ಗೆದ್ದಿದ್ದ ಬೆಮೆಲ್ ಕಾಂತರಾಜು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿರುವುದರಿಂದ, ಆ ಪಕ್ಷ ಹೊಸ ಅಭ್ಯರ್ಥಿಯನ್ನು ಹುಡುಕಿಕೊಂಡಿದೆ. ಇತ್ತೀಚಿನವರೆಗೂ ಬಿಜೆಪಿಯಲ್ಲಿದ್ದು ಅಕ್ಟೋಬರ್ ಕಡೇ ವಾರ ಗುಬ್ಬಿ ಸಮಾವೇಶದಲ್ಲಿ ಜೆಡಿಎಸ್ ಸೇರಿದ ನಿವೃತ್ತ ಬಿಇಓ ರಾಮಾಂಜನಯ್ಯ ಅವರ ಮಗ ಕೆಎಎಸ್ ಅಧಿಕಾರಿ ಅನಿಲ್ ಆ ಪಕ್ಷದಿಂದ ಕಣಕ್ಕಿಳಿಯುವುದು ಬಹುತೇಕ ಅಂತಿಮಗೊAಡಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮಾ ಅವರ ಪತಿ ವಿದ್ಯುತ್ ಗುತ್ತಿಗೆದಾರರಾಗಿರುವ ಹೆಚ್.ಕೆ.ಮಹಾಲಿಂಗಯ್ಯ ಅವರೂ ಜೆಡಿಎಸ್‌ನಿಂದ ಎಂಎಲ್‌ಸಿಯಾಗುವ ಪ್ರಯತ್ನ ಪಟ್ಟರಾದರೂ, ಸದ್ಯದ ಹೈಕಮಾಂಡ್ ಅನಿಲ್ ಅವರಿಗೆ ರಾಜಿನಾಮೆ ಕೊಡಿಸಿ ಕಣಕ್ಕಿಳಿಸಲು ಹೆಚ್ಚು ಆಸಕ್ತಿ ತೋರಿದ್ದಾರೆ.


ಇನ್ನು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗಗೊAಡಿಲ್ಲ. ಹಿಂದೆ ಜೆಡಿಎಸ್‌ನಿಂದ ಇದೇ ಕ್ಷೇತ್ರದಿಂದ ಚುನಾಯಿತರಾಗಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎಂ.ಆರ್. ಹುಲಿನಾಯ್ಕರ್ ಅವರನ್ನು ಪಕ್ಷ ಮನವೊಲಿಸುವ ಪ್ರಯತ್ನ ನಡೆಸಿದೆ, ಅವರು ಅಭ್ಯರ್ಥಿಯಾಗಲು ಸಮ್ಮತಿಸಿಲ್ಲವೆಂದೂ ಅವರ ಬದಲಿಗೆ ಅವರ ಮಗಳು ಅಂಬಿಕಾ ಅವರನ್ನು ಕಣಕ್ಕಿಳಿಸಬಹುದು ಎನ್ನಲಾಗುತ್ತಿದೆ. ಜೊತೆಗೆ ಮಾಜಿ ಸಚಿವ ಸೊಗಡು ಶಿವಣ್ಣನವರನ್ನೂ , ಇತ್ತೀಚೆಗೆ ತಾನೇ ಪಕ್ಷದ ಜಿಲ್ಲಾಧ್ಯಕ್ಷ ಪದವಿ ತೊರೆದ ಸುರೇಶಗೌಡರನ್ನೂ ಕಣಕ್ಕಿಳಿಯುವಂತೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ವಕ್ತಾರರಾಗಿದ್ದ ಟಿ.ಆರ್.ಸದಾಶಿವಯ್ಯನವರೂ ವಿಧಾನ ಪರಿಷತ್‌ಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆAದು ಹೇಳಲಾಗಿದೆ.ಜೊತೆಗೆ ಬಿಜೆಪಿ ವೈದ್ಯ ವಿಭಾಗದ ರಾಜ್ಯ ಪದಾಧಿಕಾರಿಯಾಗಿದ್ದ ವೈದ್ಯ ಡಾ.ಲಕ್ಷಿö್ಮÃಕಾಂತ್ ಕೂಡಾ ಪಕ್ಷ ಅವಕಾಶ ನೀಡಿದರೆ ವಿಧಾನ ಪರಿಷತ್‌ಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.


ಸ್ಥಳೀಯ ಸಂಸ್ಥೆಗಳೆAದರೆ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರು ಮತದಾನ ಮಾಡಲು ಅರ್ಹರಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಅವಧಿ ಮುಗಿದಿದೆ. ಗ್ರಾಪಂ ಸದಸ್ಯರು ಯಾವುದೇ ಪಕ್ಷದ ಗುರುತಿನಿಂದ ಆಯ್ಕೆಯಾಗಿಲ್ಲವಾದ್ದರಿಂದ ಹಾಗೂ ಮತದಾನದಲ್ಲಿ  ಆದ್ಯತೆ ಮೇರೆಗೆ ಒಂದು, ಎರಡು, ಮೂರು ಎಂದು ಮತ ಚಲಾಯಿಸಲು ಅವಕಾಶವಿರುವುದರಿಂದ ಈ ವಿಶಿಷ್ಟ ಮತದಾರರು ಸರ್ವಪಕ್ಷಗಳನ್ನೂ ಸಮಾನವಾಗಿ ಕಾಣುವ ಸಾಧ್ಯತೆಯೂ ಇದೆ. ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಅಂತಿಮಗೊAಡ ನಂತರವಷ್ಟೇ ಚುನಾವಣಾ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ ಎನ್ನಬಹುದು.