ಜೆಸಿಎಂ ಅವರನ್ನು ಉಸ್ತುವಾರಿಯಿಂದ ತೆಗೆದಿರುವುದು ಸರಿಯಲ್ಲ: ಕೆ.ಎನ್. ರಾಜಣ್ಣ

ಜೆಸಿಎಂ ಅವರನ್ನು ಉಸ್ತುವಾರಿಯಿಂದ ತೆಗೆದಿರುವುದು ಸರಿಯಲ್ಲ: ಕೆ.ಎನ್. ರಾಜಣ್ಣ

ಜೆಸಿಎಂ ಅವರನ್ನು ಉಸ್ತುವಾರಿಯಿಂದ ತೆಗೆದಿರುವುದು ಸರಿಯಲ್ಲ: ಕೆ.ಎನ್. ರಾಜಣ್ಣ


ಜೆಸಿಎಂ ಅವರನ್ನು ಉಸ್ತುವಾರಿಯಿಂದ
ತೆಗೆದಿರುವುದು ಸರಿಯಲ್ಲ: ಕೆ.ಎನ್. ರಾಜಣ್ಣ


ತುಮಕೂರು: ಜೆ.ಸಿ. ಮಾಧುಸ್ವಾಮಿ ಅವರನ್ನು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ತೆಗೆದಿರುವುದು ಸರಿಯಲ್ಲ. ಇದು ನನ್ನ ವೈಯಕ್ತಿಯ ಅಭಿಪ್ರಾಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.


ಗುರುವಾರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತಂದು ಅಭಿವೃದ್ಧಿ ಪಡಿಸಬೇಕೆಂದು ಕನಸು ಕಂಡಿದ್ದರು. ಅವುಗಳ ಅನುಷ್ಠಾನಕ್ಕೂ ಶ್ರಮ ವಹಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಅವರನ್ನು ಉಸ್ತುವಾರಿಯಿಂದ ಬಿಡುಗಡೆಗೊಳಿಸಿರುವುದು ಸರಿಯಲ್ಲ ಎಂದು ಪುನರುಚ್ಚರಿಸಿದರು.


ಮಾಧುಸ್ವಾಮಿ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದವರು. ಹಾಗಂತ ಅವರು ಎಲ್ಲರಿಗೂ ಸರಿ ಇದ್ದರೆಂದು ಹೇಳಲಾಗದು ಎಂದು ಹೇಳಲಾಗದು. ಜಿಲ್ಲೆಯ ಎಲ್ಲ ಭಾಗಗಳ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದರು. ಅಲ್ಲಿನ ಜನರ ಸಮಸ್ಯೆಗಳನ್ನು ಕೇಳುತ್ತಿದ್ದರು. ಸಾಧ್ಯವಾದಷ್ಟೂ ಸಮಸ್ಯೆಗಳ ನಿವಾರಣೆಗೆ ಶ್ರಮಿಸುತ್ತಿದ್ದರು ಎಂದರು.


ಇದುವರೆಗೂ ಉಸ್ತುವಾರಿ ಸಚಿವರಾಗಿದ್ದವರು ಅವರವರ ಕ್ಷೇತ್ರಕ್ಕೆ ಸೀಮಿತರಾಗಿದ್ದರು. ಇವರು ಹಾಗಿರದೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರು ಎಂದರು.



ಕಾಂಗ್ರೆಸ್‌ಗೆ ಬಂದರೆ ಸ್ವಾಗತ


ಮಾಧುಸ್ವಾಮಿ ಅವರು ಕಾಂಗ್ರೆಸ್‌ಗೆ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ ಅವರು. ಅವರು ಕಾಂಗ್ರೆಸ್ ಪಕ್ಷಕ್ಕೆ ಬರೋದಾದರೆ ಬರಲಿ. ಸಂತೋಷ. ಅವರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಅಂತಂದ್ರೆ ಬರಲಿ. ಬಂದ್ರೆ ತುಂಬಾ ಸಂತೋಷ ಎಂದು ಕೆ.ಎನ್. ರಾಜಣ್ಣ ತಿಳಿಸಿದರು.


ಅಲ್ಲದೆ, ಪಕ್ಷಕ್ಕೆ ಯಾರು ಬರಬೇಕು. ಯಾರು ಬೇಡ ಎಂಬುದನ್ನು ಪಕ್ಷದ ಸಮಿತಿಯ ಅಂತಿಮ ತೀರ್ಮಾನಿಸುತ್ತದೆ. ಯಾರನ್ನಾದರೂ ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷಕ್ಕೆ ಹೇಗೆ ಅನುಕೂಲವಾಗಬಹುದು ಎಂಬ ಬಗ್ಗೆ ನಮ್ಮ ಅನಿಸಿಕೆಗಳನ್ನು ನಾವು ಪಕ್ಷದ ವರಿಷ್ಠರಿಗೆ ಹೇಳಬಹುದು. ಅದರ ಹೊರತಾಗಿ ನಾವೇನು ಹೇಳಲು ಸಾಧ್ಯವಿಲ್ಲ ಎಂದರು. ಮಾಧುಸ್ವಾಮಿ ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇನೆ ಎಂದು ರಾಜಣ್ಣ ತಿಳಿಸಿದರು.