ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ  ಪ್ರಧಾನ ಮಂತ್ರಿ ಮೋದಿ ನೇರ ವಿಡಿಯೋ ಸಂವಾದ

ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ  ಪ್ರಧಾನ ಮಂತ್ರಿ ಮೋದಿ ನೇರ ವಿಡಿಯೋ ಸಂವಾದ

ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ  ಪ್ರಧಾನ ಮಂತ್ರಿ ಮೋದಿ ನೇರ ವಿಡಿಯೋ ಸಂವಾದ


ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ 
ಪ್ರಧಾನ ಮಂತ್ರಿ ಮೋದಿ ನೇರ ವಿಡಿಯೋ ಸಂವಾದ

ತುಮಕೂರು : ಗರೀಬ್  ಕಲ್ಯಾಣ ಸಮ್ಮೇಳನದ ಹೆಸರಿನಲ್ಲಿ ಕೇಂದ್ರ ಸರ್ಕಾರ ತನ್ನ ವಿವಿಧ ಯೋಜನೆ, ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ಪ್ರಧಾನ ಮಂತ್ರಿಯವರು ನಡೆಸಿದ ವಿಡಿಯೋ ಸಂವಾದವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಮಂಗಳವಾರ ಪ್ರಾಯೋಜಿಸಿತ್ತು. 


ಪ್ರಧಾನ ಮಂತ್ರಿಗಳ ನೇರ ಸಂವಾದದ ಸಂದರ್ಭದಲ್ಲಿ ಸಮಾವೇಶಗೊಂಡಿದ್ದ ಫಲಾನುಭವಿಗಳೊಂದಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ, ಸ್ವಾತಂತ್ರ‍್ಯ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು  ಕೇಂದ್ರ ಸರ್ಕಾರ ಜಾರಿಗೆ ತಂದಿರುವ  ಜನಕಲ್ಯಾಣ ಯೋಜನೆಗಳು ಜನಸಾಮಾನ್ಯರಿಗೆ ಯಾವ ರೀತಿಯಲ್ಲಿ ಫಲಪ್ರದವಾಗಿವೆ ಎಂಬುದನ್ನು ತಿಳಿಯಲು ಗರೀಬ್ ಕಲ್ಯಾಣ ಸಮ್ಮೇಳನ ನಡೆಸುತ್ತಿದ್ದಾರೆ ಎಂದರು


ಪ್ರಧಾನಮಂತ್ರಿ ಆವಾಜ್  ಯೋಜನೆ (ಗ್ರಾಮೀಣ ಮತ್ತು ನಗರ), ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪಿ.ಎಂ ಉಜ್ವಲ ಯೋಜನಾ, ಪೋಷಣ್ ಅಭಿಯಾನ್, ಮಾತೃವಂದನಾ ಯೋಜನಾ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ ಮತ್ತು ನಗರ),  ಜಲಜೀವನ್ ಮತ್ತು ಅಮೃತ್ ಯೋಜನೆ, ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಒಂದು ರಾಷ್ಟç ಒಂದು ಪಡಿತರ ಚೀಟಿ ಯೋಜನಾ, ಪಿ.ಎಂ ಗರೀಬ್ ಕಲ್ಯಾಣ್ ಅನ್ನ ಯೋಜನಾ, ಆಯುಷ್ಮಾನ್ ಭಾರತ್ ಜನಾರೋಗ್ಯ ಯೋಜನಾ, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕಲ್ಯಾಣ ಕೇಂದ್ರ, ಪ್ರಧಾನಮಂತ್ರಿ ಮುದ್ರಾ ಯೋಜನಾ  ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಜನಸಾಮಾನ್ಯರ ಬದುಕನ್ನು ಕಟ್ಟುವ ಕೆಲಸವನ್ನು ಪ್ರಧಾನಮಂತ್ರಿಯವರು ಮಾಡಿದ್ದಾರೆ ಎಂದರು.


ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ ನಾಡಿನ ಜನರಿಗೆ ದವಸ ಧಾನ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದರಲ್ಲದೇ ಜನಸಾಮಾನ್ಯರು ಅಡುಗೆ ಮಾಡಲು ಉರುವಲು ಬಳಸಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು.ಅದನ್ನು ತಪ್ಪಿಸಲು ಉಜ್ವಲ ಯೋಜನೆಯನ್ನು ಜಾರಿಗೆ ತಂದು ಮನೆ-ಮನೆಗೂ ಗ್ಯಾಸ್ ವಿತರಿಸಲು ಸರ್ಕಾರ ಕ್ರಮಕೈಗೊಂಡಿದೆ ಎಂದರು.ಅAತೆಯೇ ಜನಧನ ಖಾತೆಯನ್ನು ತೆರೆಸುವುದರ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲು ದಿಟ್ಟಕ್ರಮಗಳನ್ನು ಕೈಗೊಂಡಿದೆ ಎಂದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ವ್ಯಾಪ್ತಿಗೆ ಬರುವ ಮಾತೃವಂದನಾ ಯೋಜನಾ,  ಪೋಷಣ್ ಅಭಿಯಾನ, ಆರೋಗ್ಯ ಇಲಾಖೆ ಯೋಜನೆಗಳಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕಲ್ಯಾಣ ಕೇಂದ್ರದ ಫಲಾನುಭವಿಗಳೊಂದಿಗೆ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಂವಾದ ನಡೆಸಿದರು. ಮೇಯರ್ ಬಿ.ಜಿ.ಕೃಷ್ಣಪ್ಪ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
************