ಕನ್ನಡ ಭವನ ಅಪಾಯದ ಅಂಚಿನಲ್ಲಿ : ಸಿದ್ದಗಂಗಯ್ಯ ಹೊಲತಾಳು ಬಹಿರಂಗ ಪತ್ರ

ಜಿಲ್ಲೆಯ ಸಮಸ್ತ ನಾಗರಿಕರ ಗಮನಕ್ಕೆ

ಕನ್ನಡ ಭವನ ಅಪಾಯದ ಅಂಚಿನಲ್ಲಿ : ಸಿದ್ದಗಂಗಯ್ಯ ಹೊಲತಾಳು ಬಹಿರಂಗ ಪತ್ರ

ಕನ್ನಡ ಭವನ ಅಪಾಯದ ಅಂಚಿನಲ್ಲಿ : ಸಿದ್ದಗಂಗಯ್ಯ ಹೊಲತಾಳು ಬಹಿರಂಗ ಪತ್ರ

ಜಿಲ್ಲೆಯ ಸಮಸ್ತ ನಾಗರಿಕರ ಗಮನಕ್ಕೆ

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ಕಳೆದ ಎರಡು ವರ್ಷದಿಂದ ಅಪಾಯದ ಅಂಚಿನಲ್ಲಿದೆ. ಎರಡು ವರ್ಷದಿಂದ ಕನ್ನಡ ಭವನದ ಎದುರಿನ ಅಮಾನಿಕೆರೆಯಲ್ಲಿ ಅರ್ಧಕ್ಕಿಂತ ಹೆಚ್ಚು ನೀರಿದ್ದು, ಈ ವರ್ಷ ಭರ್ತಿಯಾಗಿ ಕೋಡಿ: ಹೋಗಿದೆ. ಆಗಿನಿಂದ ಕನ್ನಡ ಭವನದ ನೆಲಮಾಳಿಗೆಯಲ್ಲಿ ಮೂರು ನಾಲ್ಕು ಅಡಿ ನೀರು ನಿಲ್ಲುತ್ತಿದೆ. ಹೀಗೆ ನೀರು ನಿಂತರೆ ಹೊಸದಾಗಿ ಕಟ್ಟಲಾಗಿರುವ ಸುಮಾರು ನಾಲ್ಕು ಕೋಟಿ ರೂಪಾಯಿಯ ಕಟ್ಟಡ ಕುಸಿಯುವ ಸಂಭವವಿದೆ.

ಕನ್ನಡ ಭವನದಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕುಸಿದರೆ ಉಂಟಾಗಬಹುದಾದ ಜೀವಹಾನಿಯನ್ನು ಊಹಿಸಲೂ ಸಾಧ್ಯವಿಲ್ಲ. ಕೆರೆ ಪಕ್ಕದಲ್ಲಿ ನೆಲಮಾಳಿಗೆಯೊಂದಿಗೆ ಕಟ್ಟಡ ಕಟ್ಟಲು ಯೋಜನೆ ರೂಪಿಸಿದ ಇಂಜಿನಿಯರ್‌ಗಳೇ ಮೊದಲ ಹೊಣೆಗಾರರಾಗಿದ್ದಾರೆ.

ಈ ಸಮಸ್ಯೆಯನ್ನು ಹಿಂದಿನ  ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿದ್ದ ಬಾ.ಹ.ರಮಾಕುಮಾರಿಯವರಿಗೆ ಮೋಹನಕುಮಾರ್ ಎಂಬ ಇಂಜಿನಿಯರ್ ಅವರನ್ನು ಪರಿಚಯಿಸಿದ್ದೆ. ಆಗೋ ಇಗೋ  ಎನ್ನುವಷ್ಟೊತ್ತಿಗೆ ಅವರ ಅವಧಿ ಮುಗಿದು ಕೆ.ಎಸ್.ಸಿದ್ಧಲಿಂಗಪ್ಪ ಆಯ್ಕೆಯಾಗಿ ಎಲ್ಲಾ ಮಟ್ಟದಲ್ಲೂ ಪದಾಧಿಕಾರಿಗಳ ಮತ್ತು ಕನ್ನಡ ಪ್ರೇಮಿಗಳ ಸಹಕಾರದಿಂದ ಕಾರ್ಯಕ್ರಮಗಳನ್ನು, ಸಮ್ಮೇಳನಗಳನ್ನು ನಡೆಸುವಲ್ಲಿ ಕ್ರಿಯಾಶೀಲರಾಗಿದ್ದಾರೆ. ಕಟ್ಟಡದ ಸಮಸ್ಯೆ ಆದ್ಯತೆಯದಾಗಬೇಕು. ಈ ಸಂಬಂಧ ಪ್ರಸ್ತುತ ಶಾಸಕರಾದ ಜ್ಯೋತಿಗಣೇಶ್ ಮತ್ತು ಜಿಲ್ಲಾಧಿಕಾರಿಗಳಾದ ವೈ.ಎಸ್‌.ಪಾಟೀಲರಿಗೆ ಮೌಖಿಕವಾಗಿ ಗಮನಕ್ಕೆ ತಂದಿರುವೆ. ಇನ್ನಿಬ್ಬರು ಸ್ಥಳೀಯ ಇಂಜಿನಿಯರ್‌ಗಳಾದ ಎನ್.ವಿ.ರಾಮಮೂರ್ತಿ ಮತ್ತು ಗಂಗಾಧರ ಕೊಡ್ಲಿಯಾರ್ ಅವರ ಜೊತೆ ಈ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ, ಪರಿಷತ್ತು ತಮ್ಮ ಸೇವೆಯನ್ನು ಬಳಸಿಕೊಳ್ಳಬಹುದೆಂದು ತಿಳಿಸಿದರು. ಆದುದರಿಂದ ಪ್ರಪ್ರಥಮವಾಗಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಸಿದ್ಧಲಿಂಗಪ್ಪ ಅವರು ಪದಾಧಿಕಾರಿಗಳ ಜೊತೆ ತಜ್ಞ ಇಂಜಿನಿಯರ್‌ಗಳನ್ನು ಸಂಪರ್ಕಿಸಿ, ವರದಿ ಪಡೆದು. ಜನಪ್ರತಿನಿಧಿಗಳನ್ನು ಮತ್ತು ಜಿಲ್ಲಾಡಳಿತವನ್ನು ಒಳಗೊಂಡು ಶೀಘ್ರದಲ್ಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ಬಗೆಹರಿಸಿ, ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕಾದ್ದು ಆದ್ಯ ಕರ್ತವ್ಯವಾಗಿದೆ. ನಾನು ಕನ್ನಡ ಲೇಖಕ, ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯನೂ ಆಗಿದ್ದು, ಆ ದುರಸ್ತಿ ಕಾರ್ಯ ಆಗುವವರೆಗೆ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಪ್ರತಿಭಟಿಸುತ್ತೇನೆ.

 

ಸಿದ್ಧಗಂಗಯ್ಯ ಹೊಲತಾಳು

ಅಬೇತೋಸಂ, ಹೊಲ್ತಾಳು

 ಮೊಬೈಲ್ ಸಂಖ್ಯೆ  9483657710