ಕತಾ ಸರಿತ್ಸಾಗರ- (ಕನ್ನಡಕ್ಕೆ :ಕೇಶವ ಮಳಗಿ) ಬಂದಿ

katha sarithsagara bandi

ಕತಾ ಸರಿತ್ಸಾಗರ-   (ಕನ್ನಡಕ್ಕೆ :ಕೇಶವ ಮಳಗಿ) ಬಂದಿ
ಕತಾ ಸರಿತ್ಸಾಗರ-   (ಕನ್ನಡಕ್ಕೆ :ಕೇಶವ ಮಳಗಿ) ಬಂದಿ
ಕತಾ ಸರಿತ್ಸಾಗರ-   (ಕನ್ನಡಕ್ಕೆ :ಕೇಶವ ಮಳಗಿ) ಬಂದಿ

ಸಾಹಿತ್ಯಕ್ಕಾಗಿ ನೀಡುವ ನೊಬೆಲ್ ಪುರಸ್ಕಾರ 2021ರ ವಿಜೇತ!
ಅಬ್ದುಲ್ ರಜಾಕ್ ಗುರ್ನ್ಹಾ
(Abdul Razak Gurnah)


ಆಫ್ರಿಕಾ ಖಂಡದ ಮುಖ್ಯ ಲೇಖಕರಲ್ಲಿ ಒಬ್ಬರಾದ ಅಬ್ದುಲ್ ರe಼Áಕ್ ಗುರ್ನ್ಹಾ ಹುಟ್ಟಿದ್ದು 1948ರಲ್ಲಿ, ಇಂದಿನ ಪೂರ್ವ ಆಫ್ರಿಕಾದ ತಾಂಜೇನಿಯದ ಭಾಗವಾಗಿರುವ ಜಂಜûಬೀರ್‌ನಲ್ಲಿ. ಇಂಗ್ಲೆAಡಿನ ಕೆಂಟ್ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯವನ್ನು ಬೋಧಿಸುವ ಅವರು ಈವರೆಗೆ ಏಳು ಕಾದಂಬರಿಗಳನ್ನು, ಅಸಂಖ್ಯ ಕಥೆಗಳನ್ನು, ಸಾಹಿತ್ಯ ವಿಮರ್ಶೆಯನ್ನು ಪ್ರಕಟಿಸಿದ್ದಾರೆ. ಆಫ್ರಿಕನ್ ಸಮಾಜದ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಹಿಡಿದಿಡುವ ಇವರ ಕಥೆ-ಕಾದಂಬರಿಗಳು, ಅಲ್ಲಿನ ಜನರ ಅಸ್ಮಿತೆ, ಆಶೋತ್ತರಗಳು, ಸ್ಥಿತ್ಯಂತರಗೊAಡ ಜನಗಳ ಮನಸ್ಥಿತಿಗಳು ಅತಿ ಕಡಿಮೆ ಪದಗಳಲ್ಲಿ ಶಕ್ತಿಶಾಲಿಯಾಗಿ ಹಿಡಿದಿಡುತ್ತವೆ. ಪಶ್ಚಿಮದ ಜಗತ್ತಿನಲ್ಲಿಯೂ ಗುರ್ನ್ಹಾ ಚಿರಪರಿಚಿತ ಲೇಖಕರು. 
ಇದೀಗ ಅವರಿಗೆ ನೊಬೆಲ್ ಪುರಸ್ಕಾರದ ಗರಿ. ಇದಕ್ಕಿಂತ ಸಂತಸ ಬೇಕೆ? ಈ ಕಥೆ ನಾನು ನಾಲ್ಕೈದು ವರ್ಷಗಳ ಹಿಂದೆ ಅನುವಾದಿಸಿದ್ದು. ಅಂದಹಾಗೆ, ಆಫ್ರಿಕಾದ ಎನ್‌ಗೂಗಿ ವ ಥಿಯಾಂಗೋ ಮತ್ತು ಎನ್‌ಜಬುಲೋ ಎನ್‌ಡಬಿಲ ಕೂಡ ನೊಬೆಲ್ ಪುರಸ್ಕಾರಕ್ಕೆ ಅತ್ಯಂತ ಅರ್ಹರು. 

ಕತಾ ಸರಿತ್ಸಾಗರ
(ಕನ್ನಡಕ್ಕೆ :ಕೇಶವ ಮಳಗಿ)

ಬಂದಿ

 ಅಬ್ದುಲ್ ರಜಾಕ್ ಗುರ್ನ್ಹಾ


ಅಂಗಡಿಯಲ್ಲಿ ಹೀಗೇ ಕುಳಿತು, ಕುಳಿತು, ಕೊಳೆತು ತನ್ನ ಬದುಕೇ ಮುಗಿದು ಹೋಗಿಬಿಡಬಹುದು ಎಂದು ಹಮೀದನಿಗೆ ಇದ್ದಕ್ಕಿದ್ದಂತೆ ಒಮ್ಮೊಮ್ಮೆ ದಿಗಿಲಾಗುತ್ತದೆ. ಸಹಜವಾಗಿ ಆಗುವ ಕಿರಿಕಿರಿ, ನಡುರಾತ್ರಿಯ ಕತ್ತಲಿನ ಲೋಕದ ನಿಶಾಚರರ ಸದ್ದುಗದ್ದಲ ಇವಾವುದೂ ಕೇಳಿಸಿಕೊಳ್ಳದಷ್ಟು ಆತನ ಹೃದಯ ಸಂವೇದನಾಶೂನ್ಯವಾಗಿತ್ತು. ಆತನಿಗೆ ತಿಳಿದುದೆಲ್ಲ ಆ ಜನ ಬರುತ್ತಿದ್ದುದು ನಗರದ ವಸತಿಪ್ರದೇಶವನ್ನು ಬೇರ್ಪಡಿಸುತ್ತಿದ್ದ ಇಳಕಲಿನಲ್ಲಿದ್ದ ಕುರುಚಲು ಕಾಡಿನಿಂದ. ಅಂಗಡಿ ಇದ್ದುದು ಉಪನಗರದ ಕೂಡು ರಸ್ತೆಗಳು ಸೇರುವ ಆಯಕಟ್ಟಿನ ಜಾಗದಲ್ಲಿ. ಆತ ಅಂಗಡಿ ತೆರೆಯುತ್ತಿದ್ದುದು ಇನ್ನೂ ನಸುಕಿರುವಾಗಲೇ ಕೆಲಸ ಹುಡುಕಿ ಹೊರಡುವ ಜನ ಎದ್ದು ಮೈಮುರಿಯುವ ಸಮಯದಲ್ಲಿ. ಮುಚ್ಚುತ್ತಿದ್ದುದು, ಕಟ್ಟಕಡೆಯ ವ್ಯಕ್ತಿ ಬದುಕು ಅರಸುತ್ತ ಅಲೆದಾಡಿ ಸುಸ್ತಾಗಿ ಮನೆ ಸೇರುವ ಸಮಯದಲ್ಲಿ. ಇಲ್ಲಿ ಕುಳಿತು ಬದುಕಿನ ಎಲ್ಲ ಬವಣೆಯನ್ನೂ ಕಂಡೀದೀನಿ ಎಂದು ಹೇಳಿಕೊಳ್ಳಲು ಅವನಿಗೆ ಹೆಮ್ಮೆ. ವ್ಯಾಪಾರ ಜೋರಾಗಿರುವ ಸಂದಣಿಯ ಸಮಯದಲ್ಲಿ ತನ್ನ ಕಾಲ ಕಿರುಬೆರಳಲ್ಲಿ ಓಡಾಡುತ್ತ, ಗಿರಾಕಿಗಳೊಂದಿಗೆ, ಹರಟೆ ಹೊಡೆಯುತ್ತ, ಲೇವಡಿ ಮಾಡುತ್ತ, ಎಲ್ಲವನ್ನೂ ಸಂಭಾಳಿಸುವ ತನ್ನ ಚಾಕಚಕ್ಯತೆಯ ಬಗ್ಗೆಯೂ ಆತನಿಗೆ ಗರ್ವವೇ. ಎಲ್ಲ ಮುಗಿದದ್ದೇ ಜೀವರಸ ಬತ್ತಿಹೋದಂತಾಗಿ ಆತನನ್ನು ಯಾವತ್ತು ಸಲಹುತ್ತ ಬಂದ ಕುರ್ಚಿಯಲ್ಲಿ ಉಸ್ಸಪ್ಪಾ ಅಂತ ಕುಳಿತುಕೊಳ್ಳುವುದು ಹಮೀದನ ವಾಡಿಕೆ. 
ಇನ್ನೇನು ವ್ಯಾಪಾರ ಮುಗಿದ ಹಾಗೆ, ಅಂಗಡಿ ಮುಚ್ಚಲೇ ಎಂದು ಯೋಚಿಸುತ್ತ ಕುಳಿತಿದ್ದ ಒಂದು ಇಳಿಸಂಜೆ ಆ ಹುಡುಗಿ ಬಂದಿದ್ದಳು. ಹಮೀದ, ಗಿರಾಕಿಗಳಿಲ್ಲದ ಬೇಸರದ ಸಮಯದಲ್ಲಿ ಮಾಡುವಂತೆ ತೂಕಡಿಸುತ್ತಿದ್ದ. ಯಾರೋ ತನ್ನನ್ನು ಎಳೆಯುತ್ತಿದ್ದಾರೆಂದು ಗಾಬರಿಯಲ್ಲಿ ಕಣ್ಣು ಬಿಟ್ಟಾಗ, ಹುಡುಗಿ ಮುಖದಲ್ಲಿ ಖಿನ್ನತೆ ತುಂಬಿ ನಿಂತಿದ್ದಳು. 
ಒಂದು ಅಸಹನೀಯ ಗಳಿಗೆಯ ಕಾಯುವಿಕೆಯ ಬಳಿಕ ಆಕೆ ಹೇಳಿದಳು: ’ತುಪ್ಪ, ಇನ್ನೂರು ಗ್ರಾಂ’. ಆತನ ನೋಟ ಕಿರಿ ಕಿರಿ ಮಾಡುತ್ತಿದೆ ಎಂಬAತೆ ಮಾತನಾಡುತ್ತಲೇ ತನ್ನ ಕತ್ತನ್ನು ಆಚೆ ಹೊರಳಿಸಿದಳು. ಆಕೆಯ ದೇಹದ ಸುತ್ತ ಬಟ್ಟೆಯನ್ನು ಬಿಗಿದೆಳೆದು ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದಳು. ಮೆತ್ತನೆಯ ಅರಳೆಯ ಬಟ್ಟೆ ಆಕೆಯ ಮಾಟವನ್ನು ಕಟಿದಂತೆ ಕಾಣುತ್ತಿತ್ತು. ಬರಿದಾಗಿದ್ದ ತೋಳುಗಳು ಬೆಳಕಿಗೆ ಹೊಳೆಯುತ್ತಿದ್ದವು. ಆಕೆಯ ಕೈಯಿಂದ ಪಾತ್ರೆಯನ್ನು ತೆಗೆದುಕೊಂಡ ಹಮೀದ ತುಪ್ಪವನ್ನು ಅಳೆದು ಸುರಿದ. ಹಮೀದನಿಗೆ ಇದ್ದಕ್ಕಿದ್ದಂತೆ ಉತ್ಕಟ ಬಯಕೆ ಆವರಿಸಿ, ಯಾತನೆ ಅನುಭವಿಸಿದ. ಪಾತ್ರೆಯನ್ನು ಇಸಿದುಕೊಳ್ಳುವಾಗ ಬೇಕಾಬಿಟ್ಟಿ ಎಂಬAತೆ ಆತನತ್ತ ನೋಡಿದ ಆಕೆಯ ಹೊಳೆವ ಕಂಗಳ ಆಯಾಸದಿಂದ ಬಳಲಿದಂತೆ ಕಂಡವು. ಚಿಕ್ಕ ದುಂಡುಮುಖ, ಉದ್ದ ಕೊರಳಿನ ಆಕೆ ಇನ್ನೂ ತರುಣಿ ಎಂದು ಹಮೀದ್ ಗ್ರಹಿಸಿದ. ಒಂದೂ ಮಾತನ್ನು ಆಡದೆ ಲಗುಬಗೆಯಲ್ಲಿ ಇಳುಕಲಿನತ್ತ ದಾಪುಗಾಲು ಹಾಕಿ ಆಕೆ ಕಣ್ಮರೆಯಾದಳು. ಆಕೆಯ ಧಾವಂತವನ್ನು ಗಮನಿಸಿದ ಹಮೀದ್, ಹುಶಾರಾಗಿ ಹೋಗು ಎಂದು ಕೂಗಿ ಹೇಳಬೇಕೆಂದುಕೊAಡ. ಕತ್ತಲಿನೊಳಗಿಂದ ಒಂದು ಸಣ್ಣ ನರಳಿಕೆ ಕೇಳಿದಂತಾಯಿತು. ಇನ್ನೇನು ಚೀತ್ಕಾರ ಬರಬಹುದು ಎಂದು ನಿರೀಕ್ಷಿಸುತ್ತಿದ್ದ ಹಮೀದನಿಗೆ ಆಮೇಲೆ ಕೇಳಿಸಿದ್ದು ಕತ್ತಲಿನೊಳಗೆ ಕರಗಿಹೋದ ಆಕೆ ಚಪ್ಪಲಿಯ ಚರಚರ ಸದ್ದು ಮಾತ್ರ. 
ಆಕರ್ಷಕ ತರುಣಿಯ ಕುರಿತು ಧ್ಯಾನಿಸತೊಡಗಿದ ಹಮೀದ ಆಕೆ ಕರಗಿಹೋದ ಕತ್ತಲಿನ ಗವಿಯನ್ನೇ ದಿಟ್ಟಿಸಿದ. ತನ್ನ ಬಗ್ಗೆ ತನಗೇ ವಾಕರಿಗೆ ಹುಟ್ಟಿಸಿತು. ತನ್ನನ್ನಾಕೆ ಅಸಡ್ಡೆಯಿಂದ; ಕುಹಕದಿಂದ ನೋಡಿದ್ದು ನಿಜವೇ ಇರಬೇಕು, ಎಂದುಕೊAಡ ಆತನ ಬಾಯಿ ಒಣಗಿತು. ದಿನಕ್ಕೊಂದಕ್ಕಿAತ ಹೆಚ್ಚು ಸಲ ಬಾಯಿ ಮುಕ್ಕಳಿಸುವ ಪ್ರಮೇಯವಾದರೂ ಎಲ್ಲಿತ್ತು? ಆತನ ಹಾಸಿಗೆಯಿಂದ ಅಂಗಡಿಗೆ ತೆಗೆದುಕೊಳ್ಳುತ್ತಿದ್ದ ಪಯಣದ ಸಮಯ ಒಂದು ನಿಮಿಷಕ್ಕಿಂತ ಕಡಿಮೆ. ಹೀಗಾಗಿ, ಆತ ಎಲ್ಲಿಗೂ ಹೋಗುವ ಪ್ರಸಂಗವೇ ಬರುತ್ತಿರಲಿಲ್ಲ. ಹೀಗಿದ್ದಾಗ, ಸ್ನಾನ ಮಾಡುವ ಆವಶ್ಯಕತೆಯೂ ಬೀಳುತ್ತಿರಲಿಲ್ಲ. ಕೈಕಾಲುಗಳಿಗೆ ಸರಿಯಾದ ಕೆಲಸವಿಲ್ಲದೆ ಅವು ಜಂಗು ತಿಂದAತೆ ಇರುತ್ತಿದ್ದವು. ದಿನ, ತಿಂಗಳು, ವರ್ಷಗಳು ನೊಗಕ್ಕೆ ಕಟ್ಟಿದ ಎತ್ತಿನಂತೆ ಅಂಗಡಿಗೆ ಬಂದಿಯಾಗಿ ಆತ ಬದುಕಿದ್ದ. ಇರುಳಿನ ತನ್ನ ಕೊಳಕು ಸ್ಥಿತಿಯನ್ನು ನೆನಪಿಸಿಕೊಳ್ಳುತ್ತ ಆತ ಅಂಗಡಿಯನ್ನು ಮುಚ್ಚಿದ. 
ಮರುದಿನ ಸಂಜೆ ಕೂಡ ಆ ಹುಡುಗಿ ಅಂಗಡಿಗೆ ಬಂದಳು. ಅಲ್ಲೇ ಅಕ್ಕಪಕ್ಕ ವಾಸಿಸುವ ಖಾಯಂ ಗಿರಾಕಿ, ಹರಟೆ ಹೊಡೆಯಲೆಂದು ಆಗೀಗ ಅಂಗಡಿಯ ಕಟ್ಟೆಗೆ ಬರುವ ಮನಸೂರನ ಜತೆಗೆ ಹಮೀದ್ ಪಟ್ಟಾಂಗ ಹೊಡೆಯುತ್ತಿದ್ದ. ಕಣ್ಣಿಗೆ ಪೊರೆ ಬಂದು ಅರೆಕುರುಡನಾಗಿದ್ದ ಆತನನ್ನು ಕಿಚಾಯಿಸಿ ಜನ ಮಜಾ ತೆಗೆದುಕೊಳ್ಳುತ್ತಿದ್ದರು. ಆತನ ನೋಟದಲ್ಲಿ ಬರೀ ಕೊಳಕೇ ತುಂಬಿರುವುದರಿAದ ಮನ್ಸೂರ್ ಕುರುಡನಾಗುತ್ತ ಹೋಗುತ್ತಿದ್ದಾನೆ, ಎಂದೂ ಜನ ಆಡಿಕೊಳ್ಳುತ್ತಿದ್ದರು. ಹುಡುಗಿ ಬಂದಿದ್ದೇ ಮನ್ಸೂರ್ ಮಾತನಾಡುವುದನ್ನು ನಿಲ್ಲಿಸಿದ. ಕುರುಡು ಬೆಳಕಲ್ಲಿ ಆಕೆಯನ್ನು ಅಂದಾಜಿಸಲು ತನ್ನ ಕುರುಡುಗಣ್ಣನ್ನು ತೇಲುಮೇಲು ಮಾಡಿದ. 
’ನಿಮ್ ಅಂಗಡೀಲಿ ಶೂ ಪಾಲಿಶ್ ಇದೆಯಾ, ಕಪ್ಪು ಬಣ್ಣದ್ದೂ?’ ಆಕೆ ಕೇಳಿದಳು. 
’ಇದೆ’ ಎಂದು ಹೇಳುವಾಗ ಗಂಟಲು ಕಟ್ಟಿದಂತಾಗಿ, ಸರಿಪಡಿಸಿಕೊಂಡು ’ಇದೆ’ ಎಂದು ಹಮೀದ್ ಮತ್ತೊಮ್ಮೆ ಹೇಳಿದ. ಹುಡುಗಿ ನಕ್ಕಳು.
’ಬಾರಮ್ಮ ಬಾ. ಹೇಗಿದೆ ನಿನ್ನ ಆರೋಗ್ಯ ಇವತ್ತು?’ ಮನ್ಸೂರ್ ಕುಶಾಲಿನ ಧ್ವನಿಯಲ್ಲಿ ಕೇಳಿದಾಗ, ಇದೊಂದು ತಮಾಶೆಯಾಗಿರಬಹುದೆ, ಎಂದು ಹಮೀದ್ ಅಚ್ಚರಿಯಿಂದ ನೋಡಿದ. ’ಆಹಾ! ಎಂಥ ಸುವಾಸನೆ ಬರ್ತಾಯಿದೆ ಮೈಯಿಂದ. ಒಳ್ಳೆ ಅತ್ತರನ್ನೇ ಸಿಂಪಡಿಸಿಕೊAಡಿದೀಯ. ಕೋಗಿಲೆ ಥರ ಧ್ವನಿ, ನವಿಲಿನ ಥರ ಮಾಟ. ಸಂಜೆ ಎಷ್ಟು ಗಂಟೆಗೆ ಬಿಡುವಾಗ್ತೀಯ. ಸ್ಪಲ್ಪ ನನ್ನ ಬೆನ್ನಿಗೆ ಮಾಲೀಸು ಮಾಡಬೇಕು’ ಮನಸೂರ ಮಾತು ಮುಗಿಸಿದ. 
ಹುಡುಗಿ ಆತನ ಮಾತಿಗೆ ಬೆಲೆ ಕೊಡಲಿಲ್ಲ. ಇಬ್ಬರಿಗೂ ಬೆನ್ನು ಹಾಕಿ ನಿಂತಿದ್ದ ಹಮೀದ, ಮನಸೂರ ಬಾಲಿಶ ಹೊಗಳಿಕೆಗಳ ಸುರಿಮಳೆ ಸುರಿಸುತ್ತ ಆಕೆಯೊಂದಿಗೆ ಸಮಯ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ತನಗಾದ ಗೊಂದಲದಲ್ಲಿ ಪಾಲಿಶ್ ಡಬ್ಬ ಎಲ್ಲಿದೆ ಎಂಬುದನ್ನೇ ಹಮೀದ ಮರೆತ. ಡಬ್ಬ ಸಿಕ್ಕು ಇತ್ತ ತಿರುಗಿದಾಗ ಅಷ್ಟೂ ಹೊತ್ತು ಹುಡುಗಿ ತನ್ನನ್ನೇ ನೋಡುತ್ತಿದ್ದಳು ಎಂಬುದನ್ನು ಊಹಿಸಿ ಸಡಗರಗೊಂಡ. ನಗುತ್ತ ಡಬ್ಬ ನೀಡಿದಾಗ, ಆಕೆ ಮುಖ ಗಂಟಿಕ್ಕಿಕೊAಡೆ ದುಡ್ಡು ನೀಡಿದಳು. ಮನ್ಸೂರ್ ತನ್ನ ಕಿಸೆಯಲ್ಲಿನ ಚಿಲ್ಲರೆಯೊಂದಿಗೆ ಆಟವಾಡುತ್ತ, ಆಕೆಯನ್ನು ಹೊಗಳುತ್ತ, ಪೋಲಿ ಮಾತುಗಳಿಂದ ಕಿಚಾಯಿಸುತ್ತಿದ್ದರೂ ಅದಕ್ಕೆ ಸೊಪ್ಪು ಹಾಕದ ಆಕೆ ಏನೊಂದೂ ಮಾತನಾಡದೆ ಜಾಗ ಖಾಲಿಮಾಡಿದಳು. 
’ಸರ‍್ಯನ ಕಿರಣ ಕೂಡ ನನ್ನ ಕೆನ್ನೆ ಸೋಕಲಾರದು ಅನ್ನೋ ಅವಳ ಧಿಮಾಕು ನೋಡ್ದ್ಯಾ? ನಿಜ ಅಂದ್ರೆ, ಸುಲಭದಲ್ಲಿ ಕೈಗೆ ದಕ್ಕೋ ಹೆಣ್ಣು’ ತನ್ನ ಮುಖದ ಮೇಲೆ ವಿಚಿತ್ರ ಅಚ್ಚರಿಯ ನಗುವನ್ನು ತಂದುಕೊAಡು ಮನಸೂರ ಹೇಳಿದ. ’ಬಹಳ ಹಿಂದೆ ಒಂದು ಕೈಯಿಂದ ಆಕೆಯ ರುಚಿ ನೋಡಿದೋನೆ ನಾನು. ಎಷ್ಟು ತಗೊಳ್ತಾಳೆ ಅನ್ಕೊಂಡಿದ್ದೀಯ? ಈ ಹೆಂಗುಸರೆ ಹಿಂಗೆ, ಧಿಮಾಕಿನ ನೋಟ, ತಿರಸ್ಕಾರದ ನಗೆ, ಆದ್ರೆ, ಮಾಡೋದು ಮಾತ್ರ . . ಒಂದು ಸಲ ಅವರನ್ನ ಹಾಸಿಗೆಗೆ ಸೆಳೆದೆ, ಒಂದು ಅವರೊಳಗೆ ಸರ‍್ಕೊಂಡೆ ಅನ್ನು ಆವಾಗ ಗೊತ್ತಾಗುತ್ತೆ, ಯಾರು ನಿಜವಾಗಿ ಆಳುವವರು ಅಂತ’ ಮನಸೂರ ಬಡಬಡಿಸುತ್ತಲೇ ಇದ್ದ. 
ಹಮೀದ ಪುರುಷರ ಸಹನೆಯ ಪ್ರತಿನಿಧಿ ಎಂಬAತೆ ಮನತುಂಬಿ ನಕ್ಕ. ಆದರೆ, ದುಡ್ಡು ಬಿಸಾಕಿ ಆ ಹುಡುಗಿಯನ್ನು ಪಡೆಯಲಾಗದು, ಎಂದು ಒಳಗೇ ಅನ್ನಿಸಿತು. ಮನಸೂರ ಎಲ್ಲ ಹುಸಿಮಾತುಗಳೂ ಆಕೆಯ ಗಾಂಭರ‍್ಯ, ಘನತೆ ತುಂಬಿದ ತುಂಬಿದ ನಡತೆ ನಿವಾಳಿಸಿ ಒಗೆಯುತ್ತದೆ, ಎಂದು ಮನಸ್ಸಲ್ಲೇ ಅಂದುಕೊAಡ. ಆತನ ಗಮನವೆಲ್ಲ ಮತ್ತೆ ಮತ್ತೆ ಆ ಹುಡುಗಿಯತ್ತಲೇ ಸುತ್ತತೊಡಗಿತು. ಒಬ್ಬನೇ ಇದ್ದಾಗ ಆಕೆಯೊಂದಿಗೆ ಸರಸವಾಡುತ್ತಿರುವಂತೆಯೂ ಹಮೀದ ಕನಸಿದ. ರಾತ್ರಿ ಅಂಗಡಿಯನ್ನು ಮುಚ್ಚಿದ ಮೇಲೆ, ಪಕ್ಕದ ಅಂಗಡಿಯ ಫಜೀರ್ ಅಜ್ಜನೊಡನೆ ಮಾತಿಗಿಳಿದ. ಅಜ್ಜನಾದರೂ ತನ್ನನ್ನು ತಾನೇ ಸಂಭಾಳಿಸಿಕೊಳ್ಳಲಾರದಷ್ಟು ಹಣ್ಣಾಗಿದ್ದ. ಯಾವಾಗಲೂ ಹಾಸಿಗೆಗೆ ಅಂಟಿರುತ್ತಿದ್ದ. ಹಗಲು ಹೊತ್ತು ಅಲ್ಲೇ ಪಕ್ಕದಲ್ಲಿ ವಾಸಿಸುತ್ತಿದ್ದ ಹೆಂಗಸೊAದು ಅಡುಗೆ ಬೇಯಿಸಿಟ್ಟು ಹೋಗುತ್ತಿದ್ದಳು. ಬದಲಿಗೆ, ದಿನಸಿ ಸಾಮಾನು ಪಡೆದುಕೊಳ್ಳುತ್ತಿದ್ದಳು. ಅಜ್ಜನಿಗೆ ಇರುಳಲ್ಲಿ ಹಮೀದನೊಂದಿಗೆ ಎರಡು ಗಳಿಗೆ ಕಳೆದರೆ ಏನೋ ಸಮಾಧಾನವಾಗುತ್ತಿತ್ತು. ಅವರು ಮಾತಿಗೆ ತೊಡಗಿದಂತೆ ಸಾಯುತ್ತಿರುವ ವಯಸ್ಸಾದ ಮುದುಕನ ಸಾವಿನ ವಾಸನೆ ಕೋಣೆಯನ್ನು ತುಂಬಿತು. ಹಾಗೆ ನೋಡಿದರೆ, ಕಮ್ಮಿಯಾಗುತ್ತಿರುವ ವ್ಯಾಪಾರ, ಆರೋಗ್ಯ ಸುಧಾರಿಸಲು ಮಾಡುತ್ತಿರುವ ಪ್ರಾರ್ಥನೆ ಇಂಥವು ಬಿಟ್ಟರೆ ಮಾತಾಡುವಂಥದ್ದೇನೂ ಇರುತ್ತಿರುತ್ತಿರಲಿಲ್ಲ. ಉತ್ಸಾಹ ಪೂರ್ತಿ ಕುಂದಿದಾಗ ಫಜೀರ್ ಅಜ್ಜ ತನ್ನ ಸಾವಿನ ಬಗ್ಗೆ, ಆಲೋಕದಲ್ಲಿ ಕಾದಿರುವ ಬದುಕಿನ ಬಗ್ಗೆ ಮಾತಿಗೆ ಬೀಳುತ್ತಿದ್ದ. ಆಗ ಹಮೀದ್ ಅಜ್ಜನನ್ನು ಎಬ್ಬಿಸಿ, ಬಚ್ಚಲು ಮನೆಗೆ ಕರೆದೊಯ್ದು ಕಾಲು ತೊಳೆಸಿ ಕರೆತಂದು ಮಲಗಿಸುತ್ತಿದ್ದ. 
ಹಮೀದ್, ಅಂಗಡಿಯೊಳಗೇ ಹಿತ್ತಲಿನಂತಿದ್ದ ಜಾಗದಲ್ಲಿ ಮಲಗುತ್ತಿದ್ದ. ಇರುಳೆಲ್ಲ ಏಕಾಂಗಿಯಾಗಿ, ಎಲ್ಲೂ ಹೊರಗೆ ಹೋಗದೆ ಕಳೆಯುತ್ತಿದ್ದ. ಹಿಂದೆ, ಫಜೀರ್ ಅಜ್ಜ ಹಾಸಿಗೆ ಕಚ್ಚುವ ಮೊದಲು ಅಲ್ಲಲ್ಲಿ ಹೋಗುತ್ತಿದುದುಂಟು. ಪ್ರತಿ ಶುಕ್ರವಾರ ನಮಾಜಿಗೂ ತೆರಳುತ್ತಿದುದುಂಟು. ಆದರೆ, ಈ ಒಂದು ವರ್ಷದಿಂದಲAತೂ ಆತ ಹೊರಗೆ ಅಡಿಯಿಟ್ಟಿರಲಿಲ್ಲ. ಹಮೀದನಿಗೆ ಮಸೀದಿಯಲ್ಲಿನ ಜನರ ಗೌಜು, ಮಳೆಯಿಂದ ನೆನೆಯುತ್ತಿದ್ದ ಮೆಟ್ಟಿಲು ನೆನಪಾದವು. ಹಿಂದೊಮ್ಮೆ, ಮಸೀದಿಯಿಂದ ಮನೆಗೆ ಮರಳುವಾಗ ಅವರು ಮಾರುಕಟ್ಟೆಗೆ ಹೋದದ್ದು, ಅಜ್ಜ ಬಣ್ಣಬಣ್ಣದ ತರಕಾರಿ, ಹಣ್ಣುಗಳನ್ನು ಮುಟ್ಟಿಸಿ ಅವುಗಳ ಸುಗಂಧ, ಮೃದುತನವನ್ನು ಅನುಭವಿಸುವಂತೆ ಮಾಡಿದ್ದು, ನೆನಪಿಗೆ ಬಂತು. ಈ ಪಟ್ಟಣಕ್ಕೆ ಬಂದ ಎಳಿವೆಯಿಂದ ಹಮೀದ್ ಅಜ್ಜನ ಬಳಿ ಕೆಲಸ ಮಾಡಿದ್ದ. ಅಜ್ಜ ಆತನಿಗೆ ಉಳಿಯಲು ಜಾಗ ಕೂಡ ನೀಡಿದ್ದ. ರಾತ್ರಿ ಒಬ್ಬನೇ ಉಳಿದಾಗ ಅಮ್ಮ, ಅಪ್ಪ, ತಾನು ಹುಟ್ಟಿದ ಊರಿನ ನೆನಪು ಮುತ್ತುತ್ತಿದ್ದವು. ಈಗ ಆತನೇನೂ ಬಾಲಕನಾಗಿರದಿದ್ದರೂ ಅಂತಹ ನೆನಪು ಬಂದಾಗಲೊಮ್ಮೆ ಕಣ್ಣೀರು ಹನಿಸುತ್ತಿದ್ದ. ನೆನಪುಗಳು ಆತನನ್ನು ಹಿಂಡಿಹಿಪ್ಪೆ ಮಾಡಿಬಿಡುತ್ತಿದ್ದವು. 
*
ಹುಡುಗಿ ಮತ್ತೊಮ್ಮೆ ಸಕ್ಕರೆ, ತರಕಾರಿ ಕೊಳ್ಳಲು ಅಂಗಡಿಗೆ ಬಂದಾಗ, ಹಮೀದ ತೂಕ ಮಾಡುವಾಗ ತುಸು ಧಾರಾಳಿಯೇ ಆಗಿದ್ದ. ಅದನ್ನು ಗಮನಿಸಿದ ಆಕೆ ಮುಗುಳು ಚೆಲ್ಲಿದಳು. ಆಕೆಯ ನಗುವಿನಲ್ಲಿ ಒಂಚೂರು ಕೊಂಕು ಅಂಟಿರುವುದನ್ನು ಕಂಡಿದ್ದರೂ ಹಮೀದ ತುಂಬು ಖುಷಿಯನ್ನೇ ಅನುಭವಿಸಿದ್ದ. ಮುಂದಿನ ಸಲ ಬಂದಾಗ ಆಡಿದ್ದು ಒಂದೇ ಮಾತಾಗಿದ್ದರೂ ಪ್ರಸನ್ನಳಾಗಿದ್ದು ಆತನ ಸಂತಸವನ್ನು ಮತ್ತಷ್ಟು ಹೆಚ್ಚಿಸಿತ್ತು. ಇನ್ನೊಮ್ಮೆ ವ್ಯಾಪಾರಕ್ಕೆ ಬಂದಾಗ ತನ್ನ ಹೆಸರು ರುಕಿಯಾ ಎಂದೂ, ತನ್ನ ಸಂಬAಧಿಕರೊAದಿಗೆ ವಾಸ ಮಾಡಲು ಇತ್ತೀಚೆಗಷ್ಟೇ ಇಲ್ಲಿಗೆ ಬಂದಿರುವುದಾಗಿಯೂ ಆಕೆ ಹೇಳಿದ್ದಳು. 
’ನಿಮ್ಮ ಮನೆ ಎಲ್ಲಿ?’ ಸಹಜವಾಗಿ ಹಮೀದ ಮಾತು ಬೆಸೆದಿದ್ದ.
’ಇಳುಕಲಿನ ತೋಪಿನಾಚೆ’ ತುಂಬ ದೂರ ಎನ್ನುವಂತೆ ತನ್ನ ಕೈಗಳನ್ನು ಚಾಚಿ ಆಕೆ ಹೇಳಿದ್ದಳು. 
ಒಮ್ಮೆ ಹಗಲಿನಲ್ಲಿ ಬಂದಾಗ ಆಕೆ ತೊಟ್ಟಿರುವ ನೀಲಿಬಟ್ಟೆಗಳಿಂದ ಮನೆವಾರ್ತೆಯ ಕೆಲಸಗಾರ್ತಿ ಎಂದು ಹಮೀದ ಅಂದಾಜಿಸಿದ್ದ. ’ನೀನು ಕೆಲಸ ಮಾಡುವುದು ಎಲ್ಲಿ?’ ಎಂದು ಆತ ಕೇಳಿದಾಗ, ಅದೇನು ಅಷ್ಟು ಮುಖ್ಯವಲ್ಲ ಎನ್ನುವಂತೆ ಆಕೆ ಗಂಟಲನ್ನು ಸರಿಮಾಡಿಕೊಳ್ಳುವ ನಾಟಕ ಮಾಡಿದ್ದಳು. ’ಒಂದು ಒಳ್ಳೇ ಕೆಲಸ ಸಿಕ್ಕುವವರೆಗೂ ಯಾವುದಕ್ಕೂ ಇರಲಿ ಅಂತ ಇಲ್ಲೇ ಪಟ್ಟಣದ ಹೊಟೇಲೊಂದರಲ್ಲಿ ಕೆಲಸ ಮಾಡ್ತಾ ಇದೀನಿ’, ಎಂದು ಹೇಳಿದ್ದಳು. 
’ಹೊಟೇಲ್ ಬೃಂದಾವನ. ಈ ಪಟ್ಟಣದಲ್ಲೇ ಹೆಸರುವಾಸಿ. ಅಲ್ಲಿ ಈಜುಕೊಳ ಇದೆ, ಆಮೇಲೆ, ಇಡೀ ಹೊಟೇಲಿಗೆ ಕೆಂಪು ಹಾಸು ಹಾಕಿದ್ದಾರೆ, ಗೊತ್ತ.’ ಅಂದಿದ್ದಳು.
ರಾತ್ರಿ ಅಂಗಡಿ ಮುಚ್ಚಿದ ಮೇಲೆ ಹಮೀದ, ಹಿತ್ತಲಿಗೆ ಹೋಗುವ ಮೊದಲು ಬಾಗಿಲಲ್ಲಿ ನಿಂತ. ರಸ್ತೆಗಳೆಲ್ಲ ನಿರ್ಜನವಾಗಿದ್ದು, ಬರೀ ಮೌನ ತುಂಬಿತ್ತು. ಮತ್ತೆ ಮತ್ತೆ ರುಕಿಯಾ ಮನಸ್ಸನ್ನು ತುಂಬಿದಳು. ಇದರಿಂದ ಆತನ ಒಂಟಿತನ ಇನ್ನಷ್ಟು ಜಾಗ್ರತಗೊಂಡು, ತನ್ನ ಶ್ವಪಚತನವನ್ನು ಎಚ್ಚರಗೊಳಿಸಿತು ಅಷ್ಟೇ ಎಂದು ಅವನಿಗೆ ಅನಿಸತೊಡಗಿತು. ಮೊದಲ ಭೇಟಿಯಲ್ಲಿ ಕತ್ತಲೆಯಲ್ಲಿ ಕರಗುತ್ತ ತನ್ನನ್ನು ಆಕೆ ನೋಡಿದ ಬಗೆ ನೆನಪಿಗೆ ಬಂತು. ಹಮೀದ ಆಕೆಯನ್ನು ಮುಟ್ಟ ಬಯಸಿದ್ದ. . . ವರ್ಷಗಳ ಒಂಟಿತನ ತನ್ನನ್ನು ಆ ಭಾವನೆಗೆ ತಳ್ಳುತ್ತಿದೆ ಎಂದುಕೊAಡ ಆತ, ಈ ಅಪರಿಚಿತ ನಗರದ ಮೌನ ತುಂಬಿಕೊAಡ ರಸ್ತೆಗಳನ್ನೇ ನಿಟ್ಟಿಸಿದ. ಅಪರಿಚಿತ ಹುಡುಗಿಯೊಬ್ಬಳನ್ನು ಮುಟ್ಟುವುದೇ ತನ್ನ ಬದುಕಿಗೆ ಬಿಡುಗಡೆ ತಂದುಕೊಡುತ್ತದೆ ಎಂದು ತನ್ನಲ್ಲೇ ಪ್ರತಿಪಾದಿಸಿಕೊಂಡ. 
*
ಒಂದಿರುಳು ರಸ್ತೆಗಡಿಯಿಟ್ಟವನೇ ಬೆನ್ನಹಿಂದಿನ ಬಾಗಿಲನ್ನು ಎಳೆದುಕೊಂಡ. ನಿಧಾನಕ್ಕೆ ದೀಪದ ಕಂಬದ ಬಳಿ ನಡೆದ. ಹಾಗೆ ಕಂಬಗಳನ್ನು ದಾಟುತ್ತ ನಡೆದ. ಅಚ್ಚರಿ ಎಂಬAತೆ ಆತನಿಗೆ ಗಾಬರಿಯಾಗಲಿಲ್ಲ. ಏನೋ ಸರಿದಂತಾದರೂ ತಿರುಗಿ ನೋಡಲಿಲ್ಲ. ತಾನು ಎಲ್ಲಿ ಹೋಗುತ್ತೇನೆ ಎಂಬುದೇ ಗೊತ್ತಿಲ್ಲದಿರುವುದರಿಂದ ಅಂಜಿಕೆ ಇನ್ನೇಕೆ ಎಂದುಕೊAಡ. ಅಂಥ ಭಾವನೆ ಭದ್ರತೆ ನೀಡಿತು. 
ದೀಪಗಳು ಬೆಳಗುತ್ತಿದ್ದ ಸಾಲು ಅಂಗಡಿಗಳ ಕಡೆಗೆ ಹಮೀದ್ ಹೆಜ್ಜೆ ಹಾಕಿದ. ಬಳಿಕ ಬೆಳಕಿನಿಂದ ತಪ್ಪಿಸಿಕೊಳ್ಳಲೋ ಎಂಬAತೆ ಮೂಲೆಗೆ ನಡೆದ. ವೃತ್ತದಲ್ಲಿ ಹಾಕಿದ್ದ ಬೆಂಚಿನ ಮೇಲೆ ತುಸು ಹೊತ್ತು ಕುಳಿತ. ಎಲ್ಲವೂ ಎಷ್ಟೊಂದು ಪರಿಚಿತ ಎಂಬ ಭಾವನೆ ಉಕ್ಕಿಬಂದಿತು. ವೃತ್ತದ ಮಧ್ಯೆ ಗಡಿಯಾರದ ಗೋಪುರವಿತ್ತು. ಬಸ್ಸುಗಳನ್ನು ಸರತಿಯಲ್ಲಿ ನಿಲ್ಲಿಸಿದ್ದರು. ದೂರದಲ್ಲಿ ಉಕ್ಕುತ್ತಿದ್ದ ಕಡಲಿತ ಭರತಿಯ ಸದ್ದು ಅವನ ಕಿವಿ ತುಂಬಿತು. ಕಡಲು ತನ್ನಿಂದ ಬಹಳ ದೂರವೇನೂ ಇಲ್ಲ ಎಂದು ತಿಳಿಯಿತು. ನೀರಿನ ವಾಸನೆ ಆತನ ತಂದೆಯ ಊರನ್ನು ನೆನಪಿಗೆ ತಂದಿತು. ಕಡಲಿನ ಭರತಿಯನ್ನು ತಡೆಯಲು ಕಟ್ಟಿದ ಗೋಡೆಯ ತಳಕ್ಕೆ ನೀರು ಬಂದು ಬಡಿದು ತುಳುಕುವ ಸದ್ದು ಕಿವಿಗೆ ಹಿತವಾಗಿತ್ತು. 
ದಂಡೆಯ ಗುಂಟ ದೀಪಗಳು ಬೆಳಗುತ್ತಿದ್ದವು. ಕತ್ತಲಿನಲ್ಲಿ ಅಲ್ಲೊಂದು ಮಿಣುಕು ಎಂಬAತೆ ಹೊಸ ಬೆಳಕು ಮಿಂಚುತ್ತಿತ್ತು. ಯಾರು ಬದುಕು ನಡೆಸುತ್ತಿರಬಹುದು ಅಲ್ಲಿ? ಎಂದು ಹಮೀದ ಅಚ್ಚರಿಗೊಂಡ. ಆತನ ಮೈಯಲ್ಲಿ ಛಳಕು. ನಗರದ ಕತ್ತಲು ತುಂಬಿದ ಆ ಮೂಲೆಯಲ್ಲಿ ಯಾರು ವಾಸಿಸುತ್ತಿರಬಹುದು? ಕ್ರೂರ ಮುಖಗಳ ಕಟ್ಟುಮಸ್ತಾದ ಗಂಡಸರು ಆತನ ಕಲ್ಪನೆಯನ್ನು ತುಂಬಿ ಗಹಗಹಿಸಿ ನಕ್ಕರು. ಮಂದ ಬೆಳಕಿನಲ್ಲಿ ನೆರಳುಗಳು ಅಪರಿಚಿತನಿಗಾಗಿ ಕಾಯುತ್ತಿರುವಂತೆ ಕಂಡವು. ಗಂಡಸರು-ಹೆAಗಸರು ದೇಹದ ಮೇಲೆ ಕಿಕ್ಕಿರಿದಿದ್ದರು. ಅವರ ಕಾಲುಗಳು ಪುರಾತನ ಸಂಪ್ರದಾಯವೊAದಕ್ಕೆ ತಾಳ ಹಾಕುತ್ತಿರುವುದನ್ನು ಆತ ಕಂಡ. ಅವರ ಚೀತ್ಕಾರಗಳು ಮುಗಿಲು ಮುಟ್ಟಿದ್ದೇ ಅವರ ಶತ್ರುಗಳ ನೆತ್ತರು ನೆಲದಲ್ಲಿ ಹರಿದಾಡಿತು. ದಡದಾಚೆಯಿದ್ದ ಮಾನವರು ಕೇವಲ ದೈಹಿಕವಾಗಿ ಮಾತ್ರ ದಿಗಿಲು ಹುಟ್ಟಿಸುವಂತಿರಲಿಲ್ಲ. ಅವರಿಗೆ ತಾವು ಎಲ್ಲಿದ್ದೇವೆ ಎಂದು ತಿಳಿದಿದೆ ಎಂಬAತೆ ಆ ಅಂಜಿಕೆಯಿತ್ತು. ಆತ ಮಾತ್ರ, ಇದೀಗ ಇಲ್ಲಿ ಇದ್ದ. 
ಆತ ಲಗುಬಗೆಯಲ್ಲಿ ಅಂಗಡಿಯತ್ತ ಹೆಜ್ಜೆ ಹಾಕಿದ. ಮನಸ್ಸಿನಲ್ಲಿ ಏನನ್ನೋ ಮಾಡಿ ತೀರುವ ಸಂಕಲ್ಪ ಇದ್ದಂತಿತ್ತು. ಅಂಗಡಿಯನ್ನು ಮುಚ್ಚಿ, ಫಜೀರ್ ಅಜ್ಜನ ದಿನಕರ್ಮ ಮುಗಿಸಿದ್ದೇ ಕಡಲತಡಿಗೆ ಹೋಗುವುದು ಆತನ ದಿನದ ಅಭ್ಯಾಸವಾಯಿತು. ಅಜ್ಜನಿಗೆ ಇದೇನು ಇಷ್ಟವಾಗದೇ, ನನ್ನನ್ನು ಒಂಟಿಯಾಗಿ ಬಿಟ್ಟು ಎಲ್ಲೋ ಹೋಗ್ತೀಯ ಎಂದು ಗೊಣಗುತ್ತಿದ್ದ. ಆದರೆ, ಹಮೀದ, ಇವಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಹಗಲಿನಲ್ಲಿ ತನ್ನ ಮನಸ್ಸನ್ನು ತುಂಬಿದ ಹುಡುಗಿಗಾಗಿ ಕಾಯುತ್ತ ಕುಳಿತಿರುತ್ತಿದ್ದ. ಇರುಳಲ್ಲಿ ಒಂಟಿಯಾಗಿ ರಸ್ತೆಗಳನ್ನು ತುಳಿವಾಗ ಆಕೆ ತನ್ನೊಂದಿಗೆ ಇದ್ದಾಳೆ ಎಂಬAತೆ ಕನಸುತ್ತಿದ್ದ. ಆಕೆಯ ಕೊರಳ ಸುತ್ತ ಕೈಗಳನ್ನು ಬಳಸಿ ಆಕೆಯೊಂದಿಗೆ ನಡೆಯುತ್ತಿರುವಂತೆ ಕಲ್ಪಿಸಿಕೊಂಡು ಸುಖಿಸುತ್ತಿದ್ದ. ಆಕೆ ಅಂಗಡಿಗೆ ಕೊಳ್ಳಲು ಬಂದಾಗಲೆಲ್ಲ, ಏನಾದರೂ ಒಂದಿಷ್ಟು ಕೊಸರು ಸೇರಿಸಿ, ಆಕೆಯ ಹಸನ್ಮುಖವನ್ನು ನಿರೀಕ್ಷಿಸುತ್ತಿದ್ದ. ಆಗೀಗ, ನಗು, ಒಂದೆರಡು ಸಲುಗೆಯ ಮಾತು ಅವರ ನಡುವೆ ಘಟಿಸುತ್ತಿದ್ದವು. ಮಾತ್ರವಲ್ಲ, ವಿಶೇಷ ಗಿರಾಕಿಗಳಿಗೆಂದು ತೆಗೆದಿಟ್ಟಿರುತ್ತಿದ್ದ ಸರಂಜಾಮನ್ನು ವಿಶೇಷ ಕಾಳಜಿಯೆಂಬAತೆ ಹಮೀದ ಆಕೆಗೆ ನೀಡುತ್ತಿದ್ದ. ತುಸು ಧರ‍್ಯ ಬಂದಾಗಲೆಲ್ಲ ಆಕೆಯ ಚೆಲುವು-ನಿಲುವುಗಳನ್ನು ಮೃದು ಮಾತುಗಳಲ್ಲಿ ಹೊಗಳುತ್ತಿದ್ದ. ಆಕೆಯಿಂದ ಹೊಳೆವ ನಗು ಸಿಕ್ಕಾಗ, ಇದರರ್ಥವೇನು ಎಂದು ಮತ್ತೆ ಗೊಂದಲಕ್ಕೆ ಒಳಗಾಗುತ್ತಿದ್ದ. ಮನಸೂರ ಹುಡುಗಿಯ ಕುರಿತು ಹೇಳುತ್ತಿದ್ದ ಗಾಳಿಮಾತನ್ನು ನೆನಪಿಸಿಕೊಂಡು ಹಮೀದ ತನ್ನಲ್ಲೇ ನಗುತ್ತಿದ್ದ. ಕೇವಲ ಕೆಲವು ದುಡ್ಡಿಗೆ ಸೆರಗು ಹಾಸುವ ಹುಡುಗಿಯಲ್ಲ ಈಕೆ. ಬದಲಿಗೆ, ಅನುರಾಗ, ಗಂಡೆದೆಯ ಮೂಲಕ ಗೆಲ್ಲಬೇಕಾದ ಬಾಲೆ ಎಂದು ಸಮರ್ಥಿಸಿಕೊಳ್ಳುತ್ತಿದ್ದ. 
*
ಒಂದು ಇಳಿಸಂಜೆ ರುಕಿಯಾ ಸಕ್ಕರೆ ಕೊಳ್ಳಲೆಂದು ಹಮೀದನ ಅಂಗಡಿಗೆ ಬಂದಳು. ಆಕೆಯಿನ್ನೂ ತನ್ನ ಕೆಲಸದ ಸಮಯದಲ್ಲಿ ತೊಡುವ ನೀಲಿ ಸಮವಸ್ತ್ರದಲ್ಲಿಯೇ ಇದ್ದಳು. ಕಂಕುಳ ಬೆವರಿನಿಂದ ತೊಯ್ದಿದ್ದವು. ಅಂಗಡಿಯಲ್ಲಿ ಬೇರಾರೂ ಗಿರಾಕಿಗಳಿರಲಿಲ್ಲ. ಆಕೆ ಕೂಡ ಏನೂ ಅವಸರದಲ್ಲಿರುವಂತೆ ಕಾಣಲಿಲ್ಲ. ಆಕೆ ಹಮೀದನನ್ನು ಹಗುರವಾಗಿ ಚುಡಾಯಿಸಿದಳು. ’ನೀನು ಎಷ್ಟೊಂದು ಕಷ್ಟಪಟ್ಟು ಕೆಲಸ ಮಾಡ್ತೀಯ’, ಎಂದು ಪೂಸಿ ಹೊಡೆದಳು.
’ದಿನದ ಇಷ್ಟೊಂದು ಸಮಯ ಅಂಗಡಿಯಲ್ಲಿ ಕಳೀತಿಯಲ್ಲ. ನೀನು ತುಂಬಾ ದುಡೀತಿರಬೇಕು. ಚೆನ್ನಾಗಿ ಕಾಸೂ ಮಾಡಿರಬಹುದು, ಅಲ್ವ? ನಿನ್ನ ಕಾಸನ್ನೆಲ್ಲ ಕೂಡಿಡೋಕೆ ಹಿತ್ತಲಲ್ಲಿ ತಿಜೋರಿನೂ ಇಟ್ಟಿರಬಹುದು ಅಲ್ವ? ವ್ಯಾಪಾರಿಗಳ ಹತ್ರ ತಿಜೋರಿ ಇರೋದನ್ನ ಎಲ್ಲರೂ ಬಲ್ಲರು. ದುಡ್ಡು ಉಳಿಸಿ ವಾಪಸ್ಸು ಊರಿಗೆ ಹೋಗಿ ಬದುಕು ಕಟ್ಟಿಕೋಬೇಕೂಂತ ಯೋಚನೆಯ? ಎಂದೆಲ್ಲ ಮಾತು ಹರಿಸಿದಳು.
’ನನ್ನ ಹತ್ರ ಎಂಥದ್ದೂ ಇಲ್ಲ. ಇಲ್ಲಿರೋದು ಯಾವುದೂ ನನಗೆ ಸೇರಿದ್ದಲ್ಲ.’ ಆತ ದುಃಖದಿಂದ ಎಂಬAತೆ ಸ್ಫೋಟಗೊಂಡ. 
ಆಕೆ ನಂಬಲು ಅಸಾಧ್ಯವೆನ್ನುವಂತೆ ಕಣ್ಣು ಅಲಗಿಸಿದಳು. ’ಆದರೆ, ನೀನು ಎಷ್ಟೊಂದು ಕಷ್ಟ ಪಡ್ತೀಯ ಅಲ್ವ?’ ಎಂದು. ’ನಿನಗೆ ಕುಶಾಲು ಮಾಡೋಕೆ ಬರೋಲ್ಲ’ ಎನ್ನುತ್ತ, ಹಮೀದ, ಕೊಸರಿನ ಸಕ್ಕರೆ ಹಾಕುತ್ತಿರುವುದನ್ನು ಗಮನಿಸಿ ನಕ್ಕಳು. 
’ತುಂಬಾ ಥ್ಯಾಂಕ್ಸ್’ ಎಂದು ಆತನಿಂದ ಪೊಟ್ಟಣ ತೆಗೆದುಕೊಳ್ಳಲು ಬಾಗಿದಳು. ಅಗತ್ಯಕ್ಕಿಂತ ಒಂದು ಕ್ಷಣ ಹೆಚ್ಚಿಗೆಯೇ ಹಾಗೇ ಬಾಗಿ, ನಿಧಾನಕ್ಕೆ ಹಿಂದೆ ಸರಿದಳು. ’ನೀನು ಯಾವಾಗಲೂ ಒಂದಲ್ಲ ಒಂದನ್ನು ನನಗಾಗಿ ಕೊಡ್ತಾನೇ ಇದೀಯ. ಅದಕ್ಕೆ ಪ್ರತಿಯಾಗಿ ಏನೋ ಅಪೇಕ್ಷಿಸುತ್ತೀಯ ಅಂತನೂ ಗೊತ್ತು. ಹಾಗಿದ್ದಾಗ, ಈ ಸಣ್ಣಪುಟ್ಟ ವಸ್ತುಗಿಂತ ದೊಡ್ಡದಾಗಿರೋದನ್ನ ಏನಾದ್ರೂ ಕೊಡಬೇಕು’.
ಹಮೀದ ಪ್ರತಿಯಾಗಿ ಏನು ಹೇಳಲಿಲ್ಲ. ಅವಮಾನದಿಂದ ಆತನ ಮೈ ತುಂಬಿ ತುಲುಕುತ್ತಿತ್ತು. ಹುಡುಗಿ ಹಗುರವಾಗಿ ನಕ್ಕು, ನಿಧಾನಕ್ಕೆ ನಡೆದಳು. ಕತ್ತಲಿನಲ್ಲಿ ಕರಗುವ ಮೊದಲು ಆತನನ್ನು ಕುಹಕದಿಂದ ಎಂಬAತೆ ನೋಡುತ್ತ ಹಲ್ಲು ಕಿರಿದಳು. 
*