ಈಗ ಈ ಗಾಂಧೀ ಕತೆ ಏನು?

ಈಗ ಈ ಗಾಂಧೀ ಕತೆ ಏನು?
ಈಗ ಈ ಗಾಂಧೀ ಕತೆ ಏನು?
ಈಗ ಈ ಗಾಂಧೀ ಕತೆ ಏನು?

ಈತ ಫಿರೋe಼ï ವರುಣ್ ಗಾಂಧಿ, ಹೌದು ಅಪ್ಪ ಸಂಜಯ ಗಾಂಧಿಯAತೇ ನೇರಾ ನೇರ, ತಾತನ ಹೆಸರನ್ನೂ ಸೇರಿಸಿಕೊಂಡು ಹೆಸರು ಹೇಳಿಕೊಳ್ಳಲು ಹಿಂಜರಿಯದ ದಿಟ್ಟ. ಅಮ್ಮನ ನೆರಳಿಂದ ಹೊರಬಂದು ಸ್ವತಂತ್ರ ನಡೆ, ನುಡಿಯೊಂದಿಗೆ ನಡೆಯತೊಡಗಿದ್ದಾನೆ, ಪರಿಣಾಮ ಅಮ್ಮ ಮನೇಕಾ ಗಾಂಧಿ ಸಹಿತ ಬಿಜೆಪಿ ರಾಷ್ಟಿçÃಯ ಕರ‍್ಯಕಾರಿ ಸಮಿತಿಯಿಂದ ಮೊನ್ನೆ ಈತನನ್ನು ಹೊರಹಾಕಲಾಗಿದೆ. ಉತ್ತರ ಪ್ರದೇಶದ ಲಖೀಂಪುರದಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ ಮಿಶ್ರಾ ಮತ್ತವನ ಕೊಲೆಗಡುಕ ಮಗ ಆಶೀಶ್ ಮಿಶ್ರಾ ಅವರ ಕೃತ್ಯವನ್ನು ಖಂಡಿಸಿದ್ದೇ ಈ ವರುಣ್ ಮಾಡಿದ ತಪ್ಪು, ಹೀಗೆ ಇಂಥಾ ತಪ್ಪು ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಗಲಿದೆ.
-ಸಂಪಾದಕ
ವ್ಯಕ್ತಿ-ವ್ಯಕ್ತಿತ್ವ 

ಸುರೇಶ್ ಕಂಜರ್ಪಣೆ

ಈಗ ಈ ಗಾಂಧೀ ಕತೆ ಏನು?

ಈಗ ವರುಣ ಗಾಂಧಿ ಬಗ್ಗೆ ಸ್ವಲ್ಪ ವಿವರ ಓದಿ! ಇದು ಈತನನ್ನು ಈಗ ವೈಭವೀಕರಿಸಲು ಅಲ್ಲ. ಇತಿಹಾಸ, ಕುಟುಂಬ ರಾಜಕೀಯಗಳ ಭಾರದಿಂದ ರೂಪುಗೊಂಡವನೊಬ್ಬ ನಿಧಾನಕ್ಕೆ ತನ್ನ ಹೆಜ್ಜೆ ಗತಿ ಗುರುತಿಸಿಕೊಂಡ ಬಗ್ಗೆ.
 ವರುಣ ಗಾಂಧಿಗೆ ಮೂರು ತಿಂಗಳಾಗಿದ್ದಾಗ ಆತನ ತಂದೆ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಮೃತಪಟ್ಟರಷ್ಟೇ. ಸಂಜಯ್ ಬದುಕಿದ್ದರೆ ಇಂದಿರಾ ಆಯ್ಕೆ ಆತನೇ ಆಗಿರುತ್ತಿದ್ದ! ಇದೇ ತರ್ಕದ ಪ್ರಕಾರ ವರುಣ್ ಕಾಂಗ್ರೆಸ್ಸಿನ ಪರಮೋಚ್ಛ ನಾಯಕನೂ ಆಗುತ್ತಿದ್ದ! ಇಂದಿರಾ ಕೊಲೆ ಆಗಿದ್ದೇ ಕಾಂಗ್ರೆಸ್ ನಾಯಕತ್ವ ರಾಜೀವ್ ಗೆ ಒಲಿಯಿತು. ಈ ವಂಶಪಾರAಪರ್ಯ ಸಿದ್ಧಾಂತದ ದಾಸನಾಗಿರುವ ಕಾಂಗ್ರೆಸ್ ರಾಜೀವ್ ಮರಣದ ತರುವಾಯ ರಾಹುಲ್ ತಲೆಗೆ ನಾಯಕತ್ವ ಕಟ್ಟಿ ಕೂತಿದೆ.ಇರಲಿ,
 ಈಗ ಈ ಗಾಂಧೀ ಕತೆ ಏನು?
 ಸಂಜಯ್ ಮರಣದ ಬಳಿಕ ಎಲ್ಲಾ ಮನೆಗಳಲ್ಲಿ ನಡೆಯುವ ಅತ್ತೆ-ಸೊಸೆ ಮುನಿಸಿನ ಕಾರಣಕ್ಕೇ ಮನೇಕಾ ಕಾಂಗ್ರೆಸ್ಸಿನಿAದಾಚೆ ಕಾಲಿಟ್ಟು ಕಾಂಗ್ರೆಸ್ ವಿರೋಧೀ ಪಾಳೆಯದ ಪ್ರಮುಖ ನಾಯಕಿಯಾಗಿ ಮಂತ್ರಿಯಾಗಿದ್ದೂ ಆಯಿತು. ಆಮೇಲೆ ಕಾಂಗ್ರೆಸ್ ಜೊತೆ ಉಳಿದ ಪಕ್ಷಗಳು ಗುರುತಿಸಿಕೊಂಡ ಬಳಿಕ ಮನೇಕಾ ಹಾದಿ ಭಾಜಪದೆಡೆಗೆ ಸರಿಯಿತು. ಜೊತೆಗೆ ಮಗನನ್ನೂ ಈ ಕೋಮು ಪಕ್ಷದೊಳಕ್ಕೆ ಸೇರಿಸಲಾಯಿತು. ಸ್ವತಃ ವರುಣ ಗಾಂಧಿಗೆ ಈ ಬಗ್ಗೆ ಯಾವ ಮುಜುಗರವೂ ಇರಲಿಲ್ಲ. 2009ರಲ್ಲಿ ಪಕ್ಕಾ ಭಾಜಪಗಳಿಗಿಂತಲೂ ವಕ್ರವಾಗಿ ಈತ ಮುಸ್ಲಿಮರ ವಿರುದ್ಧ ಮಾತಾಡಿದ್ದ. ಸಂಸದನಾಗಿ ಗೆಲ್ಲುತ್ತಲೇ ಬಂದ.
 ವರುಣ್ ತನ್ನ ಇಪ್ಪತ್ತನೇ ವಯಸ್ಸಿಗೆ ತನ್ನ ಮೊದಲ ಕವನ ಸಂಕಲನ ತಂದಿದ್ದ. ವಾಜಪೇಯಿ ಈತನ ಬಗ್ಗೆ ಕುತೂಹಲ ತಳೆದಿದ್ದು ಇದೇ ಕಾರಣಕ್ಕೆ. ಇದಾಗಿ 15 ವರುಷಗಳ ಬಳಿಕ 2ನೇ ಕವನ ಸಂಕಲನ ಪ್ರಕಟಿಸಿದ್ದ. ವರುಣ ಗಾಂಧಿ ಅಲ್ಲವೇ? ದೊಡ್ಡ ಪ್ರಕಾಶಕರೇ ಅದನ್ನು ಪ್ರಕಟಿಸಿದರು! ಆದರೆ ಕವನಗಳಲ್ಲಿ ತೀವ್ರ ಆತ್ಮ ನಿರೀಕ್ಷಣೆಯ ಆಯಾಮ ಇದೆ ಎಂದು ಒಂದಷ್ಟು ವಸ್ತುನಿಷ್ಠ ವಿಮರ್ಶಕರು ಹೇಳಿದ್ದಾರೆ. ಇಂತಿಪ್ಪ ವರುಣ್ ಕಳೆದ ಕೆಲವು ವರ್ಷಗಳಿಂದ ಹೆಚ್ಚು ಹೆಚ್ಚು reflective ಆಗುತ್ತಾ ಬಂದಿರುವುದನ್ನು ಹಲವಾರು ಜನ ಗಮನಿಸಿದ್ದಾರೆ. ಗದ್ದಲದ ರಾಜಕೀಯದಿಂದ ದೂರ ಸರಿದಿದ್ದಾನೆ. 
 ತನ್ನ ಸಂಸದರ ನಿಧಿಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಹಾಯ ಮಾಡಿ ಕ್ರೌಡ್ ಫಂಡಿAಗ್ ಮೂಲಕ ಸುಸ್ಥಿರ ಬದುಕಿನ ವ್ಯವಸ್ಥೆ ಮಾಡಿದ್ದಾನೆ. ಅತ್ಯಂತ ಸಮರ್ಪಕವಾಗಿ ತನ್ನ ನಿಧಿಯನ್ನು ವೆಚ್ಚ ಮಾಡಿದ ಬೆರಳೆಣಿಕೆ ಸಂಸದರಲ್ಲಿ ವರುಣ್ ಕೂಡಾ ಒಬ್ಬ. 2015ರ ಬಳಿಕ ವರುಣ್ ಗ್ರಾಮೀಣ ಕೃಷಿ ಬಿಕ್ಕಟ್ಟಿನ ಬಗ್ಗೆ ಹೆಚ್ಚು ಅಧ್ಯಯನ ಶುರು ಮಾಡಿದ್ದಾನೆ. ಇಂಗ್ಲೆAಡಿನ ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್ ನಲ್ಲಿ ಓದಿದವನು ವರುಣ. ಉತ್ತರ ಭಾರತದಾದ್ಯಂತ ಮತ್ತು ಅಸ್ಸಾಮಿನಲ್ಲೂ ವಿಸ್ತೃತವಾಗಿ ಓಡಾಡಿ ಕೃಷಿ ಭಾರತದ ಬಗ್ಗೆ ಇರುವ ಪ್ರಮೇಯಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ ಫಲವೇ ಖuಡಿಚಿಟ ಒಚಿಟಿiಜಿesಣo ಎಂಬ ಗ್ರಾಮೀಣ ಕೃಷಿ ಭಾರತದ ಭೂತ/ವರ್ತಮಾನ/ ಭವಿಶ್ಯದ ಕುರಿತಾದ ಪುಸ್ತಕ. ಈ ಪುಸ್ತಕ ಪ್ರಾಮಾಣಿಕವಾದ ವಿಶ್ಲೇಷಣೆ ಮತ್ತು ಪ್ರಮೇಯಗಳನ್ನು ಹೊಂದಿದೆ ಎಂದು ಹಲವು ಜನರು ಟಿಪ್ಪಣಿ ಬರೆದಿದ್ದಾರೆ. 
 ನಮ್ಮ ರಾಜಕಾರಣಿಗಳಲ್ಲಿ ಓಂದಿಷ್ಟು ಓದುವ , ಬರೆಯುವ ಹವ್ಯಾಸ ಇದ್ದರೆ ಆತನೊಬ್ಬ ಅನ್ಯಗ್ರಹ ಜೀವಿಯಂತೆ ಭಾಸವಾಗುವ ಕಾಲ ಇದು! ಓದು, ಅಧ್ಯಯನದ ವಿಷಯದಲ್ಲಿ ಈತ ತನ್ನ ತಾತ, ಮುತ್ತಾತರನ್ನು ಹೋಲುತ್ತಿದ್ದಾನೆ. ಈತನ ಅಪ್ಪ, ಮತ್ತು ವಾರಿಗೆಯ ಕಸಿನ್ಸ್ ಓದಿನ ರುಚಿ ಆಳವಾಗಿಯೇನೂ ಇಲ್ಲ.
ಇಂಥಾ ವರುಣ ಭಾಜಪದಲ್ಲಿ ಎಷ್ಟು ದಿನ ಇರಲು ಸಾಧ್ಯ? ಕಾಂಗ್ರೆಸ್ಸಿನ ರಾಹುಲ್/ ಪ್ರಿಯಾಂಕಾ ಜೊತೆ ಸಂಬAಧ ಸುಧಾರಿಸಿದೆ. ಆದರೆ ಅಲ್ಲಿದೂರದ ನೆಂಟನಾಗಿ ಇರಲು ಸಾಧ್ಯವೇ ಇಲ್ಲ! ಈ ವೈರುಧ್ಯ ವರುಣನ ರಾಜಕೀಯ ಆಯ್ಕೆಯನ್ನೇ ಪ್ರಭಾವಿಸಿದೆ. ಈಗ ರೈತರ ಕೊಲೆ ಬಗ್ಗೆ ದಿಟ್ಟವಾಗಿ ಮಾತಾಡಿ ಭಾಜಪದ ಸ್ವಮೋಹಿ ನಾಯಕನನ್ನೂ ಆತನನ್ನು ಆರಾಧಿಸುವ ಸೈನಿಕ ಹುಳಗಳನ್ನೂ ಎದುರು ಹಾಕಿಕೊಂಡಿದ್ದಾನೆ. ಮುಂದೇನು? ಕಾದು ನೋಡಬೇಕು.
 ಈತ ಬದಲಾಗಿದ್ದುಹೇಗೆ?
 ಈತ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾದ. ಹುಟ್ಟಿದ ಮಗಳಿಗೆ ಆದ್ಯ ಪ್ರಿಯದರ್ಶಿನಿ ಎಂದು ಅಜ್ಜಿಯ ಹೆಸರಿಟ್ಟ. ಈ ಮಗು ನಾಲ್ಕೇ ತಿಂಗಳಲ್ಲಿ ಕೊನೆ ಉಸಿರೆಳೆಯಿತು. ತನ್ನ ಕಣ್ಣ ಗೊಂಬೆಯAತಿದ್ದ ಈ ಮಗು ಈತನ ಕೈಯಲ್ಲೇ ನೋಡ ನೋಡುತ್ತಿದ್ದಂತೇ ಕೊನೆ ಉಸಿರೆಳೆಯಿತಂತೆ. ಈ ಆಘಾತದಿಂದ ವರುಣ್ ಚೇತರಿಸಿಕೊಳ್ಳಲೇ ಇಲ್ಲ. ಇಡೀ ಬದುಕಿನ ಅರ್ಥ ಹೀನತೆ ಕಾಡತೊಡಗಿ ಅಂತರ್ಮುಖಿಯಾಗಿಯೇ ಎಷ್ಟೋ ಸಮಯ ಕಳೆದ. ಆಮೇಲೆ ಇನ್ನೊಂದು ಮಗುವಾಯಿತು.ಆ ಹೆಣ್ಣು ಮಗುವಿಗೆ ಅನಸೂಯ ಎಂದು ಹೆಸರು.
 ಕಳೆದ ಮೂರು ನಾಲ್ಕು ವರ್ಷಗಳಲ್ಲಿ ವರುಣ್ ಭಾಜಪದಲ್ಲೇ ಅನ್ಯನಂತಾಗಿದ್ದಾನೆ. ಎಷ್ಟು ಬೇಕೋ ಅಷ್ಟೇ ಪಕ್ಷದ ಜೊತೆ ನಂಟು ಉಳಿಸಿಕೊಂಡಿದ್ದಾನೆ.ʼ
ಈ ಬಾಜಪ/ಆರೆಸ್ಸೆಸ್/ ಮತ್ತು ಸೈನಿಕ ಹುಳಗಳ ದಗಲಬಾಜಿತನ ಎಂಥಾದ್ದೆAದರೆ ರಾಹುಲ್/ ಇಂದಿರಾ/ ನೆಹರೂ ಅವರನ್ನು ವಿಕೃತವಾಗಿ ಹಳಿಯುತ್ತಾ ಎಮರ್ಜೆನ್ಸಿಯನ್ನು ಕೆರೆದು ಎತ್ತಿ ತೋರಿಸುತ್ತಾ ರಾಜಕೀಯ ಮಾಡುವ ಈ ಕೊಳಕರು ಅದೇ ಎಮರ್ಜೆನ್ಸಿಯ ಸೂತ್ರಧಾರನಾಗಿದ್ದ ಸಂಜಯನ ಬಗ್ಗೆ ಮಾತೇ ಆಡುವುದಿಲ್ಲ. ಅದೇ ಗಾಂಧಿ ಕುಡಿಗಳೆರಡು ತಮ್ಮ ಹಿತ್ತಲಲ್ಲಿ ಆಡಾಡುತ್ತಾ ಇರುವುದರ ಬಗ್ಗೆ ಆಕ್ಷೇಪವೇ ಇಲ್ಲ. ಆಷಾಢಭೂತಿತನಕ್ಕೆಇದಕ್ಕಿಂತ ದೊಡ್ಡ ಉದಾಹರಣೆ ಬೇಡ.
 ಈಗ ರೈತರ ಕೊಲೆಯ ಸಂದರ್ಭದಲ್ಲಿ ವರುಣ ದನಿ ಎತ್ತಿದ್ದೇ ಇನ್ನೀಗ ಆತ ಸಂಜಯನ ಮಗ, ಇಂದಿರಾ ಮೊಮ್ಮಗ, ನೆಹರೂ ಮರಿಮಗ ಮುಂತಾದ ವಿವರಗಳು ಜಾಹೀರಾಗತೊಡಗುತ್ತದೆ. 
 ಈತನ ಈ ವ್ಯಕ್ತಿಗತ ಸಂಗತಿಗಳು ರಾಜಕೀಯದಲ್ಲಿ ಮೋದಿಗೆ ಮುಜುಗರ ಹುಟ್ಟಿಸಲು ಬಳಕೆಯಾದೀತು; ಆದರೆ ಈತ ಬರೆದ ಪುಸ್ತಕದ ಬಗ್ಗೆ ಚರ್ಚೆಯಾಗಬೇಕು. ಮತ್ತೆ ಶಿಕ್ಷಿತ ಅಧ್ಯಯನ ಶೀಲ ಹೊಸ ತಲೆಮಾರಿನ ರಾಜಕಾರಣಿಗಳ ಜೊತೆ ಸಂವಾದ / ವಾಗ್ವಾದ ಸಾಧ್ಯವಾಗಬೇಕು.
 ಈತನೆದುರು ವೈರಸ್ ಸೂರ್ಯಾದಿಗಳು ಗಂಜಳದ ಹುಳದಂತೆ ಕಂಡು ಬರುತ್ತಾರೆ. ಆದ್ದರಿಂದಲೇ ವರುಣ ಮುಖ್ಯವಾಗಬೇಕು!!!!!