ಈ ಸೋಂಕು ಡೆಲ್ಟಾನೋ- ಓಮೈಕ್ರಾನೋ !? 99% ಲೋಕಲ್ ಕುಚ್ಚಂಗಿ ಪ್ರಸನ್ನ

ಈ ಸೋಂಕು ಡೆಲ್ಟಾನೋ- ಓಮೈಕ್ರಾನೋ !? 99% ಲೋಕಲ್ ಕುಚ್ಚಂಗಿ ಪ್ರಸನ್ನ

ಈ ಸೋಂಕು ಡೆಲ್ಟಾನೋ- ಓಮೈಕ್ರಾನೋ !? 99% ಲೋಕಲ್ ಕುಚ್ಚಂಗಿ ಪ್ರಸನ್ನ

 

ಈ ಸೋಂಕು ಡೆಲ್ಟಾನೋ- ಓಮೈಕ್ರಾನೋ !?
99% ಲೋಕಲ್
ಕುಚ್ಚಂಗಿ ಪ್ರಸನ್ನ


ತುಮಕೂರು: “ವಿಡಿಯೋ ವೈರಲ್ ಆಯಿತು” ಎನ್ನುವ ಮಾತನ್ನು ಇತ್ತೀಚೆಗೆ ಹೆಚ್ಚು ಕೇಳುತ್ತಿದ್ದೇವೆ ಅಲ್ವಾ, “ಕ್ಷಣಾರ್ಧದಲ್ಲಿ ಎಲ್ಲೆಡೆ ಸುದ್ದಿ ಹರಡಿತು” ಎನ್ನುವ ಮಾತಿನ ಆಧುನಿಕ ರೂಪವಿದು, ವೈರಸ್ ಎಂಬ ಜೀವಿಯಲ್ಲದ ಸೂಕ್ಷಾö್ಮಣು ಕೂಡಾ ಹೀಗೇ, ವೈರಸ್‌ನ ಅನ್ವರ್ಥ ನಾಮವೇ ಈ ವೈರಲ್.
ಕಳೆದ ವಾರದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಕೋಟಿ ಜನ ಸಂಖ್ಯೆ ಇರುವ ರಾಜಧಾನಿಯಲ್ಲಿ ಸಹಜವಾಗೇ ಸೋಂಕಿನ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆರ್‌ಟಿಪಿಸಿಆರ್ ಟೆಸ್ಟ್ ಪ್ರಮಾಣ ಹೆಚ್ಚಿದಂತೆ ಪಾಸಿಟಿವ್ ಸಂಖ್ಯೆಯೂ ಹೆಚ್ಚಳವಾಗುತ್ತಿವೆ. ಹಾಲಿ ಹರಡುತ್ತಿರುವ ಸೋಂಕು ಯಾವುದು ಡೆಲ್ಟಾ ರೂಪಾಂತರೀನಾ ಓಮೈಕ್ರಾನ್ ರೂಪಾಂತರೀನಾ ಎನ್ನುವ ಅನುಮಾನ ಹೆಚ್ಚಿನ ಜನರಲ್ಲಿದೆ. ಡೌಟೇ ಬೇಡ ಇದು ಓಮೈಕ್ರಾನ್ ರೂಪಾಂತರಿ. ಆದರೆ ಈ ಸೋಂಕು ಓಮೈಕ್ರಾನ್ ಅಂತ ಖಚಿತಪಡಿಸುವವರು ಯಾರೂ ಇಲ್ಲ ಅಷ್ಟೇ.
ಆರ್‌ಟಿಪಿಸಿಆರ್ ಟೆಸ್ಟ್ನಲ್ಲಿ ಗಂಟಲು ದ್ರವ ಕೊಟ್ಟವರಲ್ಲಿ ಕೊರೊನಾ ವೈರಸ್ ಇದೆ ಅಂತ ಗೊತ್ತಾಗುತ್ತದೆಯೇ ಹೊರತು, ಅದು ಡೆಲ್ಟಾನಾ, ಓಮೈಕ್ರಾನಾ ಅಂತ ಪ್ರತ್ಯೇಕವಾಗಿ ತಿಳಿಯುವುದಿಲ್ಲ. ಅದನ್ನು ತಿಳಿಯಬೇಕೆಂದರೆ ಜೀನೋಮ್ ಸೀಕ್ವೆನ್ಸಿಂಗ್ ಮಾಡಬೇಕು, ಈ ಜೀನೋಮ್ ಸೀಕ್ವೆನ್ಸಿಂಗ್ ಮಾಡಬಲ್ಲ ಸೌಲಭ್ಯ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸೇರಿದಂತೆ ನಾಲ್ಕು ಕಡೆ ಮಾತ್ರ ಇದೆ. ಮತ್ತು ಅದು ದುಬಾರಿ ಕೂಡಾ, ಹಾಗಾಗಿ ಪ್ರತಿಯೊಬ್ಬರಿಗೂ ಆರ್‌ಟಿಪಿಸಿಆರ್ ಜೊತೆಗೆ ಹೆಚ್ಚುವರಿ ಓಮೈಕ್ರಾನ್ ಹೌದೋ ಅಲ್ಲವೋ ಎನ್ನುವ ಪ್ರತ್ಯೇಕ ಟೆಸ್ಟ್ ಮಾಡಲು ಯಾರೂ ಮುಂದಾಗುತ್ತಿಲ್ಲ.
ಕೋವಿಡ್-19 ರೋಗವನ್ನು ಹರಡುವ ವೈರಸ್ ಅನ್ನು ಸರ‍್ಸ್-ಕೋವ್-2 ಅಂತ ಕರೆಯುತ್ತಾರೆ. ಸೋಂಕಿತನ ಮೂಗು ಅಥವಾ ಗಂಟಲ ದ್ರವದ ಮಾದರಿ ತೆಗೆದು ಎರಡು ವಿಧದ ಟೆಸ್ಟ್ಗಳಲ್ಲಿ ಕೊರೊನಾ ವೈರಸ್ ಇದೆಯೋ ಇಲ್ಲವೋ ಎಂದು ಖಚಿತ ಪಡಿಸಿಕೊಳ್ಳಲಾಗುತ್ತದೆ. ಒಂದು ರ‍್ಯಾಪಿಡ್ ಆಂಟಿಜೆನ್ ಟೆಸ್ಟ್, ಇದರ ಹೆಸರೇ ಹೇಳುವಂತೆ ಬೇಗ ಫಲಿತಾಂಶ ದೊರಕುತ್ತದೆಯಾದರೂ ಆ ವರದಿ ನಿಖರವಾಗಿರುವುದಿಲ್ಲ, ಹಾಗಾಗಿ ಅದನ್ನು ತಜ್ಞರು ಶಿಫಾರಸು ಮಾಡುವುದಿಲ್ಲ.
ಎರಡನೇ ವಿಧದ ಟೆಸ್ಟ್ ಎಂದರೆ, ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್( ಎನ್‌ಎಎಟಿ-ನ್ಯಾಟ್) ಈ ಪರೀಕ್ಷೆಯು ವೈರಸ್‌ನ ವಂಶವಾಹಿ ಪದಾರ್ಥವನ್ನು ಪತ್ತೆ ಮಾಡುತ್ತದೆ ಮತ್ತು ನಿರ್ದಿಷ್ಟವಾಗಿ ಸರ‍್ಸ್-ಕೋವ್-2ಮ ರೈಬೋ ನ್ಯೂಕ್ಲಿಯಿಕ್ ಆಸಿಡ್‌ನ್ನು ಪತ್ತೆಹಚ್ಚುತ್ತದೆ. ಈ ವಿಧಾನದಲ್ಲಿ ಏಳು ವಿಧದ ಟೆಸ್ಟ್ಗಳಿದ್ದರೂ ಹೆಚ್ಚು ಅವಲಂಬಿಸಿರುವುದು ಆರ್‌ಟಿ-ಪಿಸಿಆರ್ ಟೆಸ್ಟ್ನ್ನು ಮಾತ್ರವೇ. ಆರ್‌ಟಿ-ಪಿಸಿಆರ್ ಎಂದರೆ ರಿವರ್ಸ್ ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೇನ್ ರಿಯಾಕ್ಷನ್. ಸದ್ಯಕ್ಕೆ ಈ ಆರ್‌ಟಿ-ಪಿಸಿಆರ್ ಟೆಸ್ಟ್ನ್ನು ಶಿಫಾರಸು ಮಾಡಿ, ಬಳಸಲಾಗುತ್ತಿದೆ. ಮುಂದೆ ರೂಪಾಂತರಿಗಳು ಹೆಚ್ಚಿದಂತೆ ಉಳಿದ ಟೆಸ್ಟ್ಗಳೂ ಅನ್ವಯವಾಗಬಹುದು.
ಈ ಭೂಮಿಯ ಮೇಲೆ ಕೇವಲ ಡೆಲ್ಟಾ ಮತ್ತು ಓಮೈಕ್ರಾನ್ ರೂಪಾಂತರಿ ಕೊರೊನಾ ವೈರಸ್‌ಗಳು ಮಾತ್ರವೇ ಅಲ್ಲ, ಇನ್ನೂ ಅಸಂಖ್ಯ ರೂಪಾಂತರಿಗಳಿವೆ ಮತ್ತು ಮುಂದೆಯೂ ಬರಲಿವೆ. ಹೀಗಾಗಿ 2019ರ ಅಂತ್ಯದಲ್ಲಿ ಚೀನಾದ ವೂಹಾನ್ ನಲ್ಲಿ ಪತ್ತೆಯಾದ ಕೊರೊನಾ ವೈರಸ್‌ನ್ನು ಮೊದಲ ರೂಪಾಂತರಿ ಎನ್ನುವುದಾದಲ್ಲಿ ಈವರೆಗೆ 12 ಲಕ್ಷ ಸೋಂಕಿನ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದೆ. ಇವುಗಳಲ್ಲಿ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಡೆಲ್ಟಾ ರೂಪಾಂತರಿ ಇಂಡಿಯಾದಲ್ಲಿ ಪತ್ತೆಯಾದರೆ, ಇತ್ತೀಚೆಗೆ ಆಫ್ರಿಕಾ ಖಂಡದಲ್ಲಿ ಓಮೈಕ್ರಾನ್ ಪತ್ತೆಯಾಯಿತು. ಈ ಓಮೈಕ್ರಾನ್ ಪತ್ತೆಯಾಗುವ ಹೊತ್ತಿಗಾಗಲೇ ಅಸಂಖ್ಯ ಜನರಿಗೆ ಅದರ ಸೋಂಕು ತಗುಲಿದ್ದಾಗಿತ್ತು. ಇವುಗಳಿಗೆ ಗ್ರೀಕ್ ವರ್ಣಮಾಲೆಯನ್ವಯ ಹೆಸರುಗಳನ್ನು ಇಡುತ್ತ ಬರಲಾಗಿದೆ ಅಷ್ಟೇ. 
ಈಗ ನಮ್ಮ ನಿಮ್ಮ ನಡುವೆ ಬಹಳಷ್ಟು ಜನ, ನೆಗಡಿ, ಗಂಟಲು ನೋವು, ಜ್ವರ, ಚಳಿ,ಮೈ ಕೈ ನೋವು ಎಂದು ದೂರತೊಡಗಿದ್ದಾರೆ. ಅದೆಷ್ಟು ತಲೆ ಬಾರ ಎಂದರೆ ಕಣ್ಣು ಬಿಡಲಾಗುತ್ತಿಲ್ಲ ಎನ್ನುತ್ತಾರೆ.ಕೆಲವರಿಗೆ ಎಲ್ಲ ಲಕ್ಷಣಗಳು ಒಟ್ಟಿಗೇ ಕಾಣಿಸಿಕೊಂಡರೆ ಕೆಲವರಿಗೆ ಒಂದೊAದಾಗಿ ಕಾಣಿಸುತ್ತ, ಎದ್ದು ಓಡಾಡದಂತೆ, ದೈನಂದಿನ ಚಟುವಟಿಕೆಗಳನ್ನು ಮಾಡದಂತೆ ಮಾಡಿಬಿಟ್ಟಿದೆ. ಆದರೆ ಈ ಓಮೈಕ್ರಾನ್‌ಗೆ ಅಷ್ಟೇನೂ ಹೆದರುವಂತಿಲ್ಲ,ಐದಾರು ದಿನದಲ್ಲಿ ಎಲ್ಲ ಸರಿಹೋಗುತ್ತದೆ. ದರ‍್ಯವಾಗಿರಿ ಎನ್ನುತ್ತಾರೆ ವೈದ್ಯರು. ಇದು ಡೆಲ್ಟಾ ಆಗಿದ್ದರೆ ಎರಡನೇ ಅಲೆಯಲ್ಲಿ ಆದಂತೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಮರಣದ ಪ್ರಮಾಣ ಹೆಚ್ಚಾಗುತ್ತಿತ್ತು ಎನ್ನುತ್ತಾರೆ ಕಳೆದ ಮೂರು ವರ್ಷಗಳಿಂದ ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು. ಮತ್ತು ಮೂರನೇ ಅಲೆಯನ್ನು ಈಗಲೇ ಅಂದಾಜು ಮಾಡಲಾಗುತ್ತಿಲ್ಲ. ಅದು ಇನ್ನೂ ಎರಡು ತಿಂಗಳಲ್ಲಿ ಎಲ್ಲ ಅರ್ಥವಾಗುತ್ತದೆ ಎನ್ನುತ್ತಾರೆ ಅವರು.
ಕೆಲವರು ಕೊರೊನಾ ವೈರಸ್ ಎಂಬುದು ಇಲ್ಲವೇ ಇಲ್ಲ, ಎಲ್ಲಾ ಮೆಡಿಕಲ್ ಮಾಫಿಯಾ ಎನ್ನುತ್ತಾರೆ, ಹಾಗೆ ಹೇಳುವ ಕೆಲವರಲ್ಲಿ ವೈದ್ಯರೂ ಇದ್ದಾರೆ, ಆದರೆ ಹೀಗೆ ಹೇಳುವ ವೈದ್ಯರು ಮಾತ್ರ ಮಾಸ್ಕ್ ಧರಿಸಿ, ಅಂತರದಲ್ಲಿರಿ, ಲಸಿಕೆ ಚುಚ್ಚಿಸಿಕೊಳ್ಳಿ ಅಂತಲೂ ಹೇಳುತ್ತ ಕನ್‌ಫ್ಯೂಸ್ ಮಾಡುತ್ತಿದ್ದಾರೆ. ಒಟ್ಟಾರೆ ನಿಮ್ಮ ಜೀವ ನಿಮ್ಮ ಕೈಯಲ್ಲಿ, ವೈದ್ಯರ ಕೈ ನಿಮ್ಮ ಜೇಬಲ್ಲಿ ಅಷ್ಟೇ.
ಟೆಸ್ಟ್ ಪ್ರಮಾಣ ಹೆಚ್ಚಾದಂತೆ ಸೋಂಕಿನ ಪ್ರಮಾಣವೂ ಹೆಚ್ಚಾಗುತ್ತ ಹೋಗುತ್ತದೆ. ಸರ್ಕಾರ ಈ ವಿಚಾರದಲ್ಲಿ ಆಗಾಗ ತನ್ನ ಅನುಕೂಲಕ್ಕೆ ತಕ್ಕಂತೆ ಟೆಸ್ಟ್ ಪ್ರಮಾಣದಲ್ಲಿ ಏರಿಳಿತ ಮಾಡಿಸುತ್ತಿದೆ ಎನ್ನುವುದೂ ಈಗಾಗಲೇ ಜನರಿಗೆ ಅರಿವಾಗಿದೆ. ಕೊರೊನಾ ವೈರಸ್ ಸೋಂಕಿಗೆ ಇಂಥ ಸೀಸನ್ ಅಂತೇನೂ , ಹಗಲು ಕಡಿಮೆ ಇರುಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಅಂತೇನೂ ಇಲ್ಲ. ಹಗಲಿನಲ್ಲಿ ಜನರನ್ನು ಸುಲಭವಾಗಿ ನಿಯಂತ್ರಿಸಲಾಗದ್ದಕ್ಕೆ ರಾತ್ರಿ ಕರ್ಫ್ಯೂ ಹೇರಲಾಗುತ್ತಿದೆ. ಪೂರ್ಣ ಲಾಕ್‌ಡೌನ್ ಅಂತ ಘೋಷಿಸಿದರೆ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ಕೊಡಬೇಕು, ಉಚಿತ ಆಹಾರ ಧಾನ್ಯ ವಿತರಿಸಬೇಕು, ಬ್ಯಾಂಕ್ ಸಾಲಗಳ ಬಡ್ಡಿ ವಿನಾಯಿತಿಕೊಡಬೇಕು ಹೀಗೆ ಹೊರೆ ಹೆಚ್ಚುತ್ತದೆ ಎಂಬುದೂ ಸರ್ಕಾರದ ಚಿಂತನೆ ಇರಬಹುದು.
ಬಾಕ್ಸ್
ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ
ಎಬಿಆರ್‌ಕೆ ಬಾಕಿ ಇನ್ನೂ ಬಂದಿಲ್ಲ
ಕೋವಿಡ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 75% ಬೆಡ್‌ಗಳನ್ನು ರಿಸರ್ವ್ ಮಾಡಿ ಇರಿಸಿ ಎಂದು ಜಿಲ್ಲಾಡಳಿತ ಆದೇಶ ನೀಡಿರುವುದೇನೋ ಸರಿ. ಆದರೆ ಕೋವಿಡ್ ರೋಗಿಗಳಿಗೆ ಸರ್ಕಾರದ ಎಬಿಆರ್‌ಕೆ ಯೋಜನೆಯಡಿ ಕಳೆದ ವರ್ಷ ನೀಡಿದ ಚಿಕಿತ್ಸೆಯ ಬಾಕಿ ಮೊತ್ತ ಇನ್ನೂ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ತಲುಪಿಲ್ಲವಂತೆ.
ಅವರೂ ನಿರಂತರವಾಗಿ ಜಿಲ್ಲಾಡಳಿತಕ್ಕೆ ಮನವಿಗಳನ್ನು ಕೊಡುತ್ತಲೇ ಬಂದಿದ್ದು, ರಾಜ್ಯ ಸರ್ಕಾರದಿಂದ ಜಿಲ್ಲೆಯ ಐದಾರು ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ಸುಮಾರು 200 ಕೇಸ್‌ಗಳ ಬಾಕಿ ಬರಬೇಕಿದೆಯಂತೆ. ಕೋವಿಡ್ ತುರ್ತಿನಲ್ಲಿ ಸಾಲಸೋಲ ಮಾಡಿ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಿದ ಈ ಆಸ್ಪತ್ರೆಗಳಿಗೆ ಈಗಲಾದರೂ ಬಾಕಿ ಬಿಡುಗಡೆ ಆದಲ್ಲಿ ಮುಂದಿನ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲು ಹಾದಿಯಾಗುತ್ತದೆ ಎನ್ನುತ್ತಾರೆ ಈ ವೈದ್ಯರು.