ಏಪ್ರಿಲ್ ಒಂದರಂದು ಡಾ.ಶಿವಕುಮಾರ ಸ್ವಾಮೀಜಿ 115ನೇ ಜನ್ಮದಿನ,ಗುರುವಂದನೆ: ಬಿ.ವೈ.ವಿಜಯೇಂದ್ರ

ಏಪ್ರಿಲ್ ಒಂದರಂದು ಡಾ.ಶಿವಕುಮಾರ ಸ್ವಾಮೀಜಿ 115ನೇ ಜನ್ಮದಿನ,ಗುರುವಂದನೆ: ಬಿ.ವೈ.ವಿಜಯೇಂದ್ರ

ಏಪ್ರಿಲ್ ಒಂದರಂದು ಡಾ.ಶಿವಕುಮಾರ ಸ್ವಾಮೀಜಿ  115ನೇ ಜನ್ಮದಿನ,ಗುರುವಂದನೆ: ಬಿ.ವೈ.ವಿಜಯೇಂದ್ರ

 

ಏಪ್ರಿಲ್ ಒಂದರಂದು ಡಾ.ಶಿವಕುಮಾರ ಸ್ವಾಮೀಜಿ

115ನೇ ಜನ್ಮದಿನ,ಗುರುವಂದನೆ: ಬಿ.ವೈ.ವಿಜಯೇಂದ್ರ

ತುಮಕೂರು: ಸಿದ್ಧಗಂಗಾ ಮಠದ ಮಠಾಧೀಶರಾಗಿದ್ದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಯವರ 115ನೇ ಜನ್ಮ ದಿನೋತ್ಸವ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಉದ್ಘಾಟಿಸಲಿದ್ದು, ಎರಡು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಿಸಿದರು.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಅತಿಥಿಯಾಗಿದ್ದು, ಕೇಂದ್ರದ ಸಚಿವ ಪ್ರಹ್ಲಾದ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ವಿ.ಸೋಮಣ್ಣ, ಜೆ.ಸಿ‌. ಮಾಧುಸ್ವಾಮಿ, ಬಿ.ಸಿ.ನಾಗೇಶ್ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜನ್ಮ ದಿನೋತ್ಸವ ಹಾಘೂ ಗುರುವಂದನಾ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ವಿಜಯೇಂದ್ರ ಶನಿವಾರ ಸಿದ್ದಗಂಗಾ ಮಠದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾಹಿತಿ ನೀಡಿದರು.

 

ಕಳೆದ ಎರಡು ವರ್ಷ ಕೋವಿಡ್ ನಿಂದಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಆಗಿರಲಿಲ್ಲ. ಈ ಬಾರಿ‌ ಲಕ್ಷಾಂತರ ಸಂಖ್ಯೆಯ ಜನ ಭಾಗವಹಿಸಲಿದ್ದಾರೆ. ಬಹುಶಃ ಎರಡು ಲಕ್ಷ ದಾಟಬಹುದು. ಅಮಿತ್ ಶಾ ಗದ್ದುಗೆ ಭೇಟಿ ನೀಡಿ, ಸ್ವಾಮೀಜಿಯ ದರ್ಶನ ಪಡೆದ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು‌.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.‌ ಗಾಯಕ ವಿಜಯ ಪ್ರಕಾಶ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.

 

ಶಿವಕುಮಾರ ಸ್ವಾಮಿಯವರಿಗೆ ಭಾರತರತ್ನ ನೀಡಿದರೆ, ಆ ಪ್ರಶಸ್ತಿಗೇ ಕಳೆ ಬರಲಿದೆ.  ಭಾರತ ರತ್ನ ನೀಡಬೇಕೆಂದು ನಾಡಿನ ಜನತೆಗೆ ಅಪೇಕ್ಷೆಯಿದೆ. ಭಾರತ ರತ್ನ ನೀಡುವಂತೆ ಸಚಿವರು, ಶಾಸಕರು ಮನವಿ ಮಾಡಲಿದ್ದಾರೆ ಎಂದು ವಿವರಿಸಿದರು.

 

ತುಮಕೂರಿನಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣೆ ನಿಲ್ಲುವ ವಿಚಾರ ಪಕ್ಷ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ ಎಂದರು.

 

ಕಾಲ್ನಡಿಗೆಯಲ್ಲಿ ಬರುವವರು ಕ್ಯಾತ್ಸಂದ್ರದಲ್ಲಿ ಇಳಿದು ಬರಬಹುದು. ವಾಹನ ಬರಬೇಕಾದರೆ, ದೇವರಾಯಪಟ್ಟಣದಿಂದ ಒಳಗೆ ಬರಬಹುದು. ಸ್ವಾಗತ ಸಮಿತಿ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಎಲ್ಲ ಜವಾಬ್ದಾರಿ ತೆಗೆದುಕೊಂಡು ಕೆಲಸ ನಿರ್ವಹಿಸಲಿದ್ದೇನೆ ಎಂದರು. ನಂತರ ಅವರು ಸಮಾರಂಭದ ಸಿದ್ಧತೆಗಳನ್ನು ವೀಕ್ಷಿಸಿದರು.

 

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸಿ.ಎಂ.ರಾಜೇಶಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀಶ್, ಮುಖಂಡ ಟಿ.ಆರ್.ಸದಾಶಿವಯ್ಯ ಮೊದಲಾದವರು ಇದ್ದರು.