ಕವಿಗಳಾದ ಎಲ್. ಗೀತಾಲಕ್ಷ್ಮಿ ಹಾಗೂ ಮರಿಯಾಂಬಿಯವರಿಗೆ ನಿರ್ಮಲಾ ಎಲಿಗಾರ್ ದತ್ತಿ ಪ್ರಶಸ್ತಿ

ಕವಿಗಳಾದ ಎಲ್. ಗೀತಾಲಕ್ಷ್ಮಿ
ಹಾಗೂ ಮರಿಯಾಂಬಿಯವರಿಗೆ
ನಿರ್ಮಲಾ ಎಲಿಗಾರ್ ದತ್ತಿ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘವು ರಾಜ್ಯದ ಉದಯೋನ್ಮುಖ ಕವಯತ್ರಿಯರಿಗಾಗಿ ಕೊಡುವ ನಿರ್ಮಲಾ ಎಲಿಗಾರ್ ದತ್ತಿ ನಿಧಿ ಬಹುಮಾನಕ್ಕೆ ,ತುಮಕೂರು ಜಿಲ್ಲೆಯ ಲೇಖಕಿಯರೂ ,ಕವಯತ್ರಿಯರೂ ಆದ ಗೀತಾ ಲಕ್ಷ್ಮಿ .ಎಲ್. ಮತ್ತು ಮರಿಯಾಂಬಿ ಇವರು ಭಾಜನರಾಗಿದ್ದಾರೆ.
ಎಲ್. ಗೀತಾ ಲಕ್ಷ್ಮಿಯವರು ತಿಪಟೂರಿನ ಕಲ್ಪತರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುತ್ತಾರೆ , ಇವರು ಕವಿತೆಗಳ ರಚಿಸುವುದರ ಜೊತೆಗೆ ,ಅವಧಿ ' ವೆಬ್ ಸಂಚಿಕೆಯಲ್ಲಿ ಅಂಕಣ ಬರಹಗಾರರಾಗಿಯೂ ಓದುಗರ ಗಮನ ಸೆಳೆದಿದ್ದಾರೆ.
ಮರಿಯಂಬಿಯವರು ಗುಬ್ಬಿಯವರಾಗಿದ್ದು, ,ತುಮಕೂರು ವಿ.ವಿ.ಯಲ್ಲಿ ಎಂ.ಎ . ಪದವಿಯನ್ನು ರಾಂಕ್ ಮತ್ತು ಚಿನ್ನದ ಪದಕದೊಂದಿಗೆ ಪಡೆದಿದ್ದು .ಪ್ರಸ್ತುತ ಹಂಪಿ ಕನ್ನಡ ವಿ.ವಿ.ಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
ನಿರ್ಮಲಾ ಎಲಿಗಾರ್ ದತ್ತಿನಿಧಿ ಬಹುಮಾನ ಪಡೆದ ಗೀತಾಲಕ್ಷ್ಮಿ ಹಾಗೂ ಮರಿಯಾಂಬಿ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.