ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಾಡೇನು ಇಂತಹ ಸರ್ಕಾರ ಬೇಕಾ: ಎಚ್‌ಡಿಕೆ
ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಾಡೇನು ಇಂತಹ ಸರ್ಕಾರ ಬೇಕಾ: ಎಚ್‌ಡಿಕೆ
ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಾಡೇನು
ಇಂತಹ ಸರ್ಕಾರ ಬೇಕಾ: ಎಚ್‌ಡಿಕೆ
ಶಿರಾ: 544 ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅಭ್ಯರ್ಥಿಗಳಿಂದ ಒಬ್ಬರಿಂದ ರೂ.90 ಲಕ್ಷ ದಿಂದ 1 ಕೋಟಿ 20 ಲಕ್ಷ ವರೆಗೂ ಹಣ ತಗೊಂಡು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತನಿಖೆ ನಡೆಯುತ್ತಿದೆ. ಕೆಲವು ದಿನ ಪತ್ರಿಕೆಯಲ್ಲಿ ಈ ಹುದ್ದೆಗೆ ಕೆಲ ಅಭ್ಯರ್ಥಿಗಳು ಮನೆಯನ್ನು ಅಡವಿಟ್ಟು, ಸ್ನೇಹಿತರ ಬಳಿ ಸಾಲ ಮಾಡಿ, ಜಮೀನನ್ನು ಮಾರಿ ಹಣವನ್ನು ಕೊಟ್ಟಿದ್ದಾರೆ ಎಂದು ಬರೆದಿದ್ದಾರೆ. ಆದರೆ ಸರ್ಕಾರ ಮರು ಪರೀಕ್ಷೆಯನ್ನು ಮಾಡಬೇಕೆಂದು ಹೇಳುತ್ತಿದ್ದಾರೆ. ಹಾಗಾದರೆ ಇಂಥವರ ಕುಟುಂಬ ಮತ್ತು ಜೀವನ ಮುಂದಿನ ದಿನಗಳಲ್ಲಿ ಏನಾಗಬಹುದು. ಈ ರೀತಿ ಇರುವ ಸರ್ಕಾರ ಬೇಕಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜನತಾಜಲಧಾರೆ ರಥಯಾತ್ರೆ ಮತ್ತು ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಬರಪೀಡಿತ ಮಧುಗಿರಿ, ಪಾವಗಡ, ಶಿರಾ ತಾಲ್ಲೂಕಿಗೆ ಯಾವ ರೀತಿಯಲ್ಲಿ ನೀರು ಪೂರೈಕೆ ಆಗುತ್ತಿದೆ ಎಂಬುದನ್ನು ಅರಿಯಬೇಕಿದೆ. ಪಕ್ಕದ ರಾಜ್ಯ ತೆಲಂಗಾಣದಲ್ಲಿ 13 ನದಿಗಳ ಜೋಡಣೆ ಮಾಡಿ ಪ್ರತಿ ಹಳ್ಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ನೀರಿದ್ದರೂ ಹಳ್ಳಿಗಳಿಗೆ ಪೂರೈಕೆಯಾಗುತ್ತಿಲ್ಲ. ರಾಜ್ಯದ ಹಳ್ಳಿಗಳಿಗೆ ನೀರು ಒದಗಿಸುವ ಸದುದ್ದೇಶದಿಂದ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಮಗೆ ಒಂದು ಬಾರಿ ಪಕ್ಷವನ್ನು ಸ್ವತಂತ್ರವಾಗಿ ಬಹುಮತದಿಂದ ಆಶೀರ್ವದಿಸಿ ಆಯ್ಕೆ ಮಾಡಿ ಮುಂದಿನ ಐದು ವರ್ಷದಲ್ಲಿ ್ಲ ಎಲ್ಲಾ ನೀರಾವರಿ ಯೋಜನೆಯನ್ನು ಮೂರರಿಂದ ಐದು ಲಕ್ಷ ಕೋಟಿ ರೂಪಾಯಿ ಆದರೂ ಪರವಾಗಿಲ್ಲ. ಪ್ರತಿ ಹಳ್ಳಿಹಳ್ಳಿಯಲ್ಲೂ ನೀರಾವರಿಯ ಸಮಸ್ಯೆ ಅಳಿಸಿ ಹೋಗುತ್ತದೆ ಎಂದರು.
ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಮಾಜಿ ಶಾಸಕರಾದ ಸಿ.ಬಿ. ಸುರೇಶ್ ಬಾಬು, ಸುಧಾಕರ್ ಲಾಲ್, ತಿಮ್ಮರಾಯಪ್ಪ, ಡಿ.ನಾಗರಾಜಯ್ಯ ಪಾಲ್ಗೊಂಡಿದ್ದರು
ಜನತಾಜಲಧಾರೆ ರಥಯಾತ್ರೆ ಮಾಜಿ ಸಚಿವರು ಮತ್ತು ಶಾಸಕರಾಗಿದ್ದ ದಿವಂಗತ ಬಿ.ಸತ್ಯನಾರಾಯಣ ರವರ ಸ್ಮಾರಕದ ಬಳಿಯಿಂದ ಹೊರಟು ಶಿರಾ ನಗರದ ಅಮರಾಪುರ ರಸ್ತೆಯ ಮೂಲಕ ಕೊಟ್ಟ, ದಾಸರಹಳ್ಳಿ ಗ್ರಾಮಗಳ ಮೂಲಕ ಮದಲೂರು ಕೆರೆಯನ್ನು ತಲುಪಿ, ಅಲ್ಲಿ ಗಂಗಾಪೂಜೆಯನ್ನು ಮಾಡಿ ಮದಲೂರು ಕೆರೆಯ ಪವಿತ್ರ ಗಂಗೆಯನ್ನು ಜಲಧಾರೆ ವಾಹನದ ಕಳಸಕ್ಕೆ ಸಂಗ್ರಹಿಸಿಕೊAಡು ವಾಪಸ್ಸು ಬರುವಾಗ ತೊಗರಗುಂಟೆ ಅಮ್ಮಾಜಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.