ಕುಲಾಂತರಿ ಸಾಸಿವೆ ಬೇಡ ಎನ್ನಲು 25 ಕಾರಣಗಳು

ಭಾರತದಲ್ಲಿ ಕೃಷಿ ಎಂಬುದುಆಯಾ ರಾಜ್ಯಗಳಿಗೆ ಸಂಬAಧಿಸಿದ ವಿಷಯ. ಸಾಸಿವೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಕುಲಾಂತರಿ ಪ್ರಯೋಗಕ್ಕೆ ಅವಕಾಶ ಕೊಟ್ಟಿಲ್ಲ. ಗುಜರಾತ್, ಬಿಹಾರ್, ಒರಿಸ್ಸಾ, ಪಶ್ಚಿಮ ಬಂಗಾಳ ಇತರ ರಾಜ್ಯಗಳು ಪ್ರಾಯೋಗಿಕವಾಗಿಯೂ ತಮ್ಮಲ್ಲಿ ಕುಲಾಂತರಿ ಸಾಸಿವೆಗೆ ಅನುಮತಿ ನೀಡಿಲ್ಲ. 

ಕುಲಾಂತರಿ ಸಾಸಿವೆ ಬೇಡ ಎನ್ನಲು 25 ಕಾರಣಗಳು

ಕುಲಾಂತರಿ ಸಾಸಿವೆ ಬೇಡಎನ್ನಲು 25 ಕಾರಣಗಳು


ನಿಮಗೆ ನೆನಪಿದೆಯೇ, ಅನಗತ್ಯ ಹಾಗೂ ಸುರಕ್ಷಿತವಲ್ಲ ಅಂತೆನಿಸಿದ್ದ ಕುಲಾಂತರಿ ಬದನೆಯನ್ನು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು, ಜನರು ಹಾಗೂ ವಿಜ್ಞಾನಿಗಳು ಒಟ್ಟಾಗಿ ವಿರೋಧಿಸಿ, 2010ರಲ್ಲಿ ದೊಡ್ಡಜನಾಂದೋಲನವನ್ನೇ ನಡೆಸಿ ತಡೆದದ್ದು? 


ಬಿಟಿ ಹತ್ತಿ ಉಂಟು ಮಾಡಿದ ಅಧ್ವಾನಗಳೂ ಅದು ರೈತರ ಸ್ವಾವಲಂಬನೆಯನ್ನು ಕಿತ್ತುಕೊಂಡ ಬಗೆ ಬಹಿರಂಗವಾಯಿತು. ಕೀಟನಿರೋಧಕ ಸಾಮರ್ಥ್ಯ ಹೊಂದಿದೆ ಎಂಬ ತುತ್ತೂರಿಯೊಂದಿಗೆ ರೈತರ ಹೊಲಕ್ಕೆ ಕಾಲಿಟ್ಟ ಬಿಟಿ ಹತ್ತಿಯು ಕೆಲವೇ ದಿನಗಳಲ್ಲಿ ತನ್ನ ಅಸಲಿ ಮುಖವನ್ನು ಅನಾವರಣಗೊಳಿಸಿತು. ಬಿಟಿ ಹತ್ತಿಗೆ ಸಿಂಪಡಿಸುತ್ತಿದ್ದ ಪೀಡೆನಾಶಕಗಳ ಪ್ರಮಾಣ ಅಧಿಕವಾಗುತ್ತಿದ್ದುದು, ಆ ಕೀಟಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಬಯಲಾಯಿತು. ಅದರಲ್ಲೂ ಒಂದೇ ಒಂದು ಬಹುರಾಷ್ಟ್ರೀಯ ಕಂಪನಿ ಮೊನ್ಸಾಂಟೊ ಇಡೀ ಹತ್ತಿ ಬೀಜ ಮಾರುಕಟ್ಟೆ ಮೇಲೆ ಏಕಸ್ವಾಮ್ಯ ಸಾಧಿಸಿದ್ದನ್ನೂ ಮರೆಯುವಂತಿಲ್ಲ. ಈ ಅವಧಿಯಲ್ಲಿ ರೈತರ ಆತ್ಮಹತ್ಯೆಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ನಡೆದು, ಅವರೆಲ್ಲ ಬಿಟಿ ಹತ್ತಿಬೆಳೆಗಾರರು ಎಂಬುದು ಸಹ ಈ ಕುಲಾಂತರಿಯ ಇನ್ನೊಂದು ಕರಾಳ ಮುಖವನ್ನು ತೋರಿಸಿತು.


ಈಗ, ಅಡಿಗೆ ಎಣ್ಣೆಯಾಗಿ ಇಂಡಿಯಾದ ಬಹುಪಾಲು ಕುಟುಂಬಗಳಲ್ಲಿ ದಿನವೂ ಬಳಕೆಯಾಗುತ್ತಿರುವ ಸಾಸಿವೆಯನ್ನು ಕುಲಾಂತರಿಗೊಳಿಸಿ ವಾಣಿಜ್ಯ ಕೃಷಿಯತ್ತ ತರಲು ಹುನ್ನಾರ ನಡೆದಿದೆ. ಪರಿಸರ ಸಂರಕ್ಷಣಾ ಕಾಯ್ದೆ 1989ರ ಅನುಸಾರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಮತ್ತು ಕುಲಾಂತರಿ ತಂತ್ರಜ್ಞಾನಕ್ಕೆ ಅನುಮೋದನೆ ಕೊಡುವ `ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿ’ಗೆ (ಜಿಇಎಸಿ) ಈ ಅರ್ಜಿ ಸಲ್ಲಿಸಲಾಗಿದೆ. ಅಂದ ಹಾಗೆ ಈ ಅರ್ಜಿಯನ್ನು ಸಲ್ಲಿಸಿರುವುದು ದೆಹಲಿ ವಿಶ್ವವಿದ್ಯಾಲಯದ ಸೆಂಟರ್ ಫಾರ್‌ ಜೆನೆಟಿಕ್ ಮ್ಯಾನುಪುಲೇಶನ್‌ ಆಫ್‌ ಕ್ರಾಪ್ ಪ್ಲಾಂಟ್ಸ್ (ಸಿಜಿಎಂಸಿಪಿ). ಡಿಎಂಎಚ್-11 ಅಥವಾ ಧಾರಾ ಮಸ್ಟರ್ಡ್ ಹೈಬ್ರಿಡ್-11 ಹಾಗೂ ಅದರ ಇನ್ನೆರಡು ತಳಿ ಸೇರಿದಂತೆ ಒಟ್ಟಾರೆ ಮೂರು ಕುಲಾಂತರಿ ತಳಿಗಳಿಗೆ ಒಪ್ಪಿಗೆ ಕೊಡುವಂತೆ ಜಿಇಎಸಿಗೆ ಮನವಿ ಮಾಡಿದೆ. ಭಾರತದ ನೂರು ಕೋಟಿಗೂ ಹೆಚ್ಚು ಜನರ ತೆರಿಗೆ ಹಣದಲ್ಲಿನ ಒಂದು ಪಾಲನ್ನು ಈ ಸಂಶೋಧನೆಗೆಂದು ಖರ್ಚು ಮಾಡಲಾಗಿದೆ. ದೆಹಲಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಕುಲಾಂತರಿ ಸಾಸಿವೆ ನಮಗೆ ಯಾಕೆ ಬೇಡವೇ ಬೇಡ ಎಂಬುದಕ್ಕೆ ಇಲ್ಲಿವೆ 25 ಕಾರಣಗಳು.


1. ಕುಲಾಂತರಿ ತಂತ್ರಜ್ಞಾನ ಅಸುರಕ್ಷಿತ:


ಕುಲಾಂತರಿ ತಂತ್ರಜ್ಞಾನವು ಅನೈಸರ್ಗಿಕವಾದುದು. ಇದನ್ನು ಒಂದೊಮ್ಮೆ ಬಳಸಿದರೆ ಉಂಟಾಗುವ ಅನಾಹುತವನ್ನು ತಡೆಯಲಿಕ್ಕಾಗಲೀ, ನಿವಾರಣೆ ಮಾಡಲಿಕ್ಕಾಗಲೀ ಸಾಧ್ಯವಿಲ್ಲ. ಪರಿಸರದ ಮೇಲೆ ಆಗುವ ಅಡ್ಡ ಪರಿಣಾಮ, ಕೃಷಿಯಲ್ಲಿ ಎದುರಾಗುವ ಅಪಾಯಗಳು, ಸೃಷ್ಟಿಯಾಗುವ ಬಿಕ್ಕಟ್ಟು, ರೈತ ಹಾಗೂ ಗ್ರಾಹಕರಿಗೆ ಅನ್ಯ ಸಾಸಿವೆ ಬಿತ್ತನೆ ಬೀಜದ ಆಯ್ಕೆ ಸಿಗದೇ ಹೋಗುವುದು, ಕುಲಾಂತರಿ ಉತ್ಪನ್ನಕ್ಕೆ ಮಾರುಕಟ್ಟೆ ಸಿಗದೇ ಹೋಗುವುದು ಇತ್ಯಾದಿ. ಕುಲಾಂತರಿ ಬೆಳೆಗಳ ಪರಿಣಾಮಗಳ ಬಗ್ಗೆ ಇಂಡಿಯಾಜಿಎಂಇನ್‌ಫೋ.ಒಆರ್‌ಜಿ ವೆಬ್‌ಸೈಟ್ ನೋಡಿ.


2. ದುಷ್ಪರಿಣಾಮ ಬೀರಬಹುದು:


ಕುಲಾಂತರಿ ಸಾಸಿವೆಯಂಥ ಕಳೆನಾಶಕ ಸಹಿಷ್ಣು (ಹರ್ಬಿಸೈಡ್‌ ಟಾಲರೆಂಟ್) ಕುಲಾಂತರಿ ಬೆಳೆಗಳು ಹಲವಾರು ದುಷ್ಪರಿಣಾಮ ಉಂಟು ಮಾಡುತ್ತವೆ. ರಾಸಾಯನಿಕ ಕಳೆನಾಶಕದ ಬಳಕೆ ಸೇರಿದಂತೆ ಹಲವು ಬಗೆಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ಅಧಿಕ ಬಳಕೆಯ ಕಳೆನಾಶಕ ಗ್ಲಿಫೊಸೆಟ್ ಬಳಕೆ ಮಾಡುತ್ತಿರುವ ಅಮೆರಿಕ, ಕೆನಡಾ, ಬ್ರೆಝಿಲ್‌ ಇತರ ದೇಶಗಳಲ್ಲಿ, ಈ ಕಳೆನಾಶಕದ ಪ್ರಮಾಣ ಅತ್ಯಧಿಕವಾಗಿದೆ. ಮೊದಲಿಗೆ ಇದು ಸುರಕ್ಷಿತ ಎಂದು ಕುಲಾಂತರಿ ಪ್ರತಿಪಾದಕರು ಹೇಳಿದ್ದರಾದರೂ 2015ರಲ್ಲಿ ವಿಶ್ವಅರೋಗ್ಯ ಸಂಸ್ಥೆ ಯುಗ್ಲಿಫೊಸೆಟ್‌ಅನ್ನು `ಕ್ಯಾನ್ಸರ್ ಸಂಭಾವಕ’ ಎಂದು ವರ್ಗೀಕರಿಸಿದೆ. 


ಕೃಷಿ ಪ್ರಧಾನದೇಶವಾದ ಭಾರತದಲ್ಲಿ ಎಷ್ಟೋ ಕೃಷಿಕಾರ್ಮಿಕರು ಮಹಿಳೆಯರಾಗಿದ್ದು, ಕಳೆ ತೆಗೆಯುವ ಕೆಲಸದಿಂದಲೇ ದಿನನಿತ್ಯದ ಆದಾಯ ಗಳಿಸಿಕೊಳ್ಳುತ್ತಿದ್ದಾರೆ. ಕಳೆನಾಶಕಗಳ ಬಳಕೆಯಿಂದ ಅವರ ಕೆಲಸವನ್ನು ಕಸಿದುಕೊಳ್ಳುವುದರ ಜತೆಗೆ ಹಲವಾರು ಕೃಷಿ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಹಾಗೆ ನೋಡಿದರೆ, ಕಳೆ ಎಂದು ಪರಿಗಣಿಸುವ ಸಸ್ಯಗಳು ಆಹಾರ ಹಾಗೂ ಮೇವಿಗೆ ಬಳಕೆಯಾಗುತ್ತವೆ. ಕುಲಾಂತರಿ ಬೆಳೆ ಮೇಲೆ ಸಿಂಪಡಿಸುವ ಕಳೆನಾಶಕದಿಂದ ಇತರ ಬೆಳೆ ಬೆಳೆಯಲು ಸಾಧ್ಯವಿಲ್ಲ. ಇದು ಮಿಶ್ರ ಬೆಳೆ ಪದ್ಧತಿಯಿಂದ ರೈತದೂರ ಸರಿಯುವಂತೆ ಮಾಡುತ್ತದೆ. ಜಾಗತಿಕ ಹವಾಮಾನ ವೈಪರೀತ್ಯದ ಬಿಕ್ಕಟ್ಟು ಕಾಡುತ್ತಿರುವ ಈಗಿನ ಸಮಯದಲ್ಲಿ ಕೃಷಿ ಹಾಗೂ ಜೀವ ವೈವಿಧ್ಯವನ್ನು ಸಂರಕ್ಷಿಸಲು ಮುಂದಾಗಬೇಕೇ ಹೊರತೂ, ಕುಲಾಂತರಿ ತಂತ್ರಜ್ಞಾನದಿಂದ ಕೃಷಿ ಸಂಪತ್ತನ್ನು ನಾಶ ಮಾಡುವುದಲ್ಲ. ಪಕ್ಕದ ಜಮೀನಿನಲ್ಲಿ ಸಿಂಪಡಿಸಲಾದ ಕಳೆನಾಶಕದಿಂದ ತಮ್ಮ ಬೆಳೆಗೆ ಹಾನಿಯಾಗಿದೆ ಎಂದು ರೈತರು ನ್ಯಾಯಾಲಯದ ಮೊರೆ ಹೋಗಿರುವ ಪ್ರಕರಣಗಳು ಅಮೆರಿಕದಲ್ಲಿ ನಿತ್ಯವೂ ನಡೆಯುತ್ತಿವೆ. ಕಳೆನಾಶಕ ಸಹಿಷ್ಣು ಸ್ವಭಾವದ ಬೆಳೆಗಳಲ್ಲಿ ರಾಸಾಯನಿಕದ ಅವಶೇಷ ಹೆಚ್ಚಾಗಿರುವುದು ಇನ್ನೊಂದು ಸಮಸ್ಯೆ


3. ಹಿಂಬಾಗಿಲಿನಿಂದ ಬರಲು ಸಂಚು:


ಈಗ ಅನುಮತಿಕೋರಿ ಸಲ್ಲಿಸಲಾಗಿರುವ ಮೂರೂ ಕುಲಾಂತರಿ ಸಾಸಿವೆ ತಳಿಗಳು ಕಳೆನಾಶಕ ಸಹಿಷ್ಣು ಸ್ವಭಾವ ಹೊಂದಿವೆ. ಇದರ ಕೃಷಿಯಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಸಮರ್ಪಕ ಅಧ್ಯಯನ ನಡೆದಿಲ್ಲ. ಈ ತಳಿ ಅಭಿವೃದ್ಧಿಪಡಿಸಿರುವ ದೆಹಲಿ ವಿಶ್ವವಿದ್ಯಾಲಯದ ವಿಜಾ ್ಞನಿಗಳು ಸಿದ್ಧಪಡಿಸಿದ ವರದಿಯಲ್ ಲಿಇದೊಂದು ಅಧಿಕ ಇಳುವರಿ ನೀಡುವ ತಳಿ ಎಂದಷ್ಟೇ ಹೇಳಿದ್ದಾರೆ. ಅನೇಕ ಬಹುರಾಷ್ಟ್ರೀಯ ಕಂಪನಿಗಳು ಇಂಥ ವರದಿಗಳನ್ನೇ ಮುಂದಿಟ್ಟುಕೊಂಡು ಕಾಯುತ್ತ ಕುಳಿತಿವೆ; ಒಂದೊಮ್ಮೆ ಕುಲಾಂತರಿ ಸಾಸಿವೆಗೆ ಅನುಮತಿ ದೊರಕಿದರೆ ಉಳಿದ ಬೆಳೆಗಳಿಗೆ ಅವಕಾಶ ಸುಲಭವಾಗಿ ಸಿಗಲಿದೆ. ಅನೇಕ ಕುಲಾಂತರಿ ಪೇಟೆಂಟ್‌ಗಳು ಜಗತ್ತಿನ ಅತ್ಯಂತ ದೊಡ್ಡಕೀಟನಾಶಕ ಕಂಪನಿಗಳ ಕಪಿಮುಷ್ಠಿಯಲ್ಲಿ ಇರುವುದು ಬಹಿರಂಗ ಸತ್ಯ. ಇವು ಕಳೆನಾಶಕ ಸಹಿಷ್ಣು ತಳಿ ಉತ್ತೇಜಿಸುತ್ತಿರುವುದರ ಹಿಂದಿನ ಉದ್ದೇಶ ಸ್ಪಷ್ಟ. ಹೀಗಾಗಿ ಕುಲಾಂತರಿ ಬೀಜವನ್ನು ಅಭಿವೃದ್ಧಿಪಡಿಸಿದರೆ ಲಾಭವಾಗುವುದು ಕಳೆನಾಶಕ ಕಂಪನಿಗಳಿಗೇ.


4. ಇಳುವರಿ ಹೆಚ್ಚು ಎಂಬ ತಪ್ಪು ಮಾಹಿತಿ:


ಡಿಎಂಎಚ್-11 ಅಥವಾ ಕುಲಾಂತರಿ ಸಾಸಿವೆ ಪರೀಕ್ಷೆ ಮಾಹಿತಿಯು ಅದಕ್ಕೆ ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ. ಇತರ ಹೈಬ್ರಿಡ್ ತಳಿಗಳನ್ನು ಕೈಬಿಟ್ಟು, ಕಡಿಮೆ ಇಳುವರಿಯ ತಳಿಗಳನ್ನು ಕುಲಾಂತರಿ ಇಳುವರಿಯ ಹೋಲಿಕೆಗೆ ಆಯ್ದುಕೊಳ್ಳಲಾಗಿದೆ. ಕುಲಾಂತರಿ ಸಾಸಿವೆ ಚೆನ್ನಾಗಿದೆಎಂದು ಹೇಳಲು ನಿರೂಪಿಸಲಾದ ಸುಳ್ಳು ಅಂಶಗಳು ಈಗ ಬಯಲಾಗಿವೆ. ಮಾರುಕಟ್ಟೆಯಲ್ಲಿ ಬಿಟಿ ಅಲ್ಲದ ಹಲವು ಹೈಬ್ರಿಡ್ ತಳಿಗಳು ಲಭ್ಯವಿವೆ. ಅವು ಉತ್ತಮ ಇಳುವರಿಯನ್ನೂ ಕೊಡುತ್ತಿವೆ. ಗ್ರಾಹಕರಿಗೆ ಅಥವಾ ರೈತರಿಗೆ ಇದರಿಂದ ಪ್ರಯೋಜನ ಇಲ್ಲವೆಂದ ಮೇಲೆ ಯಾಕೆ ಇದಕ್ಕೆ ಅನುಮತಿಕೊಡಬೇಕು?


5. ಉತ್ಪಾದನೆ ಹೆಚ್ಚಳ-ಆಮದು ಕಡಿಮೆ ವಾದತಪ್ಪು:


ಕುಲಾಂತರಿ ಸಾಸಿವೆಗೆ ಅನುಮತಿ ನೀಡಿದರೆ ಭಾರತದಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ತೈಲದಉತ್ಪಾದನೆಯೂ ಅಧಿಕವಾಗಿ, ಆಮದು ಕಡಿಮೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ ಸರ್ಕಾರದ ದಾಖಲೆಗಳ ಪ್ರಕಾರ, ಹೈಬ್ರಿಡ್ ತಳಿಗಳು ಬಂದ ಮೇಲೆ ಉತ್ಪಾದನೆಯಲ್ಲಿ ಹೆಚ್ಚಳವಾಗಿಲ್ಲ; ಆಮದು ಪ್ರಮಾಣವೂ ಕಡಿಮೆಯಾಗಿಲ್ಲ. 


ಮನವಿ ತಿರಸ್ಕರಿಸಬೇಕು:

2002ರಲ್ಲಿ ಬಾಯರ್‌ ಕಂಪನಿಯ ಅಂಗಸಂಸ್ಥೆ ಪ್ರೊ ಆಗ್ರೋ ಇಂಥದೇ ಒಂದು ಕುಲಾಂತರಿ ಸಾಸಿವೆಯನ್ನು ಅಭಿವೃದ್ಧಿಪಡಿಸಿತ್ತು. ಆದರೆ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಸಿಎಆರ್) ಅದನ್ನು ತಿರಸ್ಕರಿಸಿತ್ತು. ಸಾಸಿವೆಯನ್ನು ಬರೀ ಎಣ್ಣೆಗಾಗಿ ಮಾತ್ರವಲ್ಲದೆ ಎಲೆ ಹಾಗೂ ಬೀಜಗಳನ್ನು ಅಡುಗೆಗೆ ನೇರವಾಗಿ ಬಳಸಲಾಗುತ್ತದೆ. ಪ್ರೊ ಅಗ್ರೋದ ಕುಲಾಂತರಿ ಸಾಸಿವೆಗೆ ಅನುಮತಿ ನೀಡಿರಲಿಲ್ಲ. ಅನುಮತಿ ನೀಡಿದರೆ ನಕಲಿ ಕಳೆನಾಶಕಗಳ ಹಾವಳಿ ಹೆಚ್ಚಾಗಿ, ನಿಯಂತ್ರಣಕ್ಕೆ ಸಿಗದೇ ಹೋಗಬಹುದು ಎಂಬ ಆತಂಕವಿತ್ತು.


ಈಗ ದೆಹಲಿ ವಿವಿ ಅಭಿವೃದ್ಧಿಪಡಿಸಿರುವ ಸಾಸಿವೆಗೆ ಸಹ ಈ ಎಲ್ಲ ಅಂಶಗಳು ಅನ್ವಯವಾಗುತ್ತವೆ


6. ಕುಲಾಂತರಿ ಬೆಳೆಗಳಿಗೆ ಈ ಸಾಸಿವೆ ಹೆಬ್ಬಾಗಿಲಿನಂತೆ!


ಸರ್ಕಾರಿ ವಲಯದ ಮೂಲಕ ಕುಲಾಂತರಿ ಸಾಸಿವೆಗೆ ಒಪ್ಪಿಗೆ ಪಡೆಯಲು ದೊಡ್ಡದೊಂದು ಯತ್ನ ನಡೆಯುತ್ತಿದೆ. ಕಂಪನಿಗಳಿಗೆ ಹೋಲಿಸಿದಾಗ, ಸರ್ಕಾರಿ ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿಪಡಿಸುವ ತಳಿಗಳ ಜೈವಿಕ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯ ಸಿಕ್ಕುಬಿಡುತ್ತದೆ! ಸರ್ಕಾರಿ ಸಂಶೋಧನಾ ಸಂಸ್ಥೆಗಳ ಕುಲಾಂತರಿ ತಳಿಗಳೂ ಸುರಕ್ಷಿತವಲ್ಲ ಮತ್ತು ಪೇಟೆಂಟ್‌ ಕೊಡಲೇಬೇಕು, ಆಹಾರ ಮತ್ತು ಕೃಷಿಯಲ್ಲಿಕುಲಾಂತರಿಗೆಒಪ್ಪಿಗೆ ನೀಡಬಾರದುಎಂದು ಸಾರ್ವಜನಿಕ ವಲಯದಿಂದ ಭಾರಿ ಪ್ರತಿರೋಧ ವ್ಯಕ್ತವಾದಾಗ ಬಹುರಾಷ್ಟ್ರೀಯ ಕಂಪನಿಗಳು ಬೇರೆ ಬಗೆಯ ದಾರಿ ಹುಡುಕಿಕೊಳ್ಳುತ್ತವೆ. ಹೀಗಾಗಿ ದೆಹಲಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕುಲಾಂತರಿ ಸಾಸಿವೆಯು ಉಳಿದ ಲಾಭಕೋರ ಕಂಪನಿಗಳ ಪಾಲಿಗೆ ಹೆಬ್ಬಾಗಿಲುಇದ್ದಂತೆ!


7. ಕೃಷಿ ವ್ಯಾಪಾರಕ್ಕೆ ಮಾತ್ರ ಲಾಭ:


`ಬಾರ್’ ವಂಶವಾಹಿ ಪೇಟೆಂಟ್ ಈಗ ಜರ್ಮನಿಯ ಬಹುರಾಷ್ಟ್ರೀಯ ಕಂಪನಿ ಬಾಯರ್‌ಕ್ರಾಪ್ ಸೈನ್ಸ್ ವಶದಲ್ಲಿದೆ. ಕುಲಾಂತರಿ ಸಾಸಿವೆಯು ಸಹಿಷ್ಣುತೆ ಹೊಂದಿರುವ ಗ್ಲುಫೊಸೈನೇಟ್‌ಅಮೋನಿಯಂ ಎಂಬ ಕಳೆ ನಾಶಕವನ್ನು ಭಾರತದಲ್ಲಿ ಮಾರಾಟ ಮಾಡುತ್ತಿರುವುದು ಸಹ ಇದೇ ಬಾಯರ್ ಕಂಪನಿ ಎಂಬುದು ಕುತೂಹಲಕರ. ಹೀಗಾಗಿ ಸರ್ಕಾರಿ ವಲಯದಿಂದ ಹೊರಬಡುವ ಕುಲಾಂತರಿ ಸಾಸಿವೆಯು ಬಹುರಾಷ್ಟಿçÃಯ ಕಂಪನಿಗಳಿಗೆ ಸಾಕಷ್ಟು ಲಾಭತಂದು ಕೊಡಬಲ್ಲದು. ಇಷ್ಟಕ್ಕೂ ಅತ್ಯಧಿಕ ಇಳುವರಿ ಕೊಡುವ ತಳಿಗಳು ಇರುವಾಗ, ಕುಲಾಂತರಿ ಸಾಸಿವೆ ರೈತರಿಗೆ ಯಾಕೆ ಬೇಕಿದೆ?


8. ಕುಲಾಂತರಿ ಸಾಸಿವೆತೀವ್ರ ವಿರೋಧ:

ಭಾರತದಲ್ಲಿ ಕೃಷಿ ಎಂಬುದು ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಸಾಸಿವೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಕುಲಾಂತರಿ ಪ್ರಯೋಗಕ್ಕೆ ಅವಕಾಶ ಕೊಟ್ಟಿಲ್ಲ. ಗುಜರಾತ್, ಬಿಹಾರ್, ಒರಿಸ್ಸಾ, ಪಶಿ ್ಚಮ ಬಂಗಾಳ ಇತರ ರಾಜ್ಯಗಳು ಪ್ರಾಯೋಗಿಕವಾಗಿಯೂ ತಮ್ಮಲ್ಲಿ ಕುಲಾಂತರಿ ಸಾಸಿವೆಗೆ ಅನುಮತಿ ನೀಡಿಲ್ಲ. ದೇಶದ 55ಕ್ಕೂ ಹೆಚ್ಚು ರೈತ ಸಂಘಟನೆಗಳು, ಕೃಷಿ ವಿಜ್ಞಾನಿಗಳು,ನಾಗರಿಕ ಸಂಘಟನೆಗಳೂ ಕುಲಾಂತರಿ ಸಾಸಿವೆಯನ್ನು ಈಗಾಗಲೇ ವಿರೋಧಿಸಿವೆ. 


9. ಪುರುಷ ಬಂಜೆತನದ ಲಕ್ಷಣದಿಂದ ಧಕ್ಕೆ


ಪುರುಷ ಬಂಜೆತನಉಂಟು ಮಾಡುವ ವಂಶವಾಹಿ(ಜೀನ್)ಗಳನ್ನು ಕುಲಾಂತರಿ ತಂತ್ರಜ್ಞಾನದಿಂದ ಸೇರಿಸುವುದರಿಂದ ಮುಂದೆ ಎದುರಾಗುವ ಪರಿಣಾಮಗಳು ಅಷ್ಟಕ್ಕೇ ನಿಲ್ಲುವುದಿಲ್ಲ. ಪುರುಷ ಬಂಜೆತನದ ಲಕ್ಷಣಗಳು ಕುಲಾಂತರಿ ಬೆಳೆಯ ಹೊಲದ ಪಕ್ಕವೂ ವ್ಯಾಪಿಸಿದರೆ, ಆ ಬಿಟಿಯೇತರ ಬೆಳೆಯೂ ಕಲಬೆರಕೆಗೆ ಒಳಗಾಗುವುದಿಲ್ಲವೇ? ಇದರಿಂದಾಗಿ ಹೆಚ್ಚು ಹೆಚ್ಚು ರೈತರು ಬೀಜ ಸ್ವಾವಲಂಬನೆ ಕಳೆದುಕೊಂಡು ಮಾರುಕಟ್ಟೆ ಮೇಲೆ ಅವಲಂಬಿತರಾಗುವುದಿಲ್ಲವೇ? ಇದು ಬೀಜ ಸಾರ್ವಭೌಮತ್ವಕ್ಕೂ ಬೀಜ ವೈವಿಧ್ಯಕ್ಕೂ ಧಕ್ಕೆ ತಂದೊಡ್ಡುತ್ತದೆ.


10. ಭಾರತ ಸಾಸಿವೆ ವೈವಿಧ್ಯದಕೇಂದ್ರ:

ಬದನೆ ವಿಷಯದಲ್ಲಿ ನೋಡಿದಂತೆಯೇ, ಸಾಸಿವೆಯಲ್ಲಿ ಕೂಡ ಭಾರತ ವೈವಿಧ್ಯದ ಕೇಂದ್ರ, . ಸಾಸಿವೆಯ ತವರು ಕೂಡಾ, 2004ರ ಡಾ. ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ಕಾರ್ಯಪಡೆಯ ವರದಿ ಹಾಗೂ 2013ರಲ್ಲಿ ಸುಪ್ರೀಂಕೋರ್ಟ್ ನ ತಾಂತ್ರಿಕತಜ್ಞರ ಸಮಿತಿಯು ನೀಡಿದ ಶಿಫಾರಸಿನ ಅನುಸಾರ, ಇಲ್ಲಿಯ ಮೂಲ ಬೆಳೆ ಅಥವಾ ವೈವಿಧ್ಯದ ಬೆಳೆಗಳಿದ್ದಾಗ ಕುಲಾಂತರಿಗೆ ಅವಕಾಶ ನೀಡದಂತೆ ಸ್ಪಷ್ಟವಾಗಿ ಸೂಚಿಸಿವೆ. ಕುಲಾಂತರಿಸಾಸಿವೆಯಿಂದ ವಂಶವಾಹಿ ಕಲುಷಿತಗೊಂಡು ನಮ್ಮ ಪರಂಪರಾಗತ ಸಾಸಿವೆ ಸಂಪತ್ತನ್ನು ಕಲಬೆರಕೆಯಾಗುವ ಸಾಧ್ಯತೆಯಿದೆ


11. ಕುಲಾಂತರಿ ಸಾಸಿವೆ ಹಿಡಿತಕ್ಕೆ ಸಿಗದು:

ಜಗತ್ತಿನಾದ್ಯಂತ ಸಿಗುವ ಹಲವು ಪ್ರಕರಣಗಳನ್ನು ಪರಿಶೀಲಿಸಿದಾಗ ಕಂಡುಬರುವಅಂಶವೇನೆಂದರೆ, ಕುಲಾಂತರಿ ಸಾಸಿವೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಅಸಾಧ್ಯ; ಕಲಬೆರಕೆ ಅನಿವಾರ್ಯ. ನಾವು ಎಷ್ಟೇ ಮುಂಜಾಗೃತೆ ವಹಿಸಿದರೂ ಜೈವಿಕ ಹಾಗೂ ಭೌತಿಕ ಕಲಬೆರಕೆ ನಮ್ಮ ಹೊಲ- ಗದ್ದೆ ತೋಟದಲ್ಲಿ ಆಗಿ ಬಿಡುವ ಅಪಾಯವಿದೆ. ಇದರಿಂದ ಹೆಚ್ಚು ನಷ್ಟಕ್ಕೆ ಒಳಗಾಗುವವರು ಸಾವಯವ ಕೃಷಿಕರು. 


12. ಸಾವಯವ ಕೃಷಿ ಬಾಧಿತ:

ಸಾವಯವ ಪ್ರಮಾಣ ಪತ್ರ ಪಡೆದಿರುವ ರೈತರು ಮ್ರಮಾಣೀಕರಣ ಮಾಡಿಸಿಕೊಂಡಿರುವ ಸಾವಯವ ಕೃಷಿಕರು ಕುಲಾಂತರಿಯಿಂದ ನೇರವಾಗಿ ಬಾಧಿತರಾಗಲಿದ್ದಾರೆ. ವಂಶವಾಹಿ ಕಲಬೆರಕೆಯಾದರೆ ಅವರ ಪ್ರಮಾಣೀಕರಣ ಸ್ಥಿತಿ ತನ್ನಿಂತಾನೇ ರದ್ದಾಗುತ್ತದೆ. ಸಾಸಿವೆ ಹಿಂಡಿಯನ್ನು ಸಹ ಈ ರೈತರು ಬಳಸುವಂತಿಲ್ಲ. 


13. ಕುಲಾಂತರಿ ಆಹಾರ ಸೇವಿಸಲು ಒತ್ತಾಯಿಸುವಂತಿಲ್ಲ:


ಮಾರುಕಟ್ಟೆ ತಂತ್ರಗಳ ಮೂಲಕ ಕುಲಾಂತರಿ ಬೆಳೆಯು ಶೀಘ್ರವಾಗಿ ವ್ಯಾಪಿಸುತ್ತದೆ. ಕುಲಾಂತರಿ ಸಾಸಿವೆ ಸೇವಿಸಬೇಕೇ? ಅಥವಾ ಬೇಡವೇ? ಎಂಬ ಆಯ್ಕೆಗಳು ಗ್ರಾಹಕರಿಗೆ ಸಿಗುವುದೇ ಇಲ್ಲ. 


14. ಪುರುಷ ಬಂಜೆತನದ ಲಕ್ಷಣ ತರಿಸಲು ಕುಲಾಂತರಿ ಸಾಸಿವೆಯಲ್ಲಿ ಜೀನ್ ಸೇರಿಸಲಾಗುತ್ತದೆ. ಭಾರತದ ಸಸ್ಯ ತಳಿ ಹಾಗೂ ರೈತರ ಹಕ್ಕುಗಳ ರಕ್ಷಣೆ ಕಾಯ್ದೆಯು `ಗರ್ಟ್' ಮನುಷ್ಯರು, ಪ್ರಾಣಿಗಳು ಅಥವಾ ಸಸ್ಯಗಳ ಜೀವಕ್ಕೆ ಅಪಾಯ ತಂದೊಡ್ಡಬಲ್ಲದು ಎಂದು ಬಣ್ಣಿಸುತ್ತದೆ. ಕುಲಾಂತರಿ ಸಾಸಿವೆ ಸಂಶೋಧನೆ ಸಾಮಗ್ರಿ ಹಸ್ತಾಂತರ ಒಪ್ಪಂದದಲ್ಲಿ ಏನನ್ನೂ ಹೇಳಿಲ್ಲ. 

15. ಜೇನು ಉದ್ಯಮದ ಪರಿಣಾಮ:

ಜೇನ್ನೊಣ ಹಾಗೂ ಇತರ ಮಿತ್ರಕೀಟಗಳು ಪರಾಗಸ್ಪರ್ಶದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಇವುಗಳ ಮೇಲೆ ಯಾವುದೇದುಷ್ಪರಿಣಾಮಉಂಟಾದರೆಅದು ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಕುಲಾಂತರಿ ಸಾಸಿವೆಯು ಜೇನ್ನೊಣಗಳ ಮೇಲೆ ಮಾರಕ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಇದು ಅನೇಕ ಅಧ್ಯಯನಗಳಿಂದ (ಅದೂ ಕುಲಾಂತರಿ ತಳಿ ಕಂಪನಿಗಳಿಂದ!) ಸಾಬೀತಾಗಿದೆ. ಕೃಷಿ ಉತ್ಪಾದನೆ ಹಾಗೂ ಜೇನುತುಪ್ಪದ ಉತ್ಪಾದನೆ ಮೇಲೆ ಇದು ಪರಿಣಾಮಉಂಟು ಮಾಡಬಲ್ಲದು. 


16. ಅಡುಗೆ ಎಣ್ಣೆ ಮುಖ್ಯವಲ್ಲವೇ


ಪ್ರತಿ ವ್ಯಕ್ತಿಯು ಸರಾಸರಿ ಸೇವಿಸಬೇಕಾದ ಅಡುಗೆ ಎಣ್ಣೆ ಪ್ರಮಾಣವನ್ನು ಮೀರಿ, ಭಾರತದಲ್ಲಿನ ಬಳಕೆ ಪ್ರಮಾಣ ಏರಿಕೆಯಾಗಿದೆ. ಆದರೆ ಅನಾರೋಗ್ಯಕರ ಉತ್ಪನ್ನ ನೀಡಿ, ಜನರ ಆರೋಗ್ಯ ಹಾಳು ಮಾಡುವುದೇ ಗುರಿಯಾಗಿದೆ.


17. ಮಾಹಿತಿ ರಹಸ್ಯವೇಕೆ? 


ಕೋಟಿಗಟ್ಟಲೇ ವೆಚ್ಚ ಮಾಡಿ ಅಭಿವೃದ್ಧಿಪಡಿಸಲಾದ ಕುಲಾಂತರಿ ಸಾಸಿವೆಯ ಸಂಶೋಧನೆ ಹಾಗೂ ಅದರ ಪರಿಣಾಮಗಳ ಮಾಹಿತಿಯನ್ನು ತೀರಾ ರಹಸ್ಯವಾಗಿ ಇಡಲಾಗಿದೆ. ನಿಯಂತ್ರಕರು ಆ ಮಾಹಿತಿಯನ್ನು ಸಾರ್ವಜನಿಕರಿಂದ ಯಾಕೆ ಮುಚ್ಚಿಡಲು ಬಯಸುತ್ತಿದ್ದಾರೆ ಹಾಗೂ ಅವರು ಯಾರನ್ನು ರಕ್ಷಿಸಲು ಮುಂದಾಗಿದ್ದಾರೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಸುಪ್ರೀಂಕೋರ್ಟ್ ಹಾಗೂ ಕೇಂದ್ರೀಯ ಮಾಹಿತಿ ಆಯೋಗವು ನೀಡಿದಆದೇಶಗಳ ಹೊರತಾಗಿಯೂ ಸಾರ್ವಜನಿಕರಿಗೆ ಈ ಮಾಹಿತಿಯನ್ ನುಕೊಡುತ್ತಲೇ ಇಲ್ಲ ಎಂಬುದು ಹಲವು ಸಂಶಯಗಳಿಗೆ ಕಾರಣವಾಗಿದೆ.


18. ಸಾಸಿವೆ ಪರೀಕ್ಷೆಯು ತಪುದಾರಿಗೆ ಎಳೆಯುವಂತಿದೆ:

ಕುಲಾಂತರಿ ಸಾಸಿವೆ ಕುರಿತ ಅಪಾಯಗಳು ಹಾಗೂ ಪರಿಣಾಮಗಳನ್ನು ತಿಳಿದುಕೊಳ್ಳಲು ಹಲವಾರು ಪರೀಕ್ಷೆ ಮತ್ತು ಅಧ್ಯಯನ ನಡೆಯಬೇಕು. ಸಿಕ್ಕಷ್ಟೇ ಕಡಿಮೆ ಮಾಹಿತಿಯನ್ನು ತಜ್ಞರು ಪ್ರತ್ಯೇಕವಾಗಿ ವಿಶ್ಲೇಷಿಸಿ ಫಲಿತಾಂಶ ನೀಡಿದ್ದಾರೆ. ಇದನ್ನು ಗಮನಿಸಿದರೆ ಉದ್ದೇಶಪೂರ್ವಕವಾಗಿ, ಅವೈಜ್ಞಾನಿಕ ಹಾಗೂ ನಂಬಿಕೆಗೆ ಅನರ್ಹವಾದ ಫಲಿತಾಂಶವನ್ನು ನೀಡಿರುವುದು ಸ್ಪಷ್ಟವಾಗಿಗೋಚರಿಸುತ್ತದೆ.


19. ವೈಯಕ್ತಿಕ ಹಿತಾಸಕ್ತಿ:

ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿಯಲ್ಲಿ ಕುಲಾಂತರಿ ತಳಿಗೆ ಒಪ್ಪಿಗೆಕೊಡಿ ಎಂದು ಮನವಿ ಮಾಡಿದ ವ್ಯಕ್ತಿಯೊಬ್ಬರು ಇದ್ದಾರೆ! ಕುಲಾಂತರಿ ತಳಿ ಅಭಿವೃದ್ಧಿಪಡಿಸಿದವರು ಸ್ವತಃ ತಾವೇ ನಿಯಮಗಳನ್ನು ರೂಪಿಸಿಕೊಂಡಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಈ ಪರೀಕ್ಷೆ ನಡೆದಿವೆ ಎಂದು ಅವರು ಹೇಳಿದ್ದರಾದರೂ, ಅದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ರಹಸ್ಯದಿಂದ ಕೂಡಿದ ನಿಯಂತ್ರಣಾ ವ್ಯವಸ್ಥೆಯಲ್ಲಿ - ಅದೂ ವೈಯಕ್ತಿಕ ಹಿತಾಸಕ್ತಿ ಇರುವಲ್ಲಿ- ಈ ತಪಾಸಣೆ ನಡೆಸಲಾಗಿದ್ದರೆ ಅದು ತಪ್ಪು ಹಾಗೂ ನಂಬಿಕೆಗೆ ಖಂಡಿತ ಅರ್ಹ ಅಲ್ಲವೇ ಅಲ್ಲ. 


20. ಬೇಡ ಎಂದ ಸುಪ್ರೀಂಕೋರ್ಟ್:

ಕುಲಾಂತರಿ ಬೆಳೆಗಳ ಅಪಾಯ ಮಾಪನ ಹಾಗೂ ಅವುಗಳನ್ನು ಬಿಡುಗಡೆ ಮಾಡುವುದು ಭಾರತದಲ್ಲಿ ನ್ಯಾಯಾಂಗ ನಿಂದನೆಗೆಕಾರಣವಾಗುತ್ತದೆ. ಆರು ಸದಸ್ಯರತಜ್ಞ ಸಮಿತಿಯು 5:1 ಅನುಪಾತದಲ್ಲಿ ಕಳೆನಾಶಕ ಸಹಿಷ್ಣು ಬೆಳೆಗಳನ್ನು ಭಾರತದಲ್ಲಿ ನಿಷೇಧಿಸುವಂತೆ ಸಲಹೆ ಮಾಡಿತ್ತು (ಈ ಸಮಿತಿಯ ಒಬ್ಬ ಸದಸ್ಯನ ಸಂಸ್ಥೆಗೆ ಕುಲಾಂತರಿ ಉದ್ಯಮ ಆರ್ಥಿಕ ನೆರವು ಕೊಡುತ್ತಿದೆ?). 


21. ಹೊಣೆಗಾರಿಕೆ ಇಲ್ಲ:

ಕುಲಾಂತರಿಗೆ ಅನುಮತಿ ಕೊಡುವಂತೆ ಮಾಡಲಾದ ಮನವಿಗಳನ್ನು ಭಾರತೀಯ ನಿಯಂತ್ರಕರ ಅನುಪಸ್ಥಿತಿಯಲ್ಲಿ ಪುರಸ್ಕರಿಸಲಾಗುತ್ತಿದೆ. ಇದು ಮುಂದೆ ಭಾರಿ ಮೊತ್ತದ ದಂಡ, ಪರಿಹಾರ ನೀಡಲು ಕಾರಣವಾಗಲಿದೆ. ಕುಲಾಂತರಿಗಳ ಅಪಾಯಕ್ಕೆ ಸಿಲುಕಿ ಸಂಕಷ್ಟ ಎದುರಿಸಬೇಕಾದವರು ನಾಗರಿಕರು. ಇದನ್ನೆಲ್ಲ ಪರಿಗಣಿಸಿ ಅನುಮತಿ ಕೊಡದೇ ಹೋದರೆ, ಸಮಸ್ಯೆಗೆ ಹೊಣೆ ಹೊರಬೇಕಾದ್ದು ಯಾರು? ನಿಯಂತ್ರಕರೇ? ಅಭಿವೃದ್ಧಿಪಡಿಸಿದ ಕಂಪೆನಿಗಳೇ? ಸರ್ಕಾರವೇ? ಸರ್ಕಾರದ ಯಾವುದೇ ಕಾನೂನು ಪಾಲಿಸಿದರೂ ನಷ್ಟ ಅನುಭವಿಸಬೇಕಾದ್ದು ಯಾರು?


22. ಕುಲಾಂತರಿ ಸಾಸಿವೆ ಅನಗತ್ಯ:


ಇಳುವರಿ ಹೆಚ್ಚಳದ ಹೆಸರಿನಲ್ಲಿ ಅಪಾಯಕಾರಿ ಕುಲಾಂತರಿ ತಂತ್ರಜ್ಞಾನವನ್ನು ರೈತರು ಹಾಗೂ ಗ್ರಾಹಕರ ಮೇಲೆ ಒತ್ತಾಯದಿಂದ ಹೇರಲಾಗುತ್ತಿದೆ. ತೆರಿಗೆದಾರರ ನೂರುಕೋಟಿ ರೂಪಾಯಿಗಳನ್ನು ವೃಥಾ ಖರ್ಚು ಮಾಡಿ, ಅಪಾಯಕಾರಿ ರಾಸಾಯನಿಕ ಬಳಕೆ ಹೆಚ್ಚು ಮಾಡುವುದರ ಬದಲಿಗೆ ಸುರಕ್ಷಿತ ಹಾಗೂ ಈಗಾಗಲೇ ಜನಪ್ರಿಯವಾಗಿರುವ ತಂತ್ರಜ್ಞಾನಗಳನ್ನು ರೈತರಿಗೆ ಕೊಡುವುದು ಅಗತ್ಯವಾಗಿದೆ.


23. ಎಣ್ಣೆ ಬೀಜಉತ್ಪಾದನೆಗೆಕುಲಾಂತರಿ ಬೇಕಿಲ್ಲ:

ಎಣ್ಣೆ ಬೀಜ ಉತ್ಪಾದನೆಯನ್ನು ಹೆಚ್ಚಳ ಮಾಡಬೇಕೆಂದರೆ ಅದಕ್ಕೆ ರಾಜಕೀಯ ಪ್ರಬಲ ಇಚ್ಛಾಶಕ್ತಿ ಬೇಕು. ಅದನ್ನು ಬಿಟ್ಟುಅಪಾಯಕಾರಿ ಮಾರ್ಗ ತುಳಿಯಬೇಕಿಲ್ಲ. ಕಡಲೆ ಹಾಗೂ ಸೋಯಾಬೀನ್ ಹೆಚ್ಚು ಉತ್ಪಾದನೆ ಮಾಡಿದ ಸಫಲತೆಯೂ ನಮ್ಮಲ್ಲಿದೆ. ಸಮರ್ಪಕ ನೀತಿಗಳನ್ನು ಮುಂದಿಟ್ಟುಕೊಂಡು, ಆಮದು- ರಫ್ತು  ನೀತಿಗಳನ್ನು ನಮ್ಮರೈತರ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡು ಎಣ್ಣೆಬೀಜ ಉತ್ಪಾದನೆ ಮಾಡಬೇಕಿದೆ. ಭಾರತದ ರೈತರು ಅತ್ಯಧಿಕ ಉತ್ಪಾದನೆ ಮಾಡಲು ಶಕ್ತರಿದ್ದಾರೆ.


ಈ ಮೇಲಿನ ಹಲವು ಅಂಶಗಳು ಕುಲಾಂತರಿ ತಳಿಗೆ ಭಾರತದಲ್ಲಿ ಅನುಮತಿ ಕೊಡಬಾರದು ಎಂದು ಹೇಳುವ ಕಾರಣಗಳಾಗಿವೆ. ಬಿಟಿ ಹತ್ತಿ ಹಾಗೂ ಬಿಟಿ ಬದನೆಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆದ ಮತ್ತು ನಡೆಯುತ್ತಿರುವ ಹೋರಾಟಗಳನ್ನು ಗಮನಿಸಿದರೆ, ಬಿಟಿ ಸಾಸಿವೆಗೆ ಅನುಮೋದನೆ ಖಂಡಿತ ಕೊಡಬಾರದು ಎಂಬಂತಿದೆ. 


ಬಿಟಿ ಹತ್ತಿಗೆಅನುಮತಿ ನೀಡಿ 15 ವರ್ಷಗಳ ಬಳಿಕ, ಬಿಟಿ ಹತ್ತಿಯಿಂದ ರೈತರ ನೇಣು ಕುಣಿಕೆ ಇನ್ನಷ್ಟು ಬಿಗಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇನ್ನು ಇಳುವರಿ ಹೆಚ್ಚಾಗುವುದಿಲ್ಲ ಎಂಬ ಹಂತಕ್ಕೆ ಬಿಟಿ ಹತ್ತಿ ಬಂದು ತಲುಪಿದೆ. ಕಾಯಿ ಕೊರಕಕ್ಕೆ ಪ್ರತಿರೋಧ ಶಕ್ತಿ ಹೊಂದಿದೆ ಎಂದು ಬಣ್ಣಿಸಲಾದ ಬಿಟಿ ಹತ್ತಿಯ ಬಣ್ಣ ಬಯಲಾಗಿದೆ. ಕಾಯಿ ಕೊರಕ ಕೀಟವುತನ್ನ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಇದರಿಂದ ಪೀಡೆನಾಶಕ ಬಳಕೆ ಪ್ರಮಾಣವೂ ಹೆಚ್ಚಾಗಿದೆ. ಹತ್ತಿ ಉತ್ಪಾದಿಸುವ ದೇಶಗಳನ್ನು ಪರಿಗಣಿಸಿದರೆ ಉತ್ಪಾದನೆಯಲ್ಲಿ ನಮ್ಮದು 31ನೇ ದೇಶ. ಆದರೆ ಬಿಟಿ ಹತ್ತಿ ನಿಷೇಧಿಸಿರುವ 23 ದೇಶಗಳು ಉತ್ಪಾದನೆಯಲ್ಲಿ ನಮ್ಮ ಮುಂದಿನ ಸಾಲಿನಲ್ಲಿ ನಿಂತಿವೆ. ಇನ್ನು ಬಿಟಿ ಬದನೆ ವಿಷಯಕ್ಕೆ ಬಂದರೆ, ಈ ಹಿಂದಿನ ಸರ್ಕಾರ ತಾಂತ್ರಿಕ ತಜ್ಞರ ಸಮಿತಿಯ ವರದಿಯನ್ನು ಪರಿಶೀಲಿಸಿ ನಿಷೇಧ ವಿಧಿಸಿದ್ದು ವೈಜ್ಞಾನಿಕವಾಗಿ ಸರಿಯಾಗಿದೆ ಎಂಬುದು ಸಾಬೀತಾಗಿದೆ. ಪದೇ ಪದೇ ಕುಲಾಂತರಿ ತಳಿಗಳನ್ನು ಒತ್ತಾಯದಿಂದ ಹೇರುವ ಸರ್ಕಾರಗಳ ಪ್ರಯತ್ನವನ್ನು ನಾಗರಿಕರು ವಿರೋಧಿಸುತ್ತಲೇ ಇದ್ದಾರೆ. ಚುನಾವಣೆ ಸಮಯದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಬೇರೇನೋ ಆಶ್ವಾಸನೆ ನೀಡಿದ್ದ ಸರ್ಕಾರಗಳು ಈಗ ತಮ್ಮ ನಿರ್ಧಾರವನ್ನು ಬದಲಿಸುತ್ತಿರುವುದೂ ವಿಪರ್ಯಾಸ. 


ಬಿಟಿ ಬದನೆಗೆ ನಿಷೇಧ ವಿಧಿಸಿದ ಮೇಲೆ, ಉಳಿದ ರಾಷ್ಟ್ರಗಳಲ್ಲಿ ಕುಲಾಂತರಿ ತಳಿಗಳು ತಂದೊಡ್ಡಿರುವ ಸಮಸ್ಯೆಗಳೂ ಗೊತ್ತಾಗುತ್ತಿವೆ. ಅಷ್ಟಕ್ಕೂ, ಸುಪ್ರೀಂಕೋರ್ಟ್ ಹಾಗೂ ಕೇಂದ್ರೀಯ ಮಾಹಿತಿ ಆಯೋಗದ ನಿರ್ದೇಶನ ಇದ್ದರೂ ಕುಲಾಂತರಿ ಸಾಸಿವೆ ಕುರಿತ ಸಂಶೋಧನಾ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತಿಲ್ಲ ಎಂಬುದು ಸಂಶಯ ಮೂಡಿಸಿದೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ನಮ್ಮ ಆರೋಗ್ಯ ಹಾಗೂ ಪರಿಸರಕ್ಕೆ ಧಕ್ಕೆಯಾಗುವ, ಅಪಾಯಕಾರಿ ಹಾಗೂ ಅನಗತ್ಯ ತಂತ್ರಜ್ಞಾನವೆನಿಸಿದ ಕುಲಾಂತರಿಯನ್ನು ಅದಷ್ಟು ದೂರ ಇಡಬೇಕಾಗಿದೆ. 


(ಕುಲಾಂತರಿ ಮುಕ್ತ  ಭಾರತ ಮೈತ್ರಿಕೂಟದ ಪರವಾಗಿ ಪ್ರಕಟಿತ)