ಕೋವಿಡ್ ಪರಿಹಾರ ಕೊಡಲಾಗದ ದುಸ್ಥಿತಿಯಲ್ಲಿ  ಗ್ರಾ.ಪಂಗಳಿಂದ ತಲಾ ರೂ.50 ಸಾವಿರ ವಸೂಲಿ - ಪಿಡಿಓಗಳ ಮೇಲೆ ಕ್ರಮಕ್ಕೆ  ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ಆಗ್ರಹ

ಕೋವಿಡ್ ಪರಿಹಾರ ಕೊಡಲಾಗದ ದುಸ್ಥಿತಿಯಲ್ಲಿ  ಗ್ರಾ.ಪಂಗಳಿಂದ ತಲಾ ರೂ.50 ಸಾವಿರ ವಸೂಲಿ ಪಿಡಿಓಗಳ ಮೇಲೆ ಕ್ರಮಕ್ಕೆ  ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ಆಗ್ರಹ

ಕೋವಿಡ್ ಪರಿಹಾರ ಕೊಡಲಾಗದ ದುಸ್ಥಿತಿಯಲ್ಲಿ  ಗ್ರಾ.ಪಂಗಳಿಂದ ತಲಾ ರೂ.50 ಸಾವಿರ ವಸೂಲಿ  - ಪಿಡಿಓಗಳ ಮೇಲೆ ಕ್ರಮಕ್ಕೆ  ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ಆಗ್ರಹ


ಕೋವಿಡ್ ಪರಿಹಾರ ಕೊಡಲಾಗದ ದುಸ್ಥಿತಿಯಲ್ಲಿ  ಗ್ರಾ.ಪಂಗಳಿಂದ ತಲಾ ರೂ.50 ಸಾವಿರ ವಸೂಲಿ


ಪಿಡಿಓಗಳ ಮೇಲೆ ಕ್ರಮಕ್ಕೆ  ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ಆಗ್ರಹ

       ತುಮಕೂರು: ಕೊರೊನಾ ಬಿಕ್ಕಟ್ಟಿನಲ್ಲಿ ರ‍್ತವ್ಯ ನರ‍್ವಹಿಸುವಾಗ ಕೋವಿಡ್ -19 ರೋಗದಿಂದ ಮರಣಿಸುವ ಗ್ರಾಮ ಪಂಚಾಯಿತಿ ನೌಕರರಿಗೆ ತಲಾ ರೂ.30 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದ ರಾಜ್ಯ ರ‍್ಕಾರ ಮೂರು ರ‍್ಷಗಳಾದರೂ ಸಂತ್ರಸ್ಥ ಕುಟುಂಬಗಳಿಗೆ ನಯಾ ಪೈಸೆ ಕೊಟ್ಟಿಲ್ಲ. ಈಗ ಗ್ರಾ.ಪಂ ನೌಕರರ ಸಂಘದ ಒತ್ತಡಕ್ಕೆ ಮಣಿದು ಪರಿಹಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ರ‍್ಕಾರ ಸದರಿ ಮೊತ್ತವನ್ನು ಅದೇ ಗ್ರಾಮ ಪಂಚಾಯಿತಿಗಳ ತೆರಿಗೆ ಹಣದಿಂದ ಪಾವತಿ ಮಾಡುವಂತೆ ಆದೇಶವೊಂದರ ಮೂಲಕ ತಾಕೀತು ಮಾಡಿದೆ.

 
       ಕೋವಿಡ್-19 ನಿರ್ವಹಣೆಯಲ್ಲಿ ಮೃತರಾಗಿರುವ ಸುಮಾರು 160 ಮಂದಿ ಗ್ರಾಮ ಪಂಚಾಯತಿ ನೌಕರರರ ಕುಟುಂಬಗಳಿಗೆ ಕೇವಲ 50 ಕೋಟಿ ಪರಿಹಾರ ನೀಡಲು ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡದೆ, ಜಿಲ್ಲಾ ಪಂಚಾಯಿತಿಗಳ ಹಂತದಲ್ಲಿ “ಆಶ್ವಾಸನೆ ನಿಧಿ” ಎಂಬ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸಿ ಗ್ರಾಮ ಪಂಚಾಯಿತಿಗಳು ತಮ್ಮ ಸ್ವಂತ ಸಂಪನ್ಮೂಲದ ವಾರ್ಷಿಕ ಬೇಡಿಕೆಯ ಆಧಾರದಲ್ಲಿ ವಾರ್ಷಿಕ ವಂತಿಗೆ ನೀಡುವಂತೆ, ಹಾಗೂ ಸದರಿ ನಿಧಿ ಖಾತೆಗೆ ತಕ್ಷಣ ಹಣ ವರ್ಗಾಯಿಸುವಂತೆ ಒತ್ತಡ ಹೇರುತ್ತಿದೆ.

       ಸಂಗ್ರಹವಾಗುವ ನೀಮಿತ ತೆರಿಗೆ ಸಂಪನ್ಮೂಲದಲ್ಲಿ ತಂತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು, ನರ‍್ಮಲ್ಯ ಮೊದಲಾದ ಮೂಲ ಸೌರ‍್ಯಗಳನ್ನು ಸರ‍್ಪಕವಾಗಿ ನರ‍್ವಹಿಸಲಾಗದೇ ನರಳುತ್ತಿರುವ ಗ್ರಾಮ ಪಂಚಾಯಿತಿಗಳಿಂದ ತಲಾ 50,000 ರೂಪಾಯಿಗಳನ್ನು ಇಲಾಖೆಯ ಬ್ಯಾಂಕ್ ಖಾತೆಗೆ ರ‍್ಗಾವಣೆ ಮಾಡುವಂತೆ ಎಲ್ಲ ಜಿಲ್ಲೆಗಳ ಸಿಇಓಗಳು ಒತ್ತಡ ಹೇರುತ್ತಿದ್ದಾರೆ, ಪಿಡಿಓಗಳು ಸಿಇಓಗಳ ಒತ್ತಡಕ್ಕೆ ಮಣಿದು ಗ್ರಾಮ ಪಂಚಾಯಿತಿ ಸಭೆಗಳ ಅನುಮೋದನೆ ಪಡೆಯದೇ ರೂ.50 ಸಾವಿರ ಪಾವತಿ ಮಾಡುತ್ತಿದ್ದಾರೆ, ಇಂಥ ಪಿಡಿಓಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರ‍್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಪ್ರಧಾನ ಕರ‍್ಯರ‍್ಶಿ ಕಾಡಶೆಟ್ಟಿ ಹಳ್ಳಿ ಸತೀಶ್ ಆಗ್ರಹ ಪಡಿಸಿದ್ದಾರೆ.


     ಗ್ರಾಮ ಪಂಚಾಯಿತಿ ನೌಕರರು ಕೋವಿಡ್-19ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವಾಗ ರೋಗಗ್ರಸ್ಥರ ಸಂಪರ್ಕದಿಂದ ಮರಣ ಹೊಂದಿದ್ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಪ್ರಮಾಣೀಕರಿಸಿದಲ್ಲಿ ಅಂತಹವರ ಕುಟುಂಬಕ್ಕೆ ರೂ.30.00(ಮೂವತ್ತು ಲಕ್ಷ) ರೂಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಲಭ್ಯವಿರುವ ಅನುದಾನದಿಂದ ಪರಿಹಾರ ನೀಡಲಾಗುವುದೆಂದು ಸರ್ಕಾರ 2020ರಲ್ಲಿ ಘೋಷಣೆಮಾಡಿತ್ತು.ಆದರೆ ಎರಡು ವರ್ಷಗಳು ಕಳೆದರೂ ಮೃತರಾದ ಗ್ರಾಮ ಪಂಚಾಯತಿ ನೌಕರರರಿಗೆ ಯಾವುದೇ ಪರಿಹಾರ ನೀಡದೇ ಸರ್ಕಾರ ನಿದ್ದೆಯಲ್ಲಿತ್ತು.

 

ಆದರೆ ಇತ್ತೀಚೆಗೆ ನೌಕರರ ಮುಷ್ಕರದ ಬೆದರಿಕೆಯಿಂದ ಎಚ್ಚೆತ್ತ ಸರ್ಕಾರ, ಪರಿಹಾರ ನೀಡಲು ತಾಲ್ಲುಕು ಮತ್ತು ಜಿಲ್ಲಾ ಪಂಚಾಯತಿಗಳ ಅನುದಾನದಲ್ಲಿ ಪರಿಹಾರ ನೀಡಲು  ಪ್ರಯತ್ನಿಸಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ, ಜಿಲ್ಲಾ ಪಂಚಾಯಿತಿಯ ಮಾತೃ ಖಾತೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡುವಂತೆ ಕೆಲವು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರವನ್ನು ಒತ್ತಾಯ ಮಾಡಿದರು. ವಾರ‍್ಷಿಕ ಎರಡು ಮುಕ್ಕಾಲು ಸಾವಿರ ಕೋಟಿ ಬಜೆಟ್ ಮಂಡಿಸಿರುವ ಸರ್ಕಾರ,  ಪಿಡಿಒಗಳು ತಕ್ಷಣ ಹಣ ವರ್ಗಾವಣೆ ಮಾಡದಿದ್ದರೆ ಗ್ರಾಮ ಪಂಚಾಯತಿಯ ಲೆಕ್ಕಪತ್ರ  ತನಿಖೆ ಮಾಡಿಸುವುದಾಗಿ ಪಿಡಿಒಗಳ ಮೂಲಕ ಅಧ್ಯಕ್ಷರನ್ನು ಬೆದರಿಸಿ, ಹಣ ಸಂಗ್ರಹ ಮಾಡುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿರುತ್ತದೆ ಎಂದಿರುವ ಸತೀಶ್ ಗ್ರಾಮ ಪಂಚಾಯತಿಗಳು ಸಂವಿಧಾನದ ಪ್ರಕರಣ 243ಜಿ ಅನ್ವಯ ಸ್ಥಳೀಯ ಸ್ವಯಂ ಸರ್ಕಾರಗಳಾಗಿದ್ದು , ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನ್ವಯ ಯಾವುದೇ ಅನುದಾನವನ್ನು ಖರ್ಚುಮಾಡುವ ಸಂದರ್ಭದಲ್ಲಿ ಸಾಮಾನ್ಯ ಸಭೆ ಕರೆದು ಸಭೆಯ ಅನುಮೋದನೆ ಪಡೆದು ಖರ್ಚು ಮಾಡಬೇಕು. ಆದರೆ ಇಲ್ಲಿ ಸರ್ಕಾರವೇ ಖುದ್ದಾಗಿ ಕಾಯ್ದೆ ಮತ್ತು ಸಂವಿಧಾನದ ಉಲ್ಲಂಘನೆ ಮಾಡಿಸುತ್ತಿದೆ. ಇದನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಹಾ ಒಕ್ಕೂಟ ವಿರೋಧಿಸುತ್ತದೆ. ಎರಡು ಮುಕ್ಕಾಲು ಸಾವಿರ ಕೋಟಿ ಬಜೆಟ್ ಮಂಡಿಸಿರುವ ಸರ್ಕಾರ 50 ಕೋಟಿ ಅನುದಾನಕ್ಕಾಗಿ ಗ್ರಾಮ ಪಂಚಾಯತಿಗಳ ಅನುದಾನಕ್ಕೆ ಕೈ ಹಾಕಿರುವುದು ಸರಿಯಲ್ಲ. ಯಾರಾದರು ಪ್ರಶ್ನಿಸಿದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒಗಳು ಉತ್ತರ ನೀಡಬೇಕಾಗುತ್ತದೆ. ಆದ್ದರಿಂದ ಪರಿಹಾರದ ಹಣವನ್ನು ರಾಜ್ಯ ಸರ್ಕಾರವೇ ತನ್ನ ನಿಧಿಯಿಂದ ನೀಡಬೇಕು, ಮೃತ ನೌಕರರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಹಾಗೂ ಈಗಾಗಲೇ ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿರುವ ಹಣವನ್ನು ಆಯಾ ಪಂಚಾಯತಿಗಳಿಗೆ ವಾಪಸ್ಸು ನೀಡಬೇಕುಎಂದು ಸತೀಶ್ ಒತ್ತಾಯಿಸಿದ್ದಾರೆ.

     ಆದ್ಧರಿಂದ ಈ ಕೂಡಲೇ ರಾಜ್ಯ ಸರ್ಕಾರವು ಸದರಿ ಆದೇಶವನ್ನು ಹಿಂಪಡೆದು ರಾಜ್ಯ್ಯ ಸರ್ಕಾರವೇ ಪರಿಹಾರವನ್ನು ಕೋವಿಡ್- 19ರ ಕಾರಣಕ್ಕಾಗಿ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರಿಗೆ ನೀಡಬೇಕೆಂದು ಮತ್ತೊಮ್ಮೆ ಮಹಾಒಕ್ಕೂಟವು ಒತ್ತಾಯಿಸಿದೆ. ಈ ಕೂಡಲೆ ಈ ರೀತಿಯ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಬೇಕಾದ ವಾತಾವರಣವನ್ನು ಸೃಷ್ಟಿಸಬೇಕು. ಇಲ್ಲವಾದಲ್ಲಿ ಮುಂದಿನ ತಿಂಗಳು ಮೊದಲ ವಾರದಲ್ಲಿ  ಬೆಂಗಳೂರು ಚಲೋ ಕಾರ್ಯಕ್ರಮದ ಮೂಲಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸೇರಿ, ಅನಿರ‍್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದೆಂದು ಒಕ್ಕೂಟದ ಪರವಾಗಿ ಸತೀಶ್ ಎಚ್ಚರಿಕೆ ನೀಡಿದ್ದಾರೆ.


ಸರ‍್ಕಾರ ಗ್ರಾಮ ಪಂಚಾಯಿತಿಗಳನ್ನು 


ಶಾಖೆಗಳಂತೆ ನಡೆಸಿಕೊಳ್ಳಲಾಗುತ್ತಿದೆ

ರಾಜ್ಯ ಸರ್ಕಾರ ನೀಡುವ ಶಾಸನಬದ್ಧ ಅನುದಾನದಲ್ಲಿ ಶೇ 40 ರಷ್ಟನ್ನು ನೌಕರರ ಸಂಬಳಕ್ಕೆ, ಉಳಿದ ಶೇ 60 ರಷ್ಟನ್ನು ವಿದ್ಯುತ್ ಬಿಲ್ಲಿಗೆ ನಿಗದಿಪಡಿಸಲಾಗಿದೆ.ಕೇಂದ್ರ ಸರ್ಕಾರ ನೀಡುವ 15ನೇ ಹಣಕಾಸು ಆಯೋಗದ ಅನುದಾನದಲ್ಲಿ  ಜಲಜೀವನ್ ಮಿಷನ್‌ಗೆ ಹಣ ನೀಡಿಕೆ, ಸ್ವಚ್ಛ ಭಾರತ ಮಿಷನ್ ಅಭಿಯಾನದಲ್ಲಿ ವಾಹನ ಹಾಗೂ ಇತರೆ ಸಾಮಗ್ರಿಗಳ ಖರೀದಿ, ನೌಕರರ ಸಂಬಳ, ವಿದ್ಯುಚ್ಛಕ್ತಿ ಬಿಲ್ ಹೀಗೆ ಎಲ್ಲಾ ತೀರ್ಮಾನಗಳನ್ನು ಮೇಲಿನ ಹಂತದಲ್ಲೇ ತೆಗೆದುಕೊಂಡು, ಮೇಲಿನವರ ಆದೇಶವನ್ನು ಪಾಲಿಸುವಂತೆ ಪಿಡಿಓಗಳ ಮೂಲಕ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. 

ಸ್ವಂತ ಸಂಪನ್ಮೂಲದಲ್ಲೂ ಗ್ರಾಮ ಪಂಚಾಯತಿಗಳ ಮೇಲೆ ಸೋಲಾರ್ ಘಟಕಗಳ ಅಳವಡಿಕೆ, ಡಿಜಿಟಲ್ ಲೈಬ್ರೆರಿ ಮುಂತಾದ ಯೋಜನೆಗಳನ್ನು ರೂಪಿಸಿ ಸಾಮಗ್ರಿ ಸರಬರಾಜು ಏಜೆನ್ಸಿಗಳನ್ನು ರಾಜ್ಯ ಮಟ್ಟದಲ್ಲೆ ನಿಗದಿಪಡಿಸಿ ಅವುಗಳಿಗೆ ಹಣಸಂದಾಯ ಮಾಡುವಂತೆ ಮಾಡಲಾಗುತ್ತಿದೆ.ತಾಲ್ಲೂಕು ಪಂಚಾಯತಿ ಮಟ್ಟದಲ್ಲೂ ಇನ್ಸುನೇಟರ್, ಬ್ಲೀಚಿಂಗ್ ಪೌಡರ್. ಫೆನಾಯಿಲ್, ಮುಂತಾದವುಗಳ ಸರಬರಾಜನ್ನು ತಾವೇ ನಿಗದಿಪಡಿಸಿದ ಏಜೆನ್ಸಿಗಳ ಮೂಲಕ ಮಾಡಿ ಹಣ ಸಂದಾಯ ಮಾಡುವಂತೆ ಮಾಡಲಾಗಿದೆ. 


ಕಸ ಸಂಗ್ರಹಣೆ ವಾಹನ ಖರೀದಿ , ಕಸ ಸಂಗ್ರಹಣೆ ಸಾಮಗ್ರಿಗಳ ಖರೀದಿ ಮುಂತಾದವುಗಳನ್ನು ತಮ್ಮ ಹಂತದಲ್ಲೇ ಏಜೆನ್ಸಿಗಳನ್ನು  ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ನಿಗದಿಪಡಿಸಿ  ಗ್ರಾಮ ಪಂಚಾಯಿತಿಗಳು ಕೊಳ್ಳುವ ಹಾಗೆ ಒತ್ತಡ ಹೇರಲಾಗುತ್ತಿದೆ.ಮೇಲಧಿಕಾರಿಗಳ ಮಾತು ಕೇಳದಿದ್ದ ಪಕ್ಷದಲ್ಲಿ ಗ್ರಾಮ ಪಂಚಾಯತಿಗಳ ಲೆಕ್ಕಪತ್ರಗಳ ತನಿಖೆ ಮಾಡುತ್ತೇನೆ, ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳು ಎದುರಿಸುವ ಕೆಲಸ ಮಾಡುತ್ತಿದ್ದಾರೆ. ಮೇಲಿನ ಎಲ್ಲಾ ಕಾರಣಗಳಿಂದಾಗಿ ಗ್ರಾಮ ಪಂಚಾಯತಿಗಳಿಗೆ ಸಾರ್ವಜನಿಕರ ಬೇಡಿಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಣಕಾಸಿನ ಲಭ್ಯತೆಯೇ ಇಲ್ಲದಂತಾಗಿ ದುರ‍್ಬಲಗೊಂಡಿವೆ.


ಕಾಡಶೆಟ್ಟಿಹಳ್ಳಿ ಸತೀಶ್
ಪ್ರಧಾನ ಕಾರ್ಯದರ್ಶಿ,
ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟ