ಅ. 10: ನಗರದಲ್ಲಿ ಫ್ಯಾಶನ್ ಶೋ 2021 ಗ್ರಾಂಡ್ ಫಿನಾಲೆ

Fashion show grand finale

ಅ. 10: ನಗರದಲ್ಲಿ ಫ್ಯಾಶನ್ ಶೋ 2021 ಗ್ರಾಂಡ್ ಫಿನಾಲೆ

ಅ. 10: ನಗರದಲ್ಲಿ ಫ್ಯಾಶನ್ ಶೋ 2021 ಗ್ರಾಂಡ್ ಫಿನಾಲೆ


ತುಮಕೂರು: ನಗರದ ವಿಂಗ್ಸ್ ಫ್ಯಾಷನ್ ಈವೆಂಟ್ಸ್ ವತಿಯಿಂದ ಅ. 10 ರಂದು ಸಂಜೆ 4 ಗಂಟೆಗೆ ಮಿಸ್, ಮಿಸ್ಟರ್, ಮಿಸಸ್, ಟೀನ್ ಮತ್ತು ಕಿಡ್ಸ್ ಫ್ಯಾಷನ್ ಶೋ-2021 ‘ಗ್ರಾಂಡ್ ಫಿನಾಲೆ’ ಸ್ಪರ್ಧೆಯನ್ನು ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿರುವ ಶ್ರೀ ಗವಿರಂಗ ಕನ್ವೆಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಿಇಒ ಪಿ.ಕೆ. ಅರುಂಧತಿಲಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಗೆ ಸಂಬAಧಿಸಿದAತೆ ಆಡಿಷನ್ ಮುಗಿದಿದ್ದು, ಅ. 10 ರಂದು ‘ಗ್ರಾಂಡ್ ಫಿನಾಲೆ’, ಅಂತಿಮ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಫ್ಯಾಷನ್ ಷೋ ನಡೆಯುತ್ತಿದ್ದು, ನಗರದ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಾದ್ಯಂತ ಸುಮಾರು 80ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ತುಮಕೂರು ಜಿಲ್ಲೆಯ 40ಕ್ಕೂ ಹೆಚ್ಚು ಸ್ಪರ್ಧಿಗಳು ಈ ಫ್ಯಾಷನ್ ಶೋ ನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ 1 ಸಾವಿರ ರೂ., ದೊಡ್ಡವರಿಗೆ 3 ಸಾವಿರ ರೂ. ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಅವರಿಗೆ ಅಗತ್ಯ ಡ್ರಸ್‌ನ್ನು ಫ್ಯಾಷನ್ ಡಿಸೈನರ್ ಅಮೃತಶೆಟ್ಟಿ ಡಿಸೈನ್ ಮಾಡಲಿದ್ದಾರೆ ಎಂದು ತಿಳಿಸಿದರು. 
ಗ್ರಾಂಡ್ ಫಿನಾಲೆಯಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಗ್ರಾಮಾಂತರ ಶಾಸಕರಾದ ಡಿ.ಸಿ. ಗೌರಿಶಂಕರ್, ಮಾಜಿ ಶಾಸಕರಾದ ಶಿವಮೂರ್ತಿ ನಾಯ್ಕ್, ಸುಧಾಕರ್‌ಲಾಲ್, ಮಹಾನಗರಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ, ರಾಷ್ಟಿçÃಯ ಕ್ರಿಬ್ಕೋ ಸಂಸ್ಥೆ ನಿರ್ದೇಶಕ ಆರ್. ರಾಜೇಂದ್ರ, ಮತ್ತಿತರ ಗಣ್ಯರು ಭಾಗವಹಿಸುವರು ಎಂದರು. ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು, ಉದಯೋನ್ಮುಖ ನಟನಟಿಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಫಿಟ್ ಇನ್ ಜಿಮ್‌ನ ಮಾಲೀಕ ಅರ್ಜುನ್ ಪಾಳೇಗಾರ್ ಮಾತನಾಡಿ, ಈ ಸ್ಪರ್ಧೆಗೆ ಮುನ್ನಾ ದಿನವಾದ ಅ.9 ರಂದು ನಗರದಲ್ಲಿ ರ‍್ಯಾಲಿ ನಡೆಸಲು ಉದ್ದೇಶಿಸಿದ್ದು, ಇದರಲ್ಲಿ ಕೊರೊನಾ ವಾರಿಯ್ಸ್ ಮತ್ತು ಮಾಡೆಲ್‌ಗಳು ಭಾಗವಹಿಸಲಿದ್ದಾರೆ. ನಗರದ ಕೋಡಿ ಆಂಜನೇಯಸ್ವಾಮಿ ವೃತ್ತದಿಂದ ಡಾ. ಶ್ರೀ ಶಿವಕುಮಾರಸ್ವಾಮಿ ವೃತ್ತದವರೆಗೆ ಸಾರ್ವಜನಿಕ ಅರಿವು ಮೂಡಿಸುವ ಜಾಥಾ ನಡೆಯಲಿದ್ದು, ಇದಕ್ಕಾಗಿ ಸಂಬAಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ರ‍್ಯಾಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅರ್ಜುನ್ ಪಾಳೆಗಾರ್, ಅಮೃತಾಶೆಟ್ಟಿ, ಕಿರಣ್, ಲಕ್ಷಿö್ಮÃಕಾಂತ್‌ಲಾಲ, ವಿ.ಜೆ. ಶರತ್ ಮುಂತಾದವರು ಇದ್ದರು.