ಫೋಟೋ ದೊಂದಿಗೆ ಸಮಾಚಾರಗಳು

ಶಾಲಾ ಫೋಟೋ ಹಿಂಭಾಗ ಮತ್ತು ಹಕ್ಕಿ ಪಂಜದಲ್ಲಿದ್ದವು ನಾಗರ ಹಾವುಗಳು!?,

ತಿಪಟೂರು ಗ್ರಾಮದೇವತೆ ಕೆಂಪಮ್ಮದೇವಿ ರಥೋತ್ಸವ
4 / 5

4. ತಿಪಟೂರು ಗ್ರಾಮದೇವತೆ ಕೆಂಪಮ್ಮದೇವಿ ರಥೋತ್ಸವ

ತಿಪಟೂರು ಗ್ರಾಮದೇವತೆ ಕೆಂಪಮ್ಮದೇವಿ ರಥೋತ್ಸವ

ತಿಪಟೂರು : ತಿಪಟೂರಿನ ಗ್ರಾಮದೇವತೆ ಕೆಂಪಮ್ಮದೇವಿ ರಥೋತ್ಸವವು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು. ಸಂಜೆ ದೇವಿಯವರ ಸಿಡಿ ಉತ್ಸವ, ಉಯ್ಯಾಲೋತ್ಸವ, ಮಹಾಮಂಗಳಾರತಿ ನೆರವೇರಿಸಲಾಯಿತು. ಈ ಸಂರ‍್ಭದಲ್ಲಿ ರ‍್ಮರ‍್ಶಿ ಎಂ.ಎಸ್.ಚಂದ್ರಶೇಖರಯ್ಯ ನೇತೃತ್ವದಲ್ಲಿ ರಥೋತ್ಸವ ಕ್ಕೆ ಚಾಲನೆ ದೊರೆಯಿತು.
 ಕೆಂಪಮ್ಮ ದೇವಿ ಸನ್ನಿಧಾನವು 800 ರ‍್ಷಗಳ ಇತಿಹಾಸವನ್ನು ಹೊಂದಿದ್ದು, ನಗರದ ಸುತ್ತಮುತ್ತಲ 12 ಹಳ್ಳಿಗಳ ಗ್ರಾಮಸ್ಥರ ಕುಲದೇವತೆಯಾಗಿ ದುಷ್ಟಶಕ್ತಿಗಳ ನಿಗ್ರಹಿಸಿ ಭಕ್ತರನ್ನು ರಕ್ಷಿಸುತ್ತಾ ಬಂದಿದ್ದಾಳೆ. ಸನ್ನಿಧಾನದಲ್ಲಿ ವರ‍್ಷಿಕವಾಗಿ ವಿಭಿನ್ನವಾದ ಆಚರಣೆಗಳ ಮೂಲಕವಾಗಿ ಸುಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ನಗರದ ಗ್ರಾಮದೇವತೆ ಕೆಂಪಮ್ಮದೇವಿ ಜಾತ್ರಾಮಹೋತ್ಸವವು ನಡೆಯುತ್ತಿದ್ದು ಭಕ್ತಾದಿಗಳು ತಮ್ಮ ಹರಕೆಗಳನ್ನು ತೀರಿಕೊಳ್ಳಲು ದೇವಾಲಯಕ್ಕೆ ಆಗಮಿಸುತ್ತಾರೆ.  ನಗರದಲ್ಲಿ ಜಾತಿ, ರ‍್ಮ, ಮತವೆಂದು ಏಣಿಸದೆ ಹಿಂದೂ-ಮುಸ್ಲಿಮರಾದಿಯಾಗಿ ಎಲ್ಲರೂ ಕೆಂಪಮ್ಮ ದೇವಿಯ ದೇವಾಲಯಕ್ಕೆ ಭೇಟಿ ನೀಡುವುದು ಸಹಜ, ಅದೇ ರೀತಿ ದೇವಾಲಯದ ಮುಂಭಾಗದಲ್ಲಿರುವ ಚಿಕ್ಕಮ್ಮ, ಹುತ್ತದಮ್ಮ ದೇವಾಲಯಗಳು ಇವೆ. ತಿಪಟೂರು ಗ್ರಾಮದೇವತೆ ಕೆಂಪಮ್ಮನಿಗೆ ಪೂಜೆ ಸಲ್ಲಿಸಿದ ಬಳಿಕ ಉಳಿದ ದೇವಾಲಯಗಳಿಗೆ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ.

Previous Next