‘ಮಡಿವಾಳ ಸಮಾಜಕ್ಕೆ ಕಾಂಗ್ರೆಸ್ ಎಂಎಲ್‌ಎ ಟಿಕೆಟ್’ ಬೃಹತ್‌ರಾಜ್ಯ ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭರವಸೆ
‘ಮಡಿವಾಳ ಸಮಾಜಕ್ಕೆ ಕಾಂಗ್ರೆಸ್ ಎಂಎಲ್‌ಎ ಟಿಕೆಟ್’ ಬೃಹತ್‌ರಾಜ್ಯ ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭರವಸೆ
‘ಮಡಿವಾಳ ಸಮಾಜಕ್ಕೆ ಕಾಂಗ್ರೆಸ್ ಎಂಎಲ್‌ಎ ಟಿಕೆಟ್’
ಬೃಹತ್‌ರಾಜ್ಯ ಸಮಾವೇಶದಲ್ಲಿ ಸಿದ್ದರಾಮಯ್ಯ,
ಡಿ.ಕೆ.ಶಿವಕುಮಾರ್ ಭರವಸೆ
ತುಮಕೂರು:ಮಡಿವಾಳ ಸಮಾಜಕ್ಕೆಕಾಂಗ್ರೆಸ್ ಪಕ್ಷಅಧಿಕಾರಕ್ಕೆ ಬಂದಾಗರಾಜಕೀಯಅಧಿಕಾರ ನೀಡಲಾಗಿದೆ. ಮುಂದೆಯೂ ನೀಡಲಿದ್ದೇವೆ. ನಿಮ್ಮಕೋರಿಕೆಯಂತೆ ವಿಧಾನಸಭೆಯಟಿಕೇಟ್ ನೀಡಲು ಪಕ್ಷ ಸಿದ್ದವಿದೆ.ಅನ್ನಪೂರ್ಣಮ್ಮ ವರದಿಯನ್ನುಕೇಂದ್ರ ಸರಕಾರಕ್ಕೆ ಶಿಫಾರಸ್ಸ ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಹೆಗ್ಗರೆಯಲ್ಲಿ ಭಾನುವಾರಮಡಿವಾಳ ಸಮಾಜದಜನಜಾಗೃತಿರಾಜ್ಯಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದಅವರು, ಶೋಷಿತ, ಅವಕಾಶ ವಂಚಿತ ಸಮಾಜಗಳ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಸರಕಾರಗಳ ಅದ್ಯಕರ್ತವ್ಯವಾಗಿದೆಎಂದರು.
ಮಡಿವಾಳ ಸಮಾಜಅತ್ಯಂತ ಹಿಂದುಳಿದ ಸಮಾಜ.ಇಷ್ಟುದೊಡ್ಡ ಸಮಾವೇಶ ನಡೆಸುವುದುಅವರಿಗೆ ಸವಾಲೇ ಸರಿ.ಮೇಲು, ಕೀಳು ಎಂಬ ಅಸಮಾನತೆಗೆ ವ್ಯವಸ್ಥೆಯೇಕಾರಣ.ಅಕ್ಷರದಿಂದವAಚಿತರಾದವರು,ಅಸಮಾನತೆಅನುಭವಿಸುತ್ತಿದ್ದಾರೆ.ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಇಂದಿಗೂ ಕೆಲ ಸಮುದಾಯಗಳಿಗೆ ಸಮಾನತೆಎಂಬುದು ಕನ್ನಡಿಯೊಳಗಿನ ಗಂಟಾಗಿದೆ.ಸಂವಿಧಾನದಆಶಯದಂತೆ ಈ ದೇಶದ ಸಂಪತ್ತು, ಅಧಿಕಾರಎರಡರಲ್ಲಿಯೂಆಯಾಯಜನಸಂಖ್ಯೆಗೆಅನುಗುಣವಾಗಿ ಪಾಲು ದೊರೆಯಬೇಕುಎಂದು ಸಿದ್ದರಾಮಯ್ಯ ತಿಳಿಸಿದರು.
ಕಾಯಕವೇ ಕೈಲಾಸ ಎಂಬ ಬಸವಣ್ಣನವರತತ್ವದಂತೆ ಬದುಕುತ್ತಿರುವವರು ನೀವು. ಯಾವ ವೃತ್ತಿಗಳು ಕೀಳಲ್ಲ.ವೃತ್ತಿಗಳೇ ಜಾತಿಗಳಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿವೆ.ನನಗೆ ಸ್ವರ್ಗ, ನರಕದ ಬಗ್ಗೆ ನಂಬಿಕೆಯಿಲ್ಲ. ಶರಣರು ತಿಳಿಸಿದಂತೆ ಆಚಾರವೇ ಸ್ವರ್ಗ, ಆನಾಚಾರವೇ ನರಕಎಂದು ನಡೆದುಕೊಂಡವನು.ನಾವು ಮನುಷ್ಯರುಎಂದು ತಿಳಿದು ಸಮಾನಗೌರವದಿಂದ ಬದುಕುವುದನ್ನುಕಲಿಯೋಣ.ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಾವು ಬದ್ದರಿದ್ದೇವೆ. ಎಲ್ಲಿಯವರೆಗೆ ಅಸಮಾನತೆಇರುತ್ತದೆ.ಅಲ್ಲಿಯವರೆಗೆ ಮೀಸಲಾತಿ ಅನಿರ್ವಾಯ.ಮೀಸಲಾತಿ ವಿರೋಧಿಗಳನ್ನು ದಿಕ್ಕರಿಸಿ, ಇಲ್ಲದಿದ್ದರೆ ಸಾಮಾಜಿಕ ನ್ಯಾಯವೆಂಬುದು ಶೋಷಿತ ಸಮುದಾಯಗಳಿಗೆ ಮರೀಚಿಕೆಯಾಗಲಿದೆಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,ನಾನು ಹಲವು ವರ್ಷಗಳಿಂದ ಹತ್ತಿರದಿಂದ ಸಮಾಜವನ್ನು ನೋಡಿದ್ದೇನೆ.ಸಮಾಜದ ಕೊಳೆ ತೊಳೆಯುವ ಕೆಲಸವನ್ನು ಮಾಡುತ್ತಿದೆ. ಯಾವ ವೃತ್ತಿಯೂ ಕೀಳಲ್ಲ.ವಿಷ ಸರ್ಪ ಸೇರಿರುವ ಹುತ್ತವನ್ನೇದೇವರೆಂದು ಪೂಜಿಸುವವ ಸಂಸ್ಕೃತಿ ನಮ್ಮದು.ಈದೇಶಕ್ಕೆ ಸ್ವಾತಂತ್ರತAದುಕೊಟ್ಟಕಾAಗ್ರೆಸ್ ಪಕ್ಷಎಲ್ಲಾ ಶ್ರಮಜೀವಿಗಳ ಜೊತೆಇದೆ. ಮುಂದೆಯೂಇರುತ್ತದೆ.ಕಾAಗ್ರೆಸ್ ಈ ಸಮುದಾಯಕ್ಕೆಅರ್ಥಿಕ,ಶೈಕ್ಷಣಿಕ,ರಾಜಕೀಯ ಬಲ ನೀಡಲು ಸಿದ್ದವಿದೆ.ನಿಮ್ಮಕೋರಿಕೆಯಂತೆ ಹೆಚ್.ಎಂ.ಗೋಪಿಕೃಷ್ಣಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಲು ಸಿದ್ದರಿದ್ದೇವೆ.ಪರಸ್ವರ ಕೈಜೋಡಿಸಿ, ದೇಶ ಮತ್ತು ಸಮಾಜದಅಭಿವೃದ್ದಿಗೆದುಡಿಯೋಣಎಂದು ತಿಳಿಸಿದರು.
ಮಾಜಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವುದರಲ್ಲಿ ನಮ್ಮ ವಿರೋಧವಿಲ್ಲ. ಆದರೆಜನಸಂಖ್ಯೆಗೆಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವುದು ಒಳ್ಳೆಯದು. ಹಾಗಾದಾಗ ಮಾತ್ರ ಈಗಾಗಲೇ ಆ ಜಾತಿಪಟ್ಟಿಯಲ್ಲಿರುವ ಸಮುದಾಯಗಳಿಗೆ ತೊಂದರೆಯಾಗುವುದುತಪ್ಪಿದAತಾಗುತ್ತದೆಎAದರು.
ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ,ರಾಜ್ಯವನ್ನು ಹಸಿವು ಮುಕ್ತ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರುಅನ್ನಭಾಗ್ಯಯೋಜನೆಯನ್ನುಜಾರಿಗೆತಂದರು.ಆದರೆ ನಾವು ಯೋಜನೆಯ ಹಿಂದಿನ ಸಾಮಾಜಿಕ ಕಳಕಳಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿಹಿಂದೆ ಬಿದ್ದೆವು. ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯದೊರೆಯಬೇಕೆಂದರೆಅದುಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ತಳಸಮುದಾಯಗಳಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದರು.ಅವುಗಳನ್ನು ಬಳಸಿಕೊಂಡು ನಾವೆಲ್ಲರೂಒಗ್ಗೂಡಿ ಸಮ ಸಮಾಜ ನಿರ್ಮಾಣಕ್ಕೆ ಹೋರಾಡೋಣಎಂದರು.
ಕರ್ನಾಟಕರಾಜ್ಯ ಮಡಿವಾಳ ಸಮಾಜದಅಮರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.ತರೀಕೆರೆ ಹಾಗೂ ಅಜ್ಜಂಪುರ ವಿಧಾನ ಸಭಾಕ್ಷೇತ್ರದಲ್ಲಿ ಪರಾಜಿತಅಭ್ಯರ್ಥಿ ಗೋಪಿಕೃಷ್ಣ, ಜಿಲ್ಲಾ ಮಡಿವಾಳರ ಸಂಘದಅಧ್ಯಕ್ಷಲಕ್ಷö್ಮಣ್,ಮಾಜಿ ಸಚಿವ ಟಿ.ಬಿ.ಜಯಚಂದ್ರ,ವಿಧಾನಪರಿಷತ್ ಸದಸ್ಯಆರ್.ರಾಜೇಂದ್ರ,ಹೆಚ್.ಎA.ರೇವಣ್ಣ,ಶಾಸಕ ವೆಂಕಟರಮಣಪ್ಪ,ಮಾಜಿ ಸಂಸದಚAದ್ರಪ್ಪ,ನಾಗರಾಜು, ಮಳವಳ್ಳಿ ಶಿವಣ್ಣ,ವೆಂಕಟರಮಣಸ್ವಾಮಿ, ಶಾಂತಕುಮಾರ್, ಕೆಂಪನರಸಯ್ಯ ಸೇರಿದಂತೆರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಮುಖಂಡರು ವೇದಿಕೆಯಲ್ಲಿದ್ದರು.ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಡಿವಾಳ ಸಮಾಜದ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶ ಮುಗಿದರೂ ಬಸ್‌ಗಳಲ್ಲಿ ಜನರು ಬರುತ್ತಲೇಇದ್ದರು.
ಮಡಿವಾಳರನ್ನು ಎಸ್‌ಸಿ ಪಟ್ಟಿಗೆ ಶಿಫಾರಸು ಮಾಡಲಿ
ಸಿ.ನಂಜಪ್ಪ , ಮಡಿವಾಳ ಸಮಾಜದರಾಜ್ಯಾಧ್ಯಕ್ಷ
2016-17ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್‌ಕಾಲೇಜು ಮೈದಾನದಲ್ಲಿ ಮಾಡಿದ ಸಮಾವೇಶದ ಫಲವಾಗಿ ಸಿದ್ದರಾಮಯ್ಯ ಅವರುಐದು ನಿಗಮ ಮಂಡಳಿಗಳಲ್ಲಿ ನಮ್ಮ ಸಮಾಜದವರಿಗೆಅಧ್ಯಕ್ಷ, ಸದಸ್ಯ ಸ್ಥಾನ ನೀಡಿದರು.ಅಲ್ಲದೆ ಕುಲಪತಿ, ಅಕಾಡೆಮಿಅಧ್ಯಕ್ಷ ಸ್ಥಾನ ನೀಡಿದರು.ಮೂರು ವರ್ಷದಲ್ಲಿ 60 ಕೋಟಿರೂಅನುದಾನ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದರು.ಮಾಚಿದೇವಜಯಂತಿಆಚರಣೆಗೆ ಅವಕಾಶ ಕಲ್ಪಿಸಿದರು.ಆದರೆ ಕಳೆದ ಮೂರು ವರ್ಷಗಳಿಂದ ನಮ್ಮ ಮಾಚಿದೇವಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಿಲ್ಲ. ಅನುದಾನವೂಇಲ್ಲ. ಆನಾಥರಾಗಿದ್ದೇವೆ. ಒಂದು ಇಸ್ತಿç ಪೆಟ್ಟಿಗೆ ಕೊಳ್ಳಲು ನಮ್ಮಲ್ಲಿ ಶಕ್ತಿ ಇಲ್ಲ. ಹತ್ತಾರು ಬಾರಿ ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಅವರನ್ನುಕಂಡು ಮಾತನಾಡಿದರು ಪ್ರಯೋಜನವಿಲ್ಲದಾಗಿದೆ. ಹಾಗಾಗಿ ನಮ್ಮನ್ನುಯಾರು ಗುರುತಿಸಿ, ಸಹಕಾರ ನೀಡಿದ್ದಾರೆಅವರ ಹಿಂದೆ ಹೋಗುವುದು ನಮ್ಮಧರ್ಮ ಹಾಗಾಗಿಯೇಇಂದುಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಈ ಸಮಾವೇಶ ನಡೆಸುತ್ತಿದ್ದೇವೆ. ನಿಮಗೂ ನಮ್ಮ ಬಗ್ಗೆ ಕಾಳಜಿ ಇದ್ದರೆ ಮೊದಲುಕೇಂದ್ರಕ್ಕೆ ಎಸ್ಸಿ ಜಾತಿ ಪಟ್ಟಿಗೆ ಸೇರಿಸುವ ಶಿಫಾರಸ್ಸು ಕಳುಹಿಸಲಿ.