ಗೇಮಿಫೈ - ಪ್ಲೇ ಟು ಅರ್ನ್- ಡಾ ಪ್ರಿಯಾಂಕ

ಗೇಮಿಫೈ - ಪ್ಲೇ ಟು ಅರ್ನ್

ಗೇಮಿಫೈ - ಪ್ಲೇ ಟು ಅರ್ನ್- ಡಾ ಪ್ರಿಯಾಂಕ

ಮೊಬೈಲ್ ಅಥವಾ ಸೆಲ್ ಫೋನ್ ಎಂದು ಕರೆಯಲಾಗುವ ನಿಸ್ತಂತು ದೂರವಾಣಿ ಕೇವಲ ದೂರದವರೊಂದಿಗೆ ಮಾತುಕತೆ ನಡೆಸುವುದಕ್ಕೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ. ದೂರವಾಣಿಗಿಂತ ಹೆಚ್ಚಿನದಾಗಿ ಕ್ಯಾಮೆರಾ, ವಿಡಿಯೋ ಕ್ಯಾಮೆರಾ, ರೇಡಿಯೋ, ಕ್ಯಾಲುಕ್ಯಲೇಟರ್ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಇಂಟರ್‌ನೆಟ್ ಆಧಾರಿತ ಫೀಚರ್‌ಗಳು ಈಗ ಮೊಬೈಲ್‌ನಲ್ಲಿ ಲಭ್ಯ. ಜೊತೆಗೆ ಆರಂಭದ ದಿನಗಳಲ್ಲಿ ವಿಡಿಯೋ ಗೇಮ್ಸ್ ಎಂದು ಕರೆಯಲಾಗುತ್ತಿದ್ದ ಆಟಗಳು ಹಾಗೂ ಆನ್ ಲೈನ್ ರೆಮ್ಮಿ ಇತ್ಯಾದಿಗಳೂ ಪ್ರಾಮುಖ್ಯತೆ ಪಡೆದುಕೊಂಡಿವೆ. ಆಧುನಿಕ ತಲೆಮಾರಿನ ನಾಡಿಮಿಡಿತವನ್ನು ಅರಿತಿರುವ ಲೇಖಕಿ ಪ್ರಿಯಾಂಕ ಎಂ.ಜಿ. ಈ ಲೇಖನದಲ್ಲಿ ಆಟದ ಜೊತೆಗೆ ಹಣ ಗಳಿಕೆ ಹೇಗೆ ಎಂಬುದನ್ನೂ ವಿವರಿಸಿದ್ದಾರೆ. ಗಮನ ಕೊಟ್ಟು ಓದದಿದ್ದರೆ ಸುಲಭವಾಗಿ ಅರ್ಥವಾಗುವುದಿಲ್ಲ.-ಸಂಪಾದಕ 


ಗೇಮಿಫೈ - ಪ್ಲೇ ಟು ಅರ್ನ್


               ಗೇಮಿಫೈ (Game+fi) ಒಂದು ಗೇಮ್ ಅನ್ನು ಬ್ಲಾಕ್‌ಚೈನ್, ಕ್ರಿಪ್ಟೋ ಕರೆನ್ಸಿ, ವೆಬ್-3 ತಂತ್ರಜ್ಞಾನ ಮತ್ತು NFT (Non Fungible Token) ಅನ್ನು ಉಪಯೋಗಿಸಿಕೊಂಡು ಹೊಸ ಆಟಗಳನ್ನು ಸೃಷ್ಟಿಸುವುದು. ಉದಾ: ಪಬ್ ಜಿ, ಟೆಂಪಲ್ ರನ್ ಅದರಲ್ಲಿ NFT ಮುಖಾಂತರ ಆ ಆಟಕ್ಕೆ ಬೇಕಿರುವ ಸೂಕ್ತ ವಾತಾವರಣ, ಆಟದಲ್ಲಿನ ಅವತಾರ್ ಮತ್ತು ಹೆಚ್ಚುವರಿ ಪ್ರಾರ‍್ಟಿಗಳನ್ನು ಬ್ಲಾಕ್‌ಚೈನ್ ಮೂಲಕ ಕ್ರಿಯೇಟ್ ಮಾಡುವುದು. ಅಲ್ಲಿ ಯಾವುದಾದರು ಒಂದು ಪ್ರಾರ‍್ಟಿಗಳಾದ ಕತ್ತಿ, ಬಂದೂಕು ಆಟದಲ್ಲಿನ ಅವತಾರ್ ಬಳಸುತ್ತಿರುತ್ತದೆ, ಆ ಬಂದೂಕಿನ ಬಣ್ಣ, ಮತ್ತಿತರ ಯಾವುದೇ ಹೆಚ್ಚುವರಿ ಫೀರ‍್ಸ್ಗಳನ್ನು ನಾವು ಟೋಕನ್ ಮೂಲಕ ಖರೀದಿ ಮಾಡಿ ಮಾರಾಟ ಮಾಡಬಹುದು. ಆ ಹಣ ನಮ್ಮ ವ್ಯಾಲೆಟ್ ಅಡ್ರೆಸ್ಸಿಗೆ ಬಂದು ಸೇರುತ್ತದೆ. ಅದನ್ನೇ ಇಲ್ಲಿ ನಾವು ಪ್ಲೇ ಟು ರ‍್ರ್ನ್ ಅಥವಾ ಗೇಮಿ ಫೈ ಎಂದು ಕರೆಯುವುದು. 


ಗೇಮಿ ಫೈ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?


               ಗೇಮಿ ಫೈ “ಪ್ಲೇ ಟು ಅರ‍್ರ್ನ್” ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಉದಾ- ಮನಾ, ಸ್ಯಾಂಡ್ ಬಾಕ್ಸ್, ಗಲ ಗೇಮ್ಸ್, ಈ ಆಟಗಳು ಮಾರುಕಟ್ಟೆಯಲ್ಲಿ ಪ್ಲೇ ಟು ಅರ‍್ರ್ನ್ ಎಂದು ಬಾರಿ ಸದ್ದು ಮಾಡುತ್ತಿದೆ. ಈ ಪರಿಕಲ್ಪನೆಯಲ್ಲಿ ಆಟಗಳನ್ನು ಒಂದೊಂದು ಗುರಿಗಳನ್ನು ಮುಟ್ಟುತ್ತಾ ಹೋದಂತೆ ಅಲ್ಲಿ ಆಟಗಾರರನ್ನು ಪ್ರೋತ್ಸಾಹಿಸಲು ಹಣವನ್ನು ಬಹುಮಾನವಾಗಿ ನೀಡುತ್ತಾರೆ. ಇನ್ನೂ ಅನೇಕ ಬ್ಲಾಕ್ ಚೈನ್ ಆಟಗಳಲ್ಲಿ ತೊಡಗಿಕೊಂಡಿರುವವರಿಗೆ ಪೂರ್ಣವಧಿ ಆದಾಯವನ್ನು ಅಲ್ಲಿ ಗಳಿಸಲು ಅವಕಾಶ ಮಾಡಿಕೊಡಲಾಗಿದೆ. ಅಂತಹ ಆನ್‌ಲೈನ್ ಆಟಗಳನ್ನು ವಿಕೇಂದ್ರೀಕೃತ ಹಣಕಾಸು DeFi ಉಪಕರಣಗಳೊಂದಿಗೆ ಸಂಯೋಜಿಸಬಹುದು. ಉದಾ: ಲ್ಯಾಂಡಿಂಗ್ ಪೇಜಸ್, ಲೋನ್ಸ್, ಫಾರ್ಮಿಂಗ್ಸ, ಹೊಸ ಟೋಕನ್‌ಗಳನ್ನು ನೀಡುವ ಉಪಕರಣಗಳು, ಅಲ್ಗಾರಿದಮಿಕ್ ಇತ್ಯಾದಿ. ಈ ರೀತಿಯ ಗೇಮಿಂಗ್ ಯೋಜನೆಗಳನ್ನು ಬ್ಲಾಕ್‌ಚೈನ್ ವಿತರಿಸಿದ ಲೆಡ್ಜರ್‌ನಲ್ಲಿ ಪ್ರಾರಂಭಿಲಾಗುತ್ತಿದೆ. ಇದರ್ಥ ಆಟಗಾರರು ಸ್ವೀಕರಿಸುವ ಎಲ್ಲಾ ವಸ್ತುಗಳ ಮೇಲೆ ಅವರಿಗೆ ಸಂಪೂರ್ಣ ಹಕ್ಕಿರುತ್ತದೆ. ಗೇಮಿಫೈ ಇಕೋಸಿಸ್ಟಮ್ ಬಹಳ ಸರಳವಾಗಿದೆ. ನಾವು ಇಲ್ಲಿ ಆಟವಾಡಿ ಬೋನಸ್ ಹಣವನ್ನು ಗಳಿಸುತ್ತೇವೆ. ಕೆಲವೊಂದು ಗೇಮಿಂಗ್ ಪ್ರಾಜಕ್ಟ್ಗಳಲ್ಲಿ ಕೆಲವು ಕ್ರಿಪ್ಟೋಗಳ ನಮ್ಮ ಹೂಡಿಕೆ ಮಾಡಿ ಆಟವಾಡಬೇಕಿದೆ. ಉದಾ: ಕೆಲವು ಬ್ಲಾಕ್‌ಚೈನ್ ಆಟಗಳನ್ನು ಪೂರ್ಣಗೊಳಿಸುವುದಕ್ಕಾಗಿ ಆಟಗಾರರಿಗೆ ರಿವಾರ್ಡ್ ನೀಡುತ್ತದೆ. ಅಲ್ಲಿ ನಾವು ಪಡೆದಿರುವ ವಿವಿಧ ಸ್ವತ್ತುಗಳನ್ನು ಬೇರೆ ಆಟಗಾರರಿಗೆ ಮಾರಾಟ ಮಾಡಿ ಇನ್ನಷ್ಟು ಹಣ ಗಳಿಸಬಹುದು. ಇದಕ್ಕೆ ಆಕ್ಸಿ ಇನ್ಫಿನಿಟಿ ಯೋಜನೆಯು ಉತ್ತಮ ಉದಾಹರಣೆಯಾಗಿದೆ. 


                   DappRadar ಪೋರ್ಟಲ್ ಪ್ರಕಾರ, ಈ ಬ್ಲಾಕ್‌ಚೈನ್ ಆಟದ ಡೆವಲಪರ್‌ಗಳು ಒಂದು ತಿಂಗಳಲ್ಲಿ 800 ಮಿಲಿಯನ್ ಡಾಲರ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕ್ಸೆಂಚರ್ ಕಂಪನಿಯ ಒಂದು ವರದಿಯ ಪ್ರಕಾರ ಗ್ಲೋಬಲ್ ಗೇಮಿಂಗ್ ಇಂಡಸ್ಟಿಗಳು 300 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ತಮ್ಮ ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಅವರ ವರದಿಯಲ್ಲಿ ಕಳೆದ 3 ವರ್ಷಗಳಲ್ಲಿ ಆನ್‌ಲೈನ್ ಆಟಗಳನ್ನು ಆಡುವವರ ಸಂಖ್ಯೆಯೂ ಸರಿಸುಮಾರು 2.7 ಬಿಲಿಯನ್ ಅಷ್ಟು ಹೆಚ್ಚಿದೆ, ಇನ್ನು 2025 ರಷ್ಟರಲ್ಲಿ ಆಟಗಾರರ ಸಂಖ್ಯೆ 10 ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಹೆಚ್ಚುವರಿಗೆ ಕಾರಣ ಗೇಮಿ ಫೈ “ಪ್ಲೇ ಟು ಅರ್ನ” ಮತ್ತು ಇಲ್ಲಿ ಎಲ್ಲವೂ ವಿಕೇಂದ್ರೀಕೃತ ಆಗಿರುವುದೇ ಆಗಿದೆ. 


                ಇತ್ತೀಚೆಗೆ ಪಬ್ ಜಿ ಕಂಪನಿಯು ಸೊಲೋನಾ ಬ್ಲಾಕ್‌ಚೈನ್‌ನನ್ನು ಹೊಂದಿದ್ದು, ಅದರ ನೆಟ್‌ವರ್ಕ್ನೊಂದಿಗೆ ಪಾರ್ಟ್ನರ್‌ಶಿಪ್ ಅನ್ನು ಹೊಂದುತ್ತಿರುವುದರಿಂದ ಮುಂದೆ ಪಬ್ ಜಿ ಕೂಡ ಸೊಲೋನಾ ನಾಣ್ಯಗಳ ಮೂಲಕ ತನ್ನ ಆಟಗಳ ರೂಪುರೇಶೆಗಳನ್ನು ಬದಲಿಸುತ್ತದೆ ಎಂದು ನಮಗೆ ಇನ್ನಷ್ಟು ಸ್ಪಷ್ಟವಾಗುತ್ತಿದೆ. ಜೊತೆಗೆ ಭವಿಷ್ಯದಲ್ಲಿ ಗೇಮಿಫೈ ಮತ್ತು ಅದರ ಸ್ವರೂಪ ಸಾಕಷ್ಟು ಬದಲಾಗುವುದಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಮೊಬೈಲ್‌ನಲ್ಲಿ ಆಟವಾಡುತ್ತಾರೆ, ಆಡುವ ಜೊತೆಗೆ ಸುಲಭವಾಗಿ ಹಣ ಗಳಿಸಬಹುದು ಅಂದರೆ ಮನೋರಂಜನೆ ಜೊತೆಗೆ ಗಳಿಕೆ. ಹಾಗಾಗಿ ಜಗತ್ತಿನ್ನಾದ್ಯಂತ ಅನೇಕ ಮಲ್ಟಿ ನ್ಯಾಷನಲ್ ಕಂಪೆನಿಗಳು ಗೇಮಿಫೈ ಮೇಲೆ ಬಾರೀ ಹೂಡಿಕೆ ಮಾಡುತ್ತಿದ್ದಾರೆ. 


             ನಮಗೆಲ್ಲ ಗೊತ್ತಿರುವ ಹಾಗೆ CBDC (Central Bank digital Currency) ಅಂದರೆ ಕರೆನ್ಸಿ ಸಿಸ್ಟ್ಮ್ ಕೂಡ ಬ್ಲಾಕ್ ಚೈನ್ ಮೂಲಕ ಅದರ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಇಂದು ನಾವು ವೆಬ್-2 ಯುಗದಲ್ಲಿದ್ದವೆ, ಮುಂದೆ ವೆಬ್-3 ಬರುತ್ತಿದೆ, ಅಂದರೆ ಎಲ್ಲವೂ  ವಿಕೇಂದ್ರೀಕೃತ ಅಗುತ್ತದೆ. ಉದಾ: ಈಗಾಗಲೆ ನಮ್ಮ ಫೈನಾನ್ಶಿಲ್ ಸಿಸ್ಟ್ಮ್ ಸಂಪೂರ್ಣ ವಿಕೇಂದ್ರೀಕೃತವಾಗಿದೆ, ಯಾವ ಮಟ್ಟಕ್ಕೆ ಅಂದ್ರೆ ಅಂಗಡಿಗೆ ಹೋದಾಗ 5 ರೂ ಪಾವತಿಸಬೇಕು ಅಂದ್ರೂ ಗೂಗಲ್ ಪೇ, ಫೋನ್ ಪೇ ಮೂಲಕವೇ ಪಾವತಿಸುತ್ತೇವೆ, ಸಾಕಷ್ಟು ಜನ ತಮ್ಮ ಹಣದ ವ್ಯಾಲೆಟ್ ಅನ್ನೇ ತೆಗೆದುಕೊಂಡು ಹೋಗುವುದಿಲ್ಲ. ಮೊಬೈಲ್ ಇದ್ರೆ ಸಾಕು ಎನ್ನುತ್ತೇವೆ. ಜಗತ್ತಿನಲ್ಲಿ ಪ್ರತಿಯೊಂದು ಡಿಜಿಟಲೀಕರಣವಾಗುತ್ತಿದೆ. ಇಂದು ಪಬ್ ಜಿ ಆಟವನ್ನು ಆಡುವವರ ಸಂಖ್ಯೆ ಎಷ್ಟಿದೆ ಅನ್ನುವುದು ನಮಗೆ ಗೊತ್ತು ಹಾಗೆ ಇಂತಹ ಆಟಗಳು ಸೊಲೋನ ಟೋಕನ್ ಯಾವ ಮಟ್ಟಕ್ಕೆ ಬೆಳಯಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಕಾರಣ ಪಬ್ ಜಿ ಆಡುವವರು ಮುಂದೆ ಈ ಸೊಲೋನ ಎಂಬ ಕ್ರಿಪ್ಟೊ ಕರೆನ್ಸಿಯನ್ನು ಖರೀದಿಸಿಯೇ ಆಡುವ ಅನಿವಾರ್ಯತೆ ಸೃಷ್ಟಿಯಾಗುವ ಸಮಯ ಹತ್ತಿರದಲ್ಲಿಯೇ ಇದೆ. ಆಗ ಸೊಲೋನದ ಮೌಲ್ಯ ಸಾಕಷ್ಟು ಬೆಳೆಯುತ್ತಿದೆ. 
                ಈಗಾಗಲೇ ಇತೇರಿಯಂ ನೆಟ್‌ವರ್ಕ್ ಮೇಲೆ ಸಾಕಷ್ಟು ಆಟಗಳು ಮಾರುಕಟ್ಟೆಯಲ್ಲಿ ಅದರ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೆ ಇತೇರಿಯಂ ನೆಟ್‌ವರ್ಕ್ಕಿನ ಗ್ಯಾಸ್ ಫೀ ಅನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ, ಹಿಂದೆ 2-3 ಸಾವಿರ ರೂ ಅಷ್ಟಿತ್ತು. ಹಾಗಾಗಿ ಸೊಲೋನ, ಃBitcoin, DeFi, NFT, TRC20 ಈ ತರಹದ ಹಲವಾರು ಬ್ಲಾಕ್‌ಚೈನ್ ಸಿಸ್ಟ್ಮ್ ಬಂದಿದೆ. ಇದರ ಮೇಲೆ ಸಾಕಷ್ಟು ಹೊಸ ಆವಿಷ್ಕಾರ ನೆಡೆಯುತ್ತಿದೆ. ಹಾಗಾಗಿ ಅನೇಕ ಹಣಕಾಸಿನ ತಞ್ಞರು ಇಂತಹ ಬ್ಲಾಕ್‌ಚೈನ್ ಸಿಸ್ಟ್ಮ್‌ಗಳ ಮೇಲೆ ಹೂಡಿಕೆ ಮಾಡುವುದಕ್ಕೆ ಇದು ಸಕಾಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಾಗೆ ಅದರ ಹೂಡಿಕೆಯೂ ಕೂಡ ಬಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.


ಗೇಮಿ ಫೈ ಆಟವನ್ನು ಪ್ರಾರಂಭಿಸುವುದು ಹೇಗೆ?


                ಮಾರುಕಟ್ಟೆಯಲ್ಲಿ ಸಾವಿರಾರು ಬ್ಲಾಕ್‌ಚೈನ್ ಆಟಗಳಿವೆ. ಪ್ರತಿ ಆಟಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ನಕಲಿ ವೆಬ್ ಸೈಟ್‌ಗಳು ಇರುವ ಕಾರಣ ಜಾಗರೂಕತೆಯಿಂದ ನಾವು ಆಟಗಳ ವೆಬ್‌ಸೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ವ್ಯಾಲೆಟ್ ಅಡ್ರೆಸ್ ಅನ್ನು ನಮಗೆ ಗೊತ್ತಿಲ್ಲದ ಸೈಟ್‌ಗಳಲ್ಲಿ ನೀಡಕೂಡದು. ನಾವು ಕಂಡುಕೊAಡ ವೆಬ್‌ಸೈಟ್ ಸುರಕ್ಷಿತವಾಗಿದೆ ಎಂದು ನಮಗೆ ವಿಶ್ವಾಸ ಬಂದರೆ ಮಾತ್ರ ಅಲ್ಲಿ ನಾವು ಹೂಡಿಕೆ ಮಾಡಿ ಅಲ್ಲಿ ಸಾಕಷ್ಟು ಹಣ ಗಳಿಸಬಹುದು. ಪ್ರಮುಖವಾಗಿ ಈ ಆಟವನ್ನು ಪ್ರಾರಂಭಿಸುವುದಕ್ಕೆ 3 ಹಂತಗಳಿವೆ:


1. ಕ್ರಿಪ್ಟೊ ವ್ಯಾಲೆಟ್ ಖಾತೆಯನ್ನು ತೆರೆಯಬೇಕು.


            ಗೇಮಿಫೈ ಜಗತ್ತನ್ನು ಪ್ರವೇಶಿಸಲು, ನಮಗೆ ಟ್ರಸ್ಟ್ ವ್ಯಾಲೆಟ್ ಅಥವಾ ಮೆಟಾಮಾಸ್ಕ್ನಂತಹ ಸೂಕ್ತ ಕ್ರಿಪ್ಟೋಕರೆನ್ಸಿಯ ವ್ಯಾಲೆಟ್ಟಿನ ಅಗತ್ಯವಿದೆ. ಕೆಲವು ಬಾರಿ ಅಟಕ್ಕೆ ಅನುಗುಣವಾಗಿ ಬೇರೆ ವ್ಯಾಲೆಟ್ ಅಥವಾ ಬ್ಲಾಕ್‌ಚೈನ್ ನೆಟ್‌ವರ್ಕ್ಗಳನ್ನು ಬಳಸಬೇಕಾಗುತ್ತದೆ. ಉದಾ: ನಾವು ಃBNB ಸ್ಮಾರ್ಟ್ ಚೈನ್ ((former Binance Smart Chain)) ನಲ್ಲಿ ಬ್ಲಾಕ್‌ಚೈನ್ ಆಟಗಳನ್ನು ಆಡಲು ಬಯಸಿದರೆ, ನಾವು ಮೊದಲು ನಮ್ಮ ಮೆಟಾಮಸ್ಕ್ ಅನ್ನು BSC ನೆಟ್‌ವರ್ಕ್ಗೆ ಸಂಪರ್ಕಿಸಬೇಕಾಗುತ್ತದೆ. ನಾವು ಟ್ರಸ್ಟ್ ವ್ಯಾಲೆಟ್ ಅಥವಾ ಯಾವುದೇ ಬೆಂಬಲಿತರ ಕ್ರಿಪ್ಟೋವ್ಯಾಲೆಟ್ ಅನ್ನು ಸಹ ಇಲ್ಲಿ ಬಳಸಬಹುದು. ಆದರೆ ಇಲ್ಲಿ ಬೆಂಬಲಿಸುವವರು ನಂಬಲು ಅರ್ಹರೆ ಎಂದು ತಿಳಿದುಕೊಳ್ಳಲು ಆಟದ ಅಧಿಕೃತ ವೆಬೆಸೈಟ್ ಅನ್ನು ಪರಿಶೀಲಿಸಬೇಕು. 


2. ನಮ್ಮ ಕ್ರಿಪ್ಟೋ ವ್ಯಾಲೆಟ್ ಅನ್ನು ಆಟಕ್ಕೆ ಕನಕ್ಟ್ ಮಾಡಬೇಕು:


                ಸಾಮಾನ್ಯವಾಗಿ ನಾವು ಆಡುವ ಯಾವುದೇ ಆನ್‌ಲೈನ್ ಆಟಗಳಿಗಳಲ್ಲಿ ಬಳಕೆದಾರನ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಕೊಡಬೇಕು, ಹಾಗೆ ಇಲ್ಲಿ ಬ್ಲಾಕ್‌ಚೈನ್ ಆಟಗಳು ನಮ್ಮ ಕ್ರಿಪ್ಟೋವ್ಯಾಲೆಟ್ ಅನ್ನು ಗೇಮಿಂಗ್ ಖಾತೆಗೆ ಬಳಸುತ್ತೇವೆ. ಹಾಗಾಗಿ ಇಲ್ಲಿ ಆಟವನ್ನು ಶುರು ಮಾಡುವ ಮೊದಲು ನಮ್ಮ ವ್ಯಾಲೆಟ್‌ನಲ್ಲಿ ಒಂದು ಸಹಿಯನ್ನು ಹಾಕಿಸಿಕೊಳ್ಳುತ್ತದೆ. 


3. ಗೇಮಿಫೈನಲ್ಲಿ ಆಡಲು ಬೇಕಾದ ಅವಶ್ಯಕತೆಗಳು: 


               ಗೇಮಿಫೈ ಆಟವನ್ನು ಪ್ರಾರಂಭಿಸುವ ಮೊದಲು ನಾವು ಅವರ ಕ್ರಿಪ್ಟೋಕರೆನ್ಸಿ ಟೋಕನ್ ಅಥವಾ ಇನ್-ಗೇಮ್ NFT ಗಳನ್ನು ಖರೀದಿಸುವ ಅಗತ್ಯವಿದೆ. ಈ ಕರೆನ್ಸಿಗಳು ಒಂದೊAದು ಆಟಕ್ಕೂ ಬದಲಾಗಿ ಹೋಗುತ್ತದೆ. ಇಲ್ಲಿ ಒಂದಿಷ್ಟು ಆರಂಭಿಕ ಹೂಡಿಕೆಯೂ ಮಾಡಬೇಕಿರುತ್ತದೆ. ಆದ ಕಾರಣ ನಾವು ಹೂಡಿಕೆಯನ್ನು ಮರಳಿ ಪಡೆಯಲು ಮತ್ತು ಲಾಭ ಗಳಿಸಲು ಎಷ್ಟು ಸಮಯ ಬೇಕಾಗಬಹುದು ಎಂದು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಉದಾ: ನಾವು ಆಕ್ಸಿ ಇನ್ಫಿನಿಟಿಯನ್ನು ಆಡಲು ಬಯಸಿದರೆ, ನಮ್ಮ ಆಟದ ವ್ಯಾಲೆಟ್‌ನಲ್ಲಿ ನಮಗೆ 3 ಆಕ್ಸಿಸ್ ಅಗತ್ಯವಿರುತ್ತದೆ. ಅದನ್ನು ಆಕ್ಸಿ ಮಾರ್ಕೆಟ್ ಪ್ಲೇಸ್‌ನಿಂದ ಖರೀದಿಸಬಹುದು. ಆಕ್ಸಿಸ್ ಖರೀದಿಸಲು ನಮ್ಮ ರೋನಿನ್ ವ್ಯಾಲೆಟ್‌ನಲ್ಲಿ ವ್ರಾಪ್ಡ್ ETH (WETH) ವಿನ ಅಗತ್ಯವಿರುತ್ತದೆ. ನಾವು ಃiಟಿಚಿಟಿಛಿe ನಂತಹ ಕ್ರಿಪ್ಟೋ ವಿನಿಮಯ ಕೇಂದ್ರಗಳಿಂದ ETH ಅನ್ನು ಖರೀದಿಸಬಹುದು ಮತ್ತು ಅವುಗಳನ್ನು ನಮ್ಮ ರೋನಿನ್ ವ್ಯಾಲೆಟ್‌ಗೆ ವರ್ಗಾಯಿಸಲು ರೋನಿನ್ ಬ್ರಿಡ್ಜ್ ಅನ್ನು ಬಳಸಬಹುದು. 
               ಒಂದು ಪಕ್ಷ ನಾವು ಯಾವುದೇ ಹಣವನ್ನು ಹೊಂದಿಲ್ಲದಿದ್ದರೆ ಅಥವಾ ರಿಸ್ಕ್ ತೆಗೆದುಕೊಳ್ಳಲು ಬಯಸದಿದ್ದರೆ, ಇಲ್ಲಿ ಕಂಪೆನಿ ವತಿಯಿಂದ ಸ್ಕಾಲರ್‌ಶಿಪ್ ಪಡೆಯಬಹುದು. ಇದರ ಸಹಾಯದಿಂದ ಅವರು ನಮಗೆ NFT ಯ ಮೂಲಕ ನಮ್ಮ ಆಟವನ್ನು ಆಡಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಇಲ್ಲಿ ನಾವು NFT ಮಾಲೀಕರೊಂದಿಗೆ ನಮ್ಮ ಗಳಿಕೆಯ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ.


ಗೇಮಿ ಫೈ ನ ಭವಿಷ್ಯ: 


            ಗೇಮಿಫೈನ ಪ್ರಾಜೆಕ್ಟ್ಗಳ ಸಂಖ್ಯೆಯು 2021 ರಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿದೆ ಮತ್ತು ಮುಂಬರುವ ವರ್ಷಗಳಲ್ಲಿ ಅದು ಇನ್ನಷ್ಟು ದುಪ್ಪಟ್ಟಾಗಿ ಬೆಳೆಯಲಿದೆ. ಮಾರ್ಚ್ 2022ರಲ್ಲಿ DappRadar ಕಂಪೆನಿಯು 1400ಕ್ಕೂ ಹೆಚ್ಚು ಬ್ಲಾಕ್‌ಚೈನ್ ಆಟಗಳನ್ನು ಪಟ್ಟಿ ಮಾಡಿದೆ. Ethereum, BNB Smart Chain (BSC), ಮತ್ತು ಇನ್ನೂ ಅನೇಕ ಬ್ಲಾಕ್‌ಚೈನ್‌ಗಳು ಆದಾಗಲೇ ಅದರ ಜನಪ್ರಿಯ ಆಟಗಳನ್ನು ಹೊಂದಿದೆ. 
             ಬ್ಲಾಕ್‌ಚೈನ್ ತಂತ್ರಜ್ಞಾನವು ಅಭಿವೃದ್ಧಿ ಹೊಂದುತ್ತಿದ್ದಂತೆ ಗೇಮಿಫೈ ಕೂಡ ಬಹಳ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಮುಖ್ಯ ಆಕರ್ಷನಾ ಬಿಂದುವೆಂದರೆ ಪ್ಲೇ ಟು ಅರ್ನ್, ಹಾಗಾಗಿ ಜಗತ್ತಿನಾದ್ಯಂತ ಅನೇಕ ರಾಷ್ಟçಗಳು ಗೇಮಿಫೈ ಅನ್ನು ಅಭಿವೃದ್ಧಿ ಪಡಿಸುತ್ತಿದೆ.