ಪಿಯುಸಿ ಸೈನ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಹಾಗೂ ಟ್ಯೂಷನ್ ವ್ಯವಸ್ಥೆ
ಪಿಯುಸಿ ಸೈನ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಹಾಗೂ ಟ್ಯೂಷನ್ ವ್ಯವಸ್ಥೆ
ತುಮಕೂರು : ನಗರದಲ್ಲಿರುವ ಯಾವುದೇ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ & ದ್ವಿತೀಯ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇರೆಗೆ ಉಚಿತ ಟ್ಯೂಷನ್ & ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡಲಾಗುವುದು.
ಹಾಸ್ಟೆಲ್ & ಟ್ಯೂಷನ್ ನನ್ನು ದಿನಾಂಕ 25.11.2021 ರಿಂದ ಪ್ರಾರಂಭ ಮಾಡಲಾಗುವುದು. ಹಾಸ್ಟೆಲ್ ಗೆ ಸೇರ ಬಯಸುವ ವಿದ್ಯಾರ್ಥಿಗಳು ತಮ್ಮ ಹೆಸರು , ಹುಟ್ಟಿದ ದಿನಾಂಕ, ಖಾಯಂ ವಿಳಾಸ, ವ್ಯಾಸಂಗ ಮಾಡುತ್ತಿರುವ ತರಗತಿ, ಕಾಲೇಜಿನ ಹೆಸರು, ಮೊಬೈಲ್ ನಂಬರ್ ಹಾಗೂ ಕಳೆದ ವರ್ಷದ ಮಾರ್ಕ್ಸ ಕಾರ್ಡ, ಬಿಪಿಎಲ್ ಕಾರ್ಡ (ಇದ್ದರೆ) ಲಗತ್ತಿಸಿ ದಿನಾಂಕ : 22.11.2021 ರ ಒಳಗೆ ಹಾಸ್ಟೆಲ್ ಕಛೇರಿಗೆ ಸಲ್ಲಿಸುವುದು. ಆಯ್ಕೆಯನ್ನು ಮೆರಿಟ್ ಮತ್ತು ಆದಾಯದ ಆಧಾರದ ಮೇರೆಗೆ ಮಾಡಲಾಗುವುದು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಕೊಠಡಿ, ಪೀಠೋಪಕರಣಗಳನ್ನು ಹಾಗೂ ಉತ್ತಮ ಟ್ಯೂಷನ್ ವ್ಯವಸ್ಥೆಯನ್ನು ಒದಗಿಸಲಾಗುವುದು.
ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಮೊಬೈಲ್ ನಂಬರ್ ಗೆ ಸಂಪರ್ಕಿಸುವುದು. ಮೊ.ಸಂಖ್ಯೆ: 9448375517 & 9844553450.
ಭೇಟಿ ಸಮಯ ಬೆಳಿಗ್ಗೆ : 8 ರಿಂದ 10 ರವರೆಗೆ ಮತ್ತು ಸಂಜೆ 2.30 ರಿಂದ 5 ರವರೆಗೆ
ಇದು ಬಾಪೂಜಿ ವಿದ್ಯಾ ಸಂಸ್ಥೆ (ರಿ) ಹೊರಪೇಟೆ, ತುಮಕೂರು ರವರ ವತಿಯಿಂದ ಈಗಿನ ಕೊರೋನಾ ಸಂಕಷ್ಟದ ಸಮಯದಲ್ಲಿ ಮೆರಿಟ್ ಹಾಗೂ ಕಡಿಮೆ ಆದಾಯವಿರುವ ಬಡ ಮಕ್ಕಳಿಗೆ ಒದಗಿಸುವ ವಿಶೇಷ ಸವಲತ್ತಾಗಿದೆ.
ಹಾಸ್ಟೆಲ್ ವಿಳಾಸ : ಸ್ಪರ್ಧಾ ವಿಜಯ, 3ನೇ ಅಡ್ಡ ರಸ್ತೆ, ಶಾರದಾ ದೇವಿ ನಗರ, ಆದರ್ಶ ನರ್ಸಿಂಗ ಹೋಂ ಮುಂಭಾಗ, ಎಂ.ಜಿ ಸ್ಟೇಡಿಯಂ ಹತ್ತಿರ, ತುಮಕೂರು.