ವಾಸಣ್ಣಗೆ ಗುಬ್ಬಿ ಟಿಕೆಟ್ : ಎಸ್‌ಪಿಎಂಗೆ ಕುಣಿಗಲ್! ದಲಿತ ಮುಖ್ಯಮಂತ್ರಿ ಪ್ರಶ್ನೆ- “ವೈ ನಾಟ್ ಮಿ”

ವಾಸಣ್ಣಗೆ ಗುಬ್ಬಿ ಟಿಕೆಟ್ : ಎಸ್‌ಪಿಎಂಗೆ ಕುಣಿಗಲ್!   ದಲಿತ ಮುಖ್ಯಮಂತ್ರಿ ಪ್ರಶ್ನೆ- “ವೈ ನಾಟ್ ಮಿ”


ವಾಸಣ್ಣಗೆ ಗುಬ್ಬಿ ಟಿಕೆಟ್ : ಎಸ್‌ಪಿಎಂಗೆ ಕುಣಿಗಲ್!


ದಲಿತ ಮುಖ್ಯಮಂತ್ರಿ ಪ್ರಶ್ನೆ- “ವೈ ನಾಟ್ ಮಿ”
 
ತುಮಕೂರು: ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಗಾಗಿ ಕ್ಷೇತ್ರ ಬಿಟ್ಟು ಕೊಟ್ಟ ಅಂದಿನ ಕಾಂಗ್ರೆಸ್ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡರು ಕುಣಿಗಲ್ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬಯಸಿ, ಹಾಲಿ ಶಾಸಕ ರಂಗನಾಥ್ ಅವರು ತಮ್ಮಂತೆಯೇ ತ್ಯಾಗ ಮಾಡಲಿ ಎಂದು ಆಶಿಸುತ್ತಿರುವುದು ಹಾಗೂ ಗುಬ್ಬಿಯಲ್ಲಿ ಹಾಲಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು ಕಾಂಗ್ರೆಸ್‌ಗೆ ಬಂದಲ್ಲಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ವಿಧಾನ ಸಭೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಇತ್ತೀಚೆಗೆ ಗುಬ್ಬಿಯ ಸಮಾರಂಭದಲ್ಲಿ ಆಹ್ವಾನ ನೀಡಿರುವ ವಿಚಾರ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದಲಿತ ಮುಖ್ಯಮಂತ್ರಿ ನೇಮಿಸುವ ಸಂಗತಿಗಳು  ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮಂಗಳವಾರದ ಮಾಧ್ಯಮಗೋಷ್ಟಿಯಲ್ಲಿ ಚರ್ಚೆಗೆ ಬಂದವು.


ಸುದ್ದಿಗಾರರ ಈ ಪ್ರಶ್ನೆಗಳಿಗೆ ಸಾವಧಾನದಿಂದಲೇ ಉತ್ತರಿಸಿದ ಪರಮೇಶ್ವರರವರು, ಮುದ್ದಹನುಮೇಗೌಡರು ಹಾಗೂ ತಾವು ಚುನಾವಣಾ ಸಂದರ್ಭದಲ್ಲಿ ದೇವೇಗೌಡರ ಮನೆಗೇ ಹೋಗಿ, ಅವರಿಗೆ ತುಮಕೂರಿನಿಂದ ಸ್ಪರ್ಧಿಸಬಾರದೆಂದೂ, ಬೆಂಗಳೂರು ಅಥವಾ ಹಾಸನವನ್ನು ಆಯ್ಕೆ ಮಾಡಿಕೊಳ್ಳುವಂತೆಯೂ ತಿಳಿಸಿದ್ದನ್ನು ನೆನಪಿಸಿಕೊಂಡರು. ಪ್ರಸ್ತುತ ಮುದ್ದಹನುಮೇಗೌಡರಿಗೆ ಕುಣಿಗಲ್‌ನಿಂದ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡುವುದು ಹೈಕಮಾಂಡ್‌ಗೆ ಬಿಟ್ಟ ಸಂಗತಿ, ಆದಾಗ್ಯೂ ಮುಂದೊಮ್ಮೆ ಸಂದರ್ಭ ಒದಗಿಬಂದಾಗ ತಾವು ಅವರ ಜೊತೆ ಇರುವುದಾಗಿಯೂ ಸ್ಪಷ್ಟಪಡಿಸಿದರು.


ಇನ್ನು ಗುಬ್ಬಿಯಿಂದ ಹಾಲಿ ಶಾಸಕ ವಾಸಣ್ಣನವರು ಕಾಂಗ್ರೆಸ್ ಸೇರಿದಲ್ಲಿ ಅಭ್ಯರ್ಥಿ ಮಾಡುವುದಾಗಿ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದ ಪರಮೇಶ್ವರ ಪಕ್ಷದ ಪ್ರದೇಶಾಧ್ಯಕ್ಷನಾಗಿ ಎಂಟು ವರ್ಷಗಳ ಅನುಭವದಲ್ಲಿ ಅಭ್ಯರ್ಥಿ ಆಯ್ಕೆಗೆ ತನ್ನದೇ ಆದ ವಿಧಾನವಿರುವುದನ್ನು ವಿವರಿಸಿದರು. ಬ್ಲಾಕ್ ಕಾಂಗ್ರೆಸ್ ವಾಸಣ್ಣ ಕಾಂಗ್ರೆಸ್ ಸೇರ್ಪಡೆ ವಿರೋಧಿಸುತ್ತಿರುವುದನ್ನೂ ಅವರು ಒಪ್ಪಿಕೊಂಡರು.


ಕಾAಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾಪ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾವೇಕೆ ಮುಖ್ಯಮಂತ್ರಿಯಾಗಬಾರದು ಎಂದು ಪ್ರಶ್ನಿಸಿದರಲ್ಲದೇ, ಕಾಂಗ್ರೆಸ್ ಅಧಿಕಾರಕ್ಕೆ ಬರುವಷ್ಟು ಅಂದರೆ ಕನಿಷ್ಟ 113 ಶಾಸಕರು ಚುನಾಯಿತರಾಗುವುದು ಮುಖ್ಯ, ನಂತರ ಶಾಸಕಾಂಗ ಪಕ್ಷ ತನ್ನ ನಾಯಕನನ್ನು ಆಯ್ಕೆ ಮಾಡಲಿದೆ ಎಂದರು.