‘ದೇಶಒಡೆಯುವ ಸಂಘ ಪರಿವಾರಕ್ಕೆಅಧಿಕಾರಕೊಡಬೇಡಿ’ ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಕರೆ

‘ದೇಶಒಡೆಯುವ ಸಂಘ ಪರಿವಾರಕ್ಕೆಅಧಿಕಾರಕೊಡಬೇಡಿ’ ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಕರೆ, alpa-sankhyatara-samavesha-tumakuru-siddaramiah

‘ದೇಶಒಡೆಯುವ ಸಂಘ ಪರಿವಾರಕ್ಕೆಅಧಿಕಾರಕೊಡಬೇಡಿ’   ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಕರೆ

‘ದೇಶಒಡೆಯುವ ಸಂಘ ಪರಿವಾರಕ್ಕೆಅಧಿಕಾರಕೊಡಬೇಡಿ’


ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಕರೆ


ತುಮಕೂರು:ಸಂಘ ಪರಿವಾರದ ಮುಖಂಡರುದೇವರು, ಧರ್ಮ, ಆಹಾರದಂಥಹಲವು ಭಾವನಾತ್ಮಕ ವಿಚಾರಗಳ ಮೂಲಕ ಸಮಾಜವನ್ನುಒಡೆಯುವ,ಮನುಷ್ಯರ ನಡುವೆಗೋಡೆಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ.ಸಂವಿಧಾನದ ಪರವಾಗಿರುವ ನಾವೆಲ್ಲರೂಈ ದೇಶಒಡೆಯುವವರ ಕೈಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕಿದೆ.ದೇವರು, ಧರ್ಮ, ಆಹಾರದ ವಿಚಾರದಲ್ಲಿಜನರ ನಡುವೆ ವಿಷ ಬೀಜ ಬಿತ್ತುತ್ತಿರುವಆರ್.ಎಸ್.ಎಸ್. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಬಗ್ಗೆ ಅಲ್ಪಸಂಖ್ಯಾತ ಸಮುದಾಯಎಚ್ಚರಿಕೆಯಿಂದಇರಬೇಕುಎAದುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.


ನಗರದಗಾಜಿನಮನೆಯಲ್ಲಿಜಿಲ್ಲಾಕಾಂಗ್ರೆಸ್‌ಅಲ್ಪಸಂಖ್ಯಾತರ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾಅಲ್ಪಸಂಖ್ಯಾತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ನಮ್ಮ ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸಲಾಗಿದೆ. ನಾನು ಆಚರಿಸುವ ಧರ್ಮದ ಬಗ್ಗೆ ಗೌರವದಿಂದ ಇರುವುದರಜೊತೆಗೆ, ಇತರೆ ಧರ್ಮಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು.ಅದೇ ನಿಜವಾದ ಭಾರತಎಂದರು.


ನಾನು ಯಾವಧರ್ಮದಲ್ಲಿ ಹುಟ್ಟಿದ್ದೇನೆಎಂಬುದು ಮುಖ್ಯವಲ್ಲ. ನಾವ್ಯಾರುಇಂತಹಧರ್ಮ, ಜಾತಿಯಲ್ಲಿ ಹುಟ್ಟಬೇಕುಎಂದುಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ.ಆದರೆ ನಾವೆಲ್ಲರೂ ಭಾರತೀಯರುಎಂಬುದನ್ನು ಮರೆಯಬಾರದು.ಈದೇಶಒಂದುಧರ್ಮಕ್ಕೆ ಸೇರಿದಲ್ಲ.ಎಲ್ಲರಿಗೂ ಸಮಾನ ಅವಕಾಶವಿದ.ಭಾರತದಲ್ಲಿರುವಎಲ್ಲಾ ಧರ್ಮಗಳ ಜನರ ನಡುವೆ ಸಹಬಾಳ್ವೆ ಆಗತ್ಯ.ಇದನ್ನೇ ನಮ್ಮ ಸಂವಿಧಾನವೂ ಪ್ರತಿಪಾದಿಸುತ್ತದೆಎಂದು ಸಿದ್ದರಾಮಯ್ಯ ತಿಳಿಸಿದರು.


ರಾಜ್ಯದಲ್ಲಿ 2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 1964 ರಿಂದಲೂಜಾರಿಯಲ್ಲಿದ್ದ ಗೋ ಹತ್ಯೆ ನಿಷೇಧಕಾಯ್ದೆಗೆತಿದ್ದುಪಡಿತರುವ ಮೂಲಕ ಒಂದು ವರ್ಗವನ್ನುಗುರಿ ಮಾಡಿದರು. ಈಗ ಮತಾಂತರ ನಿಷೇಧಕಾಯ್ದೆ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದೆ.ಹುಸಿ ಜಾತ್ಯಾತೀತೆ ಪ್ರದರ್ಶಿಸುತ್ತಿರುವ ಜೆಡಿಎಸ್ ಈ ಎರಡು ಮಹತ್ವ ಕಾಯ್ದೆಗಳ ಚರ್ಚೆಯ ವೇಳೆ ಸಭಾತ್ಯಾಗ ಮಾಡಿ, ಕಾಯ್ದೆ ಪಾಸಾಗುವಂತೆ ಮಾಡಿ, ಈಗ ನಾಟಕವಾಡುತ್ತಿದೆಎಂದುಆಕ್ರೋಶ ವ್ಯಕ್ತಪಡಿಸಿದರು.


ಕಾಂಗ್ರೆಸ್ ಪಕ್ಷಅಧಿಕಾರಕ್ಕೆ ಬಂದಾಗಜಾರಿಗೆತಂದು ಶಾದಿ ಭಾಗ್ಯ,ಟಿಪ್ಪು ಜಯಂತಿಗಳು ಮತಬ್ಯಾಂಕ್‌ಗಟ್ಟಿ ಮಾಡಿಕೊಳ್ಳಲು ಮಾಡಿದ ಕಾರ್ಯಕ್ರಮಗಳಲ್ಲ. ಬಿಜೆಪಿ, ಆರ್.ಎಸ್.ಎಸ್.ನವರು ದೂರುವಂತೆ ಟಿಪ್ಪು ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ ಹಾಗೂ ಇತರೆ ಕಡೆಗಳಲ್ಲಿ ಅಷ್ಟೊಂದು ಹಿಂದೂ ದೇವಾಲಯಗಳು, ಅತನ ಆಸ್ಥಾನದಲ್ಲಿ ಹಿಂದೂ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಿತ್ತೇಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಅಲ್ಪಸಂಖ್ಯಾತರ ಎಂದಿಗೂ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಇದನ್ನು ಸಹಿಸದೆ ಕೆಲವು ಸಂಘಟನೆಗಳು ಸಮಾಜದಲ್ಲಿಒಡಕನ್ನುಉಂಟು ಮಾಡಲು ಪ್ರಯತ್ನಿಸುತ್ತಿದ್ದುಇಂತಹ ಸಂಘಟನೆಗಳ ವಿರುದ್ದರಾಜ್ಯ ಸರಕಾರಅತ್ಯಂತಕಠಿಣ ಕಾನೂನು ಕ್ರಮಜರುಗಿಸಬೇಕಾಗಿದೆ.ಅಲ್ಲದೆರಾಜ್ಯದಲ್ಲಿ ಮುಸ್ಲಿಂರನ್ನು ಮತದಾರರ ಪಟ್ಟಿಯಿಂದಕೈಬಿಡುವ ಷಡ್ಯಂತ್ರ ನಡೆಯುತ್ತಿದ್ದು, ಕಾಂಗ್ರೆಸ್‌ಕಾರ್ಯಕರ್ತರು ಈ ವಿಚಾರವಾಗಿ ಸಮರ್ಪಕ ಮಾಹಿತಿಯೊಂದಿಗೆ ಮತದಾರರ ಪಟ್ಟಿಗೆಕೈಬಿಟ್ಟ ಮತದಾರರನ್ನು ಸೇರಿಸುವ ಕೆಲಸ ಮಾಡಬೇಕೆಂದರು.


ಸಮಾವೇಶ ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆಇರುಸು, ಮುರುಸುಉಂಟಾಗುತ್ತಿದೆ. ಆದರೆ ಯಾರು ಹೆದರುವ ಅಗತ್ಯವಿಲ್ಲ.ಕಾಂಗ್ರೆಸ್‌ ಅಲ್ಪ ಸಂಖ್ಯಾತರ ಪರವಾಗಿದೆ, ಅಲ್ಪಸಂಖ್ಯಾತರು ಈ ದೇಶಕ್ಕಾಗಿ ದುಡಿದಿದ್ದಾರೆ. ಬಸವಣ್ಣ, ಕನಕದಾಸರು, ಕುವೆಂಪು, ಶಿಶುನಾಳ ಷರೀಪ್‌ಅವರು ಬಾಳಿದ ನಾಡಿ ನಲ್ಲಿಯಾರೂ ಹೆದರಬಾರದುಎಂದರು.


ಬಿಜೆಪಿ ಅಭಿವೃದ್ಧಿ ಮಾಡಿದ್ದರೆಅದನ್ನು ಹೇಳಿಕೊಳ್ಳುತ್ತಿದ್ದರು.ಆದರೆ, ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಲಾರಂಭಿಸಿದೆ,ಜನರು ಎಚ್ಚೆತ್ತುಕೊಂಡು ಈ ಸರಕಾರವನ್ನುಕಿತ್ತೊಗೆಯಬೇಕು.ಉದಯಪುರದಲ್ಲಿ ನಡೆದಕಾಂಗ್ರೆಸ್ ಸಭೆಯಲ್ಲಿಅಲ್ಪಸಂಖ್ಯಾತರರಕ್ಷಣೆಗೆ ಮುಂದಾಗುವ ಸಂಕಲ್ಪ ಮಾಡಲಾಗಿದೆ, ಜನರೂ ಬದಲಾವಣೆ ಬಯಸುತ್ತಿದ್ದುಕಾಂಗ್ರೆಸ್ ಪರವಾದ ಅಲೆ ಸೃಷ್ಟಿಯಾಗುತ್ತಿದೆ.ಸರ್ವಜನಾಂಗವೂಒಂದೇ ಎಂಬ ಭಾವನೆಇಟ್ಟುಕೊಂಡುಕಾAಗ್ರೆಸ್ ಕೆಲಸ ಮಾಡುತ್ತಿದೆ, ಅಲ್ಪಸಂಖ್ಯಾತರನ್ನುಎಲ್ಲಾ ವಲಯಗಳಲ್ಲಿ ರಕ್ಷಣೆ ಮಾಡುವ ಕೆಲಸದಲ್ಲಿಕಾಂಗ್ರೆಸ್‌ಇರಲಿದೆಎAದುಭರವಸೆ ನೀಡಿದರು.


ವೇದಿಕೆಯಲ್ಲಿ ಹೆಚ್.ಎಂ.ರೇವಣ್ಣ, ಶಾಸಕ ಹ್ಯಾರೀಸ್, ಮಾಜಿ ಶಾಸಕರಾದಡಾ.ಎಸ್.ರಫೀಕ್ ಅಹಮದ್,ಎಸ್.ಷಪಿ ಅಹಮದ್,ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷಆರ್.ರಾಮಕೃಷ್ಣ, ಅಲ್ಪಸಂಖ್ಯಾತಘಟಕದ ಅಧ್ಯಕ್ಷಅತೀಕ್‌ಅಹಮದ್, ಇಕ್ಬಾಲ್‌ಅಹಮದ್, ಕೆಪಿಸಿಸಿ ಅಲ್ಪಸಂಖ್ಯಾತಘಟಕದಅಧ್ಯಕ್ಷ ಅಬ್ದುಲ್‌ಜಬ್ಬಾರ್ ಮತ್ತಿತರರು ವೇದಿಕೆಯಲ್ಲಿದ್ದರು. ಸಾವಿರಾರುಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.