‘ಸರ್ಕಾರಿ ಶಾಲೆ ಎಂದರೆ ಶಿಕ್ಷಕರಿಗೇ ಅಸಡ್ಡೆ’

government-school-teachers-neglect-bc-nagesh

‘ಸರ್ಕಾರಿ ಶಾಲೆ ಎಂದರೆ ಶಿಕ್ಷಕರಿಗೇ ಅಸಡ್ಡೆ’


ಸರ್ಕಾರಿ ಶಾಲೆ ಎಂದರೆ ಶಿಕ್ಷಕರಿಗೇ ಅಸಡ್ಡೆ
ಶಿಕ್ಷಣ ಸಚಿವ ಬಿ.ಸಿ. ನಾಗೇಶ್


ತಿಪಟೂರು : ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಪ್ರಚಾರ ಮಾಡುವಲ್ಲಿ ಶಿಕ್ಷಕರು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಇಲಾಖೆಯೇ ಸೂಕ್ತ ಕ್ರಮಕ್ಕೆ ಮುಂದಾಗಿ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. 


ನಗರದ ಕೆ.ಆರ್. ಬಡಾವಣೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ತಾಲ್ಲೂಕು ಶಾಖೆ ತಿಪಟೂರು ತುಮಕೂರು ಜಿಲ್ಲೆ ಇವರ ವತಿಯಿಂದ ಆಯೋಜಿಸಲಾಗಿರುವ ಶಾಲಾ ಶಿಕ್ಷಣದಲ್ಲಿನ ಗುಣಾತ್ಮಕ ಅಭಿವೃದ್ಧಿಗಾಗಿ ರಾಷ್ಟಿçÃಯ ಶಿಕ್ಷಣ ನೀತಿ 2020 (ಓಇP) ರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ನೀಡುತ್ತಿರುವ ಶಿಕ್ಷಣ ಮತ್ತು ವ್ಯವಸ್ಥೆ ಸರಿಯಾದ ರೀತಿಯಲ್ಲಿರದೆ ಅಸಮಾಧಾನದಿಂದ ಕೊಡಿದೆ. ಸ್ವಾತಂತ್ರö್ಯ ಪೂರ್ವದ ನಾಯಕರು ಹೇಳುತ್ತಾ ಬಂದಿದ್ದು ಸ್ವಾತಂತ್ರö್ಯ ಪೂರ್ವದ ಬ್ರಿಟಿಷರು ದೇಶದಲ್ಲಿ ಸ್ವಾಭಿಮಾನ, ಸ್ವಾವಲಂಬನೆಯನ್ನು ತೆಗೆಯಲು ಏನೇನನ್ನು ಮಾಡಿದ್ದಾರೋ ಅದನ್ನು ಬದಲಿಸಬೇಕೆಂದು ತಿಳಿದಿದ್ದರು. ಆದರೆ ಸ್ವಾತಂತ್ರö್ಯ ನಂತರದಲ್ಲಿ ಸ್ವಾತಂತ್ರö್ಯ ಹೋರಾಟಗಾರರ ಚಿಂತನೆಗಳನ್ನು ತರಲು 75 ವರ್ಷಗಳು ಬೇಕಾಯಿತು. ಆದ್ದರಿಂದ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ನೇತೃತ್ವದಲ್ಲಿ ಸುಮಾರು 4-5 ವರ್ಷಗಳಿಂದ ಸುದೀರ್ಘವಾಗಿ ಯೋಜನೆಮಾಡಿ ವಿವೇಕಾನಂದ, ಗಾಂಧೀಜಿ, ವಿನೋಬಾ ಬಾವೆ ಆಸೆಪಟ್ಟಂತAಹ ಶಿಕ್ಷಣ ನೀಡದಿದ್ದರೆ ಭಾರತ ತುಂಬಾ ದಿನ ಉಳಿಯುವುದಿಲ್ಲ ಎಂದು ಯೋಚಿಸಿ, ಮೌಲ್ಯಯುತ, ವ್ಯಕ್ತಿತ್ವ ನಿರ್ಮಾಣ ಮಾಡುವ, ಉತ್ತಮ ಪ್ರಜೆಯಾಗುವ ನಿಟ್ಟಿನ ಶಿಕ್ಷಣ ನೀಡಲು ರಾಷ್ಟಿçÃಯ ಶಿಕ್ಷಣ ನೀತಿ 2020 ತರಬೇಕಾದ ಅನಿವಾರ್ಯತೆ ಎದುರಾಗಿದ್ದು, ಕರ್ನಾಟಕದಲ್ಲಿ ಇದು ಯಶಸ್ವಿಯಾಗಿ ದೇಶದಾದ್ಯಂತ ಜಾರಿಯಾಗಿ ಭಾರತ ಪುನಃ ವಿಶ್ವಗುರುವಾಗುವಂತಹ ಕಾಲ ಬರುತ್ತದೆ ಎಂದರು.


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಮಾತನಾಡಿ ರಾಜ್ಯದಲ್ಲಿ ಸುಮಾರು 75-80 ಸಾವಿರ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರಿದ್ದು, ಇದುವರೆವಿಗೂ 1-8 ನೇ ತರಗತಿಗಳನ್ನು ಸದರಿ ಶಿಕ್ಷಕರು ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಸರ್ಕಾರವು ಇದೀಗ ಅವರಿಗೆ ಪದೋನ್ನತಿ ನೀಡಲು ಪರೀಕ್ಷೆಯ ನೆಪ ಒಡ್ಡುತ್ತಿದೆ. ಆ ಪರೀಕ್ಷಾ ಪದ್ಧತಿಯಿಂದ ಪದೋನ್ನತಿ ಹೊಂದಲು 20–30 ವರ್ಷಗಳ ಸುದೀರ್ಘ ಸೇವಾ ಅನುಭವ ಹೊಂದಿರುವ ಹಾಗೂ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರುಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮಕ್ಕೆ ಶೀಘ್ರ ತಿದ್ದುಪಡಿ ತಂದು ಪ್ರಸ್ತುತ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು ಸೇವಾ ಜೇಷ್ಠತೆಯ ಆಧಾರದ ಮೇಲೆ 6-8 ನೇ ತರಗತಿಗೆ ವಿಲೀನ ಮಾಡಿಕೊಡಬೇಕೆಂಬ ಒಕ್ಕೊರಲಿನ ಬೇಡಿಕೆಯನ್ನು ಸಚಿವರಿಗೆ ಸಲ್ಲಿಸಿದರು.
ಬೆಂಗಳೂರಿನ ಸೃಜನಶೀಲ ಅಧ್ಯಾಪನಾ ಕೇಂದ್ರದ ಮುಖ್ಯಸ್ಥ ಗುರುರಾಜ ಕರಜಗಿ ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಶಂಭುಲಿAಗನಗೌಡ ಪಾಟೀಲ್, ಜಿಲ್ಲಾ ಅಧ್ಯಕ್ಷ ಪರಶಿವಮೂರ್ತಿ, ತಾಲ್ಲೂಕು ಅಧ್ಯಕ್ಷ ಜಿ.ಆರ್. ಜಯರಾಂ, ನಗರಸಭೆಯ ಅಧ್ಯಕ್ಷ ಪಿ.ಜೆ. ರಾಮಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಬಿಇಓ ಪ್ರಭುಸ್ವಾಮಿ, ಕುಮಾರ ಆಸ್ಪತ್ರೆಯ ವೈದ್ಯ ಡಾ. ಶ್ರೀಧರ್, ನೌಕರರ ಸಂಘದ ಅಧ್ಯಕ್ಷ ಎಚ್.ಇ. ರಮೇಶ್ ಇದ್ದರು.



ಶೀಘ್ರ 15 ಸಾವಿರ ಶಿಕ್ಷಕರ ನೇಮಕ


ಶಿಕ್ಷಕರ ವರ್ಗಾವಣೆಯ ನಂತರದಲ್ಲಿ ಸುಮಾರು 1872 ಶಾಲೆಗಳಲ್ಲಿ ಒಬ್ಬರು ಶಿಕ್ಷಕರು ಇಲ್ಲದಂತಾಗಿದ್ದು, ಮಾರ್ಚ್ 8 ವರಗೆ ಶಿಕ್ಷಕರು ಅದೇ ಶಾಲೆಯಲ್ಲಿ ಸೇವೆ ಸಲ್ಲಿಸುವಂತೆ ಮನವಿ ಮಾಡಿದ್ದೇವೆ. 15 ಸಾವಿರ ಶಿಕ್ಷಕರುಗಳ ನೇಮಕಾತಿಗೆ ಆದೇಶ ನೀಡಿದ್ದು ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಹುದ್ದೆಗಳನ್ನು ಮೀಸಲಿಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.


ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿಲ್ಲ


ವಿದ್ಯಾರ್ಥಿಗಳನ್ನು ಕೇವಲ ಜ್ಞಾನವಂತರನ್ನಾಗಿಸಿದ್ದೇವೆಯೇ ಹೊರತು ಮಾನವೀಯ ಮೌಲ್ಯಗಳನ್ನುಳ್ಳ ವ್ಯಕ್ತಿಯನ್ನಾಗಿಸುವ ಕಾರ್ಯವಾಗಿಲ್ಲ. ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಕ್ಷರಸ್ಥರು, ರೈತರು, ಸಾಮಾನ್ಯ ಜನರಿಗಿಂತ ಹೆಚ್ಚಾಗಿ ವಿದ್ಯಾವಂತರು, ಉದ್ಯೋಗದಲ್ಲಿರುವ ಯುವಜನತೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಸಚಿವ ಬಿ.ಸಿ. ನಾಗೇಶ್ ವಿಷಾದಿಸಿದರು,



ಕರ್ನಾಟಕದಲ್ಲಿ ಇರುವಂತಹ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಧೈರ್ಯದಿಂದ ಸಮಾಜಕ್ಕೆ, ಪೋಷಕರಿಗೆ ಹೇಳುವಂತಹ ಕಾರ್ಯವನ್ನು ಶಿಕ್ಷಣ ಇಲಾಖೆಯ ಶಿಕ್ಷಕರು ಮಾಡುತ್ತಿಲ್ಲ. ತಮ್ಮ ಶಾಲೆಯಲ್ಲಿನ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾರ್ಕೆಟಿಂಗ್ ಮಾಡುವಂತಹ ಕೌಶಲ್ಯವನ್ನು ಶಿಕ್ಷಕರುಗಳು ಬೆಳೆಸಿಕೊಳ್ಳಬೇಕಿದೆ.


- ಬಿ.ಸಿ. ನಾಗೇಶ್, ಶಿಕ್ಷಣ ಸಚಿವ