ರಕ್ಷಣಾ ವೇದಿಕೆಯ ಮಹಿಳಾ ಘಟಕದಿಂದ ರಾಜ್ಯೋತ್ಸವ

ರಕ್ಷಣಾ ವೇದಿಕೆಯ ಮಹಿಳಾ ಘಟಕದಿಂದ ರಾಜ್ಯೋತ್ಸವ
ತುಮಕೂರು: ನಗರದ ಗುಂಚಿ ವೃತ್ತದಲ್ಲಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಧ್ವಜಾರೋಹಣ ಮಾಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಒ.ಇ. ವಿಷ್ಣುವರ್ಧನ್ ಮಾತನಾಡಿ ನಾಡು, ನುಡಿ, ನೆಲ, ಜಲ, ಭಾಷೆಯ ಐಕ್ಯತೆಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಘಟಕದವರು ರಾಜ್ಯೋತ್ಸವ ಆಚರಣೆ ಮಾಡಿರುವುದು ಶ್ಲಾಘನೀಯ. ಸಮಸ್ತ ನಾಡಿನ ಜನತೆ ನಾಡು, ನುಡಿ ರಕ್ಷಣೆಯ ಬಗ್ಗೆ ಹೆಚ್ಚು ಒತ್ತು ಕೊಡಬೇಕು. ಅಲ್ಲದೇ ಮೂರನೇ ಕೋವಿಡ್ ಅಲೆ ನಿರಿಕ್ಷೆಯಿದ್ದು ಜನತೆ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಜಿಲ್ಲಾ ಮಹಿಳಾಧ್ಯಕ್ಷೆ ಸುನೀತಾ ಮೂರ್ತಿ ಸೇರಿದಂತೆ ಮಹಿಳಾ ಪದಾಧಿಕಾರಿಗಳು ಇದ್ದರು.