ಹೆಚ್.ಡಿ.ಗೋವಿಂದಯ್ಯ ನಿಧನ

ಹೆಚ್.ಡಿ.ಗೋವಿಂದಯ್ಯ ನಿಧನ, bevarahani-tumakuru-hd-govindaiah-ddpi-death

ಹೆಚ್.ಡಿ.ಗೋವಿಂದಯ್ಯ ನಿಧನ

ಹೆಚ್.ಡಿ.ಗೋವಿಂದಯ್ಯ ನಿಧನ


ತುಮಕೂರು: ನಗರದ ಕನಕ ಪತ್ತಿನ ಸಹಕಾರ ಸಂಘದ ನರ‍್ದೇಶಕರು ಹಾಗೂ ಮಾಜಿ ಅಧ್ಯಕ್ಷರಾಗಿದ್ದ ವಿಶ್ರಾಂತ ಶಿಕ್ಷಣ ಇಲಾಖೆ ಉಪನರ‍್ದೇಶಕ ಹಾಗೂ ವಕೀಲರಾದ ಹೆಚ್.ಡಿ.ಗೋವಿಂದಯ್ಯನವರು ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 70 ರ‍್ಷ ವಯಸ್ಸಾಗಿತ್ತು. 


ಪತ್ನಿ, ಪುತ್ರ , ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರುವ ಹಾಗೂ ಮೊಮ್ಮಕ್ಕಳ ತುಂಬು ಕುಟುಂಬವನ್ನು ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ. ಕೋರ ಸಮೀಪದ ಹರಳಕಟ್ಟೆಯವರಾದ ಗೋವಿಂದಯ್ಯನವರು ತುಮಕೂರು ನಗರದಲ್ಲಿ  ವಾಸವಿದ್ದರು. 


ಎರಡು ತಿಂಗಳ ಹಿಂದೆ ದ್ವಿಚಕ್ರವಾಹನದಿಂದ ಬಿದ್ಧ ಕಾರಣ ತಲೆಗೆ ಪೆಟ್ಟಾಗಿ ಪ್ರಜ್ಞಾಹೀನರಾಗಿ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು, ನಂತರ ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 


ಬುಧವಾರ ಬೆಳಿಗ್ಗೆ 9 ಗಂಟೆವರೆಗೆ ಅಶೋಕನಗರದ ಹತ್ತನೇ ಕ್ರಾಸ್ನ ಅವರ ನಿವಾಸದಲ್ಲಿ ಅಂತಿಮ ರ‍್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ ಹರಳಕಟ್ಟೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 


ಗೋವಿಂದಯ್ಯನವರ ಅಕಾಲಿಕ ನಿಧನಕ್ಕೆ ‘ಬೆವರ ಹನಿ’ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.