ದಾರ್ಶನಿಕರ ಜಯಂತಿ ಆಚರಣೆಗಳು ಉತ್ತಮ ಸಂದೇಶ ನೀಡುತ್ತವೆ: ಕೆ.ಎನ್.ಆರ್.

ದಾರ್ಶನಿಕರ ಜಯಂತಿ ಆಚರಣೆಗಳು ಉತ್ತಮ ಸಂದೇಶ ನೀಡುತ್ತವೆ: ಕೆ.ಎನ್.ಆರ್.


ದಾರ್ಶನಿಕರ ಜಯಂತಿ ಆಚರಣೆಗಳು
ಉತ್ತಮ ಸಂದೇಶ ನೀಡುತ್ತವೆ: ಕೆ.ಎನ್.ಆರ್.


ಮಧುಗಿರಿ : ಸರ್ವ ಜನಾಂಗದ ದಾರ್ಶನಿಕರ ಮಹಾನೀಯರ ಜಯಂತಿಗಳ ಆಚರಣೆಗಳು ಸಮಾಜಕ್ಕೆ ಉತ್ತಮವಾದ ಸಂದೇಶ ನೀಡುವಂತಹದ್ದು ಎಂದು ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ದೊಡ್ಡಯಲ್ಕೂರು ಗ್ರಾಮದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ವತಿಯಿಂದ ಹಮ್ಮಿಕೊಂಡಿದ್ದ ಸರ್ವ ಜನಾಂಗದ ದಾರ್ಶನಿಕ ಮಹಾನೀಯರ ಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತತ್ವ ಸಿದ್ಧಾಂತಗಳು ಮುಂದಿನ ಪೀಳಿಗೆಗೆ ಅವಶ್ಯಕವಾಗಿವೆ. ಮಹಾನೀಯರು ಅಪಾರ ಕೊಡುಗೆಗಳು ಸಮಾಜಕ್ಕೆ ನೀಡಿದ್ದಾರೆ. ದಾರ್ಶನಿಕ ಮಹನೀಯರ ಸಂದೇಶಗಳನ್ನು ನೆನಪಿಸಿಕೊಂಡಾಗ ಮಾತ್ರ ಮನುಷ್ಯತ್ವ ಹೊಂದಲು ಸಾಧ್ಯ ಎಂದ ಅವರು ಮಹನೀಯರ ಕೊಡುಗೆಗಳನ್ನು ಮನದಟ್ಟು ಮಾಡಿಕೊಂಡು ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು.
ನಾನು ಯಾವುದೇ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ನನ್ನದು ಬಡವರ ಜಾತಿ. ಈ ಕ್ಷೇತ್ರವೇ ನನ್ನ ಮನೆಯೇ ಎಂದು ಭಾವಿಸಿದ್ದೇನೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ೧೬ ಸಾವಿರ ಮನೆಗಳನ್ನು ನಿರ್ಮಿಸಿದ್ದೆನು. ತಾಲ್ಲೂಕಿನ ಮತದಾರರು ಹಿಂದಿನ ಘಟನೆಗಳನ್ನು ಮರೆತು ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯನ್ನು ಯಾರೂ ಮರೆಯಬಾರದು ಎಂದ ಅವರು, ದೇವಗೌಡರವರನ್ನು ಪ್ರಧಾನಿಯಾಗಿ ಹಾಗೂ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ ಅದನ್ನು ಯಾರೂ ಸಹ ಮರೆಯಬಾರದು. ಅಧಿಕಾರ ಉಳಿಸಿಕೊಳ್ಳಲಾಗದವರು ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾರೆ ಎಂದರು.
ಜಾತ್ಯತೀತ ಜನತಾದಳ ವ್ಯಾಪಾರಸ್ತರ ಪಕ್ಷ. ಉಪಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸಹಾಯ ಮಾಡಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದರು. ಅವರಿಗೆ ಆ ಜನಾಂಗ ಮೇಲೆ ಅಭಿಮಾನ ಇದ್ದರೆ ರಾಮನಗರ, ಹಾಸನ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಟಿಕೇಟ್ ಕೊಡಲಿ ಎಂದರು. ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೂ ಕುಂಕುಮ, ಅರಿಶಿನ, ಸೀರೆಗಳಿಂದ ಪರಾಭವಗೊಂಡೆ ಎಂದ ಅವರು, ನನ್ನ ಸೋಲಿಗೆ ಯಾರ ಮೇಲೂ ಕೋಪ, ದ್ವೇಷ ಇಲ್ಲಾ. ಎಲ್ಲಾ ಮರೆತಿದ್ದೇನೆ. ನಿಮಗೆ ಈ ಬಗ್ಗೆ ಅಳುಕು ಬೇಡ ಎಂದು ಜನತೆಗೆ ಮನವಿ ಮಾಡಿ ಮುಂದಿನ ಚುನಾವಣೆಯಲ್ಲಿ ಹಳೆಯದನ್ನು ಮರೆತು ನನಗೆ ಕೈ ಜೋಡಿಸಿ. ಎಂದು ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು
ನಾನು ಈ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರೆ ಕ್ಷೇತ್ರಕ್ಕೆ ಎತ್ತಿನಹೊಳೆ ಯೋಜನೆಯಡಿಯಲ್ಲಿ ನೀರು ಹರಿಸುತ್ತಿದ್ದೆ. ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಿ, ಬೆಟ್ಟಕ್ಕೆ ರೋಪ್‌ವೇ ಆಳವಡಿಸಲು ಕ್ರಮ ಕೈಗೊಳ್ಳುತ್ತಿದ್ದೆ ಎಂದರು.
ಮಾಜಿ ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿ ಸರ್ವ ಜನಾಂಗದ ದಾರ್ಶನಿಕರ ಜಯಂತಿ ಕಾರ್ಯಕ್ರಮ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರಾಜಣ್ಣನವರ ಅಧಿಕಾರಾವಧಿಯಲ್ಲಿ ನಮ್ಮ ಹೋಬಳಿಯ ಸಮಗ್ರ ಅಭಿವೃದ್ಧಿ ಕಂಡಿದೆ. ಸರಕಾರದ ಸವಲತ್ತುಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು ಮಾತನಾಡಿ, ಶ್ರಮ, ಹೋರಾಟ ಹಾಗೂ ಅವರ ಜೀವನದಲ್ಲಿ ಅಳವಡಿಸಿಕೊಂಡ ತತ್ವಗಳಿಂದ ಅವರು ಮಹನೀಯರಾಗಿದ್ದು, ಅವರ ತತ್ವ ಆದರ್ಶಗಳನ್ನು ಮುಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಜಿಪಂ ಸದಸ್ಯ ಜಿ.ಜೆ. ರಾಜಣ್ಣ ಮಾತನಾಡಿ, ರಾಜಣ್ಣನವರ ಅಧಿಕಾರದ ಅವಧಿಯಲ್ಲಿ ಎಲ್ಲಾ ಸಮುದಾಯಗಳ ಮಹಾನೀಯರನ್ನು ಗೌರವಿಸಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಜಿ.ಪA ಮಾಜಿ ಸದಸ್ಯರಾದ ಹೆಚ್.ಡಿ. ಕೃಷ್ಣಪ್ಪ, ಮಂಜುಳ ಆಧಿನಾರಾಯಣ ರೆಡ್ಡಿ, ಸಹಕಾರ ಮಹಾಮಂಡಲದ ಮಾಜಿ ರಾಜ್ಯಾಧ್ಯಕ್ಷ ಎನ್. ಗಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಮರಿಯಣ್ಣ, ಪಿಟಿ ಗೋವಿಂದಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನಯ್ಯ, ಯುವ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್, ಪುರಸಭಾ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಜೈನ್, ಎಂ.ಕೆ. ನಂಜುAಡಯ್ಯ, ಮಧುಗಿರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ಶ್ರೀನಿವಾಸ್, ಮುಖಂಡರಾದ ಯಲ್ಕೂರು ನಾಗಭೂಷಣ್, ಪುಟ್ಟಸಿದ್ದಯ್ಯ, ಅಂಜನಮೂರ್ತಿ, ಶ್ರೀದೇವಿ, ಶ್ರೇಯಸ್, ಚಂದ್ರು, ರವಿಕುಮಾರ್, ಶನಿವಾರಂ ರೆಡ್ಡಿ, ನರಸಿಂಹರೆಡ್ಡಿ, ಸುವರ್ಣಮ್ಮ, ಗೋಪಾಲಯ್ಯ, ಚಿನ್ನಪ್ಪಯ್ಯ, ರಂಗಶ್ಯಾಮಣ್ಣ, ವಕೀಲ ತಿಮ್ಮರಾಜು, ರಘುಯಾದವ್, ಗರಣಿ ರಾಮಾಂಜಿ, ಗೋವಿಂದರಾಜು, ಉಮಾಶಂಕರ್, ಯಲ್ಕೂರು ವಿಜಿಕುಮಾರ್, ಲಕ್ಷ್ಮೀಪತಿ, ಸೀತಾರಾಂ ಹಾಗೂ ಮುಂತಾದವರು ಇದ್ದರು.