ಶತಮಾನೋತ್ಸವದ ಸಂಭ್ರಮದಲ್ಲಿ ಸಿಡ್ಲೇಹಳ್ಳಿ ಗುರುಕುಲಾನಂದಾಶ್ರಮ

ವಿಶೇಷ ಲೇಖನ ಸುಪ್ರತೀಕ್‌ ಹಳೇಮನೆ

ಶತಮಾನೋತ್ಸವದ ಸಂಭ್ರಮದಲ್ಲಿ ಸಿಡ್ಲೇಹಳ್ಳಿ ಗುರುಕುಲಾನಂದಾಶ್ರಮ

ಶತಮಾನೋತ್ಸವದಸಂಭ್ರಮದಲ್ಲಿಸಿಡ್ಲೇಹಳ್ಳಿಗುರುಕುಲಾನಂದಾಶ್ರಮ


ವಿಶೇಷ ಲೇಖನ
ಸುಪ್ರತೀಕ್ ಹಳೇಮನೆ.


         ತಿಪಟೂರು :ಕರ್ನಾಟಕದ ಪ್ರಾಚೀನ ಪರಂಪರೆಯಲ್ಲಿಕಲ್ಪತರು ನಾಡಿನ ಸಿಡ್ಲೇಹಳ್ಳಿ ಮಹಾಸಂಸ್ಥಾನವು ಒಂದಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯವನ್ನು ನೀಡುತ್ತಿರುವಗುರುಕುಲಾನಂದಾಶ್ರಮ ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿದೆ.


‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ..’ ಈ ಶರಣರ ಸಾಲನ್ನು ತನ್ನ ಧ್ಯೇಯ ವಾಕ್ಯ ಮಾಡಿಕೊಂಡಿರುವ ಗುರುಕುಲಾನಂದಾಶ್ರಮ ಜಾತ್ಯಾತೀತತೆಯನ್ನು ಆಳದ ಕಾಳಜಿಯಾಗಿ ಕಾಪಾಡಿಕೊಂಡು ಬಂದಿರುವ ವಿಶಿಷ್ಟ ಮಠವಾಗಿದೆ. ಬಸವಣ್ಣನವರ ತತ್ವ, ಸಿದ್ದಾಂತಗಳ ಹಾದಿಯಲ್ಲೇ ಸಾಗಿರುವ ಮಠ ವೈಚಾರಿಕ, ಧಾರ್ಮಿಕ, ಶೈಕ್ಷಣಿಕ ನೆಲೆಯಲ್ಲಿತನ್ನ ಸಾರ್ಥಕತೆಯನ್ನುಕಂಡುಕೊಂಡಿದೆ. ಶಿಡ್ಲೇಹಳ್ಳಿ-ಬಳ್ಳೇಕಟ್ಟೆ ಮಠವೆಂದೂ ಕರೆಯುವ ಇದುರಾಜ್ಯದ ಪ್ರಾಚೀನ ಮಠಗಳಲ್ಲಿ ಒಂದು. ಈ ಮಠ ಧಾರ್ಮಿಕ, ಐತಿಹಾಸಿಕ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. 


ಇತಿಹಾಸದ ಪ್ರಕಾರ 15ನೇ ಶತಮಾನದಲ್ಲಿ ಗುರುಪಾದದೇಶೀಕೇಂದ್ರ ಸ್ವಾಮೀಜಿ ಹಾಗಲವಾಡಿ ಸಂಸ್ಥಾನದ ರಾಜಗುರುಗಳಾಗಿದ್ದರು. ಈ ಮಠದಲ್ಲಿಜನಾಕರ್ಷಕದೇವಾಲಯ, ಬೆಟ್ಟ, ಜಾತ್ರೆ, ಪವಾಡಇಲ್ಲದಿದ್ದರೂ ಮೇಧಾವಿಗಳು, ಪಂಡಿತರು, ಉದಾತ್ತರು ಈ ಪೀಠವನ್ನು ಅಲಂಕರಿಸಿ ಜನಸಾಮಾನ್ಯಗೊಳಿಸಿದ್ದಾರೆ. ತತ್ತೋಪದೇಶ, ವಿದ್ಯಾದಾನ ಹಾಗೂ ಅನ್ನ, ಆಶ್ರಗಳನ್ನು ನೀಡಿಆಯಾಕಾಲದಲ್ಲಿ ಸಮಾಜಕ್ಕೆ ಬೆಳಕಾಗಿದ್ದಾರೆ.


19ನೇ ಶತಮಾನದಲ್ಲಿಇದೇ ಪರಂಪರೆಯಲ್ಲಿ ಬಂದ ಪಟ್ಟದಕರಿಬಸವದೇಶೀಕೇಂದ್ರ ಸ್ವಾಮೀಜಿ ಮಠದಖ್ಯಾತಿಗೆಕಾರಣರಾದರು. ಇವರು ಕಾಶಿಯಲ್ಲಿ ತರ್ಕ, ನ್ಯಾಯ, ತತ್ವಶಾಸ್ತç ವೇದಾಂತಗಳನ್ನು ಅಭ್ಯಸಿಸಿದ್ದರು. ಕಾಶಿ ಮತ್ತುಕಲ್ಕತ್ತ ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯ, ಕಾವ್ಯತೀರ್ಥ, ತರ್ಕವಿದ್ವಾನ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿತೇರ್ಗಡೆ ಹೊಂದಿದ್ದರು. ಶ್ರೀಗಳು ಶಿಕ್ಷಣಕ್ಕೆ ಮಹತ್ವ ನೀಡಿದ್ದರಿಂದ ಮಠವನ್ನು 1922ರಲ್ಲಿ ಶಿಡ್ಲೇಹಳ್ಳಿಯಿಂದ ತಿಪಟೂರಿಗೆ ಸ್ಥಳಾಂತರಿಸಿದರಯ. ಆ ಕಾಲದಲ್ಲಿಯೇ ವೀರಶೈವಗುರುಕುಲಾನಂದಾಶ್ರಮ ವಿದ್ಯಾರ್ಥಿನಿಲಯ ಆರಂಭಿಸಿ ಗ್ರಾಮೀಣ ಭಾಗದರೈತ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದರು. ಸಾಹಿತಿ ಸಾ.ಶಿ.ಮರುಳಯ್ಯ, ಹಂಪಿ ಅಲ್ಲಮಎಂದೇಖ್ಯಾತಿಪಡೆದ ಸದಾಶಿವಯೋಗಿಗಳು, ಕಲ್ಪತರು ವಿದ್ಯಾಸಂಸ್ಥೆ ಸಂಸ್ಥಾಪಕ ಜೆ.ಆರ್.ಮಹಲಿಂಗಯ್ಯ ಸಹ ನಿಲಯದ ವಿದ್ಯಾರ್ಥಿಗಳಾಗಿದ್ದರು. 


ಶ್ರೀಗಳ ವಿದ್ವತ್ತು ಹಾಗೂ ಜನಪರ ಕಾರ್ಯಕ್ರಮಗಳನ್ನು ಗುರುತಿಸಿ ಅಂದಿನ ಮೈಸೂರುರಾಜಒಡೆಯರು ಶಿಡ್ಲೇಹಳ್ಳಿ ಮಠವನ್ನು ‘ಪ್ರಥಮ ಶ್ರೇಣಿ ಮಠ’ ಎಂದು ಘೋಷಿಸಿ ವಿಶೇಷ ಬಿರುದುಗಳನ್ನು ಸಲ್ಲಿಸಿದ್ದರು. ಮಠದ ಅಂದಿನ ಭಕ್ತರಾದ ಕಂಬಿ ಸಿದ್ದರಾಮಣ್ಣ ಸಮಾನ ಮನಸ್ಕರೊಂದಿಗೆ ಸೇರಿ ವೀರಶೈವ ವಿದ್ಯಾಪ್ರಚಾರಕ ಸಂಘ ಸ್ಥಾಪಿಸಿದರು. ಎಲ್ಲಾಜಾತಿ, ವರ್ಗಗಳ ಶಿಕ್ಷಣಕ್ಕೆ ಕಾರಣರಾದರು. ಶಿಡ್ಲೇಹಳ್ಳಿ ಮಠಕ್ಕೆ ಸೇರಿದ ಬಳ್ಳೇಕಟ್ಟೆ ಮಠದ ಶ್ರೀಗಳು ಮೇಧಾವಿ, ತತ್ವಜ್ಞಾನಿ, ಸಾಮಾಜಿಕ ಹರಿಕಾರರಾಗಿದ್ದರು. ಅಲ್ಲಿನಚನ್ನಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿತಾತ್ವಿಕತೆಯನ್ನು ಸಾರಿದರು. ಬಿಳಿಗೆರೆ, ಕುಪ್ಪಾಳು, ತುಮಕೂರುಗಳಲ್ಲಿ ಸಂಸ್ಥೆಯ ವಿದ್ಯಾರ್ಥಿನಿಲಯ, ಸಂಸ್ಕೃತ ಶಾಲೆ, ಪ್ರೌಢಶಾಲೆಗಳನ್ನು ತೆರೆದರು. ಇವರ ನಂತರದಲ್ಲಿಇಮ್ಮಡಿಕರಿಬಸವದೇಶೀಕೇಂದ್ರ ಸ್ವಾಮೀಜಿ ಬಳ್ಳೇಕಟ್ಟೆ ಮಠಕ್ಕೆಉತ್ತರಾಧಿಕಾರಿಯಾದರು. 1996ರಲ್ಲಿ ಬಳ್ಳೇಕಟ್ಟೆ ಮಠ ಸಿಡ್ಲೇಹಳ್ಳಿ ಸಂಸ್ಥಾನದೊಂದಿಗೆ ಏಕೀಕೃತಗೊಂಡಿತು. ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಪೀಠಾಧಿಪತಿಗಳಾಗಿ ಅಲ್ಪ ಅವಧಿಯಲ್ಲಿಯೇ ಹಿರಿಯ ಸ್ವಾಮೀಜಿಗಳ ಆಶಯಗಳನ್ನು ಸಾಕಾರಗೊಳಿಸಲು ಮುಂದಾದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದರು. ನಗರದಲ್ಲಿ ಸುಸಜ್ಜಿತಗುರುಕುಲ ಶಾಲಾ ಸಂಕೀರ್ಣ ನಿರ್ಮಿಸಲುಅಡಿಪಾಯ ಹಾಕಿದರು. ಆತ್ಮದಅರಿವು, ನೈತಿಕತೆ, ರಾಷ್ಟç ಭಕ್ತಿ, ಶಿಸ್ತು, ಸಂಸ್ಕಾರಕ್ಕೆಒತ್ತು ನೀಡಿ ಸಮಾಜದ ಸರ್ವತೋಮುಖ ಏಳಿಗೆಗೆ ಒತ್ತುಕೊಟ್ಟರು.
ನಗರದಗುರುಕುಲಾನಂದಾಶ್ರಮದಆವರದಲ್ಲಿ ಕಳೆದ ಎರಡು ವರ್ಷದ ಹಿಂದೆಗುರುಕುಲ ಪದ್ಧತಿಯ ಮಾದರಿಯಲ್ಲಿಕಟ್ಟಡವನ್ನುಕಟ್ಟಿ ಮಾದರಿ ಶಿಕ್ಷಣವನ್ನು ನೀಡುತ್ತಿದ್ದಾರೆ. ಹಿಂದಿನ ಪರಂಪರೆಯನ್ನು ಉಳಿಸಿಕೊಂಡು ಹೊಸ ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ಮಠದಅಭಿವೃದ್ಧಿ ಹೀಗೆ ಮುಂದುವರೆವು ಹೆಚ್ಚಿನ ಮಕ್ಕಳ ಜ್ಞಾನಾಕೇಂದ್ರವಾಗಲಿ ಎಂಬುದುಎಲ್ಲರಆಶಯವಾಗಿದೆ.



ಇಂದು ಶತಮಾನೋತ್ಸವ ಸಮಾರಂಭ


ತಿಪಟೂರು : ನಗರದ ಕೆ.ಆರ್.ಬಡಾವಣೆಯ ಗುರುಕುಲಾನಂದಾಶ್ರಮದಲ್ಲಿ ಲಿಂ.ಜಗದ್ಗುರುಗಳ 112ನೇ ಸಂಸ್ಮರಣೆ, ಗುರುಕುಲಾನಂದಾಶ್ರಮದ ಶತಮಾನೋತ್ಸವ ಸಮಾರಂಭ, ಇಮ್ಮಡಿಕ ರಿಬಸವ ದೇಶೀಕೇಂದ್ರ ಸ್ವಾಮೀಜಿಯವರ ಪೀಠಾರೋಹಣದ ಬೆಳ್ಳಿಹಬ್ಬ ಕಾರ್ಯಕ್ರಮವೂ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ, ಗೋಣಿಬೀಡು ಶೀಲ ಸಂಪಾದನಾ ಮಠದ ಡಾ.ಸಿದ್ದಲಿಂಗ ಮಹಾಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗಜ್ಞಾನೇಂದ್ರ ನೆರವೇರಿಸಲಿದ್ದು, ಸಂಸ್ಮರಣಾ ಸಂಚಿಕೆಯ ಲೋಕಾಪಾರ್ಣೆಯನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ತ್ರಿಮಾಸಿಕ ಪತ್ರಿಕೆಯನ್ನು ಸಂಸದ ಜಿ.ಎಸ್.ಬಸವರಾಜು, ಜ್ಞಾನದರ್ಶನ ಎಂಬ ಕೃತಿಯ ಲೋಕಾರ್ಪಣೆಯನ್ನು ನಿವೃತ್ತರಾಜ್ಯ ಪೊಲೀಸ್ ಮಹಾನಿರ್ದೇಶಕಡಾ.ಶಂಕರ ಮಹದೇವ ಬಿದರಿ ನೆರವೇರಿಸಲಿದ್ದಾರೆ. ಗುರುಕುಲ ಶ್ರೀ ಗೌರವ ಪ್ರಧಾನವನ್ನು ಹಿರೇಮಗಳೂರಿನ ಖ್ಯಾತ ವಾಗ್ಮಿ ಹರೇಮಗಳೂರು ಕಣ್ಣನ್ ಹಾಗೂ ಬೆಂಗಳೂರಿನ ಜಾಗತಿಕ ನೊಳಂಬ ಒಕ್ಕೂಟದ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿಎಸ್.ಎನ್.ಕೆಂಪಗೌಡರ್‌ಗೆ ನೀಡಲಿದ್ದಾರೆ.

ಪೋಟೋ :ಲಿಂಗೈಕ್ಯ ಪಟ್ಟದಕರಿಬಸವದೇಶೀಕೇಂದ್ರ ಸ್ವಾಮೀಜಿಯವರ ಭಾವಚಿತ್ರ.


ಪೋಟೋ :ಇಮ್ಮಡಿಕರಿಬಸವದೇಶೀಕೇಂದ್ರ ಸ್ವಾಮೀಜಿಯವರ ಭಾವಚಿತ್ರ.


ಪೋಟೋ :ಗುರುಕುಲಾನಂದಾಶ್ರಮದಚಿತ್ರ.


ಪೋಟೋ :ಗುರುಕುಲಾನಂದಾಶ್ರಮದಆವರಣದಲ್ಲಿಗುರುಕುಲ ಪದ್ಧತಿಯ ಮಾದರಿಯಲ್ಲಿಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.