ವೈಯಕ್ತಿಕ ಟೀಕೆ ಸರಿಯಲ್ಲ: ಕೆ.ಎನ್. ರಾಜಣ್ಣ

ವೈಯಕ್ತಿಕ ಟೀಕೆ ಸರಿಯಲ್ಲ: ಕೆ.ಎನ್. ರಾಜಣ್ಣ

ವೈಯಕ್ತಿಕ ಟೀಕೆ ಸರಿಯಲ್ಲ: ಕೆ.ಎನ್. ರಾಜಣ್ಣ


ತುಮಕೂರು: ರಾಜಕಾರಣಿಗಳು ವೈಯುಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ವೈಯುಕ್ತಿಕ ಟೀಕೆಗಳು ರಾಜಕಾರಣಿಗಳಿಗೆ ಭೂಷಣ ತರುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದರು. 
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ರಾಹುಲ್ ಗಾಂಧಿಯವರ ಬಗ್ಗೆ ಡ್ರಗಿಸ್ಟ್, ಡ್ರಗ್ ಪೆಡ್ಲರ್ ಎಂದು ಕಟೀಲ್ ಹೇಳಿಕೆ ನೀಡಿರುವುದು ಒಂದು ರಾಷ್ಟಿçÃಯ ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆಗೆ ಶೋಭೆ ತರುವುದಿಲ್ಲ. ಈ ಹೇಳಿಕೆ ಕಟೀಲ್‌ಗಿಂತ ಹೆಚ್ಚಾಗಿ ಆ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ತಪುö್ಪ ಹುಡುಕಬೇಕು ಎಂದರೆ ಒಂದಲ್ಲಾ ಒಂದು ತಪುö್ಪ ಸಿಗುತ್ತವೆ. ಉಪಚುನಾವಣೆಯಲ್ಲಿ ಜನರನ್ನು ಆಕರ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ವೈಯುಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದರು. 
ರಾಹುಲ್ ಗಾಂಧಿಯವರನ್ನು ಡ್ರಗಿಸ್ಟ್, ಡ್ರಗ್ ಪೆಡ್ಲರ್ ಎಂದೆಲ್ಲ ಮಾತನಾಡುವ ಮೂಲಕ ಯಾರೂ ಸಹಿಸಿಕೊಳ್ಳಲಿಕ್ಕೆ ಆಗದೇ ಇರುವಂತಹ ಪದ ಬಳಕೆಯನ್ನು ಕಟೀಲ್ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರು ಈ ಬಗ್ಗೆ ಸಮಜಾಯಿಷಿ ಕೊಟ್ಟಿರುವುದು ಕೊಂಚ ಸಮಾಧಾನ ತಂದಿದೆ ಎಂದರು. 
ಹಾಗೆಯೇ ಸಿದ್ದರಾಮಯ್ಯನವರ ಬಗ್ಗೆಯೂ ವೈಯುಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ಏಕವಚನ ಪದ ಪ್ರಯೋಗ ಮಾಡುವುದೂ ರಾಜಕಾರಣಿಗಳ ಘನತೆಗೆ ತಕ್ಕದ್ದಲ್ಲ. ಯಾರೂ ಸಹ ಏಕ ವಚನದಲ್ಲಿ ಮಾತನಾಡುವುದನ್ನು ನಾನು ಒಪುö್ಪವುದಿಲ್ಲ. ಸಾರ್ವಜನಿಕವಾಗಿ ಮಾತನಾಡುವಾಗ ಏಕವಚನ ಪದ ಪ್ರಯೋಗ ಬಳಕೆ ಮಾಡಬಾರದು ಎಂದರು.
ನಾವೆಲ್ಲ ರಾಜಕಾರಣಿಗಳು, ನಮ್ಮನ್ನು ನಾವೇ ಬೈದುಕೊಂಡು ಹೋದರೆ ಸಾರ್ವಜನಿಕರ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಈ ಬಗ್ಗೆ ರಾಜಕಾರಣಿಗಳಾದ ನಮಗೆ ಅರಿವಿರಬೇಕು ಎಂದರು. 
ರಾಜಕಾರಣಿಗಳಿಗೆ ವೈಯಕ್ತಿಕ ಜೀವನ ಮತ್ತು ಸಾರ್ವಜನಿಕ ಜೀವನ ಇರುತ್ತದೆ. ಹಾಗಾಗಿ ಯಾರೂ ಸಹ ವೈಯುಕ್ತಿಕವಾಗಿ ಟೀಕೆ ಮಾಡಬಾರದು ಎಂದು ಅವರು ತಿಳಿಸಿದರು. 
ಕಾಂಗ್ರೆಸ್ ಗೆಲುವು: ಉತ್ತರ ಕರ್ನಾಟಕ ಭಾಗದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದು. 
ಕಾಂಗ್ರೆಸ್ ಪಕ್ಷ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದ ಅವರು, ಚುನಾವಣೆಯಲ್ಲಿ ಗೆಲ್ಲಲ್ಲು ಎಲ್ಲ ಜಾತಿಯ ಮತ ಮುಖ್ಯ. ಒಂದೇ ಜಾತಿಯ ಮತಗಳಿಂದ ಯಾರೂ ಗೆಲ್ಲಲು ಸಾಧ್ಯವಿಲ್ಲ ಎಂದರು.


ಜೆಡಿಎಸ್ ಬಿಜೆಪಿಯ ಬಿ ಟೀಮ್:


ಉಪಚುನಾವಣೆಯಲ್ಲಿ ಜೆಡಿಎಸ್‌ನವರು ಬಿಜೆಪಿಯೊಂದಿಗೆ ಹೊಂದಾಣಿಕೆಯಲ್ಲೇ ಇದ್ದಾರೆ. ಬಿಜೆಪಿಗೆ ಸಹಾಯವಾಗುವ ರೀತಿಯಲ್ಲಿ ಇವರ ನಡವಳಿಕೆ ಕಂಡು ಬರುತ್ತಿದೆ. ಹಾಗಾಗಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದರು. 
ಮೇಲ್ನೋಟಕ್ಕೆ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಅಷ್ಟೆ. ಮೊದಲಿನಿಂದಲೂ ಜೆಡಿಎಸ್ ಬಿಜೆಪಿಯ ಬೀ ಟೀಮ್ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕೆ.ಎನ್. ರಾಜಣ್ಣ ಹೇಳಿದರು. 


ಗುಬ್ಬಿಯಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶ ಶಾಸಕ ಶ್ರೀನಿವಾಸ್ ವಿರುದ್ಧದ ಸಮಾವೇಶ. ನಾನಂತೂ ಶ್ರೀನಿವಾಸ್ ಪರ ಇದ್ದೇನೆ. ಮುಂದೆ ಏನಾಗುತ್ತದೋ ಕಾದು ನೋಡೋಣ.
ಕೆ.ಎನ್. ರಾಜಣ್ಣ, ಮಾಜಿ ಶಾಸಕರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು