ಗುಬ್ಬಿ ಎಪಿಎಂಸಿ ಚುನಾವಣೆ: ಅಧ್ಯಕ್ಷರಾಗಿ ಎನ್.ಲಕ್ಷ್ಮೀರಂಗಯ್ಯ,  ಉಪಾಧ್ಯಕ್ಷರಾಗಿ ತಿಮ್ಮರಾಜು ಅವಿರೋಧ ಆಯ್ಕೆ

ಗುಬ್ಬಿ ಎಪಿಎಂಸಿ ಚುನಾವಣೆ: ಅಧ್ಯಕ್ಷರಾಗಿ ಎನ್.ಲಕ್ಷ್ಮೀರಂಗಯ್ಯ,   ಉಪಾಧ್ಯಕ್ಷರಾಗಿ ತಿಮ್ಮರಾಜು ಅವಿರೋಧ ಆಯ್ಕೆ

ಗುಬ್ಬಿ ಎಪಿಎಂಸಿ ಚುನಾವಣೆ: ಅಧ್ಯಕ್ಷರಾಗಿ ಎನ್.ಲಕ್ಷ್ಮೀರಂಗಯ್ಯ, 


ಉಪಾಧ್ಯಕ್ಷರಾಗಿ ತಿಮ್ಮರಾಜು ಅವಿರೋಧ ಆಯ್ಕೆ

ಗುಬ್ಬಿ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಅಧ್ಯಕ್ಷ ಎನ್.ಲಕ್ಷ್ಮೀರಂಗಯ್ಯ ಹಾಗೂ ಉಪಾಧ್ಯಕ್ಷ ತಿಮ್ಮರಾಜು ಅವಿರೋಧ ಆಯ್ಕೆಯಾದರು.


ಕೆಲವೇ ತಿಂಗಳ ಅವಧಿಗೆ ನಡೆದ ಈ ಚುನಾವಣೆ ಪ್ರಕ್ರಿಯೆ ತಹಸೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಒಟ್ಟು 17 ಸದಸ್ಯರ ಪೈಕಿ ಓರ್ವ ಸದಸ್ಯ ನಿಟ್ಟೂರು ಕ್ಷೇತ್ರದ ಶಿವಕುಮಾರ್ ಮೃತಪಟ್ಟಿರುವ ಹಿನ್ನೆಲೆ 16 ಮಂದಿ ಸದಸ್ಯರಲ್ಲಿ 9 ಮಂದಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಉಳಿದ 7 ಮಂದಿ ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ದೊಡ್ಡಗುಣಿ ಕ್ಷೇತ್ರದ ಎನ್.ಲಕ್ಷೀರಂಗಯ್ಯ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಎಸ್.ಪುರ ಕ್ಷೇತ್ರದ ತಿಮ್ಮರಾಜು ಮತ್ತು ಅಂಕಸAದ್ರದ ಯೋಗಾನಂದ್ ಈರ್ವರು ಅರ್ಜಿ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಯೋಗಾನಂದ್ ನಾಮಪತ್ರ ವಾಪಸ್ ಪಡೆದ ಹಿನ್ನಲೆ ಸಿ.ಎಸ್.ಪುರದ ತಿಮ್ಮರಾಜು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷ ಎನ್.ಲಕ್ಷ್ಮೀರಂಗಯ್ಯ ಮಾತನಾಡಿ ತಾಲ್ಲೂಕಿನ ರೈತರ ಹಿತ ಕಾಯುವ ಮಾರುಕಟ್ಟೆ ಸಮಿತಿ ಉಳಿದ ಕೆಲ ತಿಂಗಳಲ್ಲಿ ನೆನೆಗುದಿಗೆ ಬಿದ್ದ ಕೆಲಸಗಳಿಗೆ ಮುಕ್ತಿ ಕಾಣಿಸಲಿದೆ. ರೈತರು ಮತ್ತು ವರ್ತಕರ ನಡುವಿನ ಸಂಬAಧ ಹಸನಗೊಳಿಸಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸಲಾಗುವುದು. ಸರ್ಕಾರಕ್ಕೆ ಸುಂಕ ವಸೂಲಿ ಜೊತೆ ಮಾರುಕಟ್ಟೆಯ ಹೊರಭಾಗದ ವಹಿವಾಟು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಹಿತ ಕಾಯುವುದಾಗಿ ತಿಳಿಸಿದರು.


ಉಪಾಧ್ಯಕ್ಷ ತಿಮ್ಮರಾಜು ಮಾತನಾಡಿ ತಾಲ್ಲೂಕಿನ ಹಲವು ಗ್ರಾಮದಲ್ಲಿರುವ ಮಾರುಕಟ್ಟೆಗೆ ಸೂಕ್ತ ಸೌಲಭ್ಯ ಒದಗಿಸಲಾಗುವುದು. ಗುಬ್ಬಿ ಮತ್ತು ಚೇಳೂರು ಎಪಿಎಂಸಿ ಆವರಣದಲ್ಲಿ ನಡೆಯುವ ಎಲ್ಲಾ ವಹಿವಾಟು ಬಗ್ಗೆ ನಿಗಾವಹಿಸಿ ಸಮಿತಿಯ ಕಾರ್ಯ ಚುರುಕುಗೊಳಿಸುವುದಾಗಿ ತಿಳಿಸಿದರು.
ಬಿಜೆಪಿ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ, ಮುಖಂಡರಾದ ಪಿ.ಬಿ.ಚಂದ್ರಶೇಖರಬಾಬು, ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಎಚ್.ಟಿ.ಭೈರಪ್ಪ, ಎಸ್.ವಿಜಯ್ ಕುಮಾರ್, ಎಸ್.ನಂಜೇಗೌಡ, ಹಾರನಹಳ್ಳಿ ಪ್ರಭಣ್ಣ, ಯತೀಶ್, ಗಂಗಣ್ಣ, ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಗುರುಸ್ವಾಮಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ನಂದೀಶ್ ಇತರರು ಇದ್ದರು.