‘ವಿಧಾನಪರಿಷತ್ ಚುನಾವಣೆ: ರಾಜೇಂದ್ರರಿಗೇ ಟಿಕೆಟ್’
‘ವಿಧಾನಪರಿಷತ್ ಚುನಾವಣೆ: ರಾಜೇಂದ್ರರಿಗೇ ಟಿಕೆಟ್’
ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ ಕನಕ ಕುರುಬ ಸಂಘ
ಮಧುಗಿರಿ: ಮುಂದಿನ ದಿನಗಳಲ್ಲಿ.ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಆರ್.ರಾಜೇಂದ್ರರವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ತಾಲ್ಲೂಕು ಕನಕ ಕುರುಬರ ಸಂಘದ ಪದಾಧಿಕಾರಿಗಳು ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಆರ್ .ರಾಜೇಂದ್ರರವರು ಜಿಲ್ಲಾದ್ಯಂತ ಚಿರಪರಿಚಿತರಾಗಿದ್ದು ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವುದು ಖಚಿತವಾಗಿದ್ದು, ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಬೇಕು ಹಾಗೂ ಚುನಾವಣೆಯ ದೃಷ್ಟಯಿಂದ ಕೆ.ಎನ್ ರಾಜಣ್ಣನವರಿಗೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿಗಳನ್ನು ನೀಡ ಬೇಕೆಂದು ತಾಲ್ಲೂಕು ಕನಕ ಕುರುಬರ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಹಾಲಿ ಕ್ರಿಬ್ಕೋ ನಿರ್ದೇಶಕರು,ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ಆರ್.ರಾಜೇಂದ್ರ ರವರು ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ಸುಮಾರು 1.5 ಲಕ್ಷ ಜನರಿಗೆ ಉಚಿತವಾಗಿ ಊಟ , ಕೊರೊನಾ ನಿಯಂತ್ರಣಕ್ಕಾಗಿ ಮಾಸ್ಕ್ , ಸ್ಯಾನಿಟೈಜರ್ , ಆರೋಗ್ಯ ಕಿಟ್ , ಉಚಿತ ಅಂಬುಲೆನ್ಸ್ ಸೇವೆ , ಆಕ್ಸಿಜನ್ ಸಿಲಿಂಡರ್ , ಕೊರೊನಾ ಸೇನಾನಿಗಳಿಗೆ ಅವಶ್ಯಕ ವಸ್ತುಗಳ ವ್ಯವಸ್ಥೆಯ ಮತ್ತು ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿ ತೊಡಗಿಸಿ ಕೊಂಡು ತಾಲ್ಲೂಕಿನಲ್ಲಿ ಸುಮಾರು 22 ಕ್ವಿಂಟಾಲ್ ಅಧಿಕ ತರಕಾರಿಗಳನ್ನು ರೈತರಿಂದ ನೇರವಾಗಿ ಖರೀದಿಸಿ.ವಿವಿಧ ಗ್ರಾಮಗಳ ಬಡ ಕುಟುಂಬಗಳಿಗೆ ಸ್ಥಳೀಯ ಗ್ರಾಪಂ ಹಾಗೂ ಜನಪ್ರತಿನಿಧಿಗಳೊಂದಿಗೆ ಕಾರ್ಯಕ್ರಮಗಳನ್ನು ರೂಪಿಸುವುದರ ಮುಖಾಂತರ ಉಚಿತವಾಗಿ ವಿತರಣೆ ಮಾಡಿದ್ದಾರೆ. ಜಿಲ್ಲೆಯಲ್ಲಿನ ಪಹಣಿ ಹೊಂದಿರುವ ಎಲ್ಲಾ ರೈತಾಪಿವರ್ಗದವರಿಗೂ ಕನಿಷ್ಠ ಸಾಲ ಸೌಲಭ್ಯ , ಕೊರೊನಾ ಹಿನ್ನೆಲೆಯಲ್ಲಿ ಮೃತಪಟ್ಟ ಪಟ್ಟವರ ಹೆಸರಿನಲ್ಲಿ ತಾಲ್ಲೂಕಿನಯಾದ್ಯಂತಹ ಏಕಕಾಲಕ್ಕೆ ಸುಮಾರು 5 ಸಾವಿರ ಸಸಿಗಳನ್ನು ವಿತರಿಸಿ ಸಸಿಗಳನ್ನು ನೆಟ್ಟು ಅವುಗಳನ್ನು ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ನೀಡಿದ್ದಾರೆ . ಕಳೆದ ಸಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಟಿ.ಬಿ.ಜಯಚಂದ್ರರವರ ಪರವಾಗಿ ಪ್ರಚಾರ ಮಾಡಿದ್ದಾರೆ .
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರು ಮುಂಬರುವ ಚುನಾವಣೆಯಲ್ಲಿ ಪಕ್ಷದ ಪರವಾಗಿ ಮುಖಂಡರು ಕಾರ್ಯಕರ್ತರು, ತೊಡಗಿಸಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸುವಂತೆ ತಿಳಿಸಿದ್ದಾರೆ.
ಮುಖಂಡರಾದ ಗೇಟ್ ಶಿವಣ್ಣ, ತಿಮ್ಮರಾಜು, ಆನಂದ್, ಗರಣಿ ರಾಮಾಂಜಿ, ನಾಗಣ್ಣ, ಚಲಪತಿ, ಜಿಲ್ಲಾ ಕನಕ ಯುವ ಸೇನೆಯ ಅಧ್ಯಕ್ಷ ಕೆಂಪರಾಜು, ಮಂಜುನಾಥ್, ಲಂಕಪ್ಪ, ಸಣ್ಣ ತಿಮ್ಮಯ್ಯ, ನಾಗರಾಜು, ಚಾಣುಕ್ಯ, ಚೌಡಪ್ಪ, ಶ್ರಾವಂಡಹಳ್ಳಿ ಬಾಬು , ರಂಗನಾಥ್ ಇದ್ದರು