‘ಮೂರು ಲಕ್ಷ ಖಾಲಿ ಹುದ್ದೆ ಭರ‍್ತಿ ಮಾಡಿ : ಗುತ್ತಿಗೆ ನೇಮಕದಲ್ಲೂ ಮೀಸಲಾತಿ ಕೊಡಿ’
ಮದಕರಿ ನಾಯಕರ ಜಯಂತಿಯಲ್ಲಿ ಕೆ.ಎನ್.ರಾಜಣ್ಣ
‘ಮೂರು ಲಕ್ಷ ಖಾಲಿ ಹುದ್ದೆ ಭರ‍್ತಿ ಮಾಡಿ :
ಗುತ್ತಿಗೆ ನೇಮಕದಲ್ಲೂ ಮೀಸಲಾತಿ ಕೊಡಿ’
ಮದಕರಿ ನಾಯಕರ ಜಯಂತಿಯಲ್ಲಿ ಕೆ.ಎನ್.ರಾಜಣ್ಣ
ತುಮಕೂರು: ರಾಜ್ಯ ಸರ‍್ಕಾರದಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಇವೆ, ಅವುಗಳನ್ನು ಕೂಡಲೇ ಭರ‍್ತಿ ಮಾಡಿ, ಅಲ್ಲಿವರೆಗೂ ಗುತ್ತಿಗೆ ಆಧಾರದ ನೇಮಕಾತಿಯಲ್ಲೂ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ಕೊಡಿ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ರ‍್ಕಾರವನ್ನು ಆಗ್ರಹಪಡಿಸಿದರು.
ನಗರದಲ್ಲಿ ಶನಿವಾರ ಗಾಜಿನ ಮನೆಯಲ್ಲಿ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಮದಕರಿ ನಾಯಕರ ಜಯಂತಿ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಶಿಫಾರಸು ಮಾಡಿ ನ್ಯಾಯಮೂರ‍್ತಿ ನಾಗಮೋಹನದಾಸ್ ಸರ‍್ಕಾರಕ್ಕೆ ವರದಿ ನೀಡಿ ಎರಡು ವರ‍್ಷವಾಗಿದೆ. ಎರಡು ವರ‍್ಷದ ಮುಂಚೆಯೇ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಇತಿಹಾಸವನ್ನು ನಾವು ಅರಿತಾಗ ಮಾತ್ರ ನಮ್ಮ ಇತಿಹಾಸ ಸೃಷ್ಟಿ ಮಾಡಲು ಸಾಧ್ಯ. ಇತಿಹಾಸ ಸೃಷ್ಟಿಸುವ ಛಲವನ್ನು ಜೀವನದಲ್ಲಿ ಮಾಡಬೇಕು. ಒಂದು ಕಾಲದ ಪಾಳೆಗಾರಿಕೆ ಎಂಬ ಪದವನ್ನು ದಬ್ಬಾಳಿಕೆ ಎಂಬ ರೀತಿ ಬಳಕೆ ಮಾಡುತ್ತಾರೆ. ಪಾಳೆಗಾರರು ಕೋಟೆ ಕಟ್ಟಿ ಸಾರ‍್ವಜನಿಕರ ರಕ್ಷಣೆ ಮಾಡಿದ್ದರು. ಒಗ್ಗಟ್ಟು ಇರಬೇಕು ಎಂದರು.
ಬೇರೆ ಯಾರನ್ನೂ ಕೂಡ ನಾಯಕ ಎಂದು ಒಪ್ಪಿಕೊಳ್ಳುವ ಪ್ರಶ್ನೆ ನಮಗೆ ಬರಲ್ಲ. ಯಾಕೆಂದರೆ ನಾವೆಲ್ಲ ಹುಟ್ಟಿನಿಂದಲೂ ನಾಯಕರು. ಸಮಾಜದಲ್ಲಿ ಸ್ವಾಭಿಮಾನದ ಬದುಕು ಸಾಗಿಸಲು, ವಿದ್ಯೆ, ಆರ‍್ಥಿಕ ಸ್ವಾವಲಂಬನೆ ಮುಖ್ಯ. ವಿದ್ಯೆಗೆ ಎಲ್ಲವನ್ನು ದೊರಕಿಸಿಕೊಡುವ ಶಕ್ತಿಯಿದೆ. ವಿದ್ಯೆಗೆ ಹೆಚ್ಚಿನ ಒತ್ತು ನೀಡಬೇಕು. ಯುವಕರು ಸ್ವಯಂ ಪ್ರೇರಿತವಾಗಿ ಮದಕರಿ ನಾಯಕರ ದಿನ ಆಚರಿಸುವ ಪ್ರಯತ್ನ ಮಾಡಿದ್ದಾರೆ. ಸ್ವರ‍್ಥದ ಬಯಕೆ ಅವರಲ್ಲಿ ಇಲ್ಲ ಎನ್ನುವುದು ತಿಳಿಯುತ್ತದೆ ಎಂದರು.
ಜನರ ಕಷ್ಟಗಳಿಗೆ ಸ್ಪಂದಿಸಿದರೆ ಜನರು ನಮ್ಮನ್ನು ಗುರುತಿಸುತ್ತಾರೆ. ನೋ ಕಾಸ್ಟ್, ನೋ ಕ್ಯಾಶ್ ಜಾತಿ, ಹಣ ಎರಡೂ ಇಲ್ಲದೆ ಬೆಳೆದಿರುವುದು ನಾನು ಒಬ್ಬನೇ. ಎಲ್ಲ ಜಾತಿಯಲ್ಲಿ ಇರುವ ಬಡವರ ಆಶರ‍್ವಾದದಿಂದ ಗೆದ್ದಿದ್ದೇನೆ ಎಂದರು ರಾಜಣ್ಣ.
ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ , ಸರ‍್ಕಾರ ಮದಕರಿ ನಾಯಕರ ಜಯಂತಿ ಆಚರಣೆ ಮಾಡಬೇಕು. ಐತಿಹಾಸಿಕ ಚಿತ್ರದರ‍್ಗದ ಕೋಟೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ರ‍್ಕಾರ ಆದಷ್ಟು ಬೇಗ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಬೇಕು. ಕರ‍್ಯರೂಪಕ್ಕೆ ತರಬೇಕು. ಆದಷ್ಟು ಬೇಗ ಮೀಸಲಾತಿ ಕಲ್ಪಿಸಬೇಕು ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ, ಇಂದು ಸಂವಿಧಾನಕ್ಕೆ ಚ್ಯುತಿ ಬರುವಂತಹ ವಾತಾವರಣ ನಿರ‍್ಮಾಣವಾಗಿದೆ. ನಮ್ಮೆಲ್ಲರಿಗೂ ಅಖಂಡತೆ ಮುಖ್ಯ. ಎಲ್ಲರಿಗೂ ನ್ಯಾಯಬದ್ಧವಾದ ಹಕ್ಕುಗಳನ್ನು ನೀಡಬೇಕು. ಆಳುವ ಪ್ರಭುಗಳು ಸರ‍್ವಜನಿಕರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಆಡಳಿತ ಮಾಡುವವರಿಗೆ ಮದಕರಿ ನಾಯಕರ ತತ್ವಗಳು ಆರ‍್ಶ. ಜನರ ಹಿತ ಕಾಯುವ ಕೆಲಸ ಮಾಡಬೇಕು. ಸಂವಿಧಾನದ ಹಿತ ಕಾಯಲು ಮದಕರಿ ನಾಯಕರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ರ‍್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಬೇಕು. ಸಮಾಜದಲ್ಲಿ ಗೌರವ, ಉನ್ನತ ಸ್ಥಾನ ಸಿಕ್ಕಿದೆ. ರ‍್ಕಾರ ಮೀಸಲಾತಿಯನ್ನೂ ಹೆಚ್ಚಿಸಿದೆ. ಸಮುದಾಯಗಳು ಈ ಪ್ರಯೋಜನ ಪಡೆದುಕೊಳ್ಳಬೇಕು. ಎಲ್ಲ ಪಕ್ಷದವರೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ವೇದಿಕೆಯಲ್ಲಿದ್ದ ಇತರೆ ಗಣ್ಯರು
ಮಾಜಿ ಶಾಸಕ ಸುರೇಶ್ ಗೌಡರು, ವಾಲ್ಮೀಕಿ ಸ್ವಾಭಿಮಾನಿ ಸಂಘದ ಅಧ್ಯಕ್ಷ ಚಳವಳಿ ರಾಜಣ್ಣ, ಕಾವಲ್ಲಪ್ಪ, ಸಿಂಗಾಪುರ ವೆಂಕಟೇಶ್, ಅನಸೂಯ ಕೆಂಪನಹಳ್ಳಿ, ಪ್ರೊ.ಟಿ.ಟಿ.ಬಸವನಗೌಡ, ಶ್ರವಣ ಕುಮಾರ ಡಿ.ನಾಯಕ, ರಾಜಕುಮಾರ್, ಶಾಂತಲಾ ರಾಜಣ್ಣ, ಪ್ರಸಾದ್, ಮಧುಗಿರಿ ರಮೇಶ್.
ರಾಜನಹಳ್ಳಿ ಸ್ವಾಮೀಜಿಗೆ ಸಮಾಜ ಚಿರರುಣಿ
ರಾಜನಹಳ್ಳಿ ಸ್ವಾಮೀಜಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಅವರಿಗೆ ನಾವೆಲ್ಲ ಚಿರರುಣಿ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗಿದೆ. ಈ ಫಲಿತಾಂಶಕ್ಕಾಗಿ ಸಾಕಷ್ಟು ಜನ ಪ್ರಯತ್ನ ಮಾಡಿದ್ದಾರೆ. ರಾಜ್ಯದ ತುಂಬ ಅವರ ಇತಿಹಾಸ ಹರಡಲಿ.
ಮದಕರಿ ನಾಯಕರ ಹೋರಾಟ, ತ್ಯಾಗ ಇಂದಿನ ಯುವಕರಿಗೆ ಆರ‍್ಶವಾಗಬೇಕು. ಅವರನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಸಮುದಾಯ ಕಟ್ಟುವ ಪ್ರಯತ್ನ ನಡೆಯುತ್ತಿದೆ.
ಸತೀಶ ಜಾರಕಿಹೊಳಿ,
ಕಾಂಗ್ರೆಸ್ ಮುಖಂಡರು,
ಥೀಮ್ ಪಾರ್ಕ ನಿರ‍್ಮಿಸಿ
ಚಿತ್ರದುರ‍್ಗದ ರಕ್ಷಣೆಗಾಗಿ ಹೋರಾಡಿದ ಮದಕರಿ ನಾಯಕರ ಹೆಸರಲ್ಲಿ ಥೀಮ್ ಪಾರ್ಕ ನಿರ‍್ಮಿಸಬೇಕು. ಇದರ ಜೊತೆಗೆ ಭಾರತೀಯ ಸೇನೆಯಲ್ಲಿ ಮದಕರಿ ರೆಜಿಮೆಂಟ್, ವೀರ ಬೇಡರ ಪಡೆ ಆರಂಭಿಸಬೇಕು. ಯಾರಿಗೂ ಹೆದರದ, ಜಗ್ಗದ ಹೋರಾಟ ನಡೆಸುವವರನ್ನು ಸೇನೆಗೆ ಸೇರಿಸಬೇಕು.
ಧರ‍್ಮೇಂದ್ರ ಕುಮಾರ್,
ಇತಿಹಾಸ ದಾಖಲೆಕಾರ