ಆಸ್ತಿ ತೆರಿಗೆ: ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆರಿಗೆ ಏರಿಸದಿದ್ದರೆ ಅನುದಾನ ಖೋತಾ ಆಗುವ ಆತಂಕ

tumakuru-palike-property-tax

ಆಸ್ತಿ ತೆರಿಗೆ: ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆರಿಗೆ ಏರಿಸದಿದ್ದರೆ ಅನುದಾನ ಖೋತಾ ಆಗುವ ಆತಂಕ

ಆಸ್ತಿ ತೆರಿಗೆ: ಸಾಮಾನ್ಯ ಸಭೆಯಲ್ಲಿ ನಿರ್ಧಾರ
ತೆರಿಗೆ ಏರಿಸದಿದ್ದರೆ ಅನುದಾನ ಖೋತಾ ಆಗುವ ಆತಂಕ

ತುಮಕೂರು: ಕಳೆದೊಂದು ವರ್ಷದಿಂದ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಹುಚರ್ಚಿತವಾಗುತ್ತಿರುವ ಹಾಗೂ ನಗರದ ತೆರಿಗೆದಾರ ನಾಗರಿಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಆಸ್ತಿ ತೆರಿಗೆಯ ಹೊಸ ಪದ್ಧತಿಯ ವಿಷಯವು ಮತ್ತೊಮ್ಮೆ ಮಹಾನಗರ ಪಾಲಿಕೆಯಲ್ಲಿ ಚರ್ಚೆಗೆ ಬರಲಿದೆ.


ಪಾಲಿಕೆಯ ಹಣಕಾಸು, ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಸಭೆಯಲ್ಲಿ ಈ ವಿಷಯ ಪುನಃ ಚರ್ಚೆಗೆ ಬಂದಿದ್ದು, ಸರ್ಕಾರದ ಆದೇಶ ಪಾಲಿಸದಿದ್ದರೆ ಮುಂದೆ ಸರ್ಕಾರದಿಂದ ಬರುವ ಅನುದಾನಕ್ಕೆ ಖೋತಾ ಆಗುವುದೆಂಬ ಆತಂಕವು ಸದಸ್ಯರ ಬಾಯಿಯನ್ನು ಕಟ್ಟಿಹಾಕಿದೆ. ಈ ಬಗ್ಗೆ ಮುಂಬರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. 


ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಸಭೆಯಲ್ಲಿ ಆಸ್ತಿ ತೆರಿಗೆ ಕುರಿತು ಕಳೆದ ವರ್ಷ ಬಂದಿರುವ ಸರ್ಕಾರಿ ಆದೇಶ ಹಾಗೂ ಹೊಸ ಪದ್ಧತಿ ಜಾರಿ ಕುರಿತು ವಿಶೇಷವಾಗಿ ಚರ್ಚೆಯಾಯಿತು.


ಆಸ್ತಿ ತೆರಿಗೆಯ ಹೊಸ ಪದ್ಧತಿ ಕುರಿತು ಕಂದಾಯ ವಿಭಾಗದ ಅಧಿಕಾರಿಗಳು ಸಭೆಗೆ ವಿಸ್ತೃತ ಮಾಹಿತಿ ನೀಡಿದರು. ಸ್ವತ್ತಿನ ಮೂಲ ಮೌಲ್ಯವನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ. 25 ರಷ್ಟು ಪರಿಗಣಿಸುವುದು, ಕಟ್ಟಡಕ್ಕೆ ಹೊಂದಿಕೊAಡಿರುವ 1,000 ಚ.ಅ. ವರೆಗಿನ ಖಾಲಿ ಭೂಮಿಗೆ ವಿನಾಯಿತಿ ನೀಡಿ, ಅದಕ್ಕಿಂತ ಹೆಚ್ಚಿರುವ ಭೂಮಿಗೆ ತೆರಿಗೆ ವಿಧಿಸುವುದು, ವಾಸದ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಮೂಲಬೆಲೆಯ ಶೇ. 0.2 ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ. .5 ಕ್ಕಿಂತ ಹೆಚ್ಚಿಲ್ಲದಂತೆ ಆಸ್ತಿ ತೆರಿಗೆ ವಿಧಿಸುವುದು ಮೊದಲಾದ ವಿವರ ನೀಡಿದ ಅಧಿಕಾರಿಗಳು, ಆಸ್ತಿ ತೆರಿಗೆಯನ್ನು 2022-23 ನೇ ಸಾಲಿಗೆ ಶೇ. 3 ರಿಂದ ಶೆ.5 ರಷ್ಟು ಹೆಚ್ಚಳ ಮಾಡಬೇಕಾಗಿದೆಯೆಂದು ಅಂಕಿ ಅಂಶಗಳೊAದಿಗೆ ಪ್ರತಿಪಾದಿಸಿದರು.


ಆಕ್ಷೇಪ-ಅಸಮಾಧಾನ


ಈ ವಿಷಯದ ಬಗ್ಗೆ ಸಭೆಯಲ್ಲಿದ್ದ ಮೇಯರ್ ಬಿ.ಜಿ.ಕೃಷ್ಣಪ್ಪ, ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಹಾಗೂ ಸಭೆಯಲ್ಲಿದ್ದ ಇತರೆ ಸದಸ್ಯರುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರ ಸುತ್ತೋಲೆಯ ಜಾರಿಯಿಂದ ಈಗಾಗಲೇ ತುಮಕೂರು ನಗರದ ತೆರಿಗೆದಾರ ನಾಗರಿಕರಿಗೆ ಆರ್ಥಿಕವಾಗಿ ದೊಡ್ಡ ಹೊರೆ ಬೀಳುವಂತಾಗಿದೆ ಎಂದು ಹಾಗೂ ಈ ವಿಷಯವಾಗಿ ಈಗಾಗಲೇ ಸಮಿತಿ ಸಭೆಯಲ್ಲಿ ಒಮ್ಮೆ ಚರ್ಚೆ ಮಾಡಿರುವುದಾಗಿಯೂ ಅಸಮಾಧಾನದಿಂದ ಎಲ್ಲರೂ ಪ್ರತಿಕ್ರಿಯಿಸಿದರು. 


ಅನುದಾನಕ್ಕೆ ತೊಡಕಾದೀತು


ಆಗ ಚರ್ಚೆಯ ಮಧ್ಯೆ ಪ್ರವೇಶಿಸಿದ ಆಯುಕ್ತೆ ರೇಣುಕಾ ಅವರು, ಆಸ್ತಿ ತೆರಿಗೆಗೆ ಸಂಬAಧಿಸಿದಂತೆ ಸರ್ಕಾರದ ಆದೇಶವನ್ನು ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನಗಳ ಬಿಡುಗಡೆಗೆ ತೊಂದರೆ ಆಗುವ ಸಾಧ್ಯತೆ ಇದೆಯೆಂದು ಎಚ್ಚರಿಸಿದರು.  ಅಲ್ಲದೆ ಈ ಹಿಂದೆಯೇ ಆಸ್ತಿ ತೆರಿಗೆಗೆ ಸಂಬAಧಿಸಿದಂತೆ ಸಾಮಾನ್ಯ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನದಂತೆ ಮರುಪರಿಶೀಲನೆಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಆ ಬಗ್ಗೆ ಸರ್ಕಾರದ ಹಂತದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರಸ್ತುತ ಸರ್ಕಾರದ ಸುತ್ತೋಲೆಯ ಪ್ರಕಾರ ಆಸ್ತಿ ತೆರಿಗೆ ಸಂಗ್ರಹಕ್ಕೆ ಸಹಕರಿಸಬೇಕೆಂದು ಸಭೆಯನ್ನು ಕೋರಿದರು. 


ಆಯುಕ್ತರು ನೀಡಿದ ಸಲಹೆ ಸದಸ್ಯರ ಬಾಯಿಯನ್ನು ಕಟ್ಟಿಹಾಕಿತು. ಕೊನೆಗೆ ಈ ವಿಷಯವಾಗಿ ಬರಲಿರುವ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸದಸ್ಯರುಗಳು ತೀರ್ಮಾನಿಸಿದರು.