ಜಕ್ಕೂರ್‌ ವಿಮಾನ  ತರಬೇತಿ ಶಾಲೆ ರನ್‌ ವೇ ಸಿದ್ಧ : ಸಚಿವ ಕೆ.ಸಿ.ನಾರಾಯಣಗೌಡ

ಜಕ್ಕೂರ್‌ ವಿಮಾನ  ತರಬೇತಿ ಶಾಲೆ ರನ್‌ ವೇ ಸಿದ್ಧ : ಸಚಿವ ಕೆ.ಸಿ.ನಾರಾಯಣಗೌಡ

ಜಕ್ಕೂರ್‌ ವಿಮಾನ  ತರಬೇತಿ ಶಾಲೆ ರನ್‌ ವೇ ಸಿದ್ಧ :

ಸಚಿವ ಕೆ.ಸಿ.ನಾರಾಯಣಗೌಡ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ಉನ್ನತೀಕರಿಸಿ, ದೇಶದಲ್ಲೇ ಅತ್ಯುತ್ತಮ ಶಾಲೆಯನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಅವರು ತಿಳಿಸಿದರು.

ಜಕ್ಕೂರು ವಿಮಾನ ನಿಲ್ದಾಣದ ರನ್‌ವೇ ಕಾಮಗಾರಿ ಪರಿವೀಕ್ಷಣೆ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಮೂರು ವಿಮಾನಗಳನ್ನು ಡಿ.ಜಿ.ಸಿ.ಎ. ಯಿಂದ ಪರಿಶೀಲನೆಗೊಳಪಡಿಸಿ, ವೈಮಾನಿಕ ಹಾರಾಟ ದೃಢೀಕರಣ ಪಡೆಯಲಾಗಿದ್ದು, ಪರೀಕ್ಷಾರ್ಥ ಹಾರಾಟವನ್ನು ನಡೆಸಲಾಗಿರುತ್ತದೆ. ಟ್ವಿನ್ ಇಂಜಿನ್ ವಿಮಾನವನ್ನು ಅಸೆಂಬಲ್ ಮಾಡಲಾಗಿದೆ ಎಂದು ಸಚಿವರು ತಿಳಿದರು.

ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಹ್ಯಾಂಗರ್‌ನ ನವೀಕರಣ ಕಾಮಗಾರಿಯು ಪೂರ್ಣಗೊಂಡಿರುತ್ತದೆ. ಜಕ್ಕೂರು ವಿಮಾನ ನಿಲ್ದಾಣದ ಆವರಣ ಮತ್ತು ಶಾಲೆಯನ್ನು ಉನ್ನತೀಕರಿಸಲು ಕ್ರಮಕೈಗೊಳ್ಳಲಾಗಿದೆ. ಜಕ್ಕೂರು ವಿಮಾನ ನಿಲ್ದಾಣದ ಭದ್ರತೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಸರ್ಕಾರಿ ವೈಮಾನಿಕ ಶಾಲೆಗೆ ಒಬ್ಬ ಮುಖ್ಯ ವಿಮಾನ ಬೋಧಕರು ಹಾಗೂ ಇಬ್ಬರು ಸಹಾಯಕ ವಿಮಾನ ಬೋಧಕರನ್ನು ನೇಮಕ ಮಾಡಲಾಗಿದೆ. ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಮೂರು ಗ್ರೌಂಡ್ ಇನ್ಸ್ಟ್ರಕ್ಟರ್ ಹಾಗೂ ಇಬ್ಬರು ಸ್ಕಿಲ್ಡ್ ಮೆಕಾನಿಕ್‌ಗಳನ್ನು ನೇಮಕ ಮಾಡಲಾಗಿದೆ. ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ರನ್‌ವೇ, ಟ್ಯಾಕ್ಸಿವೇ ಮತ್ತು ಏಪ್ರಾನ್ ನವೀಕರಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.

ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ನೊಂದಣಿಯಾಗಿದ್ದ 19 ಸಿಪಿಎಲ್ 15 ಪಿಪಿಎಲ್ ಸೇರಿ ಒಟ್ಟು 34 ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳಿನಿAದ ತರಬೇತಿಯನ್ನು ಪ್ರಾರಂಭಿಸಲಾಗುವುದು. ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಸಿಪಿಎಲ್ ಶುಲ್ಕ ಕರ್ನಾಟಕ ಪ್ರಶಿಕ್ಷಣಾರ್ಥಿಗಳಿಗೆ ರೂ. 37,00,000/- ಹಾಗೂ ಕರ್ನಾಟಕೇತರ ಪ್ರಶಿಕ್ಷಣಾರ್ಥಿಗಳಿಗೆ ರೂ.42,00,000/-ಪಿಪಿಎಲ್ ತರಬೇತಿ ಶುಲ್ಕ ಕರ್ನಾಟಕ ಪ್ರಶಿಕ್ಷಣಾರ್ಥಿಗಳಿಗೆ ರೂ. 10,00,000/- ಕರ್ನಾಟಕೇತರ ಪ್ರಶಿಕ್ಷಣಾರ್ಥಿಗಳಿಗೆ 15,00,000/- ಶುಲ್ಕ ನಿಗದಿಪಡಿಸಿದೆ ಎಂದು ಸಚಿವರು ತಿಳಿಸಿದರು.