ಸೋಲಾರ್ ಪಾರ್ಕ್: ಜಮೀನು ಮಾಲೀಕರಿಗೆ ಹೆಚ್ಚು ಹಣ  ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ

ಸೋಲಾರ್ ಪಾರ್ಕ್: ಜಮೀನು ಮಾಲೀಕರಿಗೆ ಹೆಚ್ಚು ಹಣ  ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ
ಸೋಲಾರ್ ಪಾರ್ಕ್: ಜಮೀನು ಮಾಲೀಕರಿಗೆ ಹೆಚ್ಚು ಹಣ  ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ

ಸೋಲಾರ್ ಪಾರ್ಕ್: ಜಮೀನು ಮಾಲೀಕರಿಗೆ ಹೆಚ್ಚು ಹಣ 
ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ


ತುಮಕೂರು : ಸೋಲಾರ್ ಪಾರ್ಕ್ ಸ್ಥಾಪನೆಗಾಗಿ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಿದ ಭೂ ಮಾಲೀಕರ ಖಾತೆಗೆ ವಾರ್ಷಿಕ ಪ್ರತಿ ಎಕರೆಗೆ ನೇರವಾಗಿ ಜಮಾ ಮಾಡಲಾಗುತ್ತಿರುವ ೨೧,೦೦೦ ರೂ. ಗಳನ್ನು ಹೆಚ್ಚಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಸಚಿವ ವಿ. ಸುನಿಲ್ ಕುಮಾರ್ ಭರವಸೆ ನೀಡಿದರು.
ಪಾವಗಡದ ಸೋಲಾರ್‌ಪಾರ್ಕ್ಗಿಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಗುತ್ತಿಗೆ ಹಣವನ್ನು ಹೆಚ್ಚಿಸಲು ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತನಾಡಿ ಗುತ್ತಿಗೆ ಹಣವನ್ನು ಹೆಚ್ಚಿಸುವ ಭರವಸೆ ನೀಡಿದರು. ಅಲ್ಲದೆ, ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಜಮೀನು ನೀಡಿದ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಪಾವಗಡದ ಸೋಲಾರ್ ಪಾರ್ಕ್ನಿಂದ ದೇಶ ಹಾಗೂ ರಾಜ್ಯದ ಇತರೆ ಭಾಗಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಪಾರ್ಕ್ ನಿರ್ಮಾಣಕ್ಕೆ ಜಮೀನು ನೀಡಿದವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಜಮೀನು ನೀಡಿದ ಸಂದರ್ಭದಲ್ಲಿ ಸರ್ಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೊಟ್ಟ ಮಾತಿಗೆ ಈಗಲೂ ಬದ್ಧ. ಅಂದು ಕೊಟ್ಟ ಮಾತು, ಒಪ್ಪಂದಗಳನ್ನು ಹಂತ ಹಂತವಾಗಿ ಖಂಡಿತವಾಗಿ ಈಡೇರಿಸಲಾಗುವುದು ಎಂದರು. 
ಇಂಧನ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಎರಡು ತಿಂಗಳ ಅವಧಿಯಲ್ಲಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಯೋಜನಾನುಷ್ಠಾನಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ವಿಶ್ವದಲ್ಲಿ ೩ನೇ ಹಾಗೂ ದೇಶದಲ್ಲಿ ಒಂದೇ ಸ್ಥಳದಲ್ಲಿ ನಿರ್ಮಾಣವಾಗಿರುವ ಮೊದಲನೇ ಅತೀ ದೊಡ್ಡ ಸೋಲಾರ್ ಪಾರ್ಕ್ಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರವಾಗಬಹುದಾದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದ್ದೇನೆ. ಸ್ಥಳದಲ್ಲೇ ಇತ್ಯರ್ಥವಾಗದ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ಪರಿಹರಿಸಲಾಗುವುದು ಎಂದರು. 
ಗ್ರಾಮ ಪಂಚಾಯ್ತಿ ವ್ಯಾಪ್ತಿ ಪ್ರದೇಶ ಅಭಿವೃದ್ಧಿ: ತಿರುಮಣಿ ಹಾಗೂ ವಳ್ಳೂರು ಗ್ರಾಮ ಪಂಚಾಯತ್ ಅಭಿವೃದ್ಧಿಗಾಗಿ ಶಾಲೆ, ಸಿಸಿ ರಸ್ತೆ, ಕುಡಿಯುವ ನೀರು, ಶೌಚಾಲಯ, ಚರಂಡಿ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ ೨೫ ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿದೆ. ಅತಿ ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಹೆಚ್ಚುವರಿ ಹಣ ನೀಡುವ ಭರವಸೆ: ಕಾರ್ಯಕ್ರಮದ ಬಳಿಕ ರೈತರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಿದ ಸಚಿವರ ಮುಂದೆ ಶಾಲಾ ಕಾಲೇಜು ನಿರ್ಮಿಸಲು ರೈತರು ಬೇಡಿಕೆ ಇಟ್ಟಾಗ, ಈ ಭಾಗದಲ್ಲಿನ ಗ್ರಾಮಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಮೀಕ್ಷೆ ಮಾಡಿ, ಶಾಲಾ-ಕಾಲೇಜಿನ ಸ್ಥಾಪನೆಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಬರದ ನಾಡಿನ ಪಾವಗಡದಲ್ಲಿ ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳಲ್ಲಿಯೂ ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಗ್ರಾಮದಿಂದ ಗ್ರಾಮದ ನಡುವಿನ ರಸ್ತೆಯಲ್ಲಿ ಸೋಲಾರ್ ಬೀದಿ ದೀಪಗಳನ್ನು ಕಲ್ಪಿಸಲು ಇಂದೇ ಆದೇಶ ನೀಡುತ್ತೇನೆ. ಅಗ್ನಿಶಾಮಕ ಘಟಕ ಸ್ಥಾಪನೆಗೂ ಗೃಹ ಇಲಾಖೆಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದರಲ್ಲದೆ ಸೋಲಾರ್ ಘಟಕದ ಪ್ರದೇಶದಲ್ಲಿ ಕನ್ನಡದಲ್ಲೇ ನಾಮಫಲಕ ಅಳವಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಹಾಗೂ ಶಾಲೆಗಳಲ್ಲಿ ಕೊರತೆಯಿರುವ ಶಿಕ್ಷಕರ ನೇಮಕ ಮಾಡಲು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ವಹಿಸುತ್ತೇನೆ. ಒಟ್ಟಾರೆ ಎಲ್ಲಾ ಬೇಡಿಕೆಗಳನ್ನು ಸಮರ್ಪಕವಾಗಿ ಈಡೇರಿಸಿ ಈ ಭಾಗದ ಜನಜೀವನ ಸುಧಾರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಬಳಿಕ ಸೌರಶಕ್ತಿ ಅಭಿವೃದ್ಧಿ ನಿಗಮದ ಸಬ್‌ಸ್ಟೇಷನ್-೫ ಹಾಗೂ ೨; ಪಿಜಿಸಿಐಎಲ್ ಸಬ್‌ಸ್ಟೇಷನ್; ಫೋರ್ಟಮ್, ಸಾಫ್ಟ್ ಬ್ಯಾಂಕ್ ಎನರ್ಜಿ ಹಾಗೂ ರೀ ನ್ಯೂ ಪವರ್ ಸೋಲಾರ್ ಕಂಪನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಜರಿದ್ದ ಗಣ್ಯರು:
ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಮಣಪ್ಪ, ತಹಸೀಲ್ದಾರ್ ನಾಗರಾಜ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ಡಿವೈಎಸ್‌ಪಿ ರಾಮಕೃಷ್ಣಯ್ಯ, ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ, ಸಿಇಒ ಶ್ರೀನಿವಾಸಪ್ಪ, ಪ್ರಧಾನ ವ್ಯವಸ್ಥಾಪಕ ಅಮರ್‌ನಾಥ್, ಹನುಮಂತಪ್ಪ, ಇಇ ಪ್ರಕಾಶ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮಹೇಶ್, ಬೆಸ್ಕಾಂ ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಕೆಪಿಟಿಸಿಎಲ್ ಇಂಜಿನಿಯರ್‌ಗಳಾದ ಪ್ರಶಾಂತ್ ಕೂಡ್ಲಿಗಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಬಾಕ್ಸ್
ರೈತರನ್ನು ಅಭಿನಂದಿಸಿದ ಸಚಿವರು
ಪಾವಗಡದಲ್ಲಿ ನಿರ್ಮಾಣವಾಗಿರುವ ಅತಿ ದೊಡ್ಡ ಸೋಲಾರ್ ಪಾರ್ಕ್ನಿಂದ ಇಂಧನ ಇಲಾಖೆಯಲ್ಲಿ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ಚಟುವಟಿಕೆಗಳಾಗುತ್ತಿವೆ. ಈ ಸೋಲಾರ್ ಪಾರ್ಕ್ ದೇಶದ ಗಮನ ಸೆಳೆದಿದ್ದು, ಪಾವಗಡ ತಾಲೂಕು ಪ್ರಪಂಚದ ಭೂಪಟದಲ್ಲಿ ಜಗಮಗಿಸುತ್ತಿದೆ. ಈ ಭಾಗದ ರೈತರು ಸುಮಾರು ಹನ್ನೆರಡೂವರೆ ಸಾವಿರ ಎಕರೆ ಜಮೀನು ನೀಡಿದ್ದರ ಫಲವಾಗಿ ೨೦೫೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಯೋಜನೆಗೆ ಜಮೀನು ನೀಡಿದ ರೈತರನ್ನು ಅಭಿನಂದಿಸಿದರು.


ಉದ್ಯೋಗ ಬೇಕಿದ್ದರೆ ನನ್ನ ಗಮನಕ್ಕೆ ತನ್ನಿ:
ಸಚಿವ ಸುನೀಲ್ ಕುಮಾರ್
ಪಾವಗಡ: ಸೋಲಾರ್ ಪಾರ್ಕಿನಲ್ಲಿ ಉದ್ಯೋಗ ಒದಗಿಸಲು ಸ್ಥಳೀಯರಿಗೆ ಆದ್ಯತೆ ನೀಡದೆ ಹೊರಗಿನವರಿಗೆ ಹೆಚ್ಚು ಪ್ರಾಶಸ್ತö್ಯ ನೀಡಲಾಗುತ್ತಿದೆ. ಉದ್ಯೋಗ ನೀಡಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಎಂದು ಶಾಸಕ ವೆಂಕಟರಮಣಪ್ಪ ಮನವಿ ಮಾಡಿದರು.
ಇಡೀ ಪಾವಗಡ ತಾಲೂಕಿನಲ್ಲಿ ಐಟಿಐ, ಇಂಜಿನಿಯರಿAಗ್ ಮಾಡಿದ ಯುವಕರು ಹೆಚ್ಚಾಗಿದ್ದು, ಇವರಿಗೆ ಮೊದಲ ಆದ್ಯತೆಯಲ್ಲಿ ಉದ್ಯೋಗ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅಲ್ಲದೆ, ವೆಂಕಟಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿನ ರೈತರು ಹೆಚ್ಚುವರಿಯಾಗಿ ಸುಮಾರು ೨೦೦೦ ಎಕರೆ ಜಮೀನು ನೀಡಲು ಮುಂದೆ ಬಂದಿದ್ದು, ಆ ಜಮೀನುಗಳನ್ನು ಗುತ್ತಿಗೆ ಪಡೆಯಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಸುನೀಲ್ ಕುಮಾರ್, ಸೋಲಾರ್ ಪಾರ್ಕಿನಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಬಹುದೊಡ್ಡ ಬೇಡಿಕೆಯಿದ್ದು, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಈಗಾಗಲೇ ೧೨೦೦ ರಿಂದ ೧೫೦೦ ಜನರಿಗೆ ಸೋಲಾರ್ ಪಾರ್ಕಿನಲ್ಲಿ ಉದ್ಯೋಗ ಒದಗಿಸಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಒದಗಿಸುವುದೇ ಸೋಲಾರ್ ಪಾರ್ಕ್ ಮುಖ್ಯ ಉದ್ದೇಶವಾಗಿದೆ. ಡಿಪ್ಲೊಮೊ, ಐಟಿಐ ಹಾಗೂ ಪದವಿ ಪಡೆದ ಆಸಕ್ತರು ಸೋಲಾರ್ ಪಾರ್ಕಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ನನ್ನ ಗಮನಕ್ಕೆ ತನ್ನಿ. ಅಂತಹವರಿಗೆ ಆದ್ಯತೆಯಲ್ಲಿ ಉದ್ಯೋಗ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.