5 ಜಿಲ್ಲೆಗಳಲ್ಲಿ ಗ್ರಾಮಸೇವಾ ಯೋಜನೆ : ಸಿಎಂ ಘೋಷಣೆ ಗ್ರಾಮ ಪಂಚಾಯತಿಯಲ್ಲೇ ಎಲ್ಲ ಸೇವೆಗಳು ಸಿಗುವಂತಾಗಬೇಕು

5 ಜಿಲ್ಲೆಗಳಲ್ಲಿ ಗ್ರಾಮಸೇವಾ ಯೋಜನೆ : ಸಿಎಂ ಘೋಷಣೆ ಗ್ರಾಮ ಪಂಚಾಯತಿಯಲ್ಲೇ ಎಲ್ಲ ಸೇವೆಗಳು ಸಿಗುವಂತಾಗಬೇಕು

5 ಜಿಲ್ಲೆಗಳಲ್ಲಿ ಗ್ರಾಮಸೇವಾ ಯೋಜನೆ : ಸಿಎಂ ಘೋಷಣೆ
ಗ್ರಾಮ ಪಂಚಾಯತಿಯಲ್ಲೇ ಎಲ್ಲ ಸೇವೆಗಳು ಸಿಗುವಂತಾಗಬೇಕು

ಬೆAಗಳೂರು: ಮುಂಬರುವ ದಿನಗಳಲ್ಲಿ ಗ್ರಾಮಪಂಚಾಯ್ತಿಗಳ ಸಬಲೀಕರಣ ಮಾಡುವ ಚಿಂತನೆ ನಡೆಸಲಾಗಿದ್ದು, ಜನವರಿ ೨೬ರ ಗಣರಾಜ್ಯೋತ್ಸವ ದಿನದಂದು ೫ ಜಿಲ್ಲೆಗಳಲ್ಲಿ ಗ್ರಾಮಸೇವಾ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗ್ರಾಮೀಣ ಭಾಗದ ಜನರಿಗೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಎಲ್ಲ ಸೇವೆಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿಯಲ್ಲೇ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ೭೫೦ ಗ್ರಾಮ ಪಂಚಾಯ್ತಿಗಳಲ್ಲಿ ಅಮೃತ ಗ್ರಾಮಪಂಚಾಯ್ತಿ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಗಳ ಸಬಲೀಕರಣ ೫ ಜಿಲ್ಲೆಗಳಲ್ಲಿ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಣೆ ಮಾಡಲಾಗುವುದು ಎಂದರು.
ಅಭಿವೃದ್ಧಿ ಜನರ ಸುತ್ತ ಆಗಬೇಕು. ಜನರು ಅಭಿವೃದ್ಧಿ ಸುತ್ತ ಸುತ್ತುವಂತಾಗಬಾರದು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿಗಳು ವಿವಿಧ ಸೇವೆಗಳನ್ನು ಒದಗಿಸುವ ಗ್ರಾಮಸೇವಾ ಸಂಸ್ಥೆಯಾಗಬೇಕು. ಗ್ರಾಮ ಪಂಚಾಯ್ತಿ ಕಚೇರಿಗೆ ತೆರಳಿದರೆ ಅಲ್ಲಿ ಜನರಿಗೆ ಎಲ್ಲ  ಸೌಲಭ್ಯಗಳು ಅವರ ಮನೆ ಬಾಗಿಲಲ್ಲೇ ಸಿಗುವಂತಾಗಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ರಸ್ತೆಗಳು ಅಭಿವೃದ್ಧಿಯಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗ ಮಾತ್ರ ಮಹಾತ್ಮ ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ಯ ಕನಸು ನನಸಾಗಲಿದೆ. ಗ್ರಾಮೀಣ ಭಾಗದ ತಲಾದಾಯ ಶೇ. ೨೫ ರಿಂದ ೩೦ ರಷ್ಟು ಹೆಚ್ಚಿದೆ. ಉಳಿದ ಜನರು ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದರ ಜತೆಗೆ ರಾಜ್ಯದ ತಲಾದಾಯ ಹೆಚ್ಚಳಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
೭೫೦ ಗ್ರಾಮ ಪಂಚಾಯ್ತಿಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪ್ರತಿ ಪಂಚಾಯ್ತಿಗೆ ಸರಾಸರಿ ೩ ಕೋಟಿ ರೂ. ಗಳಂತೆ ೨,೩೦೦ ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಮುಂದಿನ ವರ್ಷದ ಮಾ. ೩೧ರೊಳಗೆ ಯೋಜನೆ ಪೂರ್ಣಗೊಳಿಸಿದ ಪಂಚಾಯ್ತಿಗಳಿಗೆ ೨೫ ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಅಮೃತ್ ಗ್ರಾಮಪಂಚಾಯ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ಸಿಂಗ್, ಎಲ್ಲ ಗ್ರಾಮಪಂಚಾಯ್ತಿಗಳು ೨೦೨೪ರೊಳಗೆ ಡಿಜಿಟಲ್ ಸಂಪರ್ಕ ಹೊಂದಿರಬೇಕು. ರಾಜ್ಯದಲ್ಲೂ ಈ ಯೋಜನೆಯನ್ನು ಆದ್ಯತೆ ಮೇರೆಗೆ ಜಾರಿಗೊಳಿಸುವಂತೆ ಸೂಚಿಸಿದರು.
ಈಶ್ವರಪ್ಪ ಮನವಿ: ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿದ್ದ ೧೩ ಕೋಟಿ ಮಾನವ ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆ ನರೇಗಾ ದಿನಗಳನ್ನು ೨೦ ಕೋಟಿಗೆ ಹೆಚ್ಚಳ ಮಾಡಬೇಕು. ೧೭೦೦ ಕಿ.ಮೀ ರಸ್ತೆ ನಿರ್ಮಾಣ ಹಾಗೂ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಶಾಲೆಗಳ ದುರಸ್ತಿಗೂ ಅವಕಾಶ ಕಲ್ಪಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಸಚಿವ ಈಶ್ವರಪ್ಪ ಕೇಂದ್ರಕ್ಕೆ ಮನವಿ ಮಾಡಿದರು.
ಅ. ೨ ರಂದು ದೇಶಾದ್ಯಂತ ಗ್ರಾಮ ಪಂಚಾಯ್ತಿಗಳು ಗ್ರಾಮ ಸಭೆ ನಡೆಸಿ ನನ್ನ ಗ್ರಾಮ, ನನ್ನ ಪರಂಪರೆ ಎಂಬ ಘೋಷಣೆಯಡಿ ತಮ್ಮ ಗ್ರಾಮಕ್ಕಾಗಿ ಸ್ವಾತಂತ್ರö್ಯ ಹೋರಾಟಗಾರರು, ವಿದ್ವಾಂಸರು, ಹಿರಿಯರೂ ಸೇರಿದಂತೆ ಇತರ ಗಣ್ಯರನ್ನು ಸ್ಮರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅ. ೧ ರಿಂದ ೧೫ ರೊಳಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಸಚಿವರಾದ ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಎಸ್.ಟಿ. ಸೋಮಶೇಖರ್, ಮುನಿರತ್ನ, ಬಿ.ಸಿ. ನಾಗೇಶ್ ಭಾಗವಹಿಸಿದ್ದರು.