ತಂತ್ರ ಮಾಹಿತಿ ಎಂಬ  ಮಹಾ ಪ್ರವಾಹದಲ್ಲಿ  ಕೊಚ್ಚಿ ಹೋಗುತ್ತಿರುವ ನಾವು - ತಂತ್ರ ಜ್ಞಾನ - ಜಯಶ್ರೀ ಬಿ ಕದ್ರಿ 

ತಂತ್ರ ಮಾಹಿತಿ ಎಂಬ  ಮಹಾ ಪ್ರವಾಹದಲ್ಲಿ  ಕೊಚ್ಚಿ ಹೋಗುತ್ತಿರುವ ನಾವು ತಂತ್ರ ಜ್ಞಾನ ಜಯಶ್ರೀ ಬಿ ಕದ್ರಿ 

ತಂತ್ರ ಮಾಹಿತಿ ಎಂಬ  ಮಹಾ ಪ್ರವಾಹದಲ್ಲಿ  ಕೊಚ್ಚಿ ಹೋಗುತ್ತಿರುವ ನಾವು  -   ತಂತ್ರ ಜ್ಞಾನ  - ಜಯಶ್ರೀ ಬಿ ಕದ್ರಿ 

ಸಂವಹನ ಅತಿ ಸುಲಭವಾಗಿರುವ ಈ ಕಾಲದಲ್ಲಿಯೇ ಸಂಬಂಧಗಳು ದೂರವಾಗುತ್ತಿರುವುದು ಇನ್ನೊಂದು ಚೋದ್ಯ. ಒಂದು ಕಾಲಕ್ಕೆ ಎಸ್ ಟಿ ಡಿ ಫೋನ್ ಮಾಡಿ ಬಾಯಿ ತುಂಬ ಹರಟುತ್ತಿದ್ದವರು ಈಗ ಒಂದು ಮೆಸೇಜ್ ಹಾಕಿ ತೆಪ್ಪಗಾಗುತ್ತೇವೆ. ಗೊತ್ತಿರದ ಊರಿನಲ್ಲಿ ಮನುಷ್ಯರನ್ನು ನಂಬದೆ ಗೂಗಲ್ ಮ್ಯಾಪ್ ಹಾಕಿ ಅಡ್ದಾಡುತ್ತೇವೆ. ಇಂಟರ್ನೆನೆಟ್ ವರ್ಕ್, ಡೌನ್ ಲೋಡ್, ಪೆನ್ ಡ್ರೆವ್, ಹೀಗೆಲ್ಲ ಇಲ್ಲದೆ ಕೂಡ ನಾವಿದ್ದೆವು ಎನ್ನುವುದೇ ಮರೆತು ಹೋದಂತೆ , ಟೆಕ್ನಾಲಜಿಯ ಧಾವಂತ ಯುಗದಲ್ಲಿ ನಾವಿದ್ದೇವೆ. 

ತಂತ್ರ ಮಾಹಿತಿ ಎಂಬ 
ಮಹಾ ಪ್ರವಾಹದಲ್ಲಿ 
ಕೊಚ್ಚಿ ಹೋಗುತ್ತಿರುವ ನಾವು

ತಂತ್ರ ಜ್ಞಾನ


ಜಯಶ್ರೀ ಬಿ ಕದ್ರಿ 

 


 ಇದು ಮಾಹಿತಿಯ ಯುಗ. ದಿನ ಬೆಳಗಾದರೆ ನಾವು ವಿವಿಧ ಸಾಮಾಜಿಕ ಜಾಲತಾಣಗಳು, ಮೊಬೈಲ್ ವಾಟ್ಸ್ ಅಪ್ ,ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಎಂದು ಮಾಹಿತಿಯ ಪ್ರçವಾಹವನ್ನೇ ಎದುರಿಸುತ್ತಿದ್ದೇವೆ. ಇನ್ನು ಕೋವಿಡ್ ಕಾಲದ ಸಂಕಷ್ಟಗಳನ್ನೆದುರಿಸಲು, ವರ್ಕ್ ಫ್ರಂ ಹೋಮ್ ಇವಕ್ಕೆಲ್ಲ ಈ ರೀತಿಯ ಸಂಪರ್ಕ ಸಾಧನಗಳು ಅನಿವಾರ್ಯವಾಗಿದ್ದವು ಹಾಗೂ ಈಗ ಅವೇ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಕೂಡ. 


ಇ ಮೈಲ್ ಗಳು, ವಾಟ್ಸ್ ಅಪ್ ಗ್ರೂಪುಗಳು, ವೆಬಿನಾರ್ ಗಳು. ಆನ್ ಲೈನ್ ಕಾನ್ಫರೆನ್ಸ್ ಗಳು ಸಹಜವೇನೋ ಎನ್ನುವಶ್ಟು ನಮಗೆ ರೂಢಿಯಾಗಿ ಬಿಟ್ಟಿವೆ. ಈ ಎಲ್ಲ ಉತ್ತಮ ಗುಣಗಳೊಂದಿಗೆಯೇ ಅವು ನಮ್ಮ ಬದುಕನ್ನು ಯಾಂತ್ರಿಕವಾಗಿಸಿವೆ; ತಂತ್ರಜ್ನಾನಕ್ಕೆ ಅಡಿಕ್ಟ್ ಆಗುವ ಮಟ್ಟಕ್ಕೆ, ನಮ್ಮ ವೈಯಕ್ರಿಕ ಸಮಯ, ವೃತ್ತಿಪರ ಸಮಯದ ಗೆರೆ ಅಳಿಸಿ ಹೋಗುವ ಮಟ್ಟಕ್ಕೆ ನಮ್ಮನ್ನೊಂದು ಚಕ್ರದಂತ ಬದುಕಿಗೆ ಮುಖಾ ಮುಖಿಯಾಗಿಸಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು. ಹೆಚ್ಚಿದ ಇಂಟರ್ನೆಟ್ ಬಳಕೆಯಿಂದಾಗಿ ನಮ್ಮ ಜೀವನ ಶೈಲಿಯೇ ಬದಲಾಗಿ ಅನೇಕ ದೂರಗಾಮಿ ಪರಿಣಾಮಗಳಾಗುತ್ತಿವೆ. ಅದರಲ್ಲಿ ಮೊದಲನೆಯದು ಏಕಾಗ್ರತೆಯ ಕೊರತೆ. ಗಂಟೆಗೊಮ್ಮೆ ವಾಟ್ಸಾಪ್, ಫೇಸ್ ಬುಕ್ ನೋಡದೆ ಇರಲಾರದ. ಪ್ರವಾಸ ಹೋದಾಗಲೂ ಇಯರ್ ಫೋನ್ ಹಾಕಿಕೊಂಡು ಇರುವ, ಸೆಲ್ಫಿ ತೆಗೆಯದೆ ಇರಲಾಗದ, ಫೇಸ್ ಬುಕ್ ಗೆ ಕಾಲ ಕಾಲಕ್ಕೆ ಫೋಟೊ ಅಪ್ಲೋಡ್ ಮಾಡಲೇ ಬೇಕೆಂದು ಚಡಪಡಿಸುವ.. ಒಟ್ಟಿನ ಮೇಲೆ ತಂತ್ರಜ್ನಾನದ ಮೇಲೆ ನಮ್ಮ ಅವಲಂಬನೆ ಮಿತಿಮೀರಿ ಹೆಚ್ಚಾಗುತ್ತಿದೆ. ಹಾಗೆಂದು ಜಗತ್ತು ಒಂದು ಪುಟ್ಟ 'ಗ್ಲೋಬಲ್ ವಿಲೇಜ್' ಆಗುತ್ತಿರುವ ಈ 'ಹೈಪರ್ ರಿಯಲ್' ಯುಗದಲ್ಲಿ ನಾವು ತಂತ್ರಜ್ನಾನವನ್ನು ಬಳಸದೆ ಇರಲು ಸಾದ್ಜ÷್ಯವಿಲ್ಲ . ಆನ್ ಲೈನ್ ಮೀಟಿಂಗುಗಳು, ಸೆಮಿನಾರ್ ಗಳು, ಗ್ರೂಪುಗಳಲ್ಲಿನ 'ಟಾಸ್ಕ್'ಗಳು ಹೀಗೆ ಇದೊಂದು ವೃತ್ತ. ಯು ಟ್ಯೂಬ್, ವಿಕಿಪೀಡಿಯಾ, ಇ ಬುಕ್ಕುಗಳು. ಪಿ ಡಿ ಎಫ್ ಮಾಹಿತಿಗಳು, ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಆಗಿವೆ. ನಾವು ಮಾಡಲೇ ಬೇಕಾದ ಕೆಲಸಗಳಲ್ಲದೆ ಅನಗತ್ಯ ನೋಟಿಫಿûಕೇಶನ್ ಗಳು, ರೀಲ್ಸ್ ಗಳು, ಹವ್ಯಾಸಗಳಿಗೆ ಸಂಬಂಧಿಸಿದ ಗ್ರೂಪುಗಳು, ಫೇಸ್ ಬುಕ್ ಪೇಜುಗಳು, ಅನಗತ್ಯ ಇ ಮೈಲ್ ಗಳು ಹೀಗೆ 'ಸಮಯ' ಎನ್ನುವುದು ಅಂಗೈಯಲ್ಲಿನ ಮರಳಿನಂತೆ ಜಾರಿ ಹೋಗುತ್ತಿರುವುದು ನಮ್ಮ ಗಮನಕ್ಕೆಯೇ ಬಂದಿರುವುದಿಲ್ಲ. ಈ ಒತ್ತಡಗಳನ್ನು ಮರೆಯಲಿಕ್ಕೋಸ್ಕರ ಮರಳಿ ಇನ್ನಾಯವುದೋ ಟೆಕ್ನಾಲಜಿಗೆ ಮೊರೆ ಹೋಗುತ್ತಿರುತ್ತೇವೆ. 


 ನಮ್ಮ ದೈನಂದಿನ ಒತ್ತಡಗಳು ಯಾವ ಮಟ್ಟಿಗೆ ಇರುತ್ತವೆ ಎಂದರೆ ಪ್ರವಾಸ ಹೋದಾಗಲೂ ನಮ್ಮ ಫೋನ್ ರಿಂಗಣಿಸುತ್ತದೆ, ಮೆಸೇಜುಗಳು ರವಾನೆ ಆಗುತ್ತಿರುತ್ತವೆ ಹಾಗೂ ಇವಿಲ್ಲದೆ ಕೆಲಸ ಕಾರ್ಯಗಳು ನಡೆಯುವುದೇ ಇಲ್ಲವೇನೋ ಎಂಬ ಭ್ರಮೆಯಲ್ಲಿರುತ್ತೇವೆ. 


ಸಂವಹನ ಅತಿ ಸುಲಭವಾಗಿರುವ ಈ ಕಾಲದಲ್ಲಿಯೇ ಸಂಬಂಧಗಳು ದೂರವಾಗುತ್ತಿರುವುದು ಇನ್ನೊಂದು ಚೋದ್ಯ. ಒಂದು ಕಾಲಕ್ಕೆ ಎಸ್ ಟಿ ಡಿ ಫೋನ್ ಮಾಡಿ ಬಾಯಿ ತುಂಬ ಹರಟುತ್ತಿದ್ದವರು ಈಗ ಒಂದು ಮೆಸೇಜ್ ಹಾಕಿ ತೆಪ್ಪಗಾಗುತ್ತೇವೆ. ಗೊತ್ತಿರದ ಊರಿನಲ್ಲಿ ಮನುಷ್ಯರನ್ನು ನಂಬದೆ ಗೂಗಲ್ ಮ್ಯಾಪ್ ಹಾಕಿ ಅಡ್ದಾಡುತ್ತೇವೆ. ಇಂಟರ್ನೆನೆಟ್ ವರ್ಕ್, ಡೌನ್ ಲೋಡ್, ಪೆನ್ ಡ್ರೆವ್, ಹೀಗೆಲ್ಲ ಇಲ್ಲದೆ ಕೂಡ ನಾವಿದ್ದೆವು ಎನ್ನುವುದೇ ಮರೆತು ಹೋದಂತೆ , ಟೆಕ್ನಾಲಜಿಯ ಧಾವಂತ ಯುಗದಲ್ಲಿ ನಾವಿದ್ದೇವೆ. 


ಫೋನ್ ಪೇ, ಗೂಗಲ್ ಪೇ ಗೊತ್ತಿಲ್ಲದವರು, ಇ ಮೈಲ್ ಕಳುಹಿಸಲು ಬಾರದವರು ಈಗ ಅನಕ್ಷರಸ್ಠರು. ಹಾಡು, ಸಿನೆಮಾ, ಭಾಷಣಗಳು, ಪುಸ್ತಕಗಳು, ಸಲಹೆಗಳು ಎಲ್ಲವೂ ಅಂಗೈಯಗಲದ ಮೊಬೈಲ್ ನಲ್ಲಿಯೇ ದೊರಕುತ್ತಿರುವಾಗ ಅವಕ್ಕಿಮಿರುವ ಮೌಲ್ಯವೂ ಕಡಿಮೆಯಾಗುತ್ತಿವೆ. 


 ಇನ್ನು ಆಗೀಗ ಇಂಟರ್ನೆಟ್ ನೋದುತ್ತಲೇ ಇರುವುದು ನಮ್ಮ ಬದುಕಿಗೆ ಬಣ್ಣ ತುಂಬಿಕೊಳ್ಳುವ ಪ್ರಯತ್ನವೇ ಆಗಿದ್ದು ಅದರಲ್ಲಿ ತಪ್ಪೇನೂ ಇಲ್ಲ. ಸಂಯಮ ಬೇಕಷ್ಟೆ. ನಾವು ನೋಡುವ ಅಸಂಖ್ಯಾತ ವಿಡಿಯೋಗಳಲ್ಲಿ ಹೆಚ್ಚಿನವೂ ಮನರಂಜನೆಯನ್ನು ಹೊರತು ಪಡಿಸಿದರೆ ತೀರಾ ಪ್ರಯೋಜನಕಾರಿಯೇನಾಗಿರುವುದಿಲ. ಮೊಬೈಲ್ ನಲ್ಲಿರುವ ಹತ್ತು ಹಲವು ಆಪ್ ಗಳು ಅತ್ಯಗತ್ಯವೇನಲ್ಲ. ಅವು ತಂದೊಡ್ಡುವ ಕಾಯಿಲೆಗಳು, ದೃಷ್ಟಿ ದೋಷ, ಏಕಾಗ್ರತೆಯ ಕೊರತೆ, ಸೈಬರ್ ಕ್ರೆöÊಂ ಸೇರಿದಂತೆ ಅನಾಹುತದ ಸಾಧ್ಯತೆಗಳು..ಜನಾಭಿಪ್ರಾಯವನ್ನು ರೂಪಿಸುವಲ್ಲಿ ಅತಿರೇಕ ಭಾವನೆಗಳನ್ನು ಕೆರಳಿಸುವಲ್ಲಿ ಅವುಗಳ ಪಾತ್ರಗಳು.. ಹೀಗೆ ಇವೆಲ್ಲ ಕತ್ತಿಯಲಗಿನಂತಿರುವ ಸಾಧನಗಳು. ಹಾಗೆಂದು 'ಮಾಹಿತಿ' ನಮಗೆ ಎಷ್ಟು ಅಗತ್ಯವಾಗಿದೆಯೆಂದರೆ ಮಾಹಿತಿಗಳನ್ನು ಕಲೆಹಾಕುವುದು, ಕ್ರೋಢೀಕರಿಸುವುದು, ಜಾಗ್ರತೆಯಿಂದ ಸಂಗ್ರಹಿಸಿಡುವುದು ಸಾಮಾಜಿಕ ಸುವ್ಯವಸ್ಠೆಗೆ, ಸಂಘ ಸಂಸ್ಥೆಗಳ ಸಹಿತ ಒಂದು ಚೌಕಟ್ಟು ಇರುವ ಜೀವನ ಶೈಲಿಗೆ ಅತ್ಯಗತ್ಯವೇ ಆಗಿದೆ. ಇದೊಂದು ಮಾಹಿತಿಯೇ ಪ್ರಧಾನವಾಗಿರುವ ಪ್ರಪಂಚ. ಈ ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ನೆರವಾಗುವ ಅದೇ ತಂತ್ರಜ್ನಾನ ನಮ್ಮ ಮೆದುಳಿನ ಕೋಶಗಳನ್ನೇ , ಆಲೋಚನಾ ವಿಧಾನವನ್ನೇ ನಿಯಂತ್ರಿಸುತ್ತ ಪರ್ಸನಲ್ , ಪ್ರೊಫೆಶನಲ್ ಎಂಬ ಗೆರೆಯನ್ನೇ ಅಳಿಸಿ ಹಾಕುವಷ್ಟು ಪ್ರಬಲವಾಗಿರುವುದು ಸತ್ಯ. 


 ಅತ್ಯುನ್ನತ ಹುದ್ದೆಗಳಲ್ಲಿರುವ ಹೆಣ್ಣು ಮಕ್ಕಳ ಪಾಡಂತೂ ಹೇಳತಿರದು. ವಾರಕ್ಕೊಮ್ಮೆ ಬೇಕಾಗುವ ಅಡುಗೆಗಳನ್ನು ಮಾಡಿ ಫ್ರಿಜರಿನಲ್ಲಿಡುವ, ಪ್ರತಿಯೊಂದು ಕೆಲಸಕ್ಕೂ ಸಹಾಯಕಿಯರಿದ್ದರೂ ಅವರಿಗಿರುವ ಸಾಂಸ್ಕೃತಿಕ ಒತ್ತಡ ನಿರಂತರ. ಈ ಕಾರಣಕ್ಕೇ ಹಲವಾರು ಹೆಣ್ಣು ಮಕ್ಕಳು ಒಂದಷ್ಟು ಆರ್ಥಿಕ ಸುಭದ್ರತೆ ಗಳಿಸಿದ ನಂತರ ಉದ್ಯೋಗವನ್ನೇ ಬಿಟ್ಟು ಬಿಡುತ್ತಾರೆ. ಉದ್ಯೋಗದಲ್ಲಿಯೇ ಮುಂದುವರಿಯುವವರು ಈ ಯಾಂತ್ರಿಕತೆಯಿಂದ ಪಾರಾಗುವ ವಿಧಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ತಂತ್ರಜ್ನಾನವನ್ನು ಹೊರತಾಗಿ ಆಧುನಿಕ ಸಮಾಜ ವ್ಯವಸ್ಥೆ ಇರದ ಕಾರಣ, ಅದರಿಂದ ಉಪಯೋಗವೂ ಇರುವ ಕಾರಣ ಅವುಗಳನ್ನು ವಿವೇಕವಿವೇಕದಿಂದ ಬಳಸಿಕೊಳ್ಲುವುದು ಸದ್ಯದ ತುರ್ತು. ನಮ್ಮ ಹವ್ಯಾಸಗಳಿಗೂ ಸಾಧ್ಯವಾದಷ್ಟು ಸಮಯ ಕೊಡುವುದು, ಶಿಸ್ತಿನ ಜೀವನ ಶೈಲಿ ಅನುಸರಿಸುವುದು, ಗ್ಯಾಜೆಟ್ ಗಳಿಗಿಂತಲೂ ಮನುಷ್ಯ ಸಂಬಂಧಗಳು ಶ್ರೇಷ್ಠ ಎಂದು ನಮಗೆ ನಾವೇ ನೆನಪಿಸಿಕೊಳ್ಳುವುದು ಅತಿ ಅಗತ್ಯವಾಗಿದೆ. ಇಲ್ಲವಾದರೆ ಒಂದು ಗಂಟೆ ಕೂಡ ಸುಮ್ಮನೆ ಕುಳಿತಿರಲಾರದ, ಒಂದು ಬೊಗಸೆ ಮೌನವನ್ನು ಎದೆಯಲ್ಲಿ ತುಂಬಿಕೊಳ್ಳಲಾಗದ ಪರಿಸ್ಥಿತಿಗೆ ನಾವು ಬರಬಹುದು. 
 
 Ph: 9448889255