ಮರೆಯಾಗಿದ್ದ ಎಣ್ಣೆ ಗಾಣಗಳು ಮತ್ತೆ ಮುಂಚೂಣಿಗೆ
jcm
ಮರೆಯಾಗಿದ್ದ ಎಣ್ಣೆ ಗಾಣಗಳು ಮತ್ತೆ ಮುಂಚೂಣಿಗೆ
ಚಿಕ್ಕನಾಯಕನಹಳ್ಳಿ : ಗೋಡೆಕೆರೆ ಸಮೀಪ ಸೋಮನಹಳ್ಳಿ ಗ್ರಾಮದಲ್ಲಿ ಸನಾತನ ಫುಡ್ಸ್ ಕಂಪನಿ ನೂತನವಾಗಿ ಪ್ರಾರಂಭಿಸಿರುವ ಕೋಲ್ಡ್ ಪ್ರೆಸ್ ಮಾದರಿಯ ಎಣ್ಣೆಗಾಣಕ್ಕೆ ಗೋಡೆಕೆರೆ ಮಠದ ಚರಪಟ್ಟಾಧ್ಯಕ್ಷರಾದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.
ಇಂದಿನ ವೇಗದ ಕಾಲದಲ್ಲಿ ಶುದ್ಧ ಎಣ್ಣೆ ಪೂರೈಸುವ ಎಣ್ಣೆ ಗಾಣಗಳು ಮರೆಯಾಗಿದ್ದವು. ಈಗ ಮತ್ತೆ ಹಿಂದಿನ ಪದ್ಧತಿಗೆ ಮಾರುಹೋಗುವ ಅನಿವಾರ್ಯತೆ ಬಂದಿದೆ. ಇದಕ್ಕೆ ಪೂರಕವಾಗಿ ಸನಾತನ ಪುಡ್ ಸಂಸ್ಥೆಯು ಎಣ್ಣೆಗಾಣವನ್ನು ನಿರ್ಮಿಸಿ ಶುದ್ಧ ಎಣ್ಣೆಯನ್ನು ಸಾರ್ವಜನಿಕರು ಬಳಸಲು ಅನುಕೂಲ ಮಾಡಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನಾತನ ಸಂಸ್ಥೆಯ ಸಿದ್ದು ಮಾತನಾಡಿ, ಸಂತೃಪ್ತಿ ಹಾಗು ಪ್ರತುಷ್ಠಿ ಎಂಬ ಬ್ರಾಂಡ್‌ನೊAದಿಗೆ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ. ಎಣ್ಣೆ ಅರೆಯುವ ಯಂತ್ರದ ಒಳಭಾಗ ಸಂಪೂರ್ಣವಾಗಿ ಮರದಿಂದ ತಯಾರಿಸಲಾಗಿದ್ದು, ಕೋಲ್ಡ್ ಪ್ರೆಸ್‌ನಲ್ಲಿ ನಾವು ಎಣ್ಣೆಯನ್ನು ತಯಾರಿಸಿಕೊಡುತ್ತೇವೆ. ಬೀಜಗಳನ್ನು ಒತ್ತಿ ಒಳಗಿನ ಎಣ್ಣೆ ನೈಸರ್ಗಿಕವಾಗಿ ಹೊರಬರುವಂತೆ ಮಾಡಲಾಗುತ್ತದೆ. ಬೀಜಗಳನ್ನು ಯಾವುದೇ ಬಗೆಯ ರಾಸಾಯನಿಕ ಕ್ರಿಯೆಗೆ ಒಳಪಡಿಸುವುದಾಗಲಿ, ಬಿಸಿ ಮಾಡುವುದಾಗಲೀ ಇರುವುದಿಲ್ಲ. ಆದ್ದರಿಂದ ಈ ಎಣ್ಣೆಯ ನೈಸರ್ಗಿಕ ಪೋಷಕಾಂಶಗಳು ಮೂಲ ರೂಪದಲ್ಲೇ ಇರುತ್ತದೆ ಎಂದು ತಿಳಿಸಿದರು.
ಗಾಣದ ಎಣ್ಣೆ ತುಸು ದುಬಾರಿಯಾದರೂ ಪರಿಶುದ್ಧ: ಅಡುಗೆ ಎಣ್ಣೆಯ ದಿನ ನಿತ್ಯದ ಬಳಕೆಯನ್ನು ನೋಡುವುದಾದರೆ, 4 ಜನ ಇರುವ ಕುಟುಂಬ ಮೂರು ಹೊತ್ತಿನ ಅಡುಗೆ ತಯಾರಿಸಲು ನಿತ್ಯವೂ 100 ರಿಂದ 150 ಗ್ರಾಂ ಎಣ್ಣೆ ಬಳಸಬಹುದು. ಅಲ್ಲಿಗೆ 1 ಲೀಟರ್ ಎಣ್ಣೆಯನ್ನು 10 ದಿನ ಬಳಸಬಹುದು. ತಿಂಗಳಿಗೆ 3 ರಿಂದ 4 ಲೀಟರ್ ಎಣ್ಣೆ ಸಾಕಾಗಬಹುದು. ಪ್ರಸ್ತುತ ಈಗ ಅಡುಗೆ ಎಣ್ಣೆಗೆ ಕೊಡುತ್ತಿರುವ ದರಕ್ಕಿಂತ ಹೆಚ್ಚುವರಿಯಾಗಿ 600 ರಿಂದ 800 ರೂ.ಗಳನ್ನು ಖರ್ಚು ಮಾಡಿದರೆ ಪರಿಶುದ್ಧವಾದ ಗಾಣದ ಎಣ್ಣೆ ಬಳಸಬಹುದು. ಇದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಸಾಂಪ್ರದಾಯಿಕ ಗಾಣದ ಉದ್ಯಮವು ಮತ್ತೆ ತಲೆ ಎತ್ತುತ್ತದೆ. ಮತ್ತು ಸಮಾಜವು ಆರೋಗ್ಯವಾಗಿರುತ್ತದೆ.
ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಿದ್ದು ( 9538696966) ಲಿಂಗರಾಜು (9845643163) ಷಣ್ಮುಖಪ್ಪ ( 9148593344) ಸಂಪರ್ಕಿಸಬಹುದಾಗಿದೆ. ತ್ರಿವೇಣಿ ಮಾಧುಸ್ವಾಮಿ, ಡಾ. ಅಭಿಜ್ಞಾ, ಮಾಧುಸ್ವಾಮಿ, ಮುಖಂಡರಾದ ಶೆಟ್ಟಕೆರೆ ವಿನಯ್, ಗುತ್ತಿಗೆದಾರ ರಾಕೇಶ್, ಮಾಜಿ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ ಕುಮಾರ್ ಆಗಮಿಸಿ ಶುಭ ಕೋರಿದರು.