ಬಿ.ಹೆಚ್.ರಸ್ತೆಗೆ ‘ಡಾ. ಶ್ರೀ ಶಿವಕುಮಾರ ಮಹಾಸ್ವಾಮಿ’ ಹೆಸರು

ಬಿ.ಹೆಚ್.ರಸ್ತೆಗೆ ‘ಡಾ. ಶ್ರೀ ಶಿವಕುಮಾರ ಮಹಾಸ್ವಾಮಿ’ ಹೆಸರು

ಬಿ.ಹೆಚ್.ರಸ್ತೆಗೆ ‘ಡಾ. ಶ್ರೀ ಶಿವಕುಮಾರ ಮಹಾಸ್ವಾಮಿ’ ಹೆಸರು

ಬಿ.ಹೆಚ್.ರಸ್ತೆಗೆ ‘ಡಾ. ಶ್ರೀ ಶಿವಕುಮಾರ ಮಹಾಸ್ವಾಮಿ’ ಹೆಸರು

ತುಮಕೂರು- ಕಾಯಕ ಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಸವಿನೆನಪಿಗಾಗಿ ನಗರದ ಬೆಂಗಳೂರು ಹೊನ್ನಾವರ ರಾಷ್ಟಿçÃಯ ಹೆದ್ದಾರಿ-206 ರಲ್ಲಿ ಬಟವಾಡಿಯಿಂದ  ಗುಬ್ಬಿ ಗೇಟ್‌ವರೆಗಿನ ರಸ್ತೆಗೆ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ರಸ್ತೆ ಎಂದು ನಾಮಕರಣ ಮಾಡಲಾಯಿತು.


ನಗರದ ಬಟವಾಡಿಯಲ್ಲಿ ಗುರುವಾರ ಬೆಳಿಗ್ಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮಹಾನಗರ ಪಾಲಿಕೆ ಪರವಾಗಿ ಸಂಸದ ಜಿ.ಎಸ್. ಬಸವರಾಜು ಅವರು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ರಸ್ತೆ ನಾಮಫಲಕವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ನಗರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಶ್ರೀಗಳ ಪುತ್ಥಳಿಯನ್ನು ನೋಡಿಕೊಂಡೆ ತೆರಳುವಂತೆ ಮಾಡುವ ಸಲುವಾಗಿ ಬಟವಾಡಿ ಬಳಿಯೇ ಶ್ರೀಗಳ ಬೃಹತ್ ಪುತ್ಧಳಿ ನಿರ್ಮಾಣ ಮಾಡುವ ಸಂಬಂಧ ಮಹಾನಗರ ಪಾಲಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.


ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ಬಿ.ಹೆಚ್. ರಸ್ತೆಗೆ ಪರಮಪೂಜ್ಯರ ಹೆಸರನ್ನು ಅಧಿಕೃತವಾಗಿ ಇಂದು ನಾಮಕರಣ ಮಾಡಲಾಗಿದೆ. ಈ ಕಾರ್ಯಕ್ಕೆ ಶಾಸಕರು, ಸಂಸದರು, ಮಹಾನಗರ ಪಾಲಿಕೆಯ ಮೇಯರ್, ಎಲ್ಲ ಸದಸ್ಯರು ಹಾಗೂ ಆಯುಕ್ತರ ಅಪಾರ ಶ್ರಮ ಇದೆ ಎಂದರು.


ನಗರಕ್ಕೆ ಆಗಮಿಸುವ ಪ್ರತಿಯೊಬ್ಬರ ಮನಸ್ಸಿನಲ್ಲೂ ಪರಮಪೂಜ್ಯರ ಹೆಸರು ಚಿರಾಯು ಆಗಿ ಉಳಿಯುವಂತಹ ಕೆಲಸ ಇದಾಗಿದೆ ಎಂದು ಅವರು ಹೇಳಿದರು.


ಶಾಸಕ ಜ್ಯೋತಿಗಣೇಶ್ ಮಾತನಾಡಿ, ತುಮಕೂರು ಪ್ರವೇಶಿಸುವ ಬಟವಾಡಿಯಲ್ಲೇ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಬೃಹತ್ ಪುತ್ಥಳಿ ನಿರ್ಮಾಣವಾದರೆ ಅದೊಂದು ಉತ್ತಮ ಕಾರ್ಯವಾಗಲಿದೆ ಎಂದರು.


ಮೇಯರ್ ಬಿ.ಜಿ. ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಚಂದ್ರಕಲಾ ಪುಟ್ಟರಾಜು, ಗಿರಿಜಾ ಧನಿಯಕುಮಾರ್, ನಯಾಜ್ ಅಹಮದ್, ಮಹೇಶ್, ಆಯುಕ್ತೆ ರೇಣುಕಾ ಇದ್ದರು.