ಮದಲೂರು ಕೆರೆಗೆ ನೀರು ಹರಿಯುತ್ತಿದೆ: ಸಚಿವ ಜೆ.ಸಿ. ಮಾಧುಸ್ವಾಮಿ

ಮದಲೂರು ಕೆರೆಗೆ ನೀರು ಹರಿಯುತ್ತಿದೆ: ಸಚಿವ ಜೆ.ಸಿ. ಮಾಧುಸ್ವಾಮಿ

ಮದಲೂರು ಕೆರೆಗೆ ನೀರು ಹರಿಯುತ್ತಿದೆ: ಸಚಿವ ಜೆ.ಸಿ. ಮಾಧುಸ್ವಾಮಿ


ತುಮಕೂರು: ಶಿರಾ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನಾಲೆಯಿಂದ ಹರಿಸಬೇಕಿದ್ದ 0.9 ಟಿಎಂಸಿ ನೀರಿನ ಪೈಕಿ 0.4 ಟಿಎಂಸಿ ನೀರನ್ನು ಮದಲೂರು ಕೆರೆಗೆ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮಂಗಳವಾರದಿAದಲೇ ನಾಲೆಯಲ್ಲಿ ನೀರನ್ನು ಹರಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯತಿ ಕೆಡಿಪಿ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಶಿರಾ ತಾಲ್ಲೂಕಿನ ಮದಲೂರು ಕೆರೆ ಸೇರಿದಂತೆ 11 ಕೆರೆಗಳಿಗೆ 0.4 ಟಿಎಂಸಿ ನೀರನ್ನು ಹರಿಸಲಾಗುವುದು ಎಂದರಲ್ಲದೇ ಈ ಮೊದಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಳ್ಳಂಬೆಳ್ಳ-ಶಿರಾ-ಯಲಿಯೂರು-ತಾವರೆಕೆರೆ ಭಾಗದ ಗ್ರಾಮಗಳ ಕೆರೆಗಳಿಗೆ ನಾಲೆಯ ನೀರನ್ನು ಹರಿಸಲು ಆದ್ಯತೆ ನೀಡಲಾಗಿತ್ತು. ಆದರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ಭಾಗದ ಶಿರಾ, ಕಳ್ಳಂಬೆಳ್ಳ ಸೇರಿದಂತೆ ಇತರೆ ಕೆರೆಗಳು ಕೋಡಿ ಬಿದ್ದಿವೆ. ಈಗಾಗಲೇ ಹರಿಸಲಾಗಿರುವ ಉಳಿಕೆಯಾದ ನೀರನ್ನು ಮಾದಲೂರು ಕೆರೆಗೆ ಹರಿಸಲಾಗುತ್ತಿದೆ ಎಂದರು. ಸ್ವಾಭಾವಿಕವಾಗಿ ಮಳೆ ನೀರು ಸೇರಿದಂತೆ ಕೆರೆ ಕೋಡಿ ಬೀಳುವವರೆಗೆ ಕೆರೆಗಳಿಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 
ಶಿರಾ ತಾಲ್ಲೂಕಿನಲ್ಲಿ ಈ ಮುಂಚೆ ಮಳೆ ಇಲ್ಲದ ಕಾರಣ ಶೇಂಗಾ ಬೆಳೆ ನೆಲ ಕಚ್ಚಿದು ಬೆಳೆ ವಿಮೆಗೆ ನೋಂದಯಿಸಿರುವ ರೈತರಿಗೆ ಪರಿಹಾರ ನೀಡಲಾಗುವುದು. ವಿಮೆಗೊಳಪಡಿಸದ ರೈತರಿಗೆ ನೀಡುವ ಪರಿಹಾರಕ್ಕೆ ಸಂಬAಧಿಸಿದAತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು. 
ತುಮಕೂರು ಗ್ರಾಮಾಂತರದ ಕೆರೆಗಳಿಗೆ ಇನ್ನೂ ನೀರು ಹರಿಸಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮಾಂತರ ಭಾಗದ ಕೆರೆಗಳಿಗೆ ಸರ್ಮಪಕವಾಗಿ ನೀರು ಹರಿಯುತ್ತಿದ್ದು. ನೀರು ಹರಿಯದಿರುವ ಕೆರೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನೀರು ಹರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಮಾರ್ಕೋನಹಳ್ಳಿ ಡ್ಯಾಂನಿAದ ಒಂದು ಟಿಎಂಸಿ ನೀರನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ನೀಡಲಾಗುತ್ತಿದೆ. ಶಾಸಕರ ಒಪ್ಪಿಗೆಯಿಂದಲೇ ನಾಗಮಂಗಲಕ್ಕೆ ನೀರು ಹರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.