ತೋಟಗಾರಿಕೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ತಾಂತ್ರಿಕ ಸಲಹೆಗಳು

ತೋಟಗಾರಿಕೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ತಾಂತ್ರಿಕ ಸಲಹೆಗಳು

ತೋಟಗಾರಿಕೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ತಾಂತ್ರಿಕ ಸಲಹೆಗಳು


ಕೋಲಾರ: ಜಿಲ್ಲಾದ್ಯಾಂತ ಕೆಲವು ದಿನಗಳಿಂದ ಸತತ ತುಂತುರು ಮಳೆಯಾಗುತ್ತಿದ್ದು, ಹೆಚ್ಚು ಆರ್ದತೆಯುಳ್ಳ ಹವಾಗುಣ ಮತ್ತು ಮೋಡಕವಿದ ವಾತಾವರಣ ಇರುವುದರಿಂದ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ರೋಗ ಹಾಗೂ ಕೀಟ ಬಾಧೆ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಅನುಸಾರಿಸಬೇಕಾದ ಕೃಷಿ ವಿಜ್ಞಾನ ಕೇಂದ್ರ ಕೋಲಾರ ರವರು ನೀಡಿರುವ ತಾಂತ್ರಿಕ ಸಲಹೆಗಳು.
ಆಲೂಗಡ್ಡೆ ಮತ್ತು ಟೊಮ್ಯಾಟೊ ಬೆಳೆಗೆ ಶೀಲೀಂದ್ರದಿAದ ಬರುವ ಅಂಗಮಾರಿ ರೋಗ ಉಲ್ಬಣವಾಗುವ ಸಾಧ್ಯತೆ ಇದೆ. ಟೊಮ್ಯೋಟೊ ಕೊನೆಯ ಅಂಗಮಾರಿ ರೋಗದ ಲಕ್ಷಣಗಳೆಂದರೆ, ನೀರಿನಿಂದ ಆವೃತವಾದ ಕಂದು ಮಿಶ್ರಿತ ಕಪ್ಪು ಬಣ್ಣದ ಚುಕ್ಕೆಗಳು ಎಲೆ, ಕಾಂಡ ಮತ್ತು ಹಣ್ಣಿನ ತೊಟ್ಟುಗಳಲ್ಲಿ ಕಂಡು ಬರುತ್ತದೆ. ಎಲೆಯ ಮೇಲೆ ಚುಕ್ಕೆಗಳು ಕಂದು ಬಣ್ಣದಿಂದ ಕೂಡಿರುತ್ತದೆ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಎಲೆಯ ಕೆಳಗಡೆ ಅರಳೆಯಂತಹ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆ ಕಂಡು ಬರುತ್ತದೆ.
ಆದುದ್ದರಿಂದ ರೈತರು ಮಳೆಯಿಂದ ಬಿಡುವು ಸಿಕ್ಕಾಗ ವ್ಯಾಪಕ ಶಿಲೀಂದ್ರ ನಾಶಕಗಳಾದ 2ಗ್ರಾಂ ಸೈಮಾಕ್ಸಾನಿಲ್(8%)+ ಮ್ಯಾಂಕೋಜೆಬ್(64% ಡಬ್ಲೂö್ಯ.ಪಿ) ಅಥವಾ 3ಗ್ರಾಂ ಫೆನಾಮಿಡಾನ್+ ಮ್ಯಾಂಕೋಜೆಬ್ ಅಥವಾ ಅಜೋಕ್ಸಿಸ್ಟಾçಬಿನ್18.2 + ಡೈಫಿನಕೊನಜೋಲ್11.4% ಎಸ್.ಸಿ. 1 ಮಿ.ಲಿ. ಅಥವಾ ಮೆಟಿರಾಮ್ 55+ ಪೈರಾಕ್ಲೋಸ್ಟಾçಬಿನ್ 5% ಡಬ್ಲೂö್ಯಜಿ, 3ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಡೊಣ್ಣಮೆಣಸಿನಕಾಯಿ ಬೆಳೆಯಲ್ಲಿ ಚಿಬ್ಬುರೋಗ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಹೂವಾಡುವ ಹಂತದಲ್ಲಿ ಪ್ರಥಮ ಸಿಂಪರಣೆ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಎರಡನೇ ಸಿಂಪರಣೆ, ನಂತರದ 15 ದಿನಗಳಲ್ಲಿ ಮೂರನೇ ಸಿಂಪರಣೆಗಾಗಿ ತಾಮ್ರದ ಆಕ್ಸಿಕ್ಲೋರೈಡ್ 3ಗ್ರಾಂ ಅಥವಾ ನೀರಿನಲಿ ್ಲಕರಗುವ ಗಂಧಕ 2ಗ್ರಾಂ. ಅಥವಾ ಕ್ರಾಪ್ಟನ್ (0.2%), ಅಥವಾ ಜೈರಾಮ್ (0.25%) ಶಿಲೀಂದ್ರ ನಾಶಕಗಳನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಈಗಾಗಲೇ ಕಾಯಿಗಳು ಚಿಬ್ಬು ರೋಗದಿಂದ ಬಾಧಿತವಾಗಿದ್ದರೆ ಸಂಯುಕ್ತ ಶಿಲೀಂದ್ರ ನಾಶಕಗಳಾದ ಟೆಬುಕೊ ನಾಜೋಲ್ + ಟ್ರೆöÊಫ್ಲೋಕ್ಸಟ್ರೋಬಿನ್ 75 ಡಬ್ಲೂ.ಜಿ (50%+ 25% ಡಬ್ಲೂ.ಡಬ್ಲೂ) ಅನ್ನು 0.5ಗ್ರಾಂ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಸೀಬೆಯಲ್ಲಿ ಹಣ್ಣು ಕೊಳೆ ರೋಗದ ನಿಯಂತ್ರಣಕ್ಕಾಗಿ ಮುಂಜಾಗ್ರತೆಯಾಗಿ ಹೂ ಬಿಡುವ ಸಮಯದಲ್ಲಿ 2ಗ್ರಾಂ ಕ್ಲೋರೋಥೆಲೋನಿಲ್ 70 ಡಬ್ಲೂ.ಪಿ ಅಥವಾ 2ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂ.ಪಿ ಅಥವಾ 3ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲೂö್ಯ.ಪಿ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು, ಬಾಧೆ ಮತ್ತೆ ಕಂಡು ಬಂದಲ್ಲಿ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು. 
ಕುಂಬಳಜಾತಿ ತರಕಾರಿಗಳು ಹಣ್ಣಿನ ನೊಣಗಳಿಂದ ಬಾಧಿತ ಕಾಯಿಗಳಲ್ಲಿ ಮರಿಹುಳುಗಳು ಹಣ್ಣಿನ ಒಳಭಾಗವನ್ನು ತಿನ್ನುವುದರಿಂದ ಅಂತಹ ಕಾಯಿಗಳು ಕೊಳೆಯುತ್ತವೆ. ಇದರ ನಿಯಂತ್ರಣಕ್ಕಾಗಿ 2 ಮಿ.ಲೀ. ಮೆಲಾಥಿಯನ್ 50 ಇ.ಸಿ+ 10ಗ್ರಾಂ ಸಕ್ಕರೆ ಅಥವಾ ಬೆಲ್ಲದೊಂದಿಗೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಲ್ಲದೆ ಕ್ಯೂಲ್ಯೂರ್ ಮೋಹಕ ಬಲೆಗಳನ್ನು ಎಕರೆಗೆ 4-6 ರಂತೆ ಕಟ್ಟುವುದು. ಪ್ರತಿ ಸಿಂಪರಣೆ ಕೈಗೊಳ್ಳಬೇಕಾದಲ್ಲಿ 0.5ಮಿ.ಲೀ. ಅಂಟನ್ನು ಮಿಶ್ರಣ ಮಾಡುವುದನ್ನು ಮರೆಯಬಾರದು.
ವಿವಿಧ ತೋಟಗಾರಿಕೆ ಬೆಳೆಯ ಬೇಸಾಯ ಕ್ರಮಗಳಲ್ಲಿ ಮುಖ್ಯವಾಗಿ ಪಾಲನೆ ಮಾಡಬೇಕಾಗಿರುವ ಅಂಶವೆAದರೆ ತೋಟದಲ್ಲಿ ನೀರು ನಿಂತಿದ್ದರೆ ಆದಷ್ಟು ಬೇಗನೆ ನೀರನ್ನು ಹೊರ ಹಾಕಿ ಹಾಗೂ ಯಾವುದೇ ಗೊಬ್ಬರಗಳನ್ನು ನೀರಾವರಿ ಅಥವಾ ರಸಾವರಿ ಮೂಲಕ ಕೊಡಬಾರದು. ಬೆಳೆಯ ಮೊದಲ ಬೆಳವಣಿಗೆ ಹಂತದಲ್ಲಿ 19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 2ಗ್ರಾಂ ನಂತೆ ಬೆರೆಸಿ ಸಿಂಪಡಿಸಿ ಹಾಗೂ ಹೂವು ಬಿಡುವ ಹಂತದ ಬೆಳೆಯಾದರೆ ಕ್ಯಾಲ್ಸಿಯಂ ಮತ್ತು ಬೋರಾನ್ ಪೋಷಕಾಂಶಗಳನ್ನು ಸಿಂಪರಣೆ ಮಾಡಿ. ಹಾಗೆಯೇ ಬೆಳೆಯು ಕಟಾವಿನ ಹಂತದಲ್ಲಿ ಇದ್ದರೆ ಎಮ್.ಒ.ಪಿ (ಮ್ಯೂರೆಟ್ ಆಫ್ ಪೊಟ್ಯಾಷ್) ಅನ್ನು ಸಿಂಪರಣೆ ಮಾಡಿ. ಹೀಗೆ ಮಾಡುವುದರಿಂದ ಮಳೆಯಿಂದಾದ ಪೋಷಕಾಂಶಗಳ ಕೊರತೆಯನ್ನು ನಿಗಿಸುವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. 
ಪ್ಲಾಸ್ಟಿಕ್ ಹೋದಿಕೆಯನ್ನು ಬಳಸದೇ ಇರುವ ಬೆಳೆಗಳಲ್ಲಿ ಮಣ್ಣನ್ನು ಏರಿಸಿ. ಇದರಿಂದ ಬೆಳೆಗಳಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಟೊಮ್ಯಾಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇದ್ದರೆ ಹಾಗೂ ವಿವಿಧ ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೋದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ ರೋಗಗಳ ಹಾವಳಿಯನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಕೋಲಾರದ ತಂತ್ರಜ್ಞರು ತಿಳಿಸಿದ್ದಾರೆ ಎಂದು ಕೋಲಾರ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.