ಸಿದ್ಧಿಖಿ ಕಪ್ಪನ್‌ : 2 ವರ್ಷದ  ಶಿಕ್ಷೆಗೆ ಪರಿಹಾರ ಯಾರು ಕೊಡುತ್ತಾರೆ?

   ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರಕಿತು

ಸಿದ್ಧಿಖಿ ಕಪ್ಪನ್‌ : 2 ವರ್ಷದ  ಶಿಕ್ಷೆಗೆ     ಪರಿಹಾರ ಯಾರು ಕೊಡುತ್ತಾರೆ?

ಸಿದ್ಧಿಖಿ ಕಪ್ಪನ್‌ : 2 ವರ್ಷದ  ಶಿಕ್ಷೆಗೆ

ಪರಿಹಾರ ಯಾರು ಕೊಡುತ್ತಾರೆ?

    ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರಕಿತು. UAPA ಪ್ರಕರಣದಲ್ಲಿ ಕೆಲ ತಿಂಗಳ ಹಿಂದೆ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ ಅವರ ಮೇಲೆ ED ಪ್ರಕರಣ ಇದ್ದುದರಿಂದ (ಗಮನಿಸಿ ಓರ್ವ ಸಾಮಾನ್ಯ ಪತ್ರಕರ್ತನ ಮೇಲೆ ED; ಹಣಕಾಸಿನ ಅಕ್ರಮ ವರ್ಗಾವಣೆ ಪ್ರಕರಣ!) ಅವರು ಮತ್ತೂ ಕೆಲ ತಿಂಗಳು ಜೈಲಿನಲ್ಲಿಯೇ ಇರಬೇಕಾಯಿತು. ಇದೀಗ ಲಕ್ನೋ ಕೋರ್ಟ್ ಅವರಿಗೆ ಜಾಮೀನು ಕೊಟ್ಟಿದೆ. ಬೇಲ್ ಬಾಂಡ್ ಸಂದಾಯ ಮಾಡಿ ಅವರು ಹೊರಬರಬೇಕಿದೆ.

   ಕಪ್ಪನ್ 2020 ರಲ್ಲಿ ಉತ್ತರಪ್ರದೇಶದ ಹಾತರಸ್ ಗೆ ಹೋಗುತ್ತಿದ್ದಾಗ (ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆಯ ಸಂಬಂಧ) ಅವರನ್ನು ಬಂಧಿಸಲಾಗಿತ್ತು.

    ಕಪ್ಪನ್ ನ ದೊಡ್ಡ ತಪ್ಪು ಏನೆಂದರೆ ಆತನ ಹೆಸರು; ಅಂದರೆ ಆತನ ರಿಲೀಜನ್ (ಉಮರ್ ಖಲೀದ್ ಕೂಡ ತನ್ನ ಹೆಸರಿನ ಕಾರಣಕ್ಕೆ ಜೈಲಿನಲ್ಲಿದ್ದಾರೆ). ಸ್ಟೇಟ್ ಮನಸು ಮಾಡಿದರೆ ನಿಮ್ಮನ್ನು ವರ್ಷಗಳ ಕಾಲ ಜೈಲಿನಲ್ಲಿಟ್ಟು ಹೇಗೆ ಹಿಂಸಿದಬಹುದು ಎಂಬುದಕ್ಕೂ ಕಪ್ಪನ್ ಪ್ರಕರಣ ಒಂದು ಉದಾಹರಣೆ. ಹಾಗೆಯೇ ಸ್ಟೇಟ್ ನಡೆಸುವ ಕ್ರೌರ್ಯಗಳಿಗೆ ಹೇಗೆ ನ್ಯಾಯಾಂಗವೂ ಮೂಕ ಪ್ರೇಕ್ಷಕವಾಗಬಲ್ಲುದು ಅಥವಾ ಪರೋಕ್ಷವಾಗಿ ಹೇಳುವುದಾದರೆ ಕೈಜೋಡಿಸಬಹುದು ಎಂಬುದಕ್ಕೂ ಇದೊಂದು ಉತ್ತಮ ಉದಾಹರಣೆ. Process itself punishment ಎಂದ ನ್ಯಾಯಾಂಗವೇ ಅವರು ಎರಡು ವರ್ಷಗಳ ಕಾಲ ಜೈಲಿನಲ್ಲಿ ಇರುವಂತೆ ನೋಡಿಕೊಂಡಿತು!.

    ಕಪ್ಪನ್ ನ ಬದುಕಿನ ಅಮೂಲ್ಯ ಎರಡು ವರ್ಷಗಳು ವ್ಯರ್ಥವಾದುವಲ್ಲ ಅದಕ್ಕೆ ಏನು ಪರಿಹಾರ? ಯಾರು ಪರಿಹಾರ ಕೊಡುತ್ತಾರೆ?! ಆತನನ್ನು ಜೈಲಿನಿಂದ ಹೊರ ತರಲು ಕಾನೂನು ಹೋರಾಟಕ್ಕೆ ಆದ ಖರ್ಚು ಎಷ್ಟು? ಅದನ್ನು ಯಾರು ಭರಿಸುತ್ತಾರೆ?

    ಕಪ್ಪನ್ ಗೆ ಜಾಮೀನು ಸಿಕ್ಕಿತು ಎಂದು ನಾವು ಸಂತೋಷ ಪಡುವುದಕ್ಕೇನೂ ಇಲ್ಲ. ಬದಲಿಗೆ ದೇಶದ ನ್ಯಾಯದಾನ ವ್ಯವಸ್ಥೆಯ ಬಗ್ಗೆ ದುಃಖಿಸಬೇಕಾಗಿದೆ.

-ಶ್ರೀನಿವಾಸ ಕಾರ್ಕಳ